ನವದೆಹಲಿ: 3600 ಕೋಟಿ ರೂ. ಮೊತ್ತದ 12 ಹೆಲಿಕಾಪ್ಟರ್ ಗುತ್ತಿಗೆಯನ್ನು ಫಿನ್‌ಮೆಕಾನಿಕಾ ಕಂಪನಿಗೆ ಕೊಡಿಸಲು 360 ಕೋಟಿ ರೂ. ಲಂಚದ ವ್ಯವಹಾರ ನಡೆಸಿದ್ದ ಮಧ್ಯವರ್ತಿಗಳಾದ ಗೈಡೋ ರಾಲ್ಫ್ ಹಸ್ಲೆ ಮತ್ತು ಕಾರ್ಲೋ ಗೆರೋಸಾ ನಡುವಿನ ಟೆಲಿಫೋನ್ ಸಂಭಾಷಣೆಯನ್ನು ಸಂಗ್ರಹಿಸುವಲ್ಲಿ ಇಟಲಿಯ ತನಿಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ.ಈ ಸಂಭಾಷಣೆಯಲ್ಲಿ ಇಡೀ ಹಗರಣದ ಕುರಿತ ಮಾಹಿತಿಯನ್ನು ಕಂಪ್ಯೂಟರ್‌ನಿಂದ ಅಳಿಸಿ ಹಾಕಿ ಬಚಾವ್ ಆದೆ ಎಂದು ಹಸ್ಲೆ ಸಮಾಧಾನಪಟ್ಟುಕೊಂಡಿರುವ ಮಾಹಿತಿ ಇದೆ. ಜೊತೆಗೆ ಪ್ರಕರಣದಲ್ಲಿ ಭಾರತೀಯರೂ ಭಾಗಿಯಾಗಿದ್ದಾರೆ ಎನ್ನುವುದರ ಕುರಿತು ಸುಳಿವು ನೀಡುವ ಅಂಶಗಳೂ ಇವೆ. ಇಬ್ಬರು ಮಧ್ಯವರ್ತಿಗಳ ನಡುವಿನ ಟೆಲಿಫೋನ್ ಸಂಭಾಷಣೆಯ ಮುಖ್ಯಾಂಶ ಹೀಗಿದೆ....ಹಸ್ಲೆ: ಕಾಪ್ಟರ್ ಖರೀದಿಗೆ ಸಂಬಂಧಿಸಿದಂತೆ ನನ್ನ ಕಚೇರಿಯಲ್ಲಿದ್ದ ಅಷ್ಟೂ ದಾಖಲೆಗಳನ್ನು ಸ್ವತ್ಛಗೊಳಿಸಿದ್ದೇನೆ. ಕಂಪ್ಯೂಟರ್‌ನಲ್ಲಿ ಇದ್ದ ಅಷ್ಟೂ ಮಾಹಿತಿಯನ್ನು ಅಳಿಸಿ ಹಾಕಿದ್ದೇನೆ. ವಾಸ್ತವವಾಗಿ ನಾನು ದಾಖಲೆಗಳಿದ್ದ ಹಳೆಯ ಕಂಪ್ಯೂಟರ್ ಅನ್ನು ಬದಲಾಯಿಸಿ, ಹೊಸ ಕಂಪ್ಯೂಟರ್ ಖರೀದಿ ಮಾಡಿದ್ದೇನೆ. ಅದರಲ್ಲಿ ಹಳೆಯ ಯಾವುದೇ ಮಾಹಿತಿಯೂ ಇಲ್ಲ. ಹೀಗಾಗಿ ಅವರು (ಇಟಲಿ ತನಿಖಾಧಿಕಾರಿಗಳು) ಅಳಿಸಿ ಹಾಕಿದ ಮಾಹಿತಿಗಾಗಿ ಹುಡುಕಾಟ ನಡೆಸಿದರೂ ಅದರಲ್ಲಿ ಏನೂ ಸಿಗುವುದಿಲ್ಲ. ನೀನು ಕಳುಹಿಸಿದ್ದ ಇ ಮೇಲ್‌ಗಳನ್ನೂ ಅಳಿಸಿ ಹಾಕಿದ್ದೇನೆ. ಒಂದು ವೇಳೆ ನಾನೇನಾದರೂ ಇವುಗಳನ್ನು ಅಳಿಸಿ ಹಾಕದೇ ಇದ್ದರೆ ಸಿಕ್ಕಿಬೀಳುವ ಎಲ್ಲಾ ಸಾಧ್ಯತೆಗಳೂ ಇತ್ತು. ಮಹತ್ವದ ವಿಷಯವೆಂದರೆ ಹಗರಣದಲ್ಲಿ ನನ್ನ ಹೆಸರು ಎಲ್ಲಿಯೂ ಪ್ರಸ್ತಾಪವಾಗಿಲ್ಲ.ಗೆರೋಸಾ: ಇಲ್ಲಿಯೂ ಅದೇ ಪರಿಸ್ಥಿತಿ. ನಿನಗೆ ಗೊತ್ತಲ್ಲವಾ, ಪ್ರಕರಣದಲ್ಲಿ ನೀನೇ ಮೊದಲ ಲಿಂಕ್.ಹಸ್ಲೆ: ಹೌದು ನನಗೆ ಅದರ ಅರಿವಿದೆ.ಗೆರೋಸಾ: ಅವರೇನಾದರೂ ಮೊದಲ ಲಿಂಕ್ ಅನ್ನು ಬಿಟ್ಟು ತನಿಖೆ ಮುಂದುವರೆಸಿದರೆ ಮಧ್ಯದಲ್ಲಿರುವ ನಾನೇ ಸಿಕ್ಕಿಬೀಳ್ಳೋದು.ಇಡೀ ಹಗರಣದಲ್ಲಿ ಭಾರತೀಯರೂ ಭಾಗಿಯಾಗಿದ್ದಾರೆ ಎನ್ನುವುದನ್ನು ಸಾಬೀತುಪಡಿಸುವ ಕೆಲ ಮಾಹಿತಿಗಳು ಹಸ್ಲೆ ಮತ್ತು ಗೆರೋಸಾ ಸಂಭಾಷಣೆಯಲ್ಲಿ ಲಭ್ಯವಾಗುತ್ತವೆ. ಅವು ಹೀಗಿವೆ...ಗೆರೋಸಾ: ನಾನು ಭಾರತದಿಂದ ಆರ್ಡರ್ ಪಡೆದುಕೊಂಡಿದ್ದೇನೆ. ಆದರೆ ಇದನ್ನು ನಾವು ಬಹಿರಂಗವಾಗಿ ಗೌತಮ್‌ಗೆ ಹೇಳುವಂತಿಲ್ಲ.ಹಸ್ಲೆ: ಆದರೆ ಆತನಿಗೆ ಈ ವಿಷಯವೆಲ್ಲಾ ಗೊತ್ತಿದೆ. ರೀಸೈಕ್ಲಿಂಗ್‌ನ ಆರ್ಡರ್ ನಮ್ಮ ಮೂಲಕವೇ ಆತನಿಗೆ ಹೋಗಿತ್ತು. ನಾವೆಲ್ಲಾ ಅತ್ಯಂತ ಸಮರ್ಪಣಾಭಾವ ಹೊಂದಿರುವ ಕ್ರಿಮಿನಲ್‌ಗಳು.ಗೆರೋಸಾ: ಇತರೆ ವಿಷಯಗಳನ್ನು ಆತನಿಂದ ಮುಚ್ಚಿಡಲು ಆಗುವುದಿಲ್ಲವೇ?ಹಸ್ಲೆ: ಹೌದು, ನಾನೂ ಹಾಗೇ ಅಂದುಕೊಂಡಿದ್ದೆ. ಯಾಕೆಂದರೆ ಪ್ರಕರಣದಲ್ಲಿ ಏರೋಮ್ಯಾಟ್ರಿಕ್ಸ್ ಸಿಕ್ಕಿಬೀಳುತ್ತದೆ ಎಂದು ಗೌತಮ್‌ಗೆ ಭಯವಿದ್ದಿದ್ದರೆ, ಆತ ಅದನ್ನು ನನಗೆ ಹೇಳಿರುತ್ತಿದ್ದ. ನಿನಗೆ ಗೊತ್ತಿದೆಯೋ? ಇಲ್ಲವೋ? ಪ್ರವೀಣ್ ಈಗಾಗಲೇ ಆಕ್ರೋಶಗೊಂಡಿದ್ದಾನೆ.ಹೀಗೆ ಇಬ್ಬರ ಸಂಭಾಷಣೆಯಲ್ಲಿ ಗೌತಮ್ ಮತ್ತು ಪ್ರವೀಣ್ ಎಂಬ ಇಬ್ಬರು ಭಾರತೀಯರ ಹೆಸರು ಕೇಳಿಬರುತ್ತದೆ. ಈ ಪೈಕಿ ಪ್ರವೀಣ್ ಭಕ್ಷಿ, ಹಗರಣದ ಹಣ ಸ್ವೀಕಾರಕ್ಕೆಂದೇ ಸ್ಥಾಪನೆಯಾದ ಕಂಪನಿ ಎಂಬ ಆರೋಪ ಹೊತ್ತ ಏರೋಮ್ಯಾಟ್ರಿಕ್ಸ್‌ನ ಸಿಇಒ ಆಗಿದ್ದರೆ, ಗೌತಮ್ ಖೈತಾನ್ ಏರೋಮ್ಯಾಟ್ರಿಕ್ಸ್ ಕಂಪನಿಯ ಮಾಜಿ ನಿರ್ದೇಶಕ ಎಂಬುದು ಬೆಳಕಿಗೆ ಬಂದಿದೆ.ಇನ್ನು ಹಗರಣದಲ್ಲಿ ಭಾರತೀಯರು ಲಂಚ ಪಡೆದಿದ್ದಾರೆ ಎನ್ನುವುದನ್ನು ಸಾಬೀತುಪಡಿಸುವ ಟೆಲಿಫೋನ್ ಸಂಭಾಷಣೆ ಹೀಗಿದೆ. ಇದರಲ್ಲಿ ಹಸ್ಲೆ, ಫಿನ್‌ಮೆಕಾನಿಕಾ ಕಂಪನಿಯ ಮಾತೃ ಸಂಸ್ಥೆಯಾದ ಅಗಸ್ಟಾ ವೆಸ್ಟ್‌ಲ್ಯಾಂಡ್‌ನ ಉದ್ಯೋಗಿ ಗರವಾಗ್ಲಿಯಾ ಎಂಬಾತನ ಜೊತೆ ಮಾತುಕತೆ ನಡೆಸಿರುವ ವಿವರವಿದೆ...ಸ್ಲೆ ಗರವಾಗ್ಲಿಯಾ, ಹಲೋ!ಗರವಾಗ್ಲಿಯಾ: ಹೇಳಿ?ಹಸ್ಲೆ: ನಾನು ಪ್ರವೀಣ್‌ಗೆ ಹಣ ಕಳುಹಿಸುತ್ತಿದ್ದೇನೆ. ಆತನಿಗೆ ವರ್ಷಾಂತ್ಯದೊಳಗೆ ಹಣ ಬೇಕಿದೆ. ಈ ಬಗ್ಗೆ ಆತ ನಿಮ್ಮೊಡನೆ ಮಾತನಾಡಿದ್ದೇನೆ ಎಂದು ನನ್ನ ಬಳಿ ಹೇಳಿದ್ದಾನೆ.ಮೇಲ್ಕಂಡ ಸಂಭಾಷಣೆ ಬಳಿಕ ಗರವಾಗ್ಲಿಯಾ ಟ್ಯುನಿಷಿಯಾ ಮೂಲದ ವ್ಯಕ್ತಿ ಕಮೌ¾ನ್ ಹೆಡಿ ಎಂಬ ವ್ಯಕ್ತಿಯ ಜೊತೆಗೆ ಸಂಭಾಷಿಸುತ್ತಾನೆ.ಹೇಡಿ: ಗುಡ್ ಮಾರ್ನಿಂಗ್, ಅದು ಬಂದಿದೆ (ಅಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ಐಡಿಎಸ್ ಟ್ಯುನೇಶಿಯಾ ಕಂಪನಿಗೆ ಹಣ ಬಂದಿದೆ ಎನ್ನುವುದನ್ನು ಸೂಚಿಸುತ್ತಾ)ಗರವಾಗ್ಲಿಯಾ: ಅದು ಬಂದಿದೆಯಾ? ಗುಡ್!ಹೇಡಿ: ಹೌದು, ಅದನ್ನು ತಕ್ಷಣವೇ ಪೂರ್ತಿಯಾಗಿ ಪ್ರವೀಣ್‌ಗೆ ಕಳುಹಿಸಿಕೊಡುತ್ತೇನೆ.ಭಾರತೀಯ ಹೆಸರೂ ಬಹಿರಂಗಇಬ್ಬರು ಮಧ್ಯವರ್ತಿಗಳ ಸಂಭಾಷಣೆಯಲ್ಲಿ ಗೌತಮ್ ಮತ್ತು ಪ್ರವೀಣ್ ಎಂಬ ಇಬ್ಬರು ಭಾರತೀಯರ ಹೆಸರು ಕೇಳಿಬರುತ್ತದೆ. ಈ ಪೈಕಿ ಪ್ರವೀಣ್ ಭಕ್ಷಿ, ಹಗರಣದ ಹಣ ಸ್ವೀಕಾರಕ್ಕೆಂದೇ ಸ್ಥಾಪನೆಯಾದ ಕಂಪನಿ ಎಂಬ ಆರೋಪ ಹೊತ್ತ ಏರೋಮ್ಯಾಟ್ರಿಕ್ಸ್‌ನ ಸಿಇಒ ಆಗಿದ್ದರೆ, ಗೌತಮ್ ಖೈತಾನ್ ಏರೋಮ್ಯಾಟ್ರಿಕ್ಸ್ ಕಂಪನಿಯ ಮಾಜಿ ನಿರ್ದೇಶಕ ಎಂಬುದು ಬೆಳಕಿಗೆ ಬಂದಿದೆ.