Sunday, December 21, 2014
Last Updated: 12:43:40 AM IST
 • ನಾನೆಲ್ಲಿರುವೆ:
 • ಮುಖಪುಟ Supplements ಬಹುಮುಖಿ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಪದಬಂಧುವಿನ ಪದತಲದಲ್ಲಿ
  • ಪತ್ರಕರ್ತ ಅ.ನಾ. ಪ್ರಹ್ಲಾದರಾವ್‌ ಎಂದರೆ ಎರಡು ವಿಷಯಗಳು ನೆನಪಾಗುತ್ತವೆ. ಒಂದು ರಾಜ್‌ಕುಮಾರ್‌ ಅವರ ಬಗ್ಗೆ ಬರೆದ ಪುಸ್ತ

   • Udayavani | Nov 04, 2013

    ಪತ್ರಕರ್ತ ಅ.ನಾ. ಪ್ರಹ್ಲಾದರಾವ್‌ ಎಂದರೆ ಎರಡು ವಿಷಯಗಳು ನೆನಪಾಗುತ್ತವೆ. ಒಂದು ರಾಜ್‌ಕುಮಾರ್‌ ಅವರ ಬಗ್ಗೆ ಬರೆದ ಪುಸ್ತಕ. ಇನ್ನೊಂದು ಅವರ ಪದಬಂಧ ಪ್ರತಿಭೆ. ಪದಬಂಧ ಪ್ರತಿಭೆಯನ್ನು ಅಭಿನಂದಿಸಿ ಅವರ ಕುರಿತೊಂದು ಅಭಿನಂದನಾ ಗ್ರಂಥ ಬಂದಿದೆ. ಹೆಸರು: 'ಪದಬಂಧು'. ಅವರನ್ನು ಹತ್ತಿರದಿಂದ ಬಲ್ಲ ಅವರ ಮಿತ್ರರು, ಹಿತೈಷಿಗಳು, ಕುಟುಂಬ ವರ್ಗದವರು ಲೇಖನಗಳ ಮೂಲಕ ಅನಾಪ್ರ ಅವರ ವ್ಯಕ್ತಿತ್ವವನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ.

    ಕೋಲಾರ ಜಿಲ್ಲೆಯ ಅಬ್ಬಣಿ ಗ್ರಾಮದಲ್ಲಿ ಜನಿಸಿದ ಅನಾಪ್ರ ಹಳ್ಳಿಯ ವಾತಾವರಣದಲ್ಲಿಯೇ ವ್ಯಾಸಂಗ ಮಾಡಿ ಪದವೀಧರರಾದರು. ಅವರು ಆಯ್ಕೆ ಮಾಡಿಕೊಂಡ ಕಾರ್ಯಕ್ಷೇತ್ರ ಪತ್ರಿಕೋದ್ಯಮ. 'ಕೋಲಾರ ಪತ್ರಿಕೆ'ಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು, ಅಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ಅನುಭವ ಪಡೆದು ತಮ್ಮದೇ ಆದ 'ಹೊನ್ನುಡಿ' ಪತ್ರಿಕೆ ಆರಂಭಿಸಿದರು. ಆಧುನಿಕ ತಂತ್ರಜಾnನಗಳಿಲ್ಲದ ಆ ಕಾಲದಲ್ಲಿ ಪತ್ರಿಕೆ ಸರ್ವಾಂಗಸುಂದರವಾಗಿ ಹೊರಬರುವಂತೆ ಮಾಡಿದವರು ಅನಾಪ್ರ. ಕನ್ನಡವನ್ನು ಶ್ರದ್ಧಾಸಕ್ತಿಗಳಿಂದ ಅಧ್ಯಯನ ಮಾಡಿದ ಅವರು ಭಾಷೆಯ ಮೇಲೂ ಉತ್ತಮ ಪ್ರಭುತ್ವ ಸಾಧಿಸಿದರು.

    1983ರಲ್ಲಿ ಅವರು ರಾಜ್ಯ ವಾರ್ತಾ ಹಾಗೂ ಪ್ರಚಾರ ಇಲಾಖೆಯಲ್ಲಿ ವಾರ್ತಾಧಿಕಾರಿಯಾಗಿ ನೇಮಕಗೊಂಡರು. ಮುಂದೆ ಹಲವು ಸರ್ಕಾರಿ ಆಡಳಿತ ಯಂತ್ರದ ಜೊತೆ ಸಾಗಿ ಹಲವು ಸಂಪರ್ಕಗಳನ್ನು ಸಾಧಿಸಿಕೊಂಡರೂ ಅವರನ್ನು ಕರೆದದ್ದು ಸಾಹಿತ್ಯ.

    ಸಾಹಿತ್ಯದಲ್ಲಿ ಹೊಸದೇನಾದರೂ ಮಾಡಬೇಕೆಂಬ ತುಡಿತವೇ ಅವರನ್ನು ಬುದ್ದಿಗೆ ಕಸರತ್ತು ನೀಡುವ ಪದಬಂಧಗಳನ್ನು ರಚಿಸುವಲ್ಲಿ ಪ್ರೇರೇಪಿಸಿತು. 1984ರಿಂದ ಪದಬಂಧಗಳನ್ನು ರಚಿಸುತ್ತಿರುವ ಇವರು, ಇಲ್ಲಿಯವರಗೆ ಸುಮಾರು 40 ಸಾವಿರ ಪದಬಂಧಗಳನ್ನು ರಚಿಸಿದ್ದಾರೆ. ಅನಾಪ್ರ ಅವರು ಕನ್ನಡ ಸಾಹಿತ್ಯಲೋಕಕ್ಕೆ ಪದಬಂಧಗಳ ಮೂಲಕ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕನ್ನಡದ ಎಲ್ಲಾ ದಿನಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಅವರ ಪದಬಂಧಗಳು ಪ್ರಕಟಣೆ ಕಂಡಿವೆ. ಅದರ ವ್ಯಾಪ್ತಿ ಕೂಡ ಬಹಳ ವಿಶಾಲವಾದದ್ದು. ಸಿನಿಮಾ, ಕ್ರೀಡೆ, ಪುರಾಣ, ಸಾಹಿತ್ಯ, ಕೃಷಿ, ಇತಿಹಾಸ, ಜಾನಪದ ಹೀಗೆ ನಾನಾ ಪ್ರಕಾರಗಳಲ್ಲಿ ಇವರ ಪದಬಂಧ ಪ್ರತಿಭೆ ಅಡಕವಾಗಿದೆ. ಈ ಮೂಲಕ ಅವರು ಇಷ್ಟೂ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದಿದ್ದರೆಂಬುದೇ ಇದಕ್ಕೆ ಸಾಕ್ಷಿ. ಅವರು ಪದಬಂಧದ ಮೂಲಕ ಭಾಷಾಜಾnನವನ್ನು ಬೆಳೆಸಿದ್ದಾರೆ. ಇವರು ಸಮರ್ಥ ಲೇಖಕರೂ ಹೌದು. ಅದನ್ನು ಅವರು ಡಾ. ರಾಜ್‌ ಕುಮಾರ್‌ ಕುರಿತು ಬರೆದಿರುವ 'ಬಂಗಾರದ ಮನುಷ್ಯ' ಕೃತಿಯೇ ಸಾಬೀತುಪಡಿಸುತ್ತದೆ. ಈ ಕೃತಿ ಡಾ ರಾಜ್‌ ಅವರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದು ಇಂಗ್ಲಿಷ್‌ ಭಾಷೆಗೂ ತರ್ಜುಮೆಯಾಗಿ ನ್ಯೂಜೆರ್ಸಿಯಲ್ಲಿ ಲೋಕಾರ್ಪಣೆಗೊಂಡದ್ದು ಅನಾಪ್ರ ಅವರ ಪ್ರತಿಭೆಗೆ ಸಾಕ್ಷಿ. ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಅವರ ಮತ್ತೂಂದು ಕೃತಿ 'ಬೆಳ್ಳಿತೆರೆ ಬೆಳಗಿದವರು'. ಇಷ್ಟೇ ಅಲ್ಲದೆ ಅನೇಕ ಚಲನಚಿತ್ರ ಲೇಖನಗಳನ್ನು ಬರೆದಿದ್ದಾರೆ. ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

    ಪ್ರಸ್ತುತ ಈ ಲೇಖನಮಾಲೆಯಲ್ಲಿ ಬರೆದ ಪ್ರತಿಯೊಬ್ಬರೂ ಅನಾಪ್ರ ಅವರನ್ನು ಕೊಂಡಾಡಿದ್ದಾರೆ. 'ಪದಬಂಧು' ಅಂತ ಕರೆದವರಾರು ಅಂತ ಕೇಳಿದರೆ ಪ್ರೊ. ಕೆ.ಎಸ್‌ ನಿಸಾರ್‌ಅಹಮದ್‌ ಹಾಗೇ ಹೇಳಿರುವುದು ಇಲ್ಲಿ ಪತ್ತೆಯಾಗುತ್ತದೆ. ಡಾ. ದೊಡ್ಡರಂಗೇಗೌಡರು 'ಪದಬಂಧದ ಪಿತಾಮಹ' ಎಂದಿದ್ದಾರೆ. ಇನ್ನೂ ಅನೇಕ ಸ್ನೇತರು ಅನಾಪ್ರ ಅವರೊಂದಿಗಿನ ತಮ್ಮ ಸ್ನೇಹ ಬಾಂಧವ್ಯವನ್ನು ಮೆಲುಕು ಹಾಕಿದ್ದಾರೆ. ಇವರ ಬಹುಮುಖ ಪ್ರತಿಭೆಯ ಜೊತೆಗೆ ಅವರ ಸಾರ್ವಜನಿಕ ಸಂಪರ್ಕ ಮತ್ತು ಸ್ನೇಹವನ್ನೂ ಮೆಲುಕು ಹಾಕುವ ಸೌಹಾರ್ದಯುತ ಅಕ್ಷರ ಮುಡಿಪು ಈ ಗ್ರಂಥದಲ್ಲಿದೆ.

    ಪದಬಂಧು: ಅನಾಪ್ರಗೆ ಅರವತ್ತು/ ಪ್ರಕಾಶನ: ಹಂಸಜ್ಯೋತಿ, ನಂ 55, ಉಷಾ ನಿಲಯ, 13 ನೇ ಅಡ್ಡರಸ್ತೆ, ಪೈಪ್‌ ಲೈನ್‌, ಜಯನಗರ, ಬೆಂಗಳೂರು-560 023. ಬೆಲೆ: ರೂ 200. ಪುಟಗಳು: 336
    ವೀಣಾರಾವ್‌

   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   picನಮಗೆ ಕಣ್ಣಿಲ್ಲದಿದ್ದರೇನಂತೆ ನಾವು ಕ್ರಿಕೆಟ್‌ ಆಡಬಲ್ಲೆವು, ಅಂತೆಯೇ ವಿಶ್ವಕಪ್‌ ಗೆಲ್ಲಬಲ್ಲೆವೆಂದು ಭಾರತೀಯ ಅಂಧರ ಕ್ರಿಕೆಟ್‌ ತಂಡ ಸಾಬೀತುಪಡಿಸಿದೆ. ಎರಡು ಬಾರಿ ಚಾಂಪಿ
   • ಈ ವಿಭಾಗದಲ್ಲಿಯೂ ಇದೆ
   • picಜೋಗುರ ಕತೆಯ ಹಂಗ್ಯಾಕೋ
    ಇದು ಕಥಾ ಸಂಕಲನ. ಉಪನ್ಯಾಸಕರಾಗಿರುವ ಲೇಖಕರು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ತಮ್ಮ ಕಥೆಗಳನ್ನು ಇಲ್ಲಿ ಕಥಾಗುತ್ಛವನ್ನಾಗಿಸಿ ಪ್ರಕಟಿಸಿದ್ದಾರೆ.
   • Copyright @ 2009 Udayavani.All rights reserved.
   • Designed & Hosted By 4cplus