Monday, December 22, 2014
Last Updated: 8:34:29 PM IST
 • ನಾನೆಲ್ಲಿರುವೆ:
 • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಮತ್ತೆ ಬಂದಿದೆ ಕ್ರಿಸ್‌ಮಸ್‌ ಸಂಭ್ರಮ

   • ಮುಕ್ತಿಪ್ರಕಾಶ್‌ , ಸಂತ ಆಂತೊನಿ ಆಶ್ರಮ, ಜೆಪ್ಪು.

    ಕ್ರೈಸ್ತರ ಹಬ್ಬಗಳಲ್ಲಿ ಕ್ರಿಸ್‌ಮಸ್‌ ಹಾಗೂ ಈಸ್ಟರ್‌ ಪ್ರಮುಖವಾಗಿದ್ದು  ಯೇಸು ಕ್ರಿಸ್ತರು ಬೆತ್ಲೆಹೆಮ್‌ನ ಗೋದಲಿಯಲ್ಲಿ ಜನಿಸಿದ ಹಬ್ಬವೇ ಕ್ರಿಸ್‌ಮಸ್‌ ಆಗಿದೆ.


    ಹಬ್ಬ ಹರಿದಿನಗಳ ಕಂಪು ಮನುಷ್ಯನ ಮನಸ್ಸನ್ನು ಶಾಂತಿ, ನೆಮ್ಮದಿಯ ತಾಣಾವನ್ನಾಗಿ ಮಾಡುತ್ತದೆ. ಹಬ್ಬಗಳ  ಆಚರಣೆ, ಸಂಭ್ರಮ ಪ್ರತಿಯೊಂದು ಧರ್ಮದ ಜೀವಾಳ.  ಧರ್ಮದ ಮೂಲವು ಭಗವಂತನಲ್ಲಿ ಇರಿಸುವ ಭಕ್ತಿ ಮತ್ತು ವಿಶ್ವಾಸದ ಅಡಿಪಾಯವನ್ನು ಅವಲಂಬಿಸಿದೆ.

    ಕ್ರೈಸ್ತರ ಹಬ್ಬಗಳಲ್ಲಿ ಕ್ರಿಸ್‌ಮಸ್‌ ಹಾಗೂ ಈಸ್ಟರ್‌ ಪ್ರಮುಖವಾಗಿವೆ. ಯೇಸು ಕ್ರಿಸ್ತರು ಬೆತ್ಲೆಹೆಮ್‌ನ ಗೋದಲಿಯಲ್ಲಿ ಜನಿಸಿದ ಹಬ್ಬ ಕ್ರಿಸ್‌ಮಸ್‌ ಮತ್ತು ಯೇಸು ಕ್ರಿಸ್ತರು ತಮ್ಮ ಸ್ವರ್ಗದಲ್ಲಿರುವ ಪಿತನ ಆಜ್ಞೆಯ ಪ್ರಕಾರ  ದೇವರ ರಾಜ್ಯವನ್ನು- ಪ್ರಸಾರ ಮಾಡಿ ಗೊಲ್ಗೊಥಾದಲ್ಲಿ ಶಿಲುಬೆಯ ಮರಣವನ್ನು ಹೊಂದಿ, ಪುನರುತ್ಥಾನವಾದ ಹಬ್ಬ ಈಸ್ಟರ್‌.  ಇವಲ್ಲದೆ ವರ್ಷಾದ್ಯಂತ ಕ್ರೆŒ„ಸ್ತ ಬಾಂದವರು ಇನ್ನೂ ಅನೇಕ ಹಬ್ಬಗಳನ್ನು ಸಂಭ್ರಮ , ಶ್ರದ್ಧೆಯಿಂದ ಆಚರಿಸುತ್ತಾರೆ.

    ಹುಟ್ಟು, ಹಿನ್ನೆಲೆ

    ""ಬರಲಿರುವ ರಾಜಾಧಿರಾಜ' ಎಂದು ಪ್ರವಾದಿಗಳ ಮುಖಾಂತರ ದೇವರು ಮಾಡಿದ ವಾಗ್ಧಾನ ಯೇಸು ಕ್ರಿಸ್ತರನ್ನು ಕುರಿತು ಹೇಳಿದ್ದಾಗಿದೆ ಎನ್ನುವುದು ಕ್ರೈಸ್ತರ ನಂಬಿಕೆ.  ಕ್ರಿ. ಪೂ. 800-750 ಇಸವಿಯಲ್ಲಿ ಜೆರುಸಲೇಮ್‌ನಲ್ಲಿ ವಾಸಿಸಿದ್ದ , ಪ್ರವಾದಿಗಳಲ್ಲಿಯೇ ಹಿರಿಯ ಪ್ರವಾದಿ ಎಂದು ಸಂಬೋಧಿಸಲಾಗುತ್ತಿರುವ ಯೆಶಾಯ ಪ್ರವಾದಿಯ ಮುಖಾಂತರ ದೇವರು ಈ ಮಾತನ್ನು ಹೇಳಿಸಿದ್ದರು ಎಂದು ಪವಿತ್ರ ಗ್ರಂಥ ಬೈಬಲ್‌ ಉಲ್ಲೇಖೀಸುತ್ತದೆ. ಯೇಸುಕ್ರಿಸ್ತರು ದಾವಿದ್‌ ಅರಸನ  ವಂಶದಲ್ಲಿ ಜನಿಸಿ ಆದರ್ಶ ಪ್ರಾಯ ಅರಸರಾಗಲಿದ್ದಾರೆ ಎಂಬ ವಾಗ್ಧಾನವನ್ನು  ಮುಂಚಿತವಾಗಿ ತಿಳಿಸುಸಿದ್ದರು. ಸಂತ ಲೂಕರ ಸುವಾರ್ತೆಯಲ್ಲಿ  "ಯೇಸು ಇಡೀ ಮಾನವಕುಲದ ಉದ್ಧಾರಕ'ಎಂಬ ಶುಭ ಸಂದೇಶವನ್ನು  ಒತ್ತಿ ಹೇಳಲಾಗಿದೆ.

    ಯೇಸುಕ್ರಿಸ್ತರ ಜನನದ ಸಮಯದಲ್ಲಿ ಹೆರೊದ್‌ಯೆಂಬ ರಾಜನು ಪಾಲೆಸ್ತಿನ್‌ ಪ್ರಾಂತ್ಯವನ್ನು ಆಳುತ್ತಿದ್ದನು (ಕ್ರಿ.ಪೂ. 37-4 .ಹೆರೋದನು ಯಹೂದ್ಯ ವಂಶದವನಾಗಿರಲಿಲ್ಲ. ಆತನು ಗ್ರೀಕ್‌ ಸಂಸðತಿಯಲ್ಲಿ ಬೆಳೆದವನು.  ತನ್ನ ಕಠಿಣ ಹಾಗೂ ದುಷ್ಟ  ಕೃತ್ಯಗಳಿಂದ ಪ್ಯಾಲೆಸ್ತಿನ್‌ನಲ್ಲಿ ಆತ ರಾಜ್ಯಭಾರ ಮಾಡುತ್ತಿದ್ದ. ತನ್ನ ಹತ್ತಿರದ ಸಂಬಂಧಿಕರನ್ನು  ಮತ್ತು  ಆಪ್ತರನ್ನು ಕೊಂದ ಕ್ರೂರ ಪಾಪಿ ಅವನಾಗಿದ್ದನೆಂದು ಚರಿತ್ರೆಯಲ್ಲಿ ಉಲ್ಲೇಖೀಸಲಾಗಿದೆ.  ಯೇಸುಕ್ರಿಸ್ತರ ಜನನದ ಬಗ್ಗೆ  ಮಾಹಿತಿಯನ್ನು ಜ್ಯೋತಿಷ್ಯರ ಮುಖಾಂತರ ತಿಳಿದುಕೊಂಡ ಹೆರೋದನು ತನಗಿಂತ ಅಧಿಕಾರದಲ್ಲಿ  ಮಿಗಿಲಾದ ಅರಸನು ಈ ಭೂಲೋಕದಲ್ಲಿ ಜನಿಸಿದ್ದಾನೆ ಎಂಬ ಮತ್ಸರದಿಂದ, ಎರಡು ವರ್ಷಗಳಿಗಿಂತ ಕೆಳಗಿನ ವಯೋಮಿತಿಯ ಎಲ್ಲಾ ಗಂಡು ಮಕ್ಕಳನ್ನು ಕೊಂದು ಹಾಕುವ ಯೋಜನೆಯನ್ನು  ರೂಪಿಸಿದ್ದನು. ಈ ಹಿನ್ನೆಲೆಯಲ್ಲಿ  ದೇವರ ಆಜ್ಞೆಯ ಪ್ರಕಾರ ಜೊಸೇಫ್‌ ಹಾಗೂ ಮೇರಿ ಅವರು ಯೇಸುವನ್ನು ಕರೆದುಕೊಂಡು ಈಜಿಪ್ಟ್ ದೇಶಕ್ಕೆ ತೆರಳುತ್ತಾರೆ.ಹಾಗೆ ಅವರು  ಹೆರೋದನು ಸಾಯುವ ತನಕ  ಈಜಿಪ್ಟಿನಲ್ಲಿ  ವಾಸ ಮಾಡುತ್ತಾರೆ. (ಲೂಕ 2/15)

    ಕ್ರಿಸ್‌ಮಸ್‌ ಬಂತೆಂದರೆ ಎಲ್ಲೆಲ್ಲೂ ಹರಿದು ಬರುತ್ತದೆ ಹರುಷದ ಹೊನಲು.  ಡಿಸೆಂಬರ್‌ 25 ರಂದು ಕ್ರಿಸ್‌ಮಸ್‌ ಆಚರಣೆ ಸಂಭ್ರಮ. ಇದು ವರುಷದ ಕೊನೆಯ ವಾರ, ಹಾಗೂ ಹೊಸ ವರುಷಕ್ಕೆ ಸಿದ್ಧತೆಯನ್ನು ಮಾಡುವ ಸಂತಸದ ಕಾಲ.  ಈ ಸಿದ್ಧತೆಯ ಕಾಲವನ್ನು ಕೊಂಕಣಿಯಲ್ಲಿ 'ಆದ್ವೆಂತ್‌' (ಅಛvಛಿnಠಿ) ಎಂದು ಕರೆಯುತ್ತಾರೆ.   'ಆದ್ವೆಂತ್‌' ಶಬ್ದದ ಅರ್ಥ - "ಯೇಸುಕ್ರಿಸ್ತರ ಆಗಮನ ಅಥವಾ ನಿರೀಕ್ಷೆಯನ್ನು ಎದುರು ನೋಡುವ ಕಾಲ' ಎಂದು.  ಈ ಆದ್ವೆಂತ್‌ ಕಾಲದಲ್ಲಿ ಇಡೀ ಕ್ಯಾಥೊಲಿಕ್‌ ಧರ್ಮಸಭೆಯು ಯೇಸುಕ್ರಿಸ್ತರ ಜನನವನ್ನು ನಿರೀಕ್ಷಿಸುತ್ತಾ, ಯೇಸುಕ್ರಿಸ್ತರ ಆಗಮನಕ್ಕೆ  ನಾಲ್ಕು ವಾರಗಳ ಆಧ್ಯಾತ್ಮಿಕ ಸಿದ್ಧತೆಯನ್ನು ಪ್ರಾರ್ಥನೆ ಹಾಗೂ ಆಧ್ಯಾತ್ಮಿಕ ಶುದ್ಧಿಕರಣವನ್ನು ಮಾಡುತ್ತದೆ. 


    ಈ ಕಾಲದಲ್ಲಿ ಹಬ್ಬ, ಶುಭ ಸಂಭ್ರಮಗಳ ಆಚರಣೆಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ಕ್ರಿಸ್ತರ ಆಗಮನ ಕಾಲದ ಮೊದಲ ಎರಡು ವಾರಗಳ ಪ್ರಾÅರ್ಥನೆ ಮತ್ತು  ಪೂಜಾ ವಿಧಿಗಳು ಈ ಭೂಲೋಕದ ಅಂತ್ಯ ಕಾಲಕ್ಕೆ ಯೇಸು ಕ್ರಿಸ್ತರು ಮಾನವಕುಲವನ್ನು ವಿಮೋಚನೆಗೊಳಿಸಲು ಬರುತ್ತಾರೆ ಎಂಬ ಸಂದೇಶವನ್ನು ಕೊಟ್ಟರೆ, ನಂತರದ ಎರಡು ವಾರಗಳಲ್ಲಿ ಯೇಸುಕ್ರಿಸ್ತರ ಜನನದ ಶುಭಸಂದೇಶವನ್ನು ಸವಿಯಲು ಅತ್ಯಂತ ಉತ್ಸಾಹದಿಂದ ಧರ್ಮಸಭೆಯು ಅಧ್ಯಾತ್ಮಿಕ ಸಿದ್ಧತೆಯನ್ನು ಮಾಡುತ್ತದೆ.

    ಯೇಸುಕ್ರಿಸ್ತರ ಆಗಮನ ಕಾಲದ ಅಧ್ಯಾತ್ಮಿಕ ಅಭ್ಯಾಸಗಳು 5ನೇ ಶತಮಾನದಿಂದ ಧರ್ಮಸಭೆಯಲ್ಲಿ ಆರಂಭಗೊಂಡಿದ್ದು, 6 ಶತಮಾನದಲ್ಲಿ ಇಡೀ ಧರ್ಮಸಭೆಯಲ್ಲಿ ಆಚರಣೆ ಮಾಡುವ ಸಂಪ್ರದಾಯ ಪ್ರಾರಂಭವಾಯಿತು.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus