Friday, May 24, 2013
Last Updated: 4:24:24 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸ್ಥಳೀಯ ಚುನಾವಣೆ ಕೆಜೆಪಿಗೆ ವರದಾನ: ಪುಟ್ಟಸ್ವಾಮಿ
    • ಕರ್ನಾಟಕ ಜನತಾ ಪಕ್ಷದ ಸಭೆ ಜಿಲ್ಲಾಧ್ಯಕ್ಷ ನಾಗರಾಜಪ್ಪಅವರ ನಿವಾಸದಲ್ಲಿ ನಡೆಯಿತು

      • Udayavani | Feb 18, 2013

        ಮಂಡ್ಯ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕರ್ನಾಟಕ ಜನತಾಪಕ್ಷಕ್ಕೆ ವರದಾನವಾಗಿದೆ ಎಂದು ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ತಿಳಿಸಿದರು

        ಕೆಜೆಪಿ ಜಿಲ್ಲಾಧ್ಯಕ್ಷ ನಾಗರಾಜಪ್ಪ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಕರ್ನಾಟಕ ಜನತಾ ಪಕ್ಷದ ಬಲವನ್ನು ಸಾಬೀತು ಪಡಿಸಲು ವರದಾನವಾಗಿ ಪರಿಣಮಿಸಿದೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

        ಮಂಡ್ಯ ಜಿಲ್ಲಾ ಕೆಜೆಪಿ ಪಕ್ಷದೊಳಗೆ ಕೆಲವು ಭಿನ್ನಾಭಿಪ್ರಾಯಗಳಿರುವುದು ತಮಗೆ ತಿಳಿದುಬಂದಿದೆ. ಈಗಾಗಲೇ ನಾಗರಾಜಪ್ಪಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾದ್ಯಂತ ಎಲ್ಲಾ ತಾಲೂಕು ಘಟಕಗಳನ್ನು ಸ್ಥಾಪಿಸಿ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಈ ಘಟಕಗಳನ್ನು ಪುನರ್‌ರಚಿಸುವುದಿಲ್ಲ. ಒಂದು ವೇಳೆ ಪಕ್ಷದಲ್ಲಿ ಗೊಂದಲವಿದ್ದಲ್ಲಿ ಅದನ್ನು ರಾಜಾÂಧ್ಯಕ್ಷ ಯಡಿಯೂರಪ್ಪ ಅವರ ಗಮನಕ್ಕೆ ತಂದು ನಿವಾರಿಸಲಾಗುವುದು ಎಂದು ತಿಳಿಸಿದರು.

        ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಅಭಿವೃದ್ದಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿದ್ದು, ಅವುಗಳನ್ನು ಜನತೆಗೆ ತಿಳಿಸಿ ಚುನಾವಣೆ ಎದುರಿಸಬೇಕು ಎಂದು ನುಡಿದರು.

        ಕೆಜೆಪಿ ಜಿಲ್ಲಾಧ್ಯಕ್ಷ ನಾಗರಾಜಪ್ಪ, ಕೆಜೆಪಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಪ್ರೇಮಾ ಯುವರಾಜ್‌, ಪದಾಧಿಕಾರಿಗಳಾದ ಅನ್ವರ್‌ಜೀ, ಕೆ.ಕೃಷ್ಣ, ಕೆ.ಕೃಷ್ಣಪ್ಪ, ಅಹಿಂದ ಪದಾಧಿಕಾರಿ ನರಸಿಂಹಮೂರ್ತಿ, ಚಲುವರಾಜು, ಬೆಟ್ಟಳ್ಳಿ ಮಂಜುನಾಥ್‌, ದ್ರಾûಾಯಿಣಿ, ರಾಮಾರಾಧ್ಯ, ಮಹಂತಪ್ಪ, ರಾಜೇಶ್‌, ಸಿದ್ದೇಗೌಡ, ರಾಜು, ಚಂದ್ರಶೇಖರ್‌, ಅನಿಲ್‌ಕುಮಾರ್‌, ಲಿಂಗರಾಜು, ಡಾ.ಶಿವನಂಜು, ಸತೀಶ್‌, ನಿಂಗಪ್ಪ, ಇತರರಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus