Friday, May 24, 2013
Last Updated: 10:40:41 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಧ್ರುವ್‌, ಸಕ್ಸೇನಾ ಘಾತಕ ದಾಳಿ
    • ಆಸ್ಟ್ರೇಲಿಯಕ್ಕೆ ಫಾಲೋಆನ್‌ ಅವಮಾನ
    • 235ಕ್ಕೆ ಆಲೌಟ್‌; 216 ರನ್‌ ಹಿನ್ನಡೆ
    • ದ್ವಿತೀಯ ಇನ್ನಿಂಗ್ಸ್‌ನಲ್ಲಿ ಚೇತರಿಕೆಯ ಬ್ಯಾಟಿಂಗ್‌ ನಡೆಸಿ ಪಂದ್ಯಕ್ಕೆ ''''ಡ್ರಾ'' ಮುದ್ರೆಯೊತ್ತುವಲ್ಲಿ ಯಶಸ್ವಿಯಾಯಿ

      • Udayavani | Feb 18, 2013

        ಚೆನ್ನೈ : ಪ್ರವಾಸಿ ಆಸ್ಟ್ರೇಲಿಯ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತ 'ಎ' ವಿರುದ್ಧ ಫಾಲೋಆನ್‌ ಅವಮಾನಕ್ಕೆ ಸಿಲುಕಿತು; ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಚೇತರಿಕೆಯ ಬ್ಯಾಟಿಂಗ್‌ ನಡೆಸಿ ಪಂದ್ಯಕ್ಕೆ 'ಡ್ರಾ' ಮುದ್ರೆಯೊತ್ತುವಲ್ಲಿ ಯಶಸ್ವಿಯಾಯಿತು.



        ಭಾರತ 'ಎ' ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 451 ರನ್‌ಗಳಿಗೆ ಉತ್ತರವಾಗಿ ಆಸ್ಟ್ರೇಲಿಯ ಪಂದ್ಯದ ಅಂತಿಮ ದಿನವಾದ ಸೋಮವಾರ ಸ್ಪಿನ್ನರ್‌ಗಳಾದ ರಾಕೇಶ್‌ ಧ್ರುವ್‌ ಮತ್ತು ಜಲಜ್‌ ಸಕ್ಸೇನಾ ದಾಳಿಗೆ ತತ್ತರಿಸಿ 235 ರನ್‌ಗಳಿಗೆ ಪತನಗೊಂಡಿತು. 216 ರನ್‌ಗಳ ಹಿನ್ನಡೆಗೆ ಸಿಲುಕಿ ಫಾಲೋಆನ್‌ ಹೇರಿಕೊಂಡಿತು. ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಹೋರಾಟ ಸಂಘಟಿಸಿ 3 ವಿಕೆಟಿಗೆ 195 ರನ್‌ ಗಳಿಸಿದ್ದಾಗ ಉಭಯ ತಂಡಗಳು ಡ್ರಾಗೆ ಸಮ್ಮತಿಸಿದವು.



        ಫಾಲೋಆನ್‌ಗೆ ಗುರಿಯಾಗಿ ಎರಡನೇ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯ, ಆರಂಭಿಕರಾದ ಶೇನ್‌ ವಾಟ್ಸನ್‌-ಎಡ್‌ ಕೊವಾನ್‌ ಅವರ ಮತ್ತೂಂದು ಸೊಗಸಾದ ಜತೆಗಾರಿಕೆಯಿಂದ ದೊಡ್ಡ ಗಂಡಾಂತರದಿಂದ ಪಾರಾಯಿತು. ಇವರಿಬ್ಬರು 21.3 ಓವರ್‌ ನಿಭಾಯಿಸಿ 104 ರನ್‌ ಪೇರಿಸಿದರು. ರನೌಟಾಗಿ ನಿರ್ಗಮಿಸಿದ ವಾಟ್ಸನ್‌ 60 ರನ್‌ ಹೊಡೆದು ಮತ್ತೆ ಟಾಪ್‌ ಸ್ಕೋರರ್‌ ಎನಿಸಿದರು (63 ಎಸೆತ, 6 ಬೌಂಡರಿ, 1 ಸಿಕ್ಸರ್‌). ಕೊವಾನ್‌ ಕೊಡುಗೆ 53 ರನ್‌ (81 ಎಸೆತ, 9 ಬೌಂಡರಿ, 1 ಸಿಕ್ಸರ್‌). ಈ ಜೋಡಿ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ವಿಕೆಟಿಗೆ 116 ರನ್‌ ಪೇರಿಸಿತ್ತು.



        ವಾಟ್ಸನ್‌-ಕೊವಾನ್‌ 14 ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಫಿಲಿಪ್‌ ಹ್ಯೂಸ್‌ ಆಟ 19 ರನ್ನಿಗೆ ಮುಗಿಯಿತು. ಅನಂತರ ಜತೆಗೂಟಿದ ಉಸ್ಮಾನ್‌ ಖ್ವಾಜಾ (ಅಜೇಯ 30) ಮತ್ತು ಮ್ಯಾಥ್ಯೂ ವೇಡ್‌ (ಅಜೇಯ 19) ತಂಡಕ್ಕೆ ಹೆಚ್ಚಿನ ಆಘಾತ ಆಗದಂತೆ ನೋಡಿಕೊಂಡರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಾಂಗರೂ ಬಳಗ ಒಟ್ಟು 55 ಓವರ್‌ಗಳನ್ನು ನಿಭಾಯಿಸಿತು.

        ಪಂದ್ಯ ಅಂತ್ಯಗೊಂಡಾಗ ಆಸ್ಟ್ರೇಲಿಯ ಇನ್ನೂ 21 ರನ್‌ಗಳ ಹಿನ್ನಡೆಯಲ್ಲಿತ್ತು. ಇದು ಭಾರತ 'ಎ' ತಂಡಕ್ಕೆ ಲಭಿಸಿದ ನೈತಿಕ ಗೆಲುವಾದರೆ, ಟೆಸ್ಟ್‌ ತಂಡದಿಂದ ಉಚ್ಚಾಟಿಸಲ್ಪಟ್ಟ ನಾಯಕ ಗೌತಮ್‌ ಗಂಭೀರ್‌ ಅವರಿಗೆ ದೊರೆತ ದೊಡ್ಡ ಯಶಸ್ಸು. ಬ್ಯಾಟಿಂಗ್‌ ಜತೆ ಗಂಭೀರ್‌ ನಾಯಕತ್ವವೂ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.



        ಇಬ್ಬನಿಯಿಂದ ಮೈದಾನ ತೇವಗೊಂಡ ಕಾರಣ ಸುಮಾರು ಮೂರು ಗಂಟೆ ತಡವಾಗಿ ಸೋಮವಾರದ ಆಟ ಆರಂಭವಾಗಿತ್ತು. 4 ವಿಕೆಟಿಗೆ 131 ರನ್‌ಗಳಿಂದ ಮೊದಲ ಇನಿಂಗ್ಸ್‌ ಮುಂದುವರಿಸಿದ ಆಸ್ಟ್ರೇಲಿಯ ಚಹಾ ವಿರಾಮಕ್ಕೂ ಮುನ್ನ 235ಕ್ಕೆ ಆಲೌಟಾಯಿತು. ತಂಡದ ಪರ ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್‌ (44) ಮತ್ತು ಹೆನ್ರಿಕ್ಸ್‌ (33) ಕೆಳ ಕ್ರಮಾಂಕದಲ್ಲಿ ಸ್ವಲ್ಪಮಟ್ಟಿಗೆ ಪ್ರತಿರೋಧ ಒಡ್ಡಿದ್ದು ಹೊರತುಪಡಿಸಿದರೆ ಉಳಿದವರಿಂದ ಯಾವುದೇ ಹೋರಾಟ ಕಂಡುಬರಲಿಲ್ಲ.

        ಸ್ಪಿನ್ನರ್‌ಗಳಾದ ಗುಜರಾತ್‌ನ ರಾಕೇಶ್‌ ಧ್ರುವ್‌ 51ಕ್ಕೆ 5 ವಿಕೆಟ್‌ ಕಬಳಿಸಿದರೆ, ಮಧ್ಯಪ್ರದೇಶದ ಜಲಜ್‌ ಸಕ್ಸೇನಾ 61ಕ್ಕೆ 4 ವಿಕೆಟ್‌ ಕಿತ್ತು ಆಸ್ಟ್ರೇಲಿಯವನ್ನು ಕಟ್ಟಿಹಾಕಿದರು. ಇವರಿಬ್ಬರನ್ನು ಹೊರತುಪಡಿಸಿದರೆ ಆತಿಥೇಯ ತಂಡದ ಉಳಿದ ಯಾವ ಬೌಲರ್‌ಗಳೂ ಈ ಪಂದ್ಯದಲ್ಲಿ ವಿಕೆಟ್‌ ಕೀಳಲಾಗಲಿಲ್ಲ. ವಿನಯ್‌ ಕುಮಾರ್‌, ಧವಳ್‌ ಕುಲಕರ್ಣಿ, ಮನ್‌ಪ್ರೀತ್‌ ಗೋನಿ, ಅಭಿಷೇಕ್‌ ನಾಯರ್‌ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫ‌ಲರಾದರು.

        ಸಂಕ್ಷಿಪ್ತ ಸ್ಕೋರ್‌: ಭಾರತ 'ಎ'-451. ಆಸ್ಟ್ರೇಲಿಯ-235 (ವೇಡ್‌ 44, ಹೆನ್ರಿಕ್ಸ್‌ 33, ರಾಕೇಶ್‌ ಧ್ರುವ್‌ 51ಕ್ಕೆ 5, ಜಲಜ್‌ ಸಕ್ಸೇನಾ 61ಕ್ಕೆ 4) ಮತ್ತು 3 ವಿಕೆಟಿಗೆ 195 (ವಾಟ್ಸನ್‌ 60, ಕೊವಾನ್‌ 53, ಖ್ವಾಜಾ ಅಜೇಯ 30, ಧ್ರುವ್‌ 57ಕ್ಕೆ 1, ಸಕ್ಸೇನಾ 37ಕ್ಕೆ 1).

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus