Thursday, May 23, 2013
Last Updated: 6:02:24 AM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆರ್‌ಟಿಪಿಎಸ್‌ಗೆ ಕೆಪಿಸಿ ತಾಂತ್ರಿಕ ನಿರ್ದೇಶಕರ ಭೇಟಿ
      • Udayavani | Feb 18, 2013

        ರಾಯಚೂರು: ಇಲ್ಲಿನ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ 8ನೇ ಘಟಕದಲ್ಲಿ ಇಎಸ್‌ಪಿ ಕುಸಿದಿದ್ದರಿಂದ ಅದರ ತಪಾಸಣೆಗೆ ಕೆಪಿಸಿ ತಾಂತ್ರಿಕ ನಿರ್ದೇಶಕ ಎಚ್‌.ಎನ್‌. ನಾರಾಯಣಪ್ರಸಾದ್‌ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

        ಇಎಸ್‌ಪಿ ಕುಸಿತದ ಪ್ರಕರಣ ದೇಶದಲ್ಲಿಯೇ ಎರಡನೆಯದ್ದು ಎಂದು ಹೇಳಲಾಗಿದ್ದು, ಈ ಘಟನೆಯಿಂದ ಆರ್‌ಟಿಪಿಎಸ್‌ ಅಧಿಧಿಕಾರಿಗಳಲ್ಲಿ ತಳಮಳ ಶುರುವಾಗಿದೆ. 250 ಮೆಗಾವ್ಯಾಟ್‌ ಸಾಮರ್ಥ್ಯದ 8ನೇ ಘಟಕವನ್ನು ಪ್ರತಿಷ್ಠಿತ ಬಿಎಚ್‌ಇಎಲ್‌ ಸಂಸ್ಥೆ ನಿರ್ಮಿಸಿದೆ. ನಿರ್ಮಾಣಗೊಂಡ ನಂತರ ಈ ಘಟಕದಲ್ಲಿ ಅನೇಕ ತಾಂತ್ರಿಕ ತೊಂದರೆಗಳು ಕಂಡು ಬಂದಿದ್ದರಿಂದ ಕೆಲಕಾಲ ಘಟಕದಿಂದ ಉತ್ಪಾದನೆಯನ್ನೇ ಸ್ಥಗಿತಗೊಳಿಸಲಾಗಿತ್ತು.

        ರಾಜ್ಯದ ವಿದ್ಯುತ್‌ ಬೇಡಿಕೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಘಟಕವನ್ನು ವಿದ್ಯುತ್‌ ಉತ್ಪಾದನೆಗೆ ತೊಡಗಿಸಲಾಗಿತ್ತು. ಈಗ ಏಕಾಏಕಿ ಇಎಸ್‌ಪಿ ಕುಸಿದು ಬಿದ್ದಿರುವುದು ಆರ್‌ಟಿಪಿಎಸ್‌ ಹಾಗೂ ಬಿಎಚ್‌ಇಎಲ್‌ ಅಧಿಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.

        ಇಎಸ್‌ಪಿ ಕುಸಿಯಲು ಕಳಪೆ ಕಾಮಗಾರಿ ಕಾರಣವೇ ಅಥವಾ ಅಧಿಧಿಕಾರಿಗಳ ವೈಫಲ್ಯ ಕಾರಣವೇ ಎನ್ನುವುದರ ತನಿಖೆ ನಡೆಸಲು ಆರ್‌ಟಿಪಿಎಸ್‌ ಮುಂದಾಗಿದೆ. ಒಂದೆರೆಡು ದಿನಗಳಲ್ಲಿ ಬಿಎಚ್‌ಇಎಲ್‌ ತಂಡ ಆಗಮಿಸುವ ಸಾಧ್ಯತೆಗಳಿವೆ ಎಂದು ಆರ್‌ಟಿಪಿಎಸ್‌ ಮೂಲಗಳು ತಿಳಿಸಿವೆ.

        ಕುಸಿತಗೊಂಡಿರುವ ಇಎಸ್‌ಪಿ ದುರಸ್ತಿಗೆ 1ರಿಂದ 2 ವರ್ಷ ಸಮಯ ಬೇಕಾಗಲಿದ್ದು, ಅಲ್ಲಿಯ ತನಕ 8ನೇ ಘಟಕ ಶಾಶ್ವತವಾಗಿ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಳಿಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
        ಮೊದಲೇ ವಿದ್ಯುತ್‌ ûಾಮ ಎದುರಿಸುತ್ತಿರುವ ರಾಜ್ಯಕ್ಕೆ ಆರ್‌ಟಿಪಿಎಸ್‌ ಮತ್ತೂಂದು ಆಘಾತ ನೀಡಿದಂತಾಗಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus