Wednesday, June 19, 2013
Last Updated: 12:47:20 AM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರಂಝಾನ್‌ ಸಮೋಸಾ

      • ಬಿ.ಟಿ. ರಂಜನ್‌

        ರಂಝಾನ್‌ ಮಾಸ ಮತ್ತು ಉಪವಾಸ ವ್ರತ ಆಚರಣೆ ಮುಸ್ಲಿಂರಿಗೆ ಪವಿತ್ರವಾದ ಧಾರ್ಮಿಕ ಕ್ರಿಯೆ. ಜತೆಗೆ ಇಸ್ಲಾಂನ ಕಡ್ಡಾಯ ಕರ್ಮಧಿಗಳಲ್ಲಿ ಒಂದು.

        ರಂಝಾನ್‌ ಉಪವಾಸವನ್ನು ಸಂಜೆ ಅಂತ್ಯಗೊಳಿಸುವ ವೇಳೆಗೆ ವಿವಿಧ ಹಣ್ಣು ಹಂಪಲುಧಿಗಳು, ತಂಪಾದ ಪಾನೀಯಗಳು, ಖರ್ಜೂರ ಮೊದಲಾದ ಆಹಾರ ವಸ್ತುಗಳನ್ನು ಸ್ವೀಕರಿಸುವ ಮೂಲಕ ಉಪವಾಸ ವ್ರತಾಚರಣೆಯ ಅಂತ್ಯದ ಕೃತಾರ್ಥತೆ ಪಡೆಯುತ್ತಾರೆ. ಕಳೆದ 10 ವರ್ಷಗಳಿಂದ ಉಪವಾಸ ವ್ರತಾ ಬಿಡುವ ವೇಳೆಯಲ್ಲಿ ಸಮೋಸ ಎಂಬ ತಿಂಡಿಯನ್ನು ವಿಶೇಷವಾಗಿ ಬಳಸಲಾಗುತ್ತಿದೆ.

        ಕೇರಳದಲ್ಲಿ ಕೋಳಿ ಮಾಂಸದ ಮಿಶ್ರಣದ ಹೂರಣ ತುಂಬಿದ ನಾನ್‌ವೆಜ್‌ ಸಮೋಸ ಮತ್ತು ಬೇಯಿಸಿದ ತರಕಾರಿಗಳ ಮಿಶ್ರಣದ ಹೂರಣ ತುಂಬಿದ ವೆಜ್‌ ಸಮೂಸ ರಂಝಾನ್‌ ಸಂದರ್ಭದಲ್ಲಿ ಬಹಳ ಹಿಂದೆಯೇ ಬಳಕೆಯಲ್ಲಿತ್ತು. ದಶಕದ ಹಿಂದೆ ರಂಝಾನ್‌ ಸಂದರ್ಭದಲ್ಲಿ ಹೊಸ ತಿಂಡಿ ಸಮೂಸದ ಪ್ರವೇಶವಾಯಿತು.

        ಪ್ರತಿ ಊರಿನಲ್ಲೂ ಸಮೂಸ ತಯಾರಿಸಿ ಅಂಗಡಿಧಿಗಳಿಗೆ ಸರಬರಾಜು ಮಾಡುವ ಯುವಕರ ತಂಡವಿದೆ. ರಂಝಾನ್‌ ಮಾಸದ ಒಂದು ತಿಂಗಳ ಕಾಲ ಹಗಲು ಹೊತ್ತಿನಲ್ಲಿ ಸಮೋಸ ತಯಾರಿಸಿ ಸರಬರಾಜು ಮಾಡುಧಿವುದು ಇವರಿಗೊಂದು ಉದ್ಯೋಗವಾಗುತ್ತದೆ. ಜತೆಗೆ ಸಮೋಸ ಬೇಡಿಕೆಯನ್ನು ಪೂರೈಸಿದಂತಾಗುತ್ತದೆ.

        ಬೆಳಗ್ಗೆ 5 ಗಂಟೆಗೆ ತಯಾರಿ ಕೆಲಸವನ್ನು ಆರಂಭಿಸಲಾಗುತ್ತದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಎಣ್ಣೆಯಲ್ಲಿ ಕರಿದ ಗರಿಗರಿ ಸಮೋಸ ಸರಬರಾಜಿಗೆ ಸಿದ್ಧವಾಗುತ್ತದೆ. ಮೈದಾ, ಎಣ್ಣೆ, ತರಕಾರಿಗಳ ಧಾರಣೆ ಹೆಚ್ಚಿರುವ ಕಾರಣ ಈ ಬಾರಿ ಸಮೂಸದ ಧಾರಣೆಯು ಕೂಡಾ ಏರಿಕೆಯಾಗಿದೆ. ಸಮೋಸ‌ ಒಂದರ 2 ರೂ. ಗಳಂತೆ ರಖಂ ದರದಲ್ಲಿ ಮಾರಾಟಮಾಡಲಾಗುತ್ತದೆ. ಕೋಳಿ ಮಾಂಸ ಮಿಶ್ರಣ ಮಾಡಿದ ಸಮೋಸ‌ ಒಂದರ 3 ರೂ. ಗಳಂತೆ ರಖಂ ದರದಲ್ಲಿ ಮಾರಾಟ ಮಾಡಲಾಗುತ್ತದೆ.

        ಕಳೆದ ಸಾಲಿನ ತನಕ ಸಮೋಸ ದರ ಕಡಿಮೆ ಇತ್ತು. ಈ ಬಾರಿ 50 ಪೈಸೆಯಷ್ಟು ಹೆಚ್ಚಾಗಿದೆ. ಎಲ್ಲಾ ಲೆಕ್ಕಾಚಾರ ಮಾಡುವಾಗ ಧಾರಣೆ ಏರಿಸದೆ ನಿರ್ವಾಹವಿಲ್ಲ. ಹೆಚ್ಚಿನ ಲಾಭವಿಲ್ಲದಿದ್ದರೂ, ನಷ್ಟವಾಗ ಬಾರದು. ಜೊತೆಗೆ ಸಮೋಸ ತಯಾರಿಕೆಯಲ್ಲಿ ನಿರತರಾಗಿರುವವರ ಜೀವಧಿನವೂ ಸಾಗಬೇಕು. ದಿನವೊಂದರ ಕನಿಷ್ಠ 7 ಸಾವಿರ ಸಮೂಸ ತಯಾರಿಸಲಾಗುತ್ತದೆ. ಬೇಡಿಕೆ ಹೆಚ್ಚಿದ್ದರೆ ಈ ಪ್ರಮಾಣ 10 ಸಾವಿರವನ್ನು ತಲುಪುತ್ತದೆ ಎಂದು ಉಪ್ಪಿನಂಗಡಿಯ ಸಮೋಸ ತಯಾರಕರಾದ ಹನೀಫ್‌ ಮತ್ತು ಅಶ್ರಫ್‌ ಹೇಳಿದರು.

        8 ಕೋಟಿ ರೂ. ವ್ಯವಹಾರ: ಕಳೆದ ರಂಝಾನ್‌ ಸಂದರ್ಭದಲ್ಲಿ ಕಾಸರಗೋಡು ಸೇರಿದಂತೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ವೆಜ್‌ ಮತ್ತು ನಾನ್‌ ವೆಜ್‌ ಸಮೂಸ ಮಾರಾಟದಲ್ಲಿ 8 ಕೋಟಿ ರೂ. ಗಳ ವ್ಯವಹಾರ ನಡೆದಿದೆ. ಯಾಕೆಂದರೆ ಕೇರಳದ ಈ ತಿಂಡಿ ಇಲ್ಲಿಯೂ ಈಗ ರಂಝಾನ್‌ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಪಡೆದಿದೆ ಎಂದು ಈ ಕುರಿತು ಅಧ್ಯಯನ ನಡೆಸಿರುವ ಪತ್ರಕರ್ತ ಸಂಶುದ್ದಿನ್‌ ಸಂಪ್ಯ ಹೇಳಿದರು.

        ಸಂಜೆಯ ವೇಳೆಗೆ ಎಲ್ಲ ಮಸೀದಿಗಳಲ್ಲೂ ಸಾಮೂಧಿಧಿಧಿಹಿಧಿಧಿಕವಾಗಿ ರಂಝಾನ್‌ ಉಪವಾಸವನ್ನು ಕೊನೆಗೊಧಿಧಿಧಿಳಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಊರಿನ ದಾನಿಗಳು ಈ ಕಾರ್ಯಕ್ರಮದಲ್ಲಿ ವಿತರಿಸುವ ಆಹಾರ, ಹಣ್ಣು ಹಂಪಲುಗಳನ್ನು ಸೇವಾ ರೂಪದಲ್ಲಿ ನೀಡುಧಿತ್ತಾರೆ. ಈ ಕೂಟದಲ್ಲಿ ಸಮೋಸ ಒಂದು ಇರಲೇ ಬೇಕಾದ ತಿಂಡಿಯಾಗಿ ಹೋಗಿದೆ. ಮಂಗಳೂರಿನ ಪ್ರಸಿದ್ಧ ಹೊಟೇಲುಗಳಲ್ಲಿ ಕೂಡ ರಂಝಾನ್‌ ಸ್ಪೆಶಲ್‌ ಸಮೋಸಗಳು ಮಾರಾಟವಾಗುತ್ತವೆ. ಇಲ್ಲಿ ಇದರ ಧಾರಣೆ ರೂ. 8ರಿಂದ 10ರ ತನಕ ಇರುತ್ತದೆ.

        ಒಟ್ಟಿನಲ್ಲಿ ರಂಝಾನ್‌ ಮಾಸಾಂತ್ಯದ ತನಕ ವಿವಿಧ ಅಂಗಡಿಗಳಲ್ಲಿ, ಹಣ್ಣು ಹಂಪಲು ಮಾರಾಟಗಾರರಲ್ಲಿ, ಹೊಟೇಲುಗಳ ಬಾಗಿಲ ಬದಿ ವೆಜ್‌ ಮತ್ತು ನಾನ್‌ ವೆಜ್‌ ಸಮೊಸ ಮಾರಾಟಗಾರರನ್ನು ನೀವು ಕಾಣಬಹುದು. ಸಮೋಸ ತಯಾರಿಕೆ  ಹಲವರಿಗೆ ಉದ್ಯೋಗವನ್ನು ಕೂಡ ನೀಡಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus