Thursday, June 20, 2013
Last Updated: 3:04:09 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಭಾರತ ಜಯಭೇರಿ
    • ಭಾರತ ಪುರುಷರ ತಂಡ 16-0 ಗೋಲುಗಳಿಂದ ಫಿಜಿ ತಂಡವನ್ನು ಧ್ವಂಸಗೊಳಿಸಿ ವಿಶ್ವ ಹಾಕಿ ಲೀಗ್‌ ರೌಂಡ್‌-2ನಲ್ಲಿ ಭರ್ಜರಿ ಆರಂಭ

      • Udayavani | Feb 19, 2013

        ನವದೆಹಲಿ: ಭಾರತ ಪುರುಷರ ತಂಡ 16-0 ಗೋಲುಗಳಿಂದ ಫಿಜಿ ತಂಡವನ್ನು ಧ್ವಂಸಗೊಳಿಸಿ ವಿಶ್ವ ಹಾಕಿ ಲೀಗ್‌ ರೌಂಡ್‌-2ನಲ್ಲಿ ಭರ್ಜರಿ ಆರಂಭ ಪಡೆದಿದೆ.



        ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಫಿಜಿ ತಂಡಕ್ಕೆ ಚೇತರಿಸಿಕೊಳ್ಳಲು ಯಾವುದೇ ಅವಕಾಶ ನೀಡದ ಭಾರತ ನಿರೀಕ್ಷೆಗೂ ಮೀರಿ ಗೋಲುಗಳ ಸುರಿಮಳೆ ಸುರಿಸಿತು.



        ಭಾರತ ತಂಡದ ಉಪನಾಯಕ ಕರ್ನಾಟಕದ ವಿ.ಆರ್‌. ರಘುನಾಥ್‌ (4, 11 ಮತ್ತು 41ನೇ ನಿಮಿಷ), ದಾನೀಶ್‌ ಮುಜಾ¤ಬಾ (28, 38 ಮತ್ತು 59ನೇ ನಿಮಿಷ) ಹ್ಯಾಟ್ರಿಕ್‌ ಸಾಧಿಸಿದರು. ರುಪಿಂದರ್‌ ಪಾಲ್‌ ಸಿಂಗ್‌ (5 ಮತ್ತು 35ನೇ ನಿಮಿಷ) ಮತ್ತು ಚೊಚ್ಚಲ ಪಂದ್ಯವಾಡಿದ ಮಲಕ್‌ ಸಿಂಘ… (51 ಮತ್ತು 63ನೇ ನಿಮಿಷ) ತಲಾ 2 ಗೋಲು ಸಿಡಿಸಿದರು. ನಿತಿನ್‌ ತಿಮ್ಮಯ್ಯ (18ನೇ ನಿ.), ಗುರಿಂದರ್‌ ಸಿಂಗ್‌ (21ನೇ ನಿ.), ಕೊಥಾಜಿತ್‌ ಸಿಂಗ್‌ (46ನೇ ನಿ.) ಮನ್‌ಪ್ರೀತ್‌ ಸಿಂಗ್‌ (50ನೇ ನಿ.), ಚಿಂಗ್ಲೆಸಾನಾ ಸಿಂಗ್‌ (53ನೇ ನಿ.) ಮತ್ತು ಧರಮ್‌ವೀರ್‌ ಸಿಂಗ್‌ (55ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.



        ಭಾರತ ಮೊದಲ ಅವಧಿಯಲ್ಲಿ 7-0 ಗೋಲುಗಳಿಂದ ಮುನ್ನಡೆ ಸಾಧಿಸಿದರೆ ಎರಡನೇ ಅವಧಿಯಲ್ಲಿ 9 ಗೋಲುಗಳನ್ನು ದಾಖೀಲಿಸಿ ಎರಡೂ ಅವಧಿಯ ಆಟದಲ್ಲಿ ಪ್ರಾಬಲ್ಯ ಮೆರೆಯಿತು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಇಂಗ್ಲಂಡ್‌ ತಂಡವು ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಕೂಟದ ಫೈನಲ್‌ ಹಂತಕ್ಕೇರಿತು...
      image image
      • Copyright @ 2009 Udayavani.All rights reserved.
      • Designed & Hosted By 4cplus