Udayavani | Feb 18, 2013
ಹರಿಹರ: ಇತ್ತೀಚೆಗೆ ನಾಡು-ನುಡಿ, ಜಾತಿ-ಧರ್ಮದ ಹೆಸರಲ್ಲಿ ದುರಭಿಮಾನ ಬೆಳೆಯುತ್ತಿರುವುದು ದೇಶದ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ನಿವೃತ್ತ ಡಿಜಿ ಹಾಗೂ ಐಜಿಪಿ ಡಾ| ಶಂಕರ್ ಬಿದರಿ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಸಕ್ರಿ ಕೈಗಾರಿಕಾ ತರಬೇತಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಮಿತಿ ಎಂಬುದಿರುತ್ತದೆ. ಜಾತಿ, ಧರ್ಮ, ಭಾಷೆಯ ವಿಷಯದಲ್ಲೂ ಅತಿಯಾದ ನಶೆ ಏರಿಸಿಕೊಂಡರೆ ನನ್ನದೇ ಹೆಚ್ಚು ಎಂಬ ವಿಕೃತ ವಾದ ಶುರುವಾಗಿ ಅದು ಎಲ್ಲರಿಗೂ ಮಾರಕವಾಗುತ್ತದೆ. ಪರಸ್ಪರ ಸ್ನೇಹ, ಸಹಕಾರದಿಂದ ಮಾತ್ರ ಸುಭದ್ರ ನಾಡು ಕಟ್ಟಲು ಸಾಧ್ಯವೇ ಹೊರತು ನನ್ನದೇ ಹೆಚ್ಚೆಂದು ಧೆÌàಷಾಸೂಯೆ ಬೆಳೆಸಿಕೊಂಡರೆ ಎರಡೂ ಕಡೆಯವರಿಗೆ ನಷ್ಟವಾಗುವುದಲ್ಲದೆ, ದೇಶದ ಅಭಿವೃದ್ಧಿಯೂ ಕುಂಠಿತವಾಗುತ್ತದೆ ಎಂದರು.
ಐರಣಿ ಹೊಳೆಮಠದ ಬಸವಾರಾಜ ಸ್ವಾಮೀಜಿ, ಶಿವಮೋಗ್ಗದ ಮುಖ್ಯ ಪಾಧಿÅ ಜೋಸೆ-ಆರ್-ನಾದನ್ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಬಿ.ಬಿ. ಸಕ್ರಿ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಧಾರವಾಡದ ವಿಶ್ವಚೇತನ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ| ಪಿಂಜಾರ್, ಎಸ್‌ಡಿಎಂ ಕಾಲೇಜು ಪ್ರಾಚಾರ್ಯ ಡಾ| ಎಸ್.ಬಿ. ಮಲ್ಲೂರು, ಗಿರಿಯಮ್ಮ ಪದವಿ ಕಾಲೇಜ್ ಪ್ರಾಚಾರ್ಯ ಡಾ| ಎಸ್.ಎಚ್. ಪ್ಯಾಟಿ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಡಾ| ವೈ. ನಾಗಪ್ಪ. ಶಾಸಕ ಬಿ.ಸಿ. ಪಾಟೀಲ್, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಕೆ. ಮಲ್ಲಪ್ಪ, ನಗರಸಭಾಧ್ಯಕ್ಷ ವಿಶ್ವನಾಥ್ ಭೂತೆ, ಜಿಪಂ ಸದಸ್ಯರಾದ ಎಂ. ನಾಗೇಂದ್ರಪ್ಪ, ಎಸ್.ಎಂ. ವೀರೇಶ್, ಕೃಷ್ಣಸಾ ಭೂತೆ, ನಗರಸಭಾ ಸದಸ್ಯ ಬಿ. ರೇವಣಸಿದ್ದಪ್ಪ, ಬಿ.ಕೆ. ಸೈಯದ್ ರೆಹಮಾನ್, ಸಿ.ಎನ್. ಹುಲಿಗೇಶ್, ಪ್ರಾಚಾರ್ಯ ಶಿವಕುಮಾರ್ ಕರಡಿ ಇತರರು ಇದ್ದರು.