Saturday, May 18, 2013
Last Updated: 4:51:59 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಕ್ಸಲ್‌ ಭೀತಿ: ವಿವಿಧೆಡೆ ಕೆಮರಾ ಅಳವಡಿಕೆ
    • ಮಾವೋ ನೇತಾರನ ಬಂಧನ
      • Udayavani | Feb 18, 2013

        ಕಾಸರಗೋಡು: ನಕ್ಸಲರ ದಾಳಿ ಬೆದರಿಕೆ ಎದುರಿಸುತ್ತಿರುವ ಕರ್ನಾಟಕ ಗಡಿಯಲ್ಲಿರುವ ಐದು ಜಿಲ್ಲೆಗಳ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಗುಪ್ತ ಕೆಮರಾಗಳನ್ನು ಅಳವಡಿಸುವ ಪ್ರಕ್ರಿಯೆ ಆರಂಭಗೊಂಡಿದೆ.

        ನಕ್ಸಲ್‌ ಪಡೆಗಳು ಪೊಲೀಸ್‌ ಠಾಣೆಗಳ ಮೇಲೆ ದಾಳಿ ನಡೆಸಿ ಬಂದೂಕು ಇತ್ಯಾದಿ ಶಸ್ತ್ರಾಸ್ತ್ರಗಳನ್ನು ದೋಚುವ ಯೋಜನೆ ಹಾಕಿಕೊಂಡಿರುವ ಗುಪ್ತಚರ ಇಲಾಖೆಯ ಮಾಹಿತಿಯನ್ವಯ ಠಾಣೆಗಳ ಪರಿಸರದಲ್ಲಿ ಸೂಕ್ಷ್ಮ ನಿಗಾ ವಹಿಸಲಾಗಿದೆ.

        ಈಗಾಗಲೇ ಕಣ್ಣೂರು ಜಿಲ್ಲೆಯ ಕೇರಳ - ಕರ್ನಾಟಕ ಗಡಿ ಭಾಗದಲ್ಲಿರುವ ಠಾಣೆಗಳಲ್ಲಿ ಕೆಮರಾ ಅಳವಡಿಸಲಾಗಿದೆ. ಕಾಸರಗೋಡು ಜಿಲ್ಲೆಯ ಆದೂರು, ಬದಿಯಡ್ಕ, ಮಂಜೇಶ್ವರ ಮತ್ತು ರಾಜಪುರ ಪೊಲೀಸ್‌ ಠಾಣೆಗಳಲ್ಲಿ ಮುಂದಿನ ದಿನಗಳಲ್ಲಿ ಕೆಮರಾ ಅಳವಡಿಸಾಗುವುದು ಎಂದು ಉನ್ನತ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

        ಮಾವೋವಾದಿ ಮುಖಂಡನ ಬಂಧನ

        ಗಡಿ ಪ್ರದೇಶಗಳ ದಟ್ಟಾರಣ್ಯದಲ್ಲಿ ದಾಳಿಯ ಸಂಚನ್ನು ರೂಪಿಸುವ ಮಾವೋವಾದಿಗಳ ಪತ್ತೆಗಾಗಿ ಶೋಧ ಕಾರ್ಯಚರಣೆಗಿಳಿದ ತಂಡರ್‌ ಬೋಲ್ಟ್ ಕಮಾಂಡೋ ಪಡೆ ಮಾವೋವಾದಿ ನೇತಾರನೋರ್ವನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

        ಅಜೇಯ್‌ ಮುನ್ನೂರು ಹೆಸರಿನ ಈತನನ್ನು ಎರ್ನಾಕುಳಂ ಜಿಲ್ಲೆಯ ಮೂವಾಟ್ಟುಪುಳದಿಂದ ಸೆರೆಹಿಡಿಯಲಾಗಿದೆ. ಈತ ಮಾವೋಯಿಸ್ಟ್‌ ಸಂಘಟನೆಗೆ ಸೇರಿದ ರೆವೆಲ್ಯೂಶನರಿ ಡೆಮೋಕ್ರೆಟಿಕ್‌ ಫ್ರಂಟ್‌ನ ಪ್ರಧಾನ ಕಾರ್ಯದರ್ಶಿ ಎಂದು ತಿಳಿದು ಬಂದಿದೆ.

        ಸಶಸ್ತ್ರ ಕ್ರಾಂತಿಗೆ ಆಹ್ವಾನ ನೀಡುವ ಪುಸ್ತಕಗಳನ್ನು ಹಂಚುತ್ತಿರುವ ಹಾಗೂ ದಾಳಿಗೆ ಸಂಚು ರೂಪಿಸುತ್ತಿರುವ ಆರೋಪದಲ್ಲಿ ಈತನ ಬಂಧನ ನಡೆದಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus