Sunday, May 19, 2013
Last Updated: 4:44:17 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮೈಸೂರಿನಲ್ಲಿ ವಿಭಾಗ ಮಟ್ಟದ ಯುವಜನ ಮೇಳ
      • Udayavani | Feb 18, 2013

        ಮಂಗಳೂರು: ಮೈಸೂರು ವಿಭಾಗ ಮಟ್ಟದ 2012-13ನೇ ಸಾಲಿನ ಯುವಜನ ಮೇಳವನ್ನು ಮೈಸೂರು ವಿಶ್ವವಿದ್ಯಾನಿಲಯದ ಬಳಿ ವಿನೋಬ ರಸ್ತೆಯ ಕಲಾಮಂದಿರದಲ್ಲಿ ಸಂಘಟಿಸಲಾಗುತ್ತಿದೆ.

        ಫೆ. 16 ಮತ್ತು 17ರಂದು ಬೈಕಂಪಾಡಿ ಮೀನಕಳಿಯ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ವಿಭಾಗಮಟ್ಟದ ಯುವಜನ ಮೇಳದಲ್ಲಿ ಪಾಲ್ಗೊಳ್ಳಲು ಅರ್ಹರಿರುತ್ತಾರೆ.

        ವಿಶೇಷ ಸ್ಪರ್ಧಾಳುಗಳು ಫೆ. 20ರಂದು ರಾತ್ರಿ 9 ಗಂಟೆಯೊಳಗೆ ನಂಜರಾಜ ಬಹದ್ದೂರ್‌ ಚೌಟರಿ, ಮೈಸೂರು ಜಿಲ್ಲೆ ಇಲ್ಲಿನ ಸಂಘಟಕರಲ್ಲಿ ವರದಿ ಮಾಡಿಕೊಂಡು ಹೆಸರು ಮತ್ತು ವಿಳಾಸವನ್ನು ನೋಂದಾಯಿಸಿ ವಸತಿ ಸೌಲಭ್ಯವನ್ನು ಪಡೆದುಕೊಳ್ಳಬೇಕು.

        ಜಿಲ್ಲೆಯಿಂದ ಭಾಗವಹಿಸುವ ಸ್ಪರ್ಧಾಳುಗಳಿಗೆ ಮಂಗಳೂರಿನಿಂದ ಮೈಸೂರಿಗೆ ಹೋಗಿ ಬರಲು ಪ್ರಯಾಣ ಭತ್ಯೆ (ಎಕ್‌Åಪ್ರಸ್‌ ದರ) ಹಾಗೂ ಊಟೋಪಚಾರಗಳನ್ನು ಒದಗಿಸಲಾಗುತ್ತಿದ್ದು, ದಿನಭತ್ತೆಯನ್ನು ಸಂಘಟನಾ ಸಮಿತಿಗೆ ಪಾವತಿಸಲಾಗುವುದು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರ ಪ್ರಕಟನೆ ತಿಳಿಸಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus