Friday, May 24, 2013
Last Updated: 9:35:24 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದೀಪುಗೆ ಅನನ್ಯ ಉಡುಗೊರೆಯನ್ನಿತ್ತ ಅಭಿಮಾನಿ
    • ನನ್ನ ವ್ಯಾಲೆಂಟೈನ್‌ ಡೇಯನ್ನು ಅತ್ಯಂತ ಸ್ಮರಣೀಯ ದಿನವಾಗಿ ಮಾಡಿದ್ದಾನೆ.

      • Udayavani | Feb 18, 2013

        ಮುಂಬಯಿ: ರೇಸ್‌ 2 ಚಿತ್ರದಲ್ಲಿನ ದೀಪಿಕಾ ಪಡುಕೋಣೆಯವರ ಅಮೋಘ ಆವಾತರವು ಹಿಂದೆಂದಿಗಿಂತಲೂ ಹೆಚ್ಚಾಗಿ ಅವರ ಅಭಿಮಾನಿಯೊಬ್ಬರ ಹೃದಯದ ರೇಸಿಂಗ್‌ ಕಾರಣವಾಗಿರುವಂತೆ ಕಾಣುತ್ತಿದೆ.

        'ಇಲ್ಲಿ ನಾನು ಆಕರ್ಷಿತನಾಗಿರುವ ಏಕೈಕ ಬೆಡಗಿಗಾಗಿ ಅಲ್ಪ ಪ್ರೀತಿ ಮತ್ತು ಕಾಳಜಿ'ಎಂಬ ಮುದ್ದಾದ ಕೈಬರಹದ ಪತ್ರದೊಂದಿಗೆ ಅಭಿಮಾನಿಯೊಬ್ಬರಿಂದ ಅನಾಮಿಕ ವ್ಯಾಲೆಂಟೈನ್‌ ಡೇ ಉಡುಗೊರೆಯನ್ನು ದೀಪಿಕಾ ಪಡುಕೋಣೆಯವರಿಗೆ ದೊರೆತಿದೆ ಎಂದು ವರದಿಯಾಗಿದೆ.

        ದೀಪಿಕಾ ಪಡುಕೋಣೆ ಅವರನ್ನು ಕಂಡು ಇಷ್ಟೊಂದು ಆಕರ್ಷಿತರಾಗಿರುವುದು, ಪ್ರಾಯಶಃ ಬಾಲಿವುಡ್‌ ಬೆಡಗಿಗೆ ಹೊಸತೇನು ಆಗಿರಲಿಕ್ಕಿಲ್ಲ, ಆದರೆ ದಿನವಿಡೀ ಪ್ರತಿ ಗಂಟೆಗೆ ಒಂದೊಂದರಂತೆ ಬಹಳ ಪ್ರೀತಿ ಮತ್ತು ಕಾಳಜಿಯೊಂದಿಗೆ ತೊಗಟೆಯೊಳಗೆ ಕೆಂಪು ಹೃದಯಾಕಾರದ ಚಾಕಲೆಟ್‌ಗಳೊಂದಿಗೆ 14 ನವಿರಾದ ಸೀಯಾಳದೊಂದಿಗಿನ ಉಡುಗೊರೆ ಖಚಿತವಾಗಿ ಅವರನ್ನು ಬೆರೆಗುಗೊಳಿಸಿರಬಹುದು. ಅಬ್ಟಾ ಪ್ರೀತಿಯ ದಿನವನ್ನು ಕಳೆಯಲು ಎಂತಹ ಮಾರ್ಗ ಕಂಡುಕೊಂಡಿದ್ದಾನೆ! ದೀಪಿಕಾ ಪಡುಕೋಣೆ ಅವರ ಸೀಯಾಳದ ಆಸಕ್ತಿ ಬಗ್ಗೆ ಅವರ ಅಭಿಮಾನಿ ಪತ್ತೆಹಚ್ಚಿದ್ದಾನೆಯೇ, ಅದರ ಬಗ್ಗೆ ನಮಗೆ ತಿಳಿದಿಲ್ಲ? ಅಥವಾ ಈ ಅಭಿಮಾನಿ ಕೇವಲ ಆಕೆಯ ಬಗ್ಗೆ ಉತ್ಸಾಹಿತನಾಗಿದ್ದಾನೆಯೇ? ಊಹಿಸಿದರೂ, ನಾವು ತಿಳಿದುಕೊಳ್ಳುವುದು ಕಷ್ಟ!

        ನನ್ನ ಅಭಿಮಾನಿಯ ಅತಿಥ್ಯದಿಂದ ನಾನು ಅತ್ಯಂತ ಪ್ರಭಾವಿತನಾಗಿದ್ದೇನೆ. ಅವನ ಕಲ್ಪನೆ ಅತ್ಯಂತ ಅನನ್ಯವಾಗಿತ್ತು! ಅವನು ಖಂಡಿಯವಾಗಿಯೂ ನನ್ನ ವ್ಯಾಲೆಂಟೈನ್‌ ಡೇಯನ್ನು ಅತ್ಯಂತ ಸ್ಮರಣೀಯ ದಿನವಾಗಿ ಮಾಡಿದ್ದಾನೆ ಎಂದು ದೀಪಿಕಾ ಪಡುಕೋಣೆ ಉದ್ಗರಿಸಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus