Udayavani | Feb 18, 2013
ಪಣಂಬೂರು: ಬೈಕಂಪಾಡಿಯ ಸರಕಾರಿ ಪ್ರೌಢ ಶಾಲಾ ವಠಾರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನಮೇಳ - 2013ರ ಸಮಗ್ರ ಪ್ರಶಸ್ತಿಯನ್ನು ಮಹಿಳಾ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕು ಪಡೆದರೆ, ಪುರುಷರ ವಿಭಾಗದಲ್ಲಿ ಸುಳ್ಯ ತಾಲೂಕು ತನ್ನದಾಗಿಸಿಕೊಂಡಿದೆ.
ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು.
ಎನ್‌ಎಂಪಿಟಿ ಟ್ರಸ್ಟಿ ಪ್ರಸಾದ್ ರಾಜ್ ಕಾಂಚನ್, ಬಿಎಸ್‌ಎಫ್‌ನ ಸಂತೋಷ್ ಪೈ, ಸತೀಶ್ ಬೈಕಂಪಾಡಿ, ವಿನೋದ್ ರಾಜ್ ಪಣಂಬೂರು, ಯಶೋಧರ ಕರ್ಕೇರ, ತಾರಾ ಡಿ.ಕಾಂಚನ್, ಕ್ರೀಡಾ ಇಲಾಖೆ ಉಪನಿರ್ದೇಶಕ ಎಲ್. ಸುಭಾಶ್ಚಂದ್ರ, ಭಾಸ್ಕರ ಬೈಕಂಪಾಡಿ, ಹರೀಶ್ ಬೈಕಂಪಾಡಿ, ಗೀತಾ ಸತೀಶ್ ಬೈಕಂಪಾಡಿ, ಸಚಿನ್, ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾಡಳಿತ, ದ.ಕ. ಜಿ.ಪಂ., ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ತಾ.ಪಂ., ಮಂಗಳೂರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ದ.ಕ. ಯುವಜನ ಒಕ್ಕೂಟ ಮತ್ತು ಕರಾವಳಿ ಯುವಕ ಹಾಗೂ ಯುವತಿ ಮಂಡಲದ ಆಶ್ರಯದಲ್ಲಿ ಯುವಜನಮೇಳವನ್ನು ಆಯೋಜಿಸಲಾಗಿತ್ತು.