Monday, May 20, 2013
Last Updated: 8:48:46 AM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವೈಕಲ್ಯಕ್ಕೆ ಸಾಧನೆಯ ಸವಾಲು

      • ಸಾಧನಶೀಲ

        ಕಾರ್ಕಳದಲ್ಲಿ  ಅರೆಕ್ಸ್‌ ಟೈಲರಿಂಗ್‌ನ ಮಾಲಕ ಯೋಗೀಶ್‌ ಕಾಮತ್‌, ವಸುಧಾ ಕಾಮತ್‌ ದಂಪತಿಯ ಅವಳಿ ಪುತ್ರರಲ್ಲಿ ಒಬ್ಬನಾದ ಅನಿಲ್‌ ಕಾಮತ್‌ ಹುಟ್ಟು ವಾಗಲೇ ಸೊಂಟದ ಕೆಳಭಾಗ  ವಿಕಲತೆಯಿಂದ ಕೂಡಿತ್ತು. ಈ ವಿಕಲತೆಯು ಅವನ ಸಾಧನೆ ಅಡ್ಡಿ ಯಾಗಿಲ್ಲ.

        ಈ ಸಮಸ್ಯೆಯ ನಡುವೆಯೇ ಆತ ಈ ಬಾರಿ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗೆ ಹಾಜರಾಗಿದ್ದಾನೆ. ಹಿಂದಿನ ತರಗತಿಗಳಲ್ಲಿ   ಶೇ. 80ರಷ್ಟು ಅಂಕ ಗಳಿಸಿದ್ದಾನೆ. ಅಲ್ಲದೆ ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಶೇ. 90ರಷ್ಟು ಅಂಕ ಗಳಿಸುವ ಭರವಸೆ ವ್ಯಕ್ತಪಡಿಸುತ್ತಾನೆ.

        ಈತನ ಪೋಷಕರು ತಮ್ಮ ಉದ್ಯೋಗದ ನಡುವೆಯೇ ಮನೆಯಿಂದ ಶಾಲೆ, ಶಾಲೆಯಿಂದ ಮನೆಗೆ ಪಿಕ್‌ಅಪ್‌ ಮಾಡುತ್ತಾರೆ. ಸಭೆ ಸಮಾರಂಭಕ್ಕೆ ಹೋಗಿಬರಲು ಅವರನ್ನೇ ಆಶ್ರಯಿಸಿದ್ದಾನೆ. ಬಿಡುವಿನ ವೇಳೆಯಲ್ಲಿ ತಂದೆಯ ಅಂಗಡಿಯಲ್ಲಿ ಕುಳಿತು ಹೊಲಿದ ಬಟ್ಟೆಗಳಿಗೆ ಗುಂಡಿ ಹಾಕುವ ಮೂಲಕ ತಂದೆಗೆ ಸಹಕರಿಸುತ್ತಾನೆ.

        ವಿಶೇಷ ಜ್ಞಾಪಕ ಶಕ್ತಿಯುಳ್ಳ ಈತ ಪಠ್ಯೇತರ ಚಟುವಟಿಕೆಗಳಲ್ಲೂ ಎತ್ತಿದ ಕೈ. ಚಿತ್ರಕಲೆ, ಅಲೋಹ  ಶಿಕ್ಷಣ ಮೊದಲಾದವುಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾನೆ.

        ಎಸ್‌. ವಿ.ಎಸ್‌. ಶಾಲೆಯಲ್ಲಿ ಓದುತ್ತಿರುವ ಈತನಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಇಂತಹ ಛಲವುಳ್ಳ ಬಾಲಕನ ಮುಂದಿನ ಶಿಕ್ಷಣಕ್ಕೆ ಸಾರ್ವಜನಿಕರು ಸಹಾಯ ಮಾಡಲಿ ಎನ್ನುವಅಭಿಲಾಷೆ ಪೋಷಕರು, ಶಾಲೆಯ ಮುಖ್ಯ ಶಿಕ್ಷಕಿ ಉಷಾ ಪಡಿವಾಳ, ಇತರ ಶಿಕ್ಷಕರದ್ದಾಗಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus