Sunday, May 19, 2013
Last Updated: 5:31:18 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರೇಸ್‌ಗಳಿಂದ ಹಿಂದೆ ಸರಿದ ಪಿಸ್ಟೋರಿಯಸ್‌
    • ಬ್ಲೇಡ್‌ ರನ್ನರ್‌ ಆಸ್ಕರ್‌ ಪಿಸ್ಟೋರಿಯಸ್‌ ಭವಿಷ್ಯದ ಎಲ್ಲ ರೇಸ್‌ಗಳಿಂದ ಹಿಂದೆ ಸರಿದಿದ್ದಾರೆ.

      • Udayavani | Feb 18, 2013

        ಜೊಹಾನ್ಸ್‌ಬರ್ಗ್‌ : ಪ್ರೇಮಿಗಳ ದಿನವೇ ಗೆಳತಿಯನ್ನು ಹತ್ಯೆಗೈದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಬ್ಲೇಡ್‌ ರನ್ನರ್‌ ಆಸ್ಕರ್‌ ಪಿಸ್ಟೋರಿಯಸ್‌ ಭವಿಷ್ಯದ ಎಲ್ಲ ರೇಸ್‌ಗಳಿಂದ ಹಿಂದೆ ಸರಿದಿದ್ದಾರೆ.

        ಮಾರ್ಚ್‌ ಮತ್ತು ಮೇ ನಡುವೆ ಅಮೆರಿಕ, ಆಸ್ಟ್ರೇಲಿಯ, ಬ್ರಝಿಲ್‌, ಬ್ರಿಟನ್‌ಗಳಲ್ಲಿ ನಡೆಯುವ ವಿವಿಧ ಅಂತಾರಾಷ್ಟ್ರೀಯ ಮಟ್ಟದ ರೇಸ್‌ಗಳಲ್ಲಿ ಪಿಸ್ಟೋರಿಯಸ್‌ ಪಾಲ್ಗೊಳ್ಳಬೇಕಿತ್ತು. ಆದರೆ ಅವರು ಈ ಎಲ್ಲ ಟೂರ್ನಿಗಳಿಂದ ಹಿಂದೆ ಸರಿದಿದ್ದಾರೆ ಎಂದು ಪಿಸ್ಟೋರಿಯಸ್‌ ಅವರ ಮ್ಯಾನೇಜರ್‌ ಪ್ರಕಟಿಸಿದ್ದಾರೆ.

        ದುರಂತ ಘಟನೆಯ ಅನಂತರ ಪಿಸ್ಟೋರಿಯಸ್‌ ಅನ್ಯ ಮಾರ್ಗವಿಲ್ಲದೇ ರೇಸ್‌ಗಳಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ. ಪ್ರಕರಣದ ವಿಚಾರಣೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ರೇಸ್‌ಗಳಲ್ಲಿ ಪಾಲ್ಗೊಳ್ಳುವ ಒಪ್ಪಂದಗಳಿಂದ ಹಿಂದೆ ಸರಿದಿದ್ದಾರೆ ಎಂದು ಮ್ಯಾನೇಜರ್‌ ಪೇಟ್‌ ವ್ಯಾನ್‌ ಜೈಲ್‌ ತಿಳಿಸಿದರು.

        ಈ ನಡುವೆ ಪಿಸ್ಟೋರಿಯಸ್‌ ಉದ್ದೇಶಪೂರ್ವಕವಾಗಿ ಗೆಳತಿ ರೇವಾ ಸ್ಟೇನ್‌ಕೆಂಪ್‌ ಅವರನ್ನು ಹತ್ಯೆ ಮಾಡಿದ್ದಾನೆ ಎಂಬ ವರದಿಗಳನ್ನು ಆತನ ಹೆತ್ತವರು ನಿರಾಕರಿಸಿದ್ದಾರೆ.

        ಸ್ನೇಹಿತನ ಮೇಲೂ ಆಕಸ್ಮಿಕ ಗುಂಡು?

        ಗೆಳತಿ ರೇವಾ ಸ್ಟೇನ್‌ಕೆಂಪ್‌ ಹತ್ಯೆಗೂ ಮುನ್ನ ಬ್ಲೇಡ್‌ ರನ್ನರ್‌ ಆಸ್ಕರ್‌ ಪಿಸ್ಟೋರಿಯಸ್‌ ರೆಸ್ಟೋರೆಂಟ್‌ ಒಂದರಲ್ಲಿ ಆಕಸ್ಮಿಕವಾಗಿ ಗೆಳೆಯನ ಮೇಲೆ ಗುಂಡು ಹಾರಿಸಿದ ವರದಿ ತಡವಾಗಿ ಬೆಳಕಿಗೆ ಬಂದಿದೆ.

        ಜೊಹಾನ್ಸ್‌ಬರ್ಗ್‌ನಲ್ಲಿ ಸ್ನೇಹಿತ ಪಿಸ್ತೂಲನ್ನು ಪರೀಕ್ಷಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿತು ಎಂದು ಪಿಸ್ಟೋರಿಯಸ್‌ ಗೆಳೆಯ, ವೃತ್ತಿಪರ ಬಾಕ್ಸರ್‌ ಕೆವಿನ್‌ ಲೆರೆನಾ ಸ್ಥಳೀಯ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

        'ಘಟನೆಯಿಂದ ನಾವೆಲ್ಲರೂ ಆತಂಕಗೊಂಡೆವು. ಗುಂಡು ನನ್ನ ಕಾಲ ಬಳಿ ಸುಮಾರು ಒಂದು ಅಡಿ ಕೆಳಗೆ ಹೋಗಿತ್ತು. ಪಿಸ್ತೂಲ್‌ನ ಸೇಫ್ಟಿ ಆಕಸ್ಮಿಕವಾಗಿ ಬಿದ್ದಿದ್ದೇ ಹೊರತು ಉದ್ದೇಶಪೂರ್ವಕವಾಗಿರಲಿಲ'É ಎಂದು ಲೆರಾನಾ ತಿಳಿಸಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲಾ ಪೊಲೀಸ್‌ ಸಶಸ್ತ್ರ ಮೀಸಲು ಪಡೆಯ ಸಿಬಂದಿ ಶಂಕರ ಪೂಜಾರಿಯವರು ರಾಜ್ಯವನ್ನು ಪ್ರತಿನಿಧಿಸಿ 4 ಪದಕಗಳನ್ನು ಪಡೆದಿದ್ದಾರೆ..
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus