Saturday, May 25, 2013
Last Updated: 5:17:30 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಶ್ರಾವಣ ಬೆಳಗೋಳ ಕ್ಷೇತ್ರ
    • ಶಾಸಕ ಸಿ.ಎಸ್‌.ಪುಟ್ಟೇಗೌಡ ರಾಜೀನಾಮೆ
    • ಶಾಸಕ ಸಿ.ಎಸ್‌.ಪುಟ್ಟೇಗೌಡ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಿರುವುದು.

      • Udayavani | Feb 18, 2013

        ಗೋಣಿಕೊಪ್ಪಲು : ಹಾಸನ - ಚನ್ನರಾಯಪಟ್ಟಣದ ಶ್ರಾವಣ ಬೆಳಗೋಳ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟೇಗೌಡ ಸೋಮವಾರ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆಯ ಸ್ಪೀಕರ್‌ ಕಚೇರಿಯಲ್ಲಿ ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದರು.

        ಬೆಳಗ್ಗೆ 10.40 ಕ್ಕೆ 150 ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಪೊನ್ನಂಪೇಟೆಗೆ ಆಗಮಿಸಿದ ಪುಟ್ಟೇಗೌಡ ಮಧ್ಯಾಹ್ನ ಸುಮಾರು 1.00 ಗಂಟೆಗೆ ತಮ್ಮ ಕಚೇರಿಗೆ ಆಗಮಿಸಿದ ಸ್ಪೀಕರ್‌ ಬೋಪಯ್ಯ ಅವರಿಗೆ ತಮ್ಮ ರಾಜಿನಾಮೆ ಪತ್ರವನ್ನು ನೀಡಿದರು.

        ಸುದ್ದಿಗಾರರೊಂದಿಗೆ ಮಾತನಾಡಿ, ಪುಟ್ಟೇಗೌಡ ಜೆಡಿಎಸ್‌ನಲ್ಲಿ ಇತ್ತೀಚೆಗೆ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಹಾಗೂ ಅವರ ಕುಟುಂಬ ರಾಜಕೀಯವೇ ಹೆಚ್ಚಾಗಿ ಕಂಡುಬರುವುದರಿಂದ ಬೇಸತ್ತು ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ ಅವರು ನನ್ನ ರಾಜಕೀಯ ಭದ್ರತೆಗಾಗಿ ಈ ನಿರ್ಧಾದ ಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲದೆ ನನ್ನ ರಾಜಿನಾಮೆಯನ್ನು ಸ್ಪಿ$àಕರ್‌ ಬೋಪಯ್ಯ ಅಂಗಿಕರಿಸಿದ್ದಾರೆ ಎಂದರುಕಳೆದ 37 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, 3 ಬಾರಿ ಶಾಸಕನಾಗಿದ್ದೇನೆ. ಇದೀಗ ನನ್ನ ಕ್ಷೇತ್ರದಲ್ಲಿ ದೇವೆಗೌಡ ಕುಟುಂಬದ ಸದಸ್ಯರೊಬ್ಬರನ್ನು ಚುನಾವಣೆಗೆ ಟಿಕೆಟ್‌ ನೀಡಲು ತಂತ್ರ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ದೇವೆಗೌಡ, ಸಿಂದ್ಯ, ಕುಮಾರ ಸ್ವಾಮಿ ಇಂದು ನನ್ನ ಕ್ಷೇತ್ರದಲ್ಲಿ ನನ್ನ ವಿರುದ್ಧವೇ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಇದು ನನ್ನ ಗೌರವಕ್ಕೆ ಚ್ಯುತಿ ಬಂದಿದೆ. ಇದರಿಂದಾಗಿ ಮನಸ್ಸಿಗೂ ನೋವುಂಟಾಗಿರುವುದರಿಂದ ನನ್ನ ಮತದಾರರ ಹಿತ ದೃಷ್ಠಿಯಿಂದ ನನ್ನ ಕ್ಷೇತ್ರದ ಜನತೆಗೆ ಅನ್ಯಾಯವಾಗದ ರೀತಿಯಲ್ಲಿ ಸೇವೆ ನೀಡಲು ದಿಟ್ಟ ನಿರ್ಧಾರ ಕೈಗೊಂಡಿರುವುದಾಗಿ ಸ್ಪ$ಷ್ಟಪಡಿಸಿದರು.

        ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ಎರಡು ದಿನಗಳೊಳಗೆ ಸೂಕ್ತ ನಿರ್ಧಾರ ಕೈಗೊಂಡು ಇಲ್ಲಿವರೆಗೆ ಜೆಡಿಎಸ್‌ನತ್ತ ಎಳೆಯುತ್ತಿದ್ದ ನನ್ನ ರಾಜಕೀಯ ರಥವನ್ನು ಕಾಂಗ್ರೆಸ್‌ ಪಕ್ಷದತ್ತ ಎಳೆದೊಯ್ಯಲಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜನತೆಯ ನಿರೀಕ್ಷೆಯಂತೆ ರಾಜಕೀಯ ಬದಲಾವಣೆಯನ್ನು ತರುವುದರೊಂದಿಗೆ ಹೆಪ್ಪು$ ಗಟ್ಟಿದ ರಾಜಕರಣವನ್ನು ತಿಳಿಗೊಳಿಸುವ ಬಗ್ಗೆ ಮಾತನಾಡಿದರು.

        ಇಂದಿನ ರಾಜಕೀಯಕ್ಕೆ ಸೋನಿಯ ಗಾಂಧಿಯಂತ ನಾಯಕಿಯ ಅಗತ್ಯವಿದೆ. ಸೋನಿಯ ಗಾಂಧಿಯ ನಾಯಕತ್ವದಲ್ಲಿ ಕುಟುಂಬ ರಾಜಕೀಯ ಇಲ್ಲ. ಜೆಡಿಎಸ್‌ನಲ್ಲಿ ಕುಟುಂಬ ರಾಜಕೀಯವೇ ಪ್ರಮುಖ ಪಾತ್ರ ವಹಿಸುತ್ತಿದೆ.

        ಈ ಎಲ್ಲಾ ಕಾರಣ ಹಾಸನ ಮತದಾರರು ಕಲುಷಿತಗೊಂಡ ರಾಜಕೀಯದಲ್ಲಿ ಬದಲಾವಣೆ ಬಯಸುತ್ತಿರುವುದರಿಂದ ನನ್ನ ಕ್ಷೇತ್ರದ ಜನತೆಯ ಸಂಪೂರ್ಣ ಬೆಂಬಲವಿದೆ. ಈ ಕಾರಣ ಮುಂದಿನ ಚುನಾವಣೆಯಲ್ಲಿ ಮತದಾರರು ಜೆಡಿಎಸ್‌ಗೆ ತಕ್ಕ ಉತ್ತರ ನೀಡಲಿದ್ದಾರೆ. ಈ ಬದಲಾವಣೆಯಿಂದ ಗೊಮಟೇಶ್ವರನ ಸನ್ನಿಧಿಯ ಹಾಸನ ಶಾಂತವಾಗಲಿದೆ ಎಂದರು.

        ತಮ್ಮ ಹಳೆಯ ರಾಜಕೀಯ ನೆನಪುಗಳನ್ನು ಮೆಲಕು ಹಾಕಿದ ಅವರು ನನಗೆ ದೇವೇಗೌಡರು ನನ್ನ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಅನುಭವವನ್ನು ಧಾರೆ ಎಳೆದಿದ್ದಾರೆ. ಯೌವನದ ಕಾಲದಲ್ಲೆ ಇವರೊಂದಿಗೆ ಗುರುತಿಸಿಕೊಂಡು ಬಂದದ್ದರಿಂದ ಹಿರಿಯ ರಾಜಕಾರಣಿಯ ಒಡನಾಟ ಸ್ಪರ್ಶ ಲಭಿಸಿದೆ ಎಂದರು.

        ರಾಜಿನಾಮೆ ಪತ್ರವನ್ನು ನೀಡಿ ಹೊರಬರುತ್ತಿದಂತೆಯೆ ಪುಟ್ಟೇಗೌಡರ ಬೆಂಬಲಿಗರು ಜೈಕಾರ ಹೇಳುತ್ತಾ ತಮ್ಮತ್ತ ಬರಮಾಡಿಕೊಂಡರು. ಸ್ಥಳಿಯ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಹೂವಿನ ಹಾರ ಹಾಕಿ ಕಾಂಗ್ರೆಸ್‌ ಪಕ್ಷಕ್ಕೆ ಹೆಜ್ಜೆ ಹೂರಿದ ಪುಟ್ಟೆಗೌಡರನ್ನು ಸ್ವಾಗತಿಸಿದರು. ಈ ಸಂದ‌ರ್ಭ ಜಿ.ಪಂ ಸದಸ್ಯ ಬಾನಂಡ ಪ್ರತ್ಯು, ತಾ.ಪಂ ಸದಸ್ಯ ಆಪಟ್ಟಿàರ ಟಾಟು ಮೊಣ್ಣಪ್ಪ, ಶಾಜಿ ಅಚ್ಚುತ್ತನ್‌ ಮತ್ತಿತರರು ಉಪಸ್ಥಿತರಿದ್ದರು.

        ರಾಜೀನಾಮೆ ಪತ್ರದಲ್ಲಿ ಏನಿದೆ?

        ನಾನು ನನ್ನ ಸ್ವ ಇಚ್ಚೆಯಿಂದ ಶ್ರವಣ ಬೆಳಗೋಳ ಕ್ಷೇತ್ರದ 132 ನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂಬ ಒಕ್ಕಣೆಯೊಂದಿಗೆ ರಾಜೀನಾಮೆ ಪತ್ರವನ್ನು ವಿಧಾನ ಸಬಾಧ್ಯಕ್ಷರಿಗೆ ನೀಡಲಾಯಿತು.




      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus