Thursday, June 20, 2013
Last Updated: 4:24:38 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆನಂದ್‌ ಗ್ರೆಂಕೆ ಚೆಸ್‌ ಚಾಂಪಿಯನ್‌
    • ವಿಶ್ವನಾಥನ್‌ ಆನಂದ್‌ ಗ್ರೆಂಕೆ ಚೆಸ್‌ ಕ್ಲಾಸಿಕ್‌ ಟ್ರೋಫಿ ಗೆಲ್ಲುವ ಮೂಲಕ ವರ್ಷದ ಮೊದಲ ಚೆಸ್‌ ಪ್ರಶಸ್ತಿ ಗೆದ್ದ ಸಾಧನೆ

      • Udayavani | Feb 18, 2013

        ಬಡೇನ್‌-ಬಡೇನ್‌ (ಜರ್ಮನಿ) : ವಿಶ್ವ ಚಾಂಪಿಯನ್‌ ಭಾರತದ ವಿಶ್ವನಾಥನ್‌ ಆನಂದ್‌ ಗ್ರೆಂಕೆ ಚೆಸ್‌ ಕ್ಲಾಸಿಕ್‌ ಟ್ರೋಫಿ ಗೆಲ್ಲುವ ಮೂಲಕ ವರ್ಷದ ಮೊದಲ ಚೆಸ್‌ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.

        ಸೋಮವಾರ ನಡೆದ ಅಂತಿಮ ಸುತ್ತಿನ ರೋಚಕ ಹೋರಾಟದಲ್ಲಿ ಆನಂದ್‌ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ ಜರ್ಮನಿಯ ಅರ್ಕಡಿಜ್‌ ನೈಡಿಸ್ಟೆಚ್‌ ಅವರನ್ನು ಮಣಿಸಿ ಬಹುದಿನಗಳ ಪ್ರಶಸ್ತಿಯ ಬರ ನೀಗಿಸಿಕೊಂಡರು. ಮತ್ತೂಂದೆಡೆ ಆರಂಭದಿಂದಲೂ ಮುನ್ನಡೆ ಗಳಿಸಿದ್ದ ಇಟಲಿಯ ಫ್ಯಾಬಿಯಾನೊ ಕರುಣಾ ಜರ್ಮನಿಯ ಡೇನಿಯಲ್‌ ಫ್ರಿಡ್ಮನ್‌ ವಿರುದ್ಧ ಡ್ರಾ ಮಾಡಿಕೊಂಡು ಪ್ರಶಸ್ತಿಯಿಂದ ವಂಚಿತರಾದರು.

        ಅಂತಿಮ ಸುತ್ತಿಗೂ ಮುನ್ನ ಆನಂದ್‌ ಮತ್ತು ಫ್ಯಾಬಿಯಾನೊ ತಲಾ 5.5 ಅಂಕಗಳೊಂದಿಗೆ ಸಮಬಲ ಹೊಂದಿದ್ದರು. ಫ್ಯಾಬಿಯಾನೊ ಟೂರ್ನಿಯ ಆರಂಭದಿಂದಲೂ ಏಕಾಂಗಿಯಾಗಿ ಅಗ್ರಸ್ಥಾನ ಪಡೆದಿದ್ದರೂ ಉಪಾಂತ್ಯದ ಪಂದ್ಯದಲ್ಲಿ ಸೋತು ಆನಂದ್‌ ಜತೆ ಸ್ಥಾನ ಹಂಚಿಕೊಂಡಿದ್ದರು.

        ರೌಂಡ್‌ ರಾಬಿನ್‌ ಲೀಗ್‌ ಮಾದರಿಯ ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಜಯ ಸಾಧಿಸಿದ ಅನಂತರವೂ ಆನಂದ್‌, ಮತ್ತೂಂದೆಡೆ ನಡೆಯುತ್ತಿದ್ದ ಫ್ಯಾಬಿಯಾನೊ ಪಂದ್ಯದ ಫ‌ಲಿತಾಂಶಕ್ಕಾಗಿ ಕಾಯಬೇಕಾಯಿತು. ಫ್ಯಾಬಿಯಾನೊ ಸೋಲುತ್ತಿದ್ದಂತೆ ಆನಂದ್‌ಗೆ ಪ್ರಶಸ್ತಿ ಖಚಿತವಾಯಿತು. ಒಟ್ಟಾರೆ 6.5 ಅಂಕ ಗಳಿಸಿದ ಆನಂದ್‌ ಅರ್ಧ ಅಂಕದಿಂದ ಫ್ಯಾಬಿಯಾನೊ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು. ಕಳೆದ ವರ್ಷ ವಿಶ್ವ ಚಾಂಪಿಯನ್‌ ಗೆದ್ದ ಅನಂತರ ಆನಂದ್‌ ಯಾವುದೇ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿರಲಿಲ್ಲ.

        ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಆನಂದ್‌, '2011ರ ಬಿಲಾºವೊ ಟೂರ್ನಿಯ ಅನಂತರ ಅತ್ಯಂತ ಕುತೂಹಲ ಘಟ್ಟದಲ್ಲಿ ಪ್ರಶಸ್ತಿ ಗೆದ್ದಿದ್ದೇನೆ. ಈ ವರ್ಷ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವ ಸಮಸ್ಯೆ ಎದುರಿಸಿದ್ದೆ. ಅದರಲ್ಲೂ ಕೆಲವು ಆಟಗಾರರಿಗೆ ಅರ್ಧ ಅಂಕಗಳನ್ನು ಉದಾರವಾಗಿ ನೀಡಿದೆ...' ಎಂದರು.

        'ಇದಕ್ಕಿಂತ ಉತ್ತಮವಾಗಿ ಪ್ರಶಸ್ತಿ ಗೆಲ್ಲುವ ಅವಕಾಶ ಇತ್ತು. ಆದರೆ ಸಮಸ್ಯೆಗಳ ನಡುವೆಯೂ ಈ ಸಾಧನೆ ಮಾಡಿರುವುದು ತೃಪ್ತಿ ನೀಡಿದೆ. ನನ್ನ ತಂತ್ರಗಾರಿಕೆಯಲ್ಲಿ ಸುಧಾರಣೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕಾಗಿದೆ...' ಎಂದು ಆನಂದ್‌ ಹೇಳಿದರು.

        ಇಂಗ್ಲಂಡಿನ ಆ್ಯಡಮ್ಸ್‌ ಮತ್ತು ಮೈಯರ್‌ 5 ಅಂಕಗಳೊಂದಿಗೆ ಮೂರನೇ ಸ್ಥಾನ ಹಂಚಿಕೊಂಡರು. ನೈಡಿಸ್ಟೆಚ್‌ 4 ಅಂಕದೊಂದಿಗೆ 5ನೇ ಸ್ಥಾನ ಹಾಗೂ ಫ್ರಿಡ್ಮನ್‌ 3.5 ಅಂಕದೊಂದಿಗೆ ಕೊನೆಯ ಸ್ಥಾನಿಯಾಗಿ ಅಭಿಯಾನ ಪೂರೈಸಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಇಂಗ್ಲಂಡ್‌ ತಂಡವು ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಕೂಟದ ಫೈನಲ್‌ ಹಂತಕ್ಕೇರಿತು...
      image image
      • Copyright @ 2009 Udayavani.All rights reserved.
      • Designed & Hosted By 4cplus