Saturday, November 22, 2014
Last Updated: 4:42:33 PM IST
 • ನಾನೆಲ್ಲಿರುವೆ:
 • ಮುಖಪುಟ ರಾಜ್ಯ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಚೀನಾದಲ್ಲಿ ಊಟ-ತಿಂಡಿ ಓಕೆ ಆದ್ರೂ ನಾಟಿ ಕೋಳಿ ಸಿಗ್ಲಿಲ್ಲ
   • Udayavani | Sep 17, 2013

    ಬೆಂಗಳೂರು : 'ಅವರ ಹೆಸರು ನಮಗೆ ಕನ್‌ಫ್ಯೂಸಿಂಗ್‌. ನಮ್ಮ ಹೆಸರು ಅವರಿಗೆ ಕನ್‌ಫ್ಯೂಸಿಂಗ್‌. ನನ್ನ ಹೆಸರನ್ನು ಅಲ್ಲಿನ ಒಬ್ಬರಿಗೆ ಹತು ಬಾರಿ ಹೇಳಿಕೊಟ್ಟೆ. ಆದರೂ ಅವನು ಸರಿಯಾಗಿ ನನ್ನ ಹೆಸರು ಹೇಳಲಿಲ್ಲ. ಸಿದ -ರಮ ಎಂದೇನೋ ಹೇಳಿದ'

    ಚೀನಿ ತಲೆಗಳ ನಡುವೆ ಆರು ದಿನ ಕಳೆದು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ 'ಕನ್‌ಫ್ಯೂಸಿಂಗ್‌' ಪ್ರಸಂಗವಿದು.

    ಚೀನಾ ಪ್ರವಾಸದ ವೇಳೆ ತಾವು ಭೇಟಿಯಾದ ಚೀನಾ ಹಾಗೂ ಜಪಾನ್‌ ದೇಶದ ಪ್ರಮುಖರ ಹೆಸರನ್ನು ಹೇಳಲು ತಿಣುಕಾಡಿದ ಸಿಎಂ, ಅದೆಂತದ್ರಿ ಅವರ ಹೆಸ್ರು ಎಂದು ತಮ್ಮ ಪಕ್ಕದಲ್ಲಿ ಕುಳಿತಿದ್ದ ಅಧಿಕಾರಿಗಳ ನೆರವು ಪಡೆದರು. ಅಧಿಕಾರಿಗ‌ಳು ಹೇಳಿಕೊಟ್ಟರೂ, ಚೀನಾ ಪ್ರಧಾನಿ ಲೀ ಕೆಕಿಯಾಂಗ್‌ ಹಾಗೂ ಜಪಾನ್‌ ಶಿಕ್ಷಣ ಸಚಿವ ಹಕೂಬನ್‌ ಶಿಮೊಮೂರಾ ಅವರ ಹೆಸರನ್ನು ಸರಿಯಾಗಿ ಉಚ್ಚರಿಸಲು ಸಿದ್ದರಾಮಯ್ಯ ವಿಫ‌ಲರಾದರು.

    ಅನಂತರ ನಮಗೆ ಅವರ ಹೆಸರು ಕನ್‌ಫ್ಯೂಸ್‌. ಅವರಿಗೆ ನಮ್‌ ಹೆಸರು ಕನ್‌ಫ್ಯೂಸ್ಸು. ಅಲ್ಲಿನ ಒಬ್ಬರಿಗೆ 10 ಬಾರಿ ನನ್ನ ಹೆಸರು ಹೇಳಿಕೊಟ್ಟೆ. ಕಡೆಗೂ ಆತ ನನ್ನ ಹೆಸರು ಸರಿಯಾಗಿ ಹೇಳಲಿಲ್ಲ. ಸಿದ ರಮ ಅಂತ ಏನೋ ಹೇಳಿದ ಎಂದರು.

    ನಾಟಿ ಕೋಳಿ ಪ್ರಿಯ ಸಿದ್ದರಾಮಯ್ಯ ಅವರಿಗೆ ಚೀನಾದಲ್ಲಿ ನಾಟಿ ಕೋಳಿ ಸಿಕ್ಕಿಲ್ಲ. ಆದರೆ, ಸಿಕ್ಕ ಕೋಳಿಯನ್ನೇ ಚೆನ್ನಾಗಿ ಸವಿದಿದ್ದಾಗಿ ಹೇಳಿದರು. ತಾವು ತಂಗಿದ್ದ ಶ್ಯಾಂಗ್ರಿಲಾ ಹೊಟೇಲ್‌ನಲ್ಲಿ ಬೆಂಗಳೂರು ಮೂಲದ ಚೆಪ್‌ ಜಫ‌ರ್‌ ತಮ್ಮನ್ನು ಚೆನ್ನಾಗಿ ನೋಡಿಕೊಂಡ ಬಗ್ಗೆ ತುಂಬಾ ಖುಷಿಯಿಂದಲೇ ಸಿದ್ದರಾಮಯ್ಯ ವರ್ಣಿಸಿದರು.

    ಜಫ‌ರ್‌ ಬೆಂಗಳೂರಿನಲ್ಲೇ ಇದ್ದನಂತೆ. ನಾನು ಹೋದ ಸುದ್ದಿ ಕೇಳಿ ಬಂದ. ಅವನೇ ಅಡುಗೆ ಮಾಡಿ ತಂದು ಕೈಯಾರೆ ಬಡಿಸುತ್ತಿದ್ದ. ತುಂಬಾ ಚೆನ್ನಾಗಿ ನೋಡಿಕೊಂಡ ಎಂದರು ಸಿಎಂ.

    ಚೀನಾದ ಊಟ-ತಿಂಡಿ ಹಿಡಿಸ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಊಟ-ತಿಂಡಿಗೆ ಯಾವುದೇ ಕಷ್ಟವಾಗಲಿಲ್ಲ. ಅಲ್ಲಿಯೂ ಭಾರತದ ಹೋಟೆಲ್‌ಗ‌ಳು ಸಾಕಷ್ಟಿವೆ. ಹೀಗಾಗಿ ಸಮಸ್ಯೆಯಾಗಲಿಲ್ಲ ಎಂದರು.

    ಪಂಚೆ ಧರಿಸುವ ನಿಮಗೆ ಅಲ್ಲಿ ಸೂಟ್‌ ಸರಿಹೋಯ್ತಾ ಎಂದಾಗ, ನೋ. ಪಂಚೇನೆ ಸರಿ. ಸೂಟ್‌ ಅನ್‌ ಕಂಪರ್ಟಬಲ್‌ ಎಂದರು.

    ಶಾಂಘೈ ಸೆಂಟ್ರಲ್‌ನಿಂದ 50 ಕಿ.ಮೀ. ದೂರದಲ್ಲಿರುವ ಪುಡೊಂಗ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಲೆಕ್ಟ್ರೋಮ್ಯಾಗ್ನೆಟಿಕ್‌ ಕಂಟ್ರೋಲ್ಡ್‌ ರೈಲಿನಲ್ಲಿ 6 ನಿಮಿಷದಲ್ಲಿ ಪ್ರಯಾಣಿಸಿದ್ದು, ಶಾಂಘೈ ನಗರ ಪ್ರದಕ್ಷಿಣೆ ವಿಶೇಷ ಅನುಭವ ನೀಡಿತು ಎಂದು ತಿಳಿಸಿದರು.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • ಈ ವಿಭಾಗದಲ್ಲಿಯೂ ಇದೆ
   • picರಾಜಿ ಸಂಧಾನಕ್ಕೆ ಕಿರಣ್‌, ಪೂಜಾ ಗಾಂಧಿ ಮುಂದು
    ಬೆಂಗಳೂರು : ನಟಿ ಪೂಜಾ ಗಾಂಧಿ ಮತ್ತು ಚಿತ್ರ ವಿತರಕ ಡಾ.ಕಿರಣ್‌ ಅವರು ತಮ್ಮ ನಡುವಿನ ಮನಸ್ತಾಪ ಕರಗಿರುವ ಹಿನ್ನೆಲೆಯಲ್ಲಿ ರಾಜೀ ಸಂಧಾನಕ್ಕೆ ಮುಂದಾಗಿದ್ದಾರೆ. ಡಾ.ಕಿರಣ್‌ ವಿರುದ್ಧ ದಾಖಲಿಸಿದ್ದ ಜೀವ ಬೆದರಿಕೆ ಪ್ರಕರಣವನ್ನು ಹಿಂಪಡೆಯಲು ಪೂಜಾಗಾಂಧಿ ಮುಂದಾಗಿದ್ದು, ಸೆಷನ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ
   • Copyright @ 2009 Udayavani.All rights reserved.
   • Designed & Hosted By 4cplus