Friday, May 24, 2013
Last Updated: 9:35:24 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಿಥಾಲಿಯೇ ನಂ. ವನ್‌
    • ಮಿಥಾಲಿ ರಾಜ್‌ ಬ್ಯಾಟಿಂಗ್‌ ವಿಭಾಗದ ನಂ.1 ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

      • Udayavani | Feb 18, 2013

        ದುಬೈ : ವನಿತಾ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ಶೋಚನೀಯ ಪ್ರದರ್ಶನ ನೀಡದರೂ ತಂಡದ ನಾಯಕಿ ಮಿಥಾಲಿ ರಾಜ್‌ ಬ್ಯಾಟಿಂಗ್‌ ವಿಭಾಗದ ನಂ.1 ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ತಂಡ ರ್‍ಯಾಂಕಿಂಗ್‌ನಲ್ಲಿ ಭಾರತ ಏಳಕ್ಕೆ ಕುಸಿದಿದೆ. ಚಾಂಪಿಯನ್‌ ಆಸ್ಟ್ರೇಲಿಯ ನಂ.1 ತಂಡವೆನಿಸಿದರೆ, ರನ್ನರ್‌ ಅಪ್‌ ವೆಸ್ಟ್‌ ಇಂಡೀಸ್‌ ಎರಡಕ್ಕೆ ಏರಿದೆ.

        ನ್ಯೂಜಿಲಂಡ್‌ ನಾಯಕಿ ಹಾಗೂ ಸರಣಿಸ್ರೇಷ್ಠ ಆಟಗಾರ್ತಿ ಸುಝೀ ಬೇಟ್ಸ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ 5 ಮೆಟ್ಟಿಲು ಮೇಲೇರಿ ಜೀವನಶ್ರೇಷ್ಠ ನಂ.2 ಸ್ಥಾನ ಅಲಂಕರಿಸಿದ್ದಾರೆ. ವಿಶ್ವಕಪ್‌ನಲ್ಲಿ ಬೇಟ್ಸ್‌ 407 ರನ್ನುಗಳೊಂದಿಗೆ ಅಗ್ರಸ್ಥಾನಿಯಾಗಿ ಮೂಡಿಬಂದಿದ್ದರು. ಸರಾಸರಿ 67.83. ಆದರೆ ಮಿಥಾಲಿ ಹಾಗೂ ಬೇಟ್ಸ್‌ ನಡುವೆ 39 ರೇಟಿಂಗ್‌ ಅಂಕಗಳ ವ್ಯತ್ಯಾಸವಿದೆ.

        ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯದ 6 ಮಂದಿ ಆಟಗಾರ್ತಿಯರು ರ್‍ಯಾಂಕಿಂಗ್‌ ಪ್ರಗತಿ ಕಂಡು ಟಾಪ್‌-20 ಯಾದಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

        ವಿಶ್ವಕಪ್‌ನಲ್ಲಿ 12 ವಿಕೆಟ್‌ ಉರುಳಿಸಿದ ಇಂಗ್ಲಂಡಿನ ಕ್ಯಾಥರಿನ್‌ ಬ್ರಂಟ್‌ ಏಕದಿನ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ವಿಂಡೀಸಿನ ಸ್ಟಿಫಾನಿ ಟಯ್ಲರ್‌ ಜೀವನಶ್ರೇಷ್ಠ 4ನೇ ಸ್ಥಾನ ಏರಿದರೆ, ಇಂಗ್ಲಂಡಿನ ಹೋಲಿ ಕೊಲ್ವಿನ್‌ 10 ಸ್ಥಾನ ನೆಗೆದು 7ಕ್ಕೆ ಬಂದಿದ್ದಾರೆ.

        ಈ ಪಂದ್ಯಾವಳಿಯಲ್ಲಿ ಅತ್ಯಧಿಕ 15 ವಿಕೆಟ್‌ ಹಾರಿಸಿದ ಆಸ್ಟ್ರೇಲಿಯದ ಮೆಗಾನ್‌ ಸ್ಕಟ್‌ 38 ಸ್ಥಾನ ಮೇಲೇರಿ 38ನೇ ಸ್ಥಾನ ತಲುಪಿದ್ದಾರೆ. ವಿಂಡೀಸಿನ ಸ್ಟಿಫಾನಿ ಟಯ್ಲರ್‌ ನಂ.1 ಆಲ್‌ರೌಂಡರ್‌ ಸ್ಥಾನ ಉಳಿಸಿಕೊಂಡಿದ್ದಾರೆ. ಭಾರತದ ಜೂಲನ್‌ ಗೋಸ್ವಾಮಿಗೆ 5ನೇ ಸ್ಥಾನ ಲಭಿಸಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus