ಮುಂಬಯಿ: ಸೋಮವಾರ ಭಾರತ ಪ್ರವಾಸ ಪ್ರಾರಂಭಿಸಿದ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮ್ರಾನ್ ಅವರು ಉಭಯ ರಾಷ್ಟ್ರಗಳ ನಡುವೆ ವಿಶೇಷ ಸಂಬಂಧ ಕುದುರಿಸಲು ಕೋರಿದರು.ಭಾರತ ಮತ್ತು ಬ್ರಿಟನ್ ನಡುವೆ ವಿಶೇಷ ಸಂಬಂಧವಿರಬೇಕು ಎಂಬುದು ನನ್ನ ಬಯಕೆ. ಈ ಸಂಬಂಧ ಭವಿಷ್ಯದ ಕುರಿತು ಆಗಿರಬೇಕು ಭೂತಕಾಲದ ಬಗ್ಗೆಯಲ್ಲ ಎಂದರು.ಬ್ರಿಟಿಷ್ ಗ್ರಾಹಕ ಉತ್ಪನ್ನಗಳನ್ನು ಉತ್ಪಾದಿಸುವ ಯುನಿಲೀವರ್ ಕಂಪೆನಿಯ ಭಾರತದ ಘಟಕ ಹಿಂದೂಸ್ಥಾನ್ ಲೀವರ್ ಕಂಪೆನಿ ಸಿಬಂದಿ ಜತೆ ನಡೆಸಿದ ತನ್ನ ಮೊದಲ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಆಶಯ ವ್ಯಕ್ತಪಡಿಸಿದರು.ಭಾರತ ಈ ಶತಮಾನದ ಒಂದು ಅಸಾಧಾರಣ ರಾಷ್ಟ್ರ ಎಂದು ಬಣ್ಣಿಸಿದ ಕ್ಯಾಮ್ರಾನ್ ಈ ದೇಶದ ಅಪರಿಮಿತ ಬೆಳವಣಿಗೆಯ ಫಲವಾಗಿ 2030ರೊಳಗೆ ಆರ್ಥಿಕಯತೆಲ್ಲಿ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಬೆಳೆಯಲಿದೆ. ಉಭಯ ರಾಷ್ಟ್ರಗಳ ನಡುವೆ ವಿಶೇಷ ಸಂಬಂಧ ಬೆಳೆಯಬೇಕು. ಆದರೆ ನನಗೆ ಸಂಬಂಧಪಟ್ಟಂತೆ ಆಗಸ ಸೀಮಿತವಾಗಿದೆ. ಅದು ವ್ಯಾಪಾರ, ಆರ್ಥಿಕತೆ, ವಾಣಿಜ್ಯ, ಸಂಸ್ಕೃತಿ, ರಾಜಕೀಯ ಮತ್ತು ರಾಜತಾಂತ್ರಿಕತೆಯ ಕುರಿತು ಇರಬೇಕಾಗಿದೆ. ಈ ಶತಮಾನದಲ್ಲಿ ಭಾರತ ಮಹಾನ್ ರಾಷ್ಟ್ರವಾಗಲಿದೆ. ಇದರಲ್ಲಿ ನಾವೂ ಭಾಗಿಯಾಗುತ್ತೇವೆ. ಹಾಗಾಗಿ ನಾನು ಇಲ್ಲಿಗೆ ಬಂದಿರುವುದಾಗಿ ಹೇಳಿದರು.ಭಾರತದಲ್ಲಿ ಪಾಲುದಾರಿಕೆ ಮಾಡಲು ಬ್ರಿಟನ್ ಬಯಸಿದೆ. ಉಭಯ ರಾಷ್ಟ್ರಗಳ ಇತಿಹಾಸ, ಭಾಷೆ ಮತ್ತು ಸಂಸ್ಕೃತಿಯಲ್ಲಿ ಬಹಳ ಸ್ವಾಮ್ಯತೆಯಿದೆ ಎಂದ ಅವರು, ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇದರಲ್ಲಿ ನಾವು ಹಳಬರು ಎಂದರು.ಉಗ್ರವಾದದ ವಿರುದ್ಧ ಹೋರಾಡಲು ಭಾರತ ಮತ್ತು ಬ್ರಿಟನ್ ಅಸಾಮಾನ್ಯ ಸವಾಲನ್ನು ಎದುರಿಸುತ್ತಿವೆ ಎಂದೂ ಹೇಳಿದರು.ತನ್ನ ಜತೆ ಪ್ರಿಮೀಯರ್ ಲೀಗ್, ದೊಡ್ಡ ವಿಶ್ವವಿದ್ಯಾಲಯಗಳನ್ನು, ಮ್ಯೂಸಿಯಮ್‌ಗಳನ್ನು ನಿಮ್ಮ ಸಂಸ್ಕೃತಿ, ನಿಮ್ಮ ಕಂಪೆನಿ, ನಿಮ್ಮ ವ್ಯವಹಾರ, ನಿಮ್ಮ ಜನರಲ್ಲಿ ಭಿನ್ನ ಭಿನ್ನ ರೀತಿಯಲ್ಲಿ ವ್ಯವಹಾರ ಒಪ್ಪಂದ ಮಾಡಲು ಕರೆ ತಂದಿರುವುದಾಗಿ ನುಡಿದರು.ವಿವಿಧ ವಿಷಯಗಳ ಕುರಿತಾಗಿ ಮಾತುಕತೆ ನಡೆಸಲು ಕ್ಯಾಮ್ರಾನ್ ಮಂಗಳವಾರ ದಿಲ್ಲಿಗೆ ಹೊರಡುತ್ತಾರೆ.ಮಾತುಕತೆ ಅವಧಿಯಲ್ಲಿ 3,600 ಕೋ.ರೂ.ಗಳ ವಿವಿಐಪಿ ಹೆಲಿಕಾಪ್ಟರ್ ಹಗರಣದ ಕುರಿತಾಗಿ ಭಾರತ ಕೆದಕುವ ಸಾಧ್ಯತೆ ಇದೆ.