Tuesday, May 21, 2013
Last Updated: 2:12:50 AM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವ್ಯಾಸ ರಥ ಯಾತ್ರೆ

      • ವ್ಯಾಸರಘುಪತಿ ಪ್ರಿಯ

        ಧರ್ಮ ಜಾಗೃತಿ ಪ್ರಯತ್ನಗಳು ಆಯಾಯಾ ಸಮುದಾಯಗಳಲ್ಲಿ ಧಾರ್ಮಿಕ ನಂಬಿಕೆ, ವಿಶ್ವಾಸ, ಏಕತೆ, ಸಹಿಷ್ಣುತೆ ಹಾಗೂ ಸಾಮರಸ್ಯವನ್ನು ಪ್ರೇರೇಪಿಸಿ ಸಮಗ್ರ ನಾಡಿನ ಜನ ಜೀವನವನ್ನು ಉನ್ನತಿಗೊ ಯ್ಯುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದು ನಿರ್ವಿವಾದ.

        ಅಂತೆಯೇ ಮನುಷ್ಯನಿಗೆ ಧರ್ಮ ಪ್ರೇರಣೆ ಒದಗಿದಾದ ಇಡಿಯ ನಾಡು-ನುಡಿ ಜನಜೀವನ ಅದರಿಂದ ಪ್ರೇರೇಪಿತವಾಗಿ ಸರ್ವೇ ಜನಾಃ ಸುಖೀನೋ ಭವಂತು ಎಂಬ ವೇದ ನುಡಿ ಸಾಕಾರಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಜಿಎಸ್‌ಬಿ ಶ್ರೀ ಕಾಶೀಮಠ ಸಂಸ್ಥಾನದ ವ್ಯಾಸ ರಘುಪತಿ ದೇವರ ರಥ ಯಾತ್ರೆ ಮಹತ್ತರವಾದುದನ್ನು ಸಾಧಿಸವಲ್ಲಿ ಸಫ‌ಲವಾಗುತ್ತಿದೆ.

        ಗೌಡ ಸಾರಸ್ವತ ಸಮಾಜದ ಪ್ರಸಿದ್ಧ ಶ್ರೀ ಕಾಶೀ ಮಠ ಸಂಸ್ಥಾನದ ದೇವರ ಪುನಃಪ್ರತಿಷ್ಠೆ ಮತ್ತು ಇದರಂಗವಾಗಿ ನಡೆಯುವ ತತೂ³ರ್ವ ಪರಿವಾರ ಕಾರ್ಯಕ್ರಮಗಳು ಜೂನ್‌ 13ರ ವರೆಗೆ ಮಂಗಳೂರಿನ ಶ್ರೀ ವೀರ ವೆಂಕಟೇಶ ದೇವಸ್ಥಾನದಲ್ಲಿ ನಡೆಯಲಿದೆ.

         ಶ್ರೀ ವ್ಯಾಸ  ಕೀರ್ತನೋತ್ಸವದ ಅಂಗವಾಗಿ ಕಾಸರಗೋಡು ಶ್ರೀ ವರದರಾಜ   ವೆಂಕಟರಮಣ ದೇವಸ್ಥಾನದಿಂದ ಹೊರಟ ಭಜನಾ ಯಾತ್ರೆಯು ಉಳ್ಳಾಲ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ತಲುಪಿತು.

        ಈಗಾಗಲೇ  ದಕ್ಷಿಣ    ಕನ್ನಡ  ಜಿಲ್ಲೆಯಲ್ಲಿ  ಪ್ರವಾಸ  ಮಾಡಿರುವ ಶ್ರೀ ವ್ಯಾಸ ರಥವು ಮೇ 27ರಂದು ರಾತ್ರಿ 9 ಗಂಟೆಗೆ ಕಾಸರಗೋಡು ನಗರವನ್ನು ಪ್ರವೇಶಿಸಿ ಶ್ರೀ ವರದರಾಜ ವೆಂಕಟರಮಣ ದೇವಳದಲ್ಲಿ ತಂಗಿತು.

        ಮೇ 28ರಂದು ಪೂರ್ವಾಹ್ನ 9 ಗಂಟೆಯಿಂದ ನಗರದ ತಾಳಿಪಡು³-ವಿದ್ಯಾನಗರ ಪರ್ಯಂತ ಯಾತ್ರೆಗೈದು ಮಧ್ಯಾಹ್ನದ ಅನಂತರ ಇಲ್ಲಿಂದ ಉದುಮ, ಬೇಕಲ ಮಾರ್ಗವಾಗಿ ಕಾಂಞಂಗಾಡಿಗೆ ತಲುಪಿತು.

        ರಥಯಾತ್ರೆಯ ಅಲ್ಲಿಂದ ಮುಂದುವರಿದು ಬೋವಿಕಾನ, ಮುಳ್ಳೇರಿಯ, ಬದಿಯಡ್ಕ, ಪೆರ್ಲ, ಕುಂಬಳೆ ಮಾರ್ಗವಾಗಿ ಪಯಣಿಸಿ  ಮೇ 30ರಂದು ಮಂಗಳೂರಿನಲ್ಲಿ ಕೊನೆಗೊಳ್ಳುವುದು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus