ಹೊಸದಿಲ್ಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಟೀಕಿಸಿ ಪತ್ರಿಕಾ ಮಂಡಳಿಯ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಬರೆದಿರುವ ವಿವಾದಾತ್ಮಕ ಲೇಖನ ಕಾಂಗ್ರೆಸ್ ಮತ್ತು ಬಿಜೆಪಿಗೆ ಜಗಳವಾಡಲು ಹೊಸ ಕಾರಣವನ್ನು ಕೊಟ್ಟಿದೆ. ಬಿಜೆಪಿ ಕಾಟ್ಜು ವಜಾಗೊಳಿಸುವ ಬೇಡಿಕೆಯನ್ನು ಪುನರುಚ್ಚರಿಸಿದರೆ ಕಾಂಗ್ರೆಸ್ ಅವರ ಬೆಂಬಲಕ್ಕೆ ನಿಂತು ಬಲವಾಗಿ ಸಮರ್ಥಿಸಿಕೊಂಡಿದೆ.ಇದೇ ವೇಳೆ ಕಾಟ್ಜು ರಾಜ್ಯಸಭೆಯ ವಿಪಕ್ಷ ನಾಯಕ ಅರುಣ್ ಜೇತ್ಲೀ ವಿರುದ್ಧ 'ಲಗಾಮಿಲ್ಲದ' ಹೇಳಿಕೆ ನೀಡಿದ ಆರೋಪ ಹೊರಿಸಿ ರಾಜಕೀಯದಿಂದ ಸನ್ಯಾಸ ಪಡೆದುಕೊಳ್ಳಲು ಅವರಿಗೆ ಸಲಹೆ ಮಾಡಿದ್ದಾರೆ.ಕಾಟ್ಜು ಕಾಂಗ್ರೆಸ್‌ಗಿಂತ ಮಿಗಿಲಾಗಿರುವ ಕಾಂಗ್ರೆಸ್ ಎಂದು ಜೇತ್ಲೀ ಟೀಕಿಸಿದ ಬೆನ್ನಿಗೆ ಅವರ ಪಕ್ಷ ಪತ್ರಿಕಾ ಮಂಡಳಿಯ ಅಧ್ಯಕ್ಷನ ಮೇಲೆ ಮುಗಿಬಿದ್ದು, ಅವರು ಪದೇ ಪದೇ ಲಕ್ಷ್ಮಣ ರೇಖೆಯನ್ನು ದಾಟುತ್ತಿದ್ದಾರೆ ಹಾಗೂ ಅವರು ಬಳಸುತ್ತಿರುವ ಭಾಷೆ ನ್ಯಾಯಾಧೀಶರಿಗೆ ತಕ್ಕುದಲ್ಲ ಎಂದು ಆರೋಪಿಸಿದೆ.ಕಾಟ್ಜು ಕಾಂಗ್ರೆಸ್ಸೇತರ ಸರಕಾರಗಳ ಆಳ್ವಿಕೆಯಿರುವ ರಾಜ್ಯಗಳ ವಿರುದ್ಧ ''ಅನಪೇಕ್ಷಿತ, ವಿಕಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವರು ಎಂದಿರುವ ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.