Udayavani | Mar 04, 2011
ವಿಧಾನಸಭೆಯ ಸಂಖ್ಯಾಬಲವಾದ 205 ಸದಸ್ಯರು ತಮ್ಮ ಹಕ್ಕು ಚಲಾಯಿ
ಸಿದರು. ಇದರಲ್ಲಿ ಹೇಮಾಮಾಲಿನಿ ಅವರಿಗೆ 106 ಮತಗಳು ಬಂದರೆ, ಮರುಳಸಿದ್ದಪ್ಪ ಅವರಿಗೆ 94 ಮತಗಳು ಸಿಕ್ಕಿದವು. 5 ಮತಗಳು ತಿರಸ್ಕೃತವಾಗಿದ್ದವು. ಜೆಡಿಎಸ್‌ನ ಕೆಲ ಶಾಸಕರು ಬಿಜೆಪಿಗೆ ಅಡ್ಡಮತದಾನ ಮಾಡುತ್ತಾರೆಂಬ ವದಂತಿಗಳಿದ್ದವಾದರೂ ಯಾವುದೇ ಮತಗಳು ಈ ರೀತಿಯಲ್ಲಿ ಆಗಲಿಲ್ಲ.
ಬೆಂಗಳೂರು: ರಾಜ್ಯ ಸಭೆಯ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಹಾಗೂ ಕಲಾವಿದೆ ಹೇಮಾ ಮಾಲಿನಿ ನಿರೀಕ್ಷೆಯಂತೆ ವಿಜಯದ ಮಾಲೆ ಧರಿಸಿದ್ದಾರೆ.
ಸಾಹಿತಿ ಹಾಗೂ ರಂಗಕರ್ಮಿ ಪ್ರೊ| ಕೆ. ಮರುಳಸಿದ್ದಪ್ಪ ಅವರನ್ನು 12 ಮತ
ಗಳ ಅಂತರದಿಂದ ಹೇಮಾಮಾಲಿನಿ ಪರಾಭವಗೊಳಿಸಿದರು.
ಹೇಮಾಮಾಲಿನಿ ಗೆಲುವಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿಯ ನಾಯಕರು ಟೊಂಕಕಟ್ಟಿ ನಿಂತಿದ್ದರು.
ಹೇಮಾಮಾಲಿನಿ ಗೆಲುವಿನೊಂದಿಗೆ ರಾಜ್ಯದ 12 ರಾಜ್ಯಸಭಾ ಸದಸ್ಯ ಸ್ಥಾನ ಗಳಲ್ಲಿ 3 ಸ್ಥಾನಗಳು ನೆರೆ ರಾಜ್ಯದವರ ಪಾಲಾದಂತಾಗಿವೆೆ. ಇದರಲ್ಲಿ ಎಂ. ವೆಂಕಯ್ಯ ನಾಯ್ಡು ಹಾಗೂ ಹೇಮಾ ಮಾಲಿನಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳಾದರೆ, ಕೇರಳ ಮೂಲದ ರಾಜೀವ್ ಚಂದ್ರಶೇಖರ್ ಬಿಜೆಪಿಯ ನೆರವಿನೊಂದಿಗೆ ಗೆದ್ದವರು.
ಪಕ್ಷೇತರ ವರ್ತೂರು ಪ್ರಕಾಶ್, ಸಭಾಧ್ಯಕ್ಷರು ಸೇರಿ ಬಿಜೆಪಿಯ ಸಂಖ್ಯಾ ಬಲ 107 ಇತ್ತು. ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಎಂ. ಕೃಷ್ಣಪ್ಪ ನಾಮ ಪತ್ರವನ್ನು ತಿರುಗಮುರುಗ ಹಿಡಿದು ಮರುಳ ಸಿದ್ದಪ್ಪರಿಗೆ ಹಾಗೂ ಅನಂತರ ಸರಿಯಾಗಿ ಹಿಡಿದು ಹೇಮಾಮಾಲಿನಿ ಅವರಿಗೆ ಮತ ಹಾಕಿದ್ದರಿಂದ ಅದು ತಿರಸ್ಕೃತವಾಯಿತು. ಇನ್ನುಳಿದ 4 ತಿರಸ್ಕೃತ ಮತಗಳು ಜೆಡಿಎಸ್‌ಗೆ ಸೇರಿದ್ದವೆಂದು ಹೇಳಲಾಗುತ್ತಿದೆ.
ಏಕೆಂದರೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಚುನಾವಣಾ ಏಜೆಂಟರಿದ್ದು ಅವರ ಪ್ರತಿಯೊಬ್ಬ ಶಾಸಕರು ತೋರಿಸಿಯೇ ಮತ ಚಲಾಯಿಸಿದ್ದಾರೆ. ಆದರೆ ಜೆಡಿಎಸ್‌ನಿಂದ ಯಾವುದೇ ಚುನಾ ವಣಾ ಏಜೆಂಟರು ಇರಲಿಲ್ಲ.