Tuesday, May 21, 2013
Last Updated: 12:33:53 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವಿಶ್ವಕಪ್‌ ತಂಡದಲ್ಲಿ ಭಾರತೀಯರಿಲ್ಲ!
    • ವಿಶ್ವಕಪ್‌ ತಂಡದಲ್ಲಿರುವ ಏಕೈಕ ಏಶ್ಯನ್‌ ಆಟಗಾರ್ತಿಯೆಂದರೆ ಶ್ರೀಲಂಕಾದ ಇಶಾನಿ ಕೌಶಲ್ಯ.

      • Udayavani | Feb 18, 2013

        ಮುಂಬಯಿ : ಐಸಿಸಿ ವನಿತಾ ವಿಶ್ವಕಪ್‌ ತಂಡದಲ್ಲಿ ಚಾಂಪಿಯನ್‌ ಆಸ್ಟ್ರೇಲಿಯ ಮತ್ತು ಇಂಗ್ಲಂಡ್‌ ಆಟಗಾರರೇ ಪ್ರಭುತ್ವ ಸಾಧಿಸಿದ್ದಾರೆ. ಆತಿಥೇಯ ಭಾರತದ ಒಬ್ಬ ಆಟಗಾರ್ತಿ ಕೂಡ ಇದರಲ್ಲಿ ಸ್ಥಾನ ಸಂಪಾದಿಸಿಲ್ಲ. ತಂಡದಲ್ಲಿರುವ ಏಕೈಕ ಏಶ್ಯನ್‌ ಆಟಗಾರ್ತಿಯೆಂದರೆ ಶ್ರೀಲಂಕಾದ ಇಶಾನಿ ಕೌಶಲ್ಯ.

        ವಿಶ್ವಕಪ್‌ ಪಂದ್ಯಾವಳಿಯೊಂದು ಮುಗಿದ ಬಳಿಕ, ಆಟಗಾರರ ಒಟ್ಟು ಸಾಧನೆಯನ್ನು ಪರಿಗಣಿಸಿ ಹನ್ನೆರಡರ ಬಳಗವೊಂದನ್ನು ಪ್ರಕಟಿಸುವುದು ಐಸಿಸಿಯ ಸಂಪ್ರದಾಯ. ಆದರೆ ನಿರೀಕ್ಷಿತ ಸಾಧನೆ ತೋರ್ಪಡಿಸದೆ ಲೀಗ್‌ ಹಂತದಲ್ಲೇ ಹೊರಬಿದ್ದ ಆತಿಥೇಯ ಭಾರತ ಈ ತಂಡದಲ್ಲಿ ಸ್ಥಾನ ಸಂಪಾದಿಸುವಲ್ಲಿ ವಿಫ‌ಲವಾಗಿದೆ.

        12ನೇ ಆಟಗಾರ್ತಿಯೂ ಸೇರಿದಂತೆ ಇದರಲ್ಲಿ ಇಂಗ್ಲಂಡ್‌ ಹಾಗೂ ಆಸ್ಟ್ರೇಲಿಯದ ತಲಾ 4 ಮಂದಿ ಸ್ಥಾನ ಪಡೆದಿದ್ದಾರೆ. ವೆಸ್ಟ್‌ ಇಂಡೀಸಿನ ಇಬ್ಬರು ಆಟಗಾರ್ತಿಯರಿದ್ದಾರೆ. ನ್ಯೂಜಿಲಂಡ್‌ ಮತ್ತು ಶ್ರೀಲಂಕಾದ ಒಬ್ಬೊಬ್ಬರು ಕಾಣಿಸಿಕೊಂಡಿದ್ದಾರೆ. ನ್ಯೂಜಿಲಂಡಿನ ಸುಝೀ ಬೇಟ್ಸ್‌ ಅವರಿಗೆ ನಾಯಕಿ ಪಟ್ಟ ಲಭಿಸಿದೆ.

        'ಆಯ್ದ ಪರಿಣಿತರು ಈ ತಂಡವನ್ನು ಆರಿಸಿದ್ದಾರೆ. ಇಲ್ಲಿ ಆಟಗಾರರ ಸಾಧನೆ ಹಾಗೂ ಅಂಕಿಅಂಶದ ಜತೆಯಲ್ಲೇ ಭಾರತದ ಪರಿಸ್ಥಿತಿಗೆ ಹೊಂದಿಕೊಂಡು ಯಶಸ್ಸು ಸಾಧಿಸಿದ್ದನ್ನೂ ಮಾನದಂಡವಾಗಿ ಪರಿಗಣಿಸಲಾಗಿದೆ' ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

        ಇದು ತನ್ನ ಪಾಲಿಗೆ ಸಂದ ಅತೀ ದೊಡ್ಡ ಗೌರವ ಎಂದು ತಂಡದ ನಾಯಕಿ ಸುಝೀ ಬೇಟ್ಸ್‌ ಪ್ರತಿಕ್ರಿಯಿಸಿದ್ದಾರೆ. ಬೇಟ್ಸ್‌ ಈ ಕೂಟದ ಸರಣಿಶ್ರೇಷ್ಠ ಆಟಗಾರ್ತಿಯೂ ಹೌದು.

        ಐಸಿಸಿ ವಿಶ್ವಕಪ್‌ ತಂಡ: ಸುಝೀ ಬೇಟ್ಸ್‌ (ನ್ಯೂಜಿಲಂಡ್‌, ನಾಯಕಿ), ಚಾರ್ಲೋಟ್‌ ಎಡ್ವರ್ಡ್ಸ್‌ (ಇಂಗ್ಲಂಡ್‌), ರಶೆಲ್‌ ಹೇಯ್ನ (ಆಸ್ಟ್ರೇಲಿಯ), ಸ್ಟಿಫಾನಿ ಟಯ್ಲರ್‌, ಡೀಂಡ್ರಾ ಡೊಟಿನ್‌ (ಇಬ್ಬರೂ ವೆಸ್ಟ್‌ ಇಂಡೀಸ್‌), ಇಶಾನಿ ಕೌಶಲ್ಯ (ಶ್ರೀಲಂಕಾ), ಜೋಡಿ ಫೀಲ್ಡ್‌ (ವಿ.ಕೀ., ಆಸ್ಟ್ರೇಲಿಯ), ಕ್ಯಾಥರಿನ್‌ ಬ್ರಂಟ್‌, ಹೋಲಿ ಕೊಲ್ವಿನ್‌, ಆಯನಿ ಶ್ರಬೊಲ್‌ (ಮೂವರೂ ಇಂಗ್ಲಂಡ್‌), ಮೆಗಾನ್‌ ಸ್ಕಟ್‌ (ಆಸ್ಟ್ರೇಲಿಯ). 12ನೇ ಆಟಗಾರ್ತಿ-ಹೋಲಿ ಫ‌ರ್ಲಿಂಗ್‌ (ಆಸ್ಟ್ರೇಲಿಯ).

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus