Saturday, May 25, 2013
Last Updated: 4:03:27 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವಿಶ್ವ ಹಾಕಿ ಲೀಗ್‌: ಭಾರತ ವನಿತೆಯರ ಶುಭಾರಂಭ
    • ಭಾರತ ವನಿತೆಯರ ತಂಡ 8-0 ಗೋಲುಗಳ ಭಾರೀ ಅಂತರದಿಂದ ಕಜಕಿಸ್ತಾನ ತಂಡವನ್ನು ಬಗ್ಗುಬಡಿದು ಭರ್ಜರಿ ಆರಂಭ ಪಡೆದಿದೆ.

      • Udayavani | Feb 18, 2013

        ನವದೆಹಲಿ: ಸ್ಟಾರ್‌ ಆಟಗಾರ್ತಿಯರಾದ ಜಸ್‌ಪ್ರೀತ್‌ ಕೌರ್‌ ಮತ್ತು ರಾಣಿ ಮುಖರ್ಜಿ ಸಿಡಿಸಿದ ಹ್ಯಾಟ್ರಿಕ್‌ಗಳ ನೆರವಿನಿಂದ ಭಾರತ ವನಿತೆಯರ ತಂಡ 8-0 ಗೋಲುಗಳ ಭಾರೀ ಅಂತರದಿಂದ ಕಜಕಿಸ್ತಾನ ತಂಡವನ್ನು ಬಗ್ಗುಬಡಿದು ವಿಶ್ವ ಹಾಕಿ ಲೀಗ್‌ ರೌಂಡ್‌-2ನಲ್ಲಿ ಭರ್ಜರಿ ಆರಂಭ ಪಡೆದಿದೆ.

        ಇಲ್ಲಿನ ಮೇಜರ್‌ ಧ್ಯಾನ್‌ಚಂದ್‌ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಕಪಕ್ಷೀಯ ಪಂದ್ಯದಲ್ಲಿ ಜಯಭೇರಿ ಬಾರಿಸಿದ 11ನೇ ಶ್ರೇಯಾಂಕಿತ ಭಾರತ ವನಿತೆಯರ ತಂಡವನ್ನು 33ನೇ ಶ್ರೇಯಾಂಕಿತ ಕಜಕಿಸ್ತಾನ ಯಾವುದೇ ಹಂತದಲ್ಲೂ ಸರಿಗಟ್ಟಲು ಸಾಧ್ಯವಾಗಲಿಲ್ಲ.



        ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸಿದ ಭಾರತ ತಂಡ 15 ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಪಡೆದರೆ ಕಜಕಿಸ್ತಾನ ಒಂದೂ ಅವಕಾಶ ಪಡೆಯದೇ ನಿರಾಸೆ ಅನುಭವಿಸಿತು. ಭಾರತದ ರಕ್ಷಣೆಯನ್ನು ಭೇದಿಸಲು ಪ್ರವಾಸಿ ತಂಡಕ್ಕೆ ಸಾಧ್ಯವಾಗಲೇ ಇಲ್ಲ.

        ಭಾರತದ ಪರ ಡ್ರ್ಯಾಗ್‌ ಫ್ಲಿಕ್ಕರ್‌ ಜಸ್‌ಪ್ರೀತ್‌ (8, 21, 54 ಮತ್ತು 70ನೇ ನಿಮಿಷ) ಹ್ಯಾಟ್ರಿಕ್‌ ಸೇರಿದಂತೆ ನಾಲ್ಕು ಗೋಲು ಸಿಡಿಸಿದರೆ, ರಾಣಿ ರಾಂಪಲ್‌ (15, 26 ಮತ್ತು 41ನೇ ನಿಮಿಷ) ಭಾರತದ ಪರ ಎರಡನೇ ಹ್ಯಾಟ್ರಿಕ್‌ ಸಾಧಿಸಿದರು. ಸೌಂದರ್ಯ ಯೆಂಡೆಲಾ 48ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿ ತಂಡದ ಗೆಲುವಿನ ಅಂತರ ಮತ್ತಷ್ಟು ವಿಸ್ತರಿಸಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus