Udayavani | Feb 19, 2013
ನವದೆಹಲಿ: ಭಾರತ ಪುರುಷರ ತಂಡ 16-0 ಗೋಲುಗಳಿಂದ ಫಿಜಿ ತಂಡವನ್ನು ಧ್ವಂಸಗೊಳಿಸಿ ವಿಶ್ವ ಹಾಕಿ ಲೀಗ್ ರೌಂಡ್-2ನಲ್ಲಿ ಭರ್ಜರಿ ಆರಂಭ ಪಡೆದಿದೆ.

ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಫಿಜಿ ತಂಡಕ್ಕೆ ಚೇತರಿಸಿಕೊಳ್ಳಲು ಯಾವುದೇ ಅವಕಾಶ ನೀಡದ ಭಾರತ ನಿರೀಕ್ಷೆಗೂ ಮೀರಿ ಗೋಲುಗಳ ಸುರಿಮಳೆ ಸುರಿಸಿತು.

ಭಾರತ ತಂಡದ ಉಪನಾಯಕ ಕರ್ನಾಟಕದ ವಿ.ಆರ್. ರಘುನಾಥ್ (4, 11 ಮತ್ತು 41ನೇ ನಿಮಿಷ), ದಾನೀಶ್ ಮುಜಾ¤ಬಾ (28, 38 ಮತ್ತು 59ನೇ ನಿಮಿಷ) ಹ್ಯಾಟ್ರಿಕ್ ಸಾಧಿಸಿದರು. ರುಪಿಂದರ್ ಪಾಲ್ ಸಿಂಗ್ (5 ಮತ್ತು 35ನೇ ನಿಮಿಷ) ಮತ್ತು ಚೊಚ್ಚಲ ಪಂದ್ಯವಾಡಿದ ಮಲಕ್ ಸಿಂಘ… (51 ಮತ್ತು 63ನೇ ನಿಮಿಷ) ತಲಾ 2 ಗೋಲು ಸಿಡಿಸಿದರು. ನಿತಿನ್ ತಿಮ್ಮಯ್ಯ (18ನೇ ನಿ.), ಗುರಿಂದರ್ ಸಿಂಗ್ (21ನೇ ನಿ.), ಕೊಥಾಜಿತ್ ಸಿಂಗ್ (46ನೇ ನಿ.) ಮನ್‌ಪ್ರೀತ್ ಸಿಂಗ್ (50ನೇ ನಿ.), ಚಿಂಗ್ಲೆಸಾನಾ ಸಿಂಗ್ (53ನೇ ನಿ.) ಮತ್ತು ಧರಮ್‌ವೀರ್ ಸಿಂಗ್ (55ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.

ಭಾರತ ಮೊದಲ ಅವಧಿಯಲ್ಲಿ 7-0 ಗೋಲುಗಳಿಂದ ಮುನ್ನಡೆ ಸಾಧಿಸಿದರೆ ಎರಡನೇ ಅವಧಿಯಲ್ಲಿ 9 ಗೋಲುಗಳನ್ನು ದಾಖೀಲಿಸಿ ಎರಡೂ ಅವಧಿಯ ಆಟದಲ್ಲಿ ಪ್ರಾಬಲ್ಯ ಮೆರೆಯಿತು.
