Friday, December 19, 2014
Last Updated: 1:20:59 AM IST
 • ನಾನೆಲ್ಲಿರುವೆ:
 • ಮುಖಪುಟ Supplements ಐಸಿರಿ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ದಾಳಿಂಬೆ ಬೆಳೆ ನಂಬಿ
  • ಚಿತ್ರದುರ್ಗದ ರೈತರ ಕೃಷಿ ಪೂಜಾಫ‌ಲ

   • Udayavani | Sep 21, 2013

    ಚಿತ್ರದುರ್ಗದ ರೈತರ ಕೃಷಿ ಪೂಜಾಫ‌ಲ
    ಚಿತ್ರದುರ್ಗದಲ್ಲಿ ಮತ್ತೆ ದಾಳಿಂಬೆ ತೇದಿ. ಈ ಬೆಳೆಗೆ ಕೈ ಹಾಕಿದವರ ಬೊಗಸೆ ಈ ಸಲ ಬರಿದಾಗಿಲ್ಲ. ಇದಕ್ಕೆ ಏನು ಕಾರಣ, ರೈತರು ಏನು ಮಾಡಬೇಕು?-ಹರಿಯಬ್ಬೆ ಹೆಂಜಾರಪ್ಪ

    ನೂರು, 5, 10 ಸಾವಿರದ ಲೆಕ್ಕಾಚಾರ ಇಲ್ಲಿಲ್ಲ. ಲಕ್ಷದಿಂದ ಆರಂಭವಾಗುವ ವಹಿವಾಟು ಕೋಟಿ ರೂ.ಗಳಿಗೂ ಮೀರಿ ನಡೆಯುತ್ತದೆ. ಫ‌ಸಲಿಗೆ ಬಿಟ್ಟ 6 ತಿಂಗಳು ಸತತ ಪರಿಶ್ರಮ ಪಟ್ಟು ಫ‌ಸಲು ಕೈ ಹಿಡಿದರೆ ಲಕ್ಷಾಧೀಶ್ವರರಾಗಲು ಈ ಬೆಳೆಯಲ್ಲಿ ಮಾತ್ರ ಸಾಧ್ಯ.
    ಅದುವೇ ದಾಳಿಂಬೆ ಬೆಳೆ.
    ಬ್ಯಾಕ್ಟೀರಿಯಲ್‌ ಬ್ಲೆ„ಟ್‌ ದುಂಡಾಣು ಅಂಗಮಾರಿ ರೋಗಕ್ಕೆ ಹೆದರಿ ಚಿತ್ರದುರ್ಗ ಜಿಲ್ಲೆಯಿಂದ ಕಣ್ಮರೆಯಾಗಿದ್ದ ದಾಳಿಂಬೆ ಮತ್ತೆ ಫೀನಿಕ್ಸ್‌ನಂತೆ ಮೇಲೆದ್ದಿದೆ. 2 ಸಾವಿರ ಹೆಕ್ಟೇರ್‌ನಲ್ಲಿದ್ದ ದಾಳಿಂಬೆ 9 ಸಾವಿರಕ್ಕೂ ಹೆಚ್ಚಿನ ಹೆಕ್ಟೇರ್‌ ಪ್ರದೇಶದಲ್ಲಿ ತಲೆ ಎತ್ತಿ ಗತಕಾಲದ ವೈಭೋಗ ಜಿಲ್ಲೆಯಲ್ಲಿ ಮರುಕಳಿಸಿದೆ.
    ದಾಳಿಂಬೆ ಬೆಳೆಯನ್ನು ಹೊಸದುರ್ಗ, ಹಿರಿಯೂರು ತಾಲೂಕುಗಳಲ್ಲಿ ಅತಿ ಹೆಚ್ಚು ಬೆಳೆಯುತ್ತಿದ್ದಾರೆ. ಭೂ ರಹಿತರು ಸಹಾ ದಾಳಿಂಬೆ ಬೆಳೆಯಲು ಆಸಕ್ತಿ ಹೊಂದಿ ಗುತ್ತಿಗೆ ಆಧಾರದಲ್ಲಿ(ಭೋಗ್ಯಕ್ಕೆ) ಬಂಡವಾಳ ಹೂಡಿ ಉತ್ಕೃಷ್ಟ ಬೆಳೆಯುತ್ತಿದ್ದಾರೆ. 2010-11ನೇ ಸಾಲಿನಲ್ಲಿ 1909 ಹೆಕ್ಟೇರ್‌ ಪ್ರದೇಶದಲ್ಲಿದ್ದ ದಾಳಿಂಬೆ ಬೆಳೆ ಫ‌ಸಲು ಇಂದು 9 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ತಲೆ ಎತ್ತಿದೆ. ಯೋಗ್ಯವಾಗಿರುವ ಇಲ್ಲಿನ ಮಣ್ಣು, ನೀರು, ಹವಾಗುಣ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡಿದೆ. ಹೆಚ್ಚು ನೀರು ಕೇಳದ ಹಣ್ಣಿನ ಗಿಡಗಳನ್ನು ರೈತರು ಆಧುನಿಕ ಸುಸ್ಥಿರ ಕೃಷಿ ಪದ್ಧತಿಯಲ್ಲಿ ತೋಟ ಕಟ್ಟಿದ್ದಾರೆ.
    ಉದಾಹರಣೆಗೆ ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶಾಂತವೀರ ಸ್ವಾಮೀಜಿಗಳು. ಎರಡೂವರೆ ವರ್ಷಗಳ ಹಿಂದೆ ಹೊಸದುರ್ಗ ತಾಲೂಕಿನ ಗಡಿಯ ಕುಗ್ರಾಮ ಹೊಸಕೆರೆಯ ಶ್ರೀಚನ್ನ ಬಸವೇಶ್ವರ ದೇವಸ್ಥಾನದ ಒಡೆತನಕ್ಕೆ ಸೇರಿದ ಇಪ್ಪತ್ತೆರಡು ಎಕರೆ ಭೂಮಿಯನ್ನು ಭೋಗ್ಯಕ್ಕೆ ಪಡೆದರು. ಸುಮಾರು 40 ಲಕ್ಷ ರೂ. ಬಂಡವಾಳ ಹಾಕಿ ಐದು ಸಾವಿರ ದಾಳಿಂಬೆ ಗಿಡಗಳನ್ನು ನಾಟಿ ಮಾಡಿ ಅದ್ಭುತವಾದ ತೋಟ ಮಾಡಿದ್ದಾರೆ. ಕಳೆದ ವರ್ಷ ಒಂದೇ ಫ‌ಲಸಿಗೆ 72 ಲಕ್ಷ ರೂ. ಲಾಭ ದೊರೆತಿದೆ. 40 ಲಕ್ಷ ಸಾಲ ತೀರಿಸಿ 26 ಎಕರೆ ಭೂಮಿ ಖರೀದಿ ಮಾಡಿದ್ದಾರೆ. ಈ ವರ್ಷ ಎರಡನೇ ಬೆಳೆ ಕೊಯ್ಲಿಗೆ ಬಂದಿದ್ದು 1.80 ಕೋಟಿ ಲಾಭ ನಿರೀಕ್ಷೆಯಲ್ಲಿ ಶರಣರಿದ್ದಾರೆ.
    ನಾಟಿ ಮಾಡಿದ ಒಂದೆರಡು ಫ‌ಸಲಿನಲ್ಲೇ ರೈತರ ಬಾಳನ್ನು ಬಂಗಾರ ಮಾಡುತ್ತಿರುವ ದಾಳಿಂಬೆ ಬೆಳೆಯತ್ತ ಸಣ್ಣ, ಮಧ್ಯಮ, ದೊಡ್ಡ ರೈತರು ಇಂದು ಕಾಲಿಡುತ್ತಿದ್ದಾರೆ. 11 ಡಿಗ್ರಿ ಸೆಂಟಿಗ್ರೇಡ್‌ ಗಿಂತ ಮೇಲ್ಪಟ್ಟ ಯಾವುದೇ ಪ್ರದೇಶದಲ್ಲಿ ಹಾಗೂ ಸಮಶೀತೋಷ್ಣವಲಯದಲ್ಲಿ ದಾಳಿಂಬೆ ಹಣ್ಣನ್ನು ಬೆಳೆಯಬಹುದಾಗಿದೆ.
    ಚಿತ್ರದುರ್ಗ ಜಿಲ್ಲೆಯ ನೀರು, ಬಿಸಿಲು, ಹವಾಗುಣ ದಾಳಿಂಬೆ ಬೆಳೆಯಲು ಹೇಳಿ ಮಾಡಿಸಿದಂತಿದೆ. ಸದಾ 25 ಸೆಲಿÒಯಸ್‌ಗಿಂತ ಮೇಲ್ಪಟ್ಟ ಉಷ್ಣಾಂಶವನ್ನು ಹೊಂದಿರುವ ಈ ಪ್ರದೇಶ ತೋಟಗಾರಿಕಾ ಹಣ್ಣಿನ ಉತ್ಪಾದನೆಯಲ್ಲಿ ರಾಜ್ಯದಲ್ಲೆ ಹೆಸರು ಮಾಡಿದೆ.
    ರೋಗ ಬಾಧೆ
    ರೋಗ ಬಾಧೆ- ಬ್ಯಾಕ್ಟೀರಿಯಲ್‌ ಬ್ಲೆ„ಟ್‌, ಕಾಯಿ ಕೊರೆಯುವ ಹುಳ, ರಸ ಹೀರುವ ಕೀಟ, ದುಂಡಾಣು ಎಲೆ ಚುಕ್ಕೆ ರೋಗ, ಹಣ್ಣು ಕೊಳೆಯುವ ರೋಗಗಳು ಸಾಮಾನ್ಯ. ವೈಜಾnನಿಕ ತಂತ್ರಜಾnನಗಳನ್ನು ಅಳವಡಿಸಿ ರೋಗ ನಿಯಂತ್ರಣ ಮಾಡುತ್ತಿದ್ದಾರೆ.
    ಇದಲ್ಲದೆ ದಾಳಿಂಬೆ ಗಿಡಗಳನ್ನು ರೈತರು ರಕ್ಷಿಸಿಕೊಳ್ಳಲು ನೂತನ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಹೊರಗಿನ ಗಾಳಿ ದಾಳಿಂಬೆ ಗಿಡಗಳಿಗೆ ತಾಗದಂತೆ ದಾಳಿಂಬೆ ತೋಟದ ಸುತ್ತಲು ತೆಂಗಿನ ಗರಿಗಳಿಂದ ತಡಿಕೆ ಕಟ್ಟಿ ರಕ್ಷಣೆ ಮಾಡುತ್ತಿರುವುದರಿಂದ ಸುಲಭವಾಗಿ ರೋಗ ಹರಡುತ್ತಿಲ್ಲ.
    ಮಾರುಕಟ್ಟೆ- ಚಿತ್ರದುರ್ಗ ಜಿಲ್ಲೆಯಾದ್ಯಂತ ಅತಿ ಹೆಚ್ಚು ಉತ್ಪಾದನೆ ಮಾಡುತ್ತಿರುವ ತೋಟಗಾರಿಕಾ ಹಣ್ಣುಗಳಿಗೆ ವಿಶೇಷ ಬೇಡಿಕೆ ಇದೆ. ಸ್ಥಳೀಯ ಮಾರುಕಟ್ಟೆ, ಬೆಂಗಳೂರು, ಚೆನ್ನೈ, ಬಾಂಬೆ ಮಾರುಕಟ್ಟೆಗಳಲ್ಲಿ ಜಿಲ್ಲೆಯ ದಾಳಿಂಬೆ ಹಣ್ಣಿಗೆ ವಿಶೇಷವಾದ ಬೇಡಿಕೆ ಇದೆ. ಜೊತೆಯಲ್ಲಿ ಬೆಂಗಳೂರಿನ ಹೊಸೂರಿನಲ್ಲಿರುವ ಹಣ್ಣು ಮಾರುಕಟ್ಟೆಯ ವರ್ತಕರು ಮುಂಗಡವಾಗಿ ಬುಕ್ಕಿಂಗ್‌ ಮಾಡುವುದು ಉಂಟು. ಹಾಗಾಗಿ ಮಾರುಕಟ್ಟೆಯ ಸಮಸ್ಯೆ ದಾಳಿಂಬೆಗೆ ಕಾಡುವುದಿಲ್ಲ.
    ಬೆಳೆಯು ವಿಧಾನ
    ಆರಂಭದಲ್ಲಿ ಭೂಮಿಯನ್ನು ಹಸನು ಮಾಡಿಕೊಂಡು ಕನಿಷ್ಠ 10 * 12 ಅಡಿ ಅಳತೆಯಲ್ಲಿ ಸಾಲು ಮಾಡಿ ಗುಣಿ(ಗುಂಡಿ)ಗಳನ್ನು ತೋಡಿ ಆ ಅದಕ್ಕೆ ಕುರಿ, ದನಗಳ ಗೊಬ್ಬರ, ಬೇವಿನ ಹಿಂಡಿ, ಹೊಂಗೆ ಹಿಂಡಿ ಹಾಕಬೇಕು. ಕನಿಷ್ಠ 15 ದಿನ ಗುಂಡಿಗಳಿಗೆ ನೀರು ಬಿಟ್ಟ ನಂತರ ದಾಳಿಂಬೆ ಸಸಿಗಳನ್ನು ನಾಟಿ ಮಾಡಬಹುದು. ಪ್ರತಿ ಎಕರೆಗೆ 280 ರಿಂದ 300 ಗಿಡಗಳ ನಾಟಿ ಸಾಕು. ಹೆಚ್ಚು ನೀರಿನ ಸೌಲಭ್ಯವುಳ್ಳವರು ಸಾಲು ಸಾಲು ಕಾಲುವೆಗಳನ್ನು ಮಾಡಿ ನೀರಾಯಿಸಲಿದ್ದಾರೆ. ಕಡಿಮೆ ನೀರಿನ ಪ್ರಮಾಣ ಹೊಂದಿದ್ದರೆ ಹನಿ ನೀರಾವರಿ ಮೂಲಕ ನೀರಾಯಿಸಬಹುದಾಗಿದೆ.
    ನಾಟಿ ಮಾಡಿದ 18 ತಿಂಗಳ ನಂತರ ಫ‌ಸಲು. ಕೆಲವರು ನಾಟಿ ಮಾಡಿದ ವರ್ಷದೊಳಗೆ ಫ‌ಸಲಿಗೆ ಬಿಡಲಿದ್ದಾರೆ. ಇದರಿಂದ ಗಿಡ ಹಣ್ಣಿನ ಭಾರವನ್ನು ತಡೆಯುವ ಶಕ್ತಿ ಹೊಂದಿರುವುದಿಲ್ಲವಾದ್ದರಿಂದ ಗಿಡ ನಂಜಾಗುವ ಸಾಧ್ಯತೆ ಇರುತ್ತದೆ.
    ತಳಿಗಳು- ದಾಳಿಂಬೆ ಸುಧಾರಿತ ತಳಿಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವುದು ಕೇಸರ್‌(ಭಗವ್‌). ಇದಲ್ಲದೆ ಬೇಸಿನ್‌ ಸೀಡ್ಲೆಸ್‌, ಜ್ಯೋತಿ, ಕಾಬೂಲ್‌, ಡೊಲ್ಕಿ ಆಳಂದ ರಾಯಚೂರು-1, ಜಿ-137, ಆರಕ್ತ, ಮೃದುಲಾ, ರೂಬಿ, ಗಣೇಶ್‌ ಮತ್ತಿತರ ತಳಿಗಳಿದ್ದರೂ ವಾಣಿಜ್ಯಕವಾಗಿ ರೈತರಿಗೆ ಹೆಚ್ಚಿನ ಲಾಭ ತರುವ ಭಗವ್‌ ತಳಿಯನ್ನೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆಯುತ್ತಿದ್ದಾರೆ.
    ಖರ್ಚು- ನರ್ಸರಿಯಲ್ಲಿ ಬೆಳೆಸಿದ ಪ್ರತಿ ಸಸಿ ಗಿಡಕ್ಕೆ 20 ರಿಂದ 30 ರೂ., ಗೂಟಿಯಾದರೆ 10 ರಿಂದ 15 ರೂ.ಗೆ ನಾಟಿ ಮಾಡಲು ಸಸಿಗಳು ದೊರೆಯುತ್ತವೆ. ರೈತರು ಸಸಿ ತರುವಾಗ ತುಂಬಾ ಎಚ್ಚರಿಕೆ ವಹಿಸಿ ರೋಗ ರಹಿತವಾದ ಸಸಿಗಳನ್ನು ತರಬೇಕಾಗುತ್ತದೆ. ಬೀಜ, ಗೊಬ್ಬರ, ಕೂಲಿ, ಕಳೆ, ಔಷಧಿ ಮತ್ತಿತರ ವೆಚ್ಚವಾಗಿ ಒಂದು ಫ‌ಸಲಿಗೆ

   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • ಈ ವಿಭಾಗದಲ್ಲಿಯೂ ಇದೆ
   • picಬಸಳೆ ಬೆಳೆದ್ರೆ ಹಣ ಬೆಳೆಯತ್ತೆ!
    ಬಸಳೆ ಸೊಪ್ಪು ಅಂದರೆ ಮನೆಗೆ ಮಾತ್ರ ಉಪಯೋಗಿಸೋದು ಅಲ್ಲ. ಇದನ್ನು ತಂದು ಮಾರ್ಕೆಟಿನಲ್ಲಿ ಮಾರಿದರೆ ದುಡ್ಡು ಬರುತ್ತದೆ. ಹೆಚ್ಚು ಶ್ರಮ, ಹೂಡಿಕೆ ಇಲ್ಲದೇ ಹಣ ಕೊಡಿಸುವ ಬೆಳೆ- ಬಸಳೆ.
   • Copyright @ 2009 Udayavani.All rights reserved.
   • Designed & Hosted By 4cplus