Saturday, May 18, 2013
Last Updated: 2:55:28 PM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹೊರೆಯಾಗದ ಸೋರೆ

      • ಗಣೇಶ ಕುಳಮರ್ವ

        ಸಸ್ಯಶಾಸ್ತ್ರದ ಪ್ರಕಾರ ಸೋರೆ "ಕುಕುರ್ಬಿಟೇಸೀ' ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದು, ಬಳ್ಳಿಯಂತೆ ಬೆಳೆಯುವ ಗಿಡವಾಗಿದೆ.

        ಸೋರೆ ಬಳ್ಳಿಯು ಬಿಳಿ ಹಸುರು ಬಣ್ಣದಿಂದ ಕೂಡಿದ್ದು, ಮೇಲ್ಮೆ„ ನಯವಾದ ಹೊಳಪಿನ ಹೊದಿಕೆ ಹೊಂದಿರುತ್ತದೆ. ಇದು ಹೇರಳ ಪೌಷ್ಟಿಕಾಂಶ ಹೊಂದಿರುವ ತರಕಾರಿ. ಇತರ ಬೆಳೆಗಳಿಗೆ ಹೋಲಿಸಿದರೆ ಸೋರೆ ಕೃಷಿ ಹೊರೆಯಲ್ಲ. ಇದೊಂದು ಸುಲಭ ಮತ್ತು ಕಡಿಮೆ ಖರ್ಚಿನ ಬೆಳೆಯಾಗಿದೆ.

        ಸೋರೆಯ ಮೂಲದ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲ. ದಕ್ಷಿಣ ಭಾರತ ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ ಮತ್ತು ಬಳಸುತ್ತಾರೆ.

        ಔಷಧೀಯ ಗುಣ: ಕೆಲವೊಂದು ಔಷಧ ತಯಾರಿಯಲ್ಲಿ ಸೋರೆಕಾಯಿಯನ್ನು ಬಳಸಲಾಗು ತ್ತದೆ. ವೈದರು ಕೆಲವು ಕಾಯಿಲೆ   ಗಳಿಗೂ ಸೋರೆಕಾಯಿಯಿಂದ ತಯಾ ರಿಸಿದ ಪದಾರ್ಥಗಳನ್ನು ಸೇವಿಸಲು ಸೂಚಿಸುತ್ತಾರೆ.

        ಪೌಷ್ಟಿಕಾಂಶ: ಕೊಬ್ಬು, ಪೊಟ್ಯಾಶಿಯಂ, ಕಬ್ಬಿಣ, ಶರ್ಕರಪಿಷ್ಟ, ಪ್ರೊಟೀನ್‌, ಖನಿಜಾಂಶ, ಕ್ಯಾಲ್ಸಿಯಂ, ರೈಬೋಫ್ಲೆವಿನ್‌, ರಂಜಕ, "ಸಿ' ಜೀವಸತ್ವ ಇತ್ಯಾದಿ ಪೌಷ್ಟಿಕಾಂಶಗಳು ಹೇರಳವಾಗಿವೆ.

        ಅಡುಗೆ: ಸೋರೆಕಾಯಿಯನ್ನು ಬಳಸಿ ಹಲವಾರು ರುಚಿಗಟ್ಟಾದ ಪದಾರ್ಥಗಳನ್ನು ತಯಾರಿಸ ಲಾಗುತ್ತದೆ. ಎಳೆಯ ಸೋರೆಕಾಯಿ ಪದಾರ್ಥಕ್ಕೆ ಉತ್ತಮ. ಮುಖ್ಯವಾಗಿ ಪಲ್ಯ, ಮೇಲೋಗರ, ಹುಳಿ ಸಾರು, ಸಾಂಬಾರು, ದೋಸೆ, ಪಾಯಸ, ಕೊಟ್ಟಿಗೆ (ಬಾಲೆ ಎಲೆ ಕಡುಬು) ಇತ್ಯಾದಿಗಳನ್ನು ತಯಾರಿಸುತ್ತಾರೆ.

        ಕೃಷಿ: ಸೋರೆ ಕೃಷಿಗೆ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಗೊಡ್ಡು ಮಣ್ಣು ಉತ್ತಮ. ಇದು ಸಾಮಾನ್ಯವಾಗಿ ಉಷ್ಣ, ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಶೈತ್ಯ ಹವಾಗುಣ ಈ ಬೆಳೆಗೆ ಅಷ್ಟು ಸಹಕಾರಿಯಲ್ಲ. ದೀರ್ಘ‌ ಬೆಳಕು, ಹೆಚ್ಚಿನ ಉಷ್ಣತೆ ಇದ್ದಾಗ ಸೋರೆ ಯಲ್ಲಿ  ಹೂಗಳು ಅಧಿಕ ಸಂಖ್ಯೆಯಲ್ಲಿ ಮೂಡುತ್ತವೆ.

        ಸೋರೆ ಕೃಷಿಗೆ ಜೂನ್‌-ಜುಲೈ, ಅಕ್ಟೋಬರ್‌-ನವೆಂಬರ್‌ ಅಥವಾ ಫೆಬ್ರವರಿ-ಮಾರ್ಚ್‌ ತಿಂಗಳುಗಳು ಸೂಕ್ತ ಸಮಯ.   ಸುಮಾರು 2 ಫೀಟ್‌ ಅಗಲದ ಮಡಿಗಳನ್ನು ತಯಾರಿಸಿ. ಮಡಿ ತಯಾರಿ ವೇಳೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ.

        ಅದರಲ್ಲಿ 1 1/2ರಿಂದ 2 ಫೀಟ್‌ ದೂರದಲ್ಲಿ ಸಣ್ಣ ಗುಳಿಗಳನ್ನು  ಮಾಡಿ ಬೀಜ ಬಿತ್ತಬೇಕು. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಬೀಜ ಬಿತ್ತನೆಯ ಒಂದು ವಾರದಲ್ಲಿ  ಗಿಡ ಮೊಳಕೆ ಬರುತ್ತವೆ.

        ಗಿಡ ಮೊಳಕೆ ಬಂದು ಒಂದು ವಾರ ದಲ್ಲಿ  ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೂಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡಧಿದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬಹುದು.

        ಬಳ್ಳಿ ಹಬ್ಬಿ ಬೆಳೆಯಲು ಚಪ್ಪರ ಹಾಕಿದರೆ ಉತ್ತಮ ಅಥವಾ ಸ್ಥಳಾವಕಾಶ ಬೇಕಾದಷ್ಟಿದ್ದರೆ ನೆಲದಲ್ಲಿಯೇ ಬಳ್ಳಿ ಹಬ್ಬಲು ಬಿಡಬಹುದು. ಸುಮಾರು ಎರಡು ದಿನಗಳಿಗೊಮ್ಮೆ ಗಿಡಗಳಿಗೆ ನೀರುಣಿಸುವುದು ಅಗತ್ಯ. ಹವಾಮಾನ ವನ್ನು ಅನುಸರಿಸಿ ಅದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

        ಗೊಬ್ಬರ: ಸೋರೆಕಾಯಿ ಕೃಷಿಗೆ ಗೊಬ್ಬರವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿ ಗೊಬ್ಬರ, ಆಕಳಗಂಜಳಿ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸುತ್ತಾರೆ. ಅಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಹಾದ ಕರಿ, ಈರುಳ್ಳಿ ಕಸ ಇತ್ಯಾದಿಗಳನ್ನೂ ಬಳಸಬಹುದು.

        ಕೊಯ್ಲು: ಕಾಯಿ ಎಳತಾಗಿರುವಾಗಲೇ ಕೊಯ್ಲು ಮಾಡಬೇಕು. ಕಾಯಿಗಳ ಮೇಲೆ ಉಗುರಿನ ತುದಿಯಿಂದ ಚುಚ್ಚಿ ದರೆ ಬಹಳ ಬೇಗನೆ ಗಾಯಗಳಾದರೆ ಅದು ಎಳತಾಗಿದೆ ಎಂದರ್ಥ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus