Wednesday, November 26, 2014
Last Updated: 5:31:47 PM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ವಿಡಿಯೋ ಗ್ಯಾಲರಿ
  • ಉದಯವಾಣಿ
  • ವೆ ಬ್
  • ಹುಡುಕಿ
    • ಕ್ರಿಸ್‌ಮಸ್‌: ಅರಿತು ಆಚರಿಸೋಣ

      • ಮುಕ್ತಿಪ್ರಕಾಶ್‌ , ಸಂತ ಆಂತೊನಿ ಆಶ್ರಮ

        ಕ್ರಿಸ್‌ಮಸ್‌ ಆಚರಣೆಯಲ್ಲಿ ಹತ್ತು ಹಲವು ಸಂಗತಿಗಳು ಹಬ್ಬಕ್ಕೆ  ಮೆರಗನ್ನು ನೀಡುತ್ತವೆ. ಅಂತೆಯೇ ಕ್ರಿಸ್‌ಮಸ್‌ ಅರಿತು ಆಚರಿಸಬೇಕಾದ ಹಬ್ಬವಾಗಿದೆ.

        ಗ್ರೀಟಿಂಗ್‌ ಕಾರ್ಡ್‌:

        ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಮಳಿಗೆಗಳಲ್ಲಿ ಮಾರಾಟಕ್ಕಿಟ್ಟ ರಂಗುರಂಗುಗಳ ಕ್ರಿಸ್‌ಮಸ್‌ ಶುಭಾಶಯ ಕಾರ್ಡುಗಳನ್ನು ನೋಡುವುದು ಕಣ್ಣಿಗೊಂದು ಹಬ್ಬ.  ಹಬ್ಬದ ಪ್ರಯುಕ್ತ ಕ್ರಿಸ್‌ಮಸ್‌ ಕಾರ್ಡುಗಳಲ್ಲಿ  ಯೇಸು ಕ್ರಿಸ್ತರ ಜನನದ ಸಂದೇಶ ಹಾಗೂ  ಹೊಸ ವರುಷದ ಸಂದೇಶಗಳನ್ನು ಮುದ್ರಿಸಿರುತ್ತಾರೆ.  ಯೇಸುಕ್ರಿಸ್ತರ ಜನನದ ವಿವಿಧ ಚಿತ್ರಗಳನ್ನು  ಕ್ರಿಸ್‌ಮಸ್‌ ಕಾರ್ಡುಗಳಲ್ಲಿ ಕಾಣಬಹುದು. 

        ಕ್ರಿಸ್‌ಮಸ್‌ ಕಾರ್ಡುಗಳ ಮುಖಾಂತರ ಬಂಧು, ಮಿತ್ರರಿಗೆ, ನೆಂಟರಿಷ್ಟರಿಗೆ ದೇಶ ವಿದೇಶದಲ್ಲಿ ನೆಲೆಸಿರುವ ಕುಟುಂಬದ ಸದಸ್ಯರಿಗೆ ಕ್ರಿಸ್‌ಮಸ್‌ ಕಾರ್ಡುಗಳ ಮುಖಾಂತರ ಸಂದೇಶಗಳನ್ನು ಕಳುಹಿಸುವುದು ಶತಮಾನಗಳಿಂದ ನಡೆದು ಬಂದ ರೂಡಿ.  1840 ಇಸವಿಯಲ್ಲಿ ಬ್ರಿಟನ್‌ ದೇಶದಲ್ಲಿ ಪ್ರಥಮ ಬಾರಿಗೆ ಕ್ರಿಸ್‌ಮಸ್‌ ಕಾರ್ಡುಗಳ ಮುಖಾಂತರ ಯೇಸುಕ್ರಿಸ್ತರ ಜನನದ ಸಂದೇಶ ಕಳುಹಿಸುವ ರೂಡಿ ಚಾಲ್ತಿಗೆ ಬಂತು ಎಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.

        ಗೋದಲಿ ಹಾಗೂ ಕ್ರಿಸ್‌ಮಸ್‌ ನಕ್ಷತ್ರ: 

        ಕ್ರಿಸ್‌ಮಸ್‌ ಹಬ್ಬದ ಪ್ರಮುಖ ಸಂಕೇತ ಗೋದಲಿ ಹಾಗೂ ಗೋದಲಿಯ ಮೇಲೆ ಮಿನುಗುವ ನಕ್ಷತ್ರ ಎನ್ನಬಹುದು.  ಕ್ರಿಸ್‌ಮಸ್‌ ಹಬ್ಬದ ಭರದ ಸಿದ್ಧತೆ ಗೋದಲಿ ಸಿದ್ಧಪಡಿಸುವ ಮುಖಾಂತರ ಪ್ರಾರಂಭವಾಗುತ್ತದೆ. ಕ್ರಿಸ್ತರ ಜನನ ಪ್ಯಾಲೆಸ್ತೀನ್‌ ದೇಶದ ಬೆತ್ಲೆಹೆಮ್‌ನ ಗೋದಲಿಯಲ್ಲಿ ಆದ ಪ್ರಯುಕ್ತ ಗೋದಲಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. 

        ಪ್ರತಿಯೊಂದು ಚರ್ಚ್‌ ವಠಾರದಲ್ಲಿ ಗೋದಲಿಗಳನ್ನು ಅತ್ಯಂತ ಸುಂದರ ವಿನ್ಯಾಸಗಳಲ್ಲಿ ಸಿದ್ಧಪಡಿಸುತ್ತಾರೆ.  ಮನೆಯ ಅಂಗಳಗಳಲ್ಲಿ, ಮನೆಯ ಛಾವಡಿಯಲ್ಲಿ ಹಾಗೂ ಜನಸಂದಣಿ ಸೇರುವಲ್ಲಿ ಗೋದಲಿಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಮಕ್ಕಳು, ಯುವಜನರು  ಹಾಗೂ ವೃದ್ಧರು ಅತ್ಯಂತ ಉತ್ಸಾಹ, ಶ್ರದ್ಧೆಯಿಂದ ಪಾಲುಗೊಳ್ಳುತ್ತಾರೆ.  ಅನೇಕ ಚರ್ಚ್‌ಗಳು ತಮ್ಮ ಚರ್ಚ್‌ ವ್ಯಾಪ್ತಿಯಲ್ಲಿ ಬರುವ ಕುಟುಂಬಗಳಿಗೆ ಗೋದಲಿ ಸ್ಪರ್ಧೆಯನ್ನು ಏರ್ಪಡಿಸಿ ಉತ್ತಮ ವಿನ್ಯಾಸದ ಗೋದಲಿಗಳನ್ನು ಸಿದ್ಧಪಡಿಸಲು ಹುರಿದುಂಬಿಸುತ್ತಾರೆ. 

        ಗೋದಲಿಗಳಲ್ಲಿ  ಯೇಸು  ಜನನದ ಸವಿನೆನಪಿಗಾಗಿ, ಯೇಸುಕ್ರಿಸರ ಜನನದ ಹಾಗೂ ಪ್ರಕ್ರತಿಯ ದೃಶ್ಯಗಳನ್ನು ಅತ್ಯಂತ ಸುಂದರವಾಗಿ, ಆಕರ್ಷಕವಾಗಿ  ವಿನ್ಯಾಸಗೊಳಿಸುತ್ತಾರೆ.  ಯೇಸು ಜನನವನ್ನು ಧ್ಯಾನ ಭರಿತವಾಗಿ ಅನುಭವಿಸುವ ಸಲುವಾಗಿ ಕ್ರಿ.ಶ. 1223 ಇಸವಿಯಲ್ಲಿ ಸಂತ ಫ್ರಾನ್ಸಿಸ್‌ ಆಸಿಸಿ ಅವರು ಮೊದಲ ಬಾರಿಗೆ ಗೋದಲಿಯನ್ನು (ಕ್ರಿಬ್‌- ಇrಜಿಚಿ) ಸಿದ್ಧ ಪಡಿಸಿದರು ಎಂದು ತಿಳಿದು ಬರುತ್ತದೆ. 

        ಕ್ರಿಸ್ತ ಜನನದ ಸಂಕೇತವಾಗಿ ಗೋದಲಿಯ ಮೇಲೆ ವಿವಿಧ ಬಣಗಳ ನಕ್ಷತ್ರಗಳನ್ನು ತೂಗು ಹಾಕುತ್ತಾರೆ.  ಯೇಸು ಜನನದ ಶುಭವಾರ್ತೆಯನ್ನು ಕೇಳಿ, ಅವರಿಗೆ ನಮನಗಳನ್ನು ಸಲ್ಲಿಸಲು ಬಂದ  ಕುರುಬರಿಗೆ ಹಾಗೂ ಜ್ಯೋತಿಷ್ಯರಿಗೆ ಈ ನಕ್ಷತ್ರವು ಯೇಸು ಜನಿಸಿದ ಬೆತ್ಲೆಹೆಮ್‌ನ ಗೋದಲಿಗೆ ಹೋಗಲು ದಾರಿ ದೀಪಮಾತು ಎಂದು ಬೈಬಲ್‌ ತಿಳಿಸುತ್ತದೆ.

        ಕ್ರಿಸ್‌ಮಸ್‌ ಕುಸ್ವಾರ್‌:

         ಕ್ರಿಸ್‌ಮಸ್‌ನ ಸಡಗರ ಸಂಭ್ರಮವಿರುವುದು ಬಗೆ ಬಗೆಯ ಸಿಹಿ ತಿಂಡಿಗಳನ್ನು ತಯಾರಿಸುವ ಭರಾಟೆಯಲ್ಲಿ.  ಇದನ್ನು  ಕ್ಯಾಥೊಲಿಕ್‌ ಬಾಂಧವರು 'ಕುಸ್ವಾರ್‌'  ಎಂದು ಕರೆಯುತ್ತಾರೆ.  ಕೆಲವು ವರುಷಗಳ ಹಿಂದೆ, ಕ್ರಿಸ್‌ಮಸ್‌ ಹಬ್ಬಕ್ಕೆ ಹತ್ತು ಹದಿನೈದು ದಿನಗಳು ಇರುವ ಸಂದರ್ಭದಲ್ಲಿ, ಕುಟುಂಬದ ಸದಸ್ಯರೆಲ್ಲರೂ ಒಟ್ಟುಗೂಡಿ ಬಗೆಬಗೆಯ ಕುಸ್ವಾರ್‌ ತಯಾರಿಸುತ್ತಿದ್ದು,

        ಇದು  ಕುಟುಂಬದ ಸದಸ್ಯರ ಏಕತೆಯ ಸಂಕೇತವನ್ನು ಇಮ್ಮಡಿಗೊಳಿಸುತ್ತಿತ್ತು.  ಮನೆಮಂದಿಯೆಲ್ಲಾ ತಯಾರಿಸಿದ 'ಕುಸ್ವಾರ್‌' ಕ್ರಿಸ್‌ಮಸ್‌ನ ಪ್ರೀತಿಯ ಸಂಕೇತವಾಗಿ ನೆರೆಮನೆಯ ಬಾಂಧವರಿಗೆ, ಜಾತಿ ಮತ ಭೇದವಿಲ್ಲದೆ,  ವಿತರಿಸುತ್ತಿದ್ದರು. ಈ ಸಂಪ್ರದಾಯ ಇಂದಿಗೂ ಕ್ರೆŒ„ಸ್ತಬಾಂದವರಲ್ಲಿ ಚಾಲ್ತಿಯಲ್ಲಿದೆ. 

        ಆದರೆ ಇಂದಿನ ಭರಾಟೆಯ ಕುಟುಂಬ ಜೀವನದ ಪರಿಸ್ಥಿತಿಯಲ್ಲಿ ಮನೆಯಲ್ಲಿ ಕುಸ್ವಾರ್‌ ತಯಾರಿಸಲು ಮನೆಮಂದಿಗೆ ಸಮಯ ಕಡಿಮೆ. ಹಾಗಾಗಿ  ಬೇಕರಿಯಲ್ಲಿ ಸಿದ್ಧಪಡಿಸಿದ ಕುಸ್ವಾರ್‌ ಹಾಗೂ ಅದರ ಜತೆಗೆ  ಮಾರುಕಟ್ಟೆಯಿಂದ ಖರೀದಿಸಿದ ಖರ್ಜೂರ, ಬಾಳೆಹಣ್ಣು, ಕಿತ್ತಳೆ ಹಣ್ಣುಗಳನ್ನು ಒಂದು ಸುಂದರ ತಟ್ಟೆಯಲ್ಲಿ ಹಾಕಿ ನೆರೆಮನೆಯವರಿಗೆ, ಗೌರವ ಪೂರ್ವಕವಾಗಿ ಅರ್ಪಿಸುವ ಸಂಪ್ರದಾಯ ಪಾಲಿಸುತ್ತಾರೆ.

        ಕ್ರಿಸ್‌ಮಸ್‌ ಟ್ರೀ:

         ಕ್ರಿ.ಶ. 680-755 ಇಸವಿಯ ಮಧ್ಯಂತರದಲ್ಲಿ ಸಂತ ಬೊನಿಫಾಸ್‌ ಅವರು 'ಕ್ರಿಸ್‌ಮಸ್‌' ಟ್ರೀಯ ಸಂಪ್ರದಾಯವನ್ನು ಪ್ರಾರಂಭಿಸಿದರು.  ಯೇಸುಕ್ರಿಸ್ತರು ಸ್ವರ್ಗಲೋಕದ ಮರ ಎಂದು ಸಂತ ಬೊನಿಫಾಸ್‌ ಅವರು  ವಿಶ್ವಾಸಿಗಳಿಗೆ ತಿಳಿಯಪಡಿಸಿ, ಅವರಲ್ಲಿ ಸ್ವರ್ಗಲೋಕದ  ವಿಶ್ವಾಸವನ್ನು ಮೂಢಿಸುತ್ತಿದ್ದರು. 

        ಕ್ರಿಸ್‌ಮಸ್‌ ಋತುವಿನಲ್ಲಿ  ಕ್ಯಾಥೊಲಿಕ್‌ ಬಾಂಧವರು ದೇವದಾರು  ಮರದ ಗೊಂಬೆಗಳನ್ನು ಕಡಿದು ಅದನ್ನು ಮನೆಯಲ್ಲಿ ಬಣ್ಣದ ಕಾಗದದ ಹೂಗಳಿಂದ ಹಾಗೂ ಹೊತ್ತಿಸಿದ ಬತ್ತಿಗಳಿಂದ ಶೃಂಗರಿÓ ‌ತೊಡಗಿದರು.  ಈ ಸಂಪ್ರದಾಯ ಪ್ರಥಮ ಬಾರಿಗೆ ಪ್ರಾರಂಭವಾದದ್ದು ಜರ್ಮನಿಯಲ್ಲಿ.  ಇವತ್ತಿನ ದಿನಗಳಲ್ಲಿ  ಹಲವು ಮನೆಗಳ ಅಂಗಳಗಳಲ್ಲಿ ಕ್ರಿಸ್‌ ಮಸ್‌ ಟ್ರೀಯನ್ನು  ವಿದ್ಯುತ್‌ ದೀಪಗಳಿಂದ ಅಲಂಕರಿಸುತ್ತಾರೆ.

        ಸಾಂತಾಕ್ಲೊಸ್‌ ಅಥವಾ ಕ್ರಿಸ್‌ಮಸ್‌ ತಾತ

         ಕ್ರಿಸ್‌ಮಸ್‌ನ ಮನೋರಂಜನೆಯ ಕೇಂದ್ರ ಬಿಂದು ಮಕ್ಕಳ ಸಾಂತಾಕ್ಲೊಸ್‌. ಅವರು  ಮಕ್ಕಳಿಗೆ- ಚಾಕಲೇಟು, ಆಟಿಕೆ ಕೊಡುವ ತಾತ.  ದೊಡªವರಿಗೆ, ಮನೋರಂಜನೆ ನೀಡುವ ಸಾಂತಾಕ್ಲೊಸ್‌. 'ಜಿಂಗಲ್‌ ಬೆಲ್ಸ್‌ ಜಿಂಗಲ್‌ ಬೆಲ್ಸ್‌' ಹಾಡಿಗೆ ಲಯಬದ್ಧವಾಗಿ ಹೆಜ್ಜೆ ಹಾಕಿ ಕುಣಿಯುವ ಸಾಂತಾಕ್ಲೊಸ್‌ಗೆ ಮಕ್ಕಳು ಮುಗಿ ಬೀಳುತ್ತಾರೆ.  ಈ ಸಂದರ್ಭದಲ್ಲಿ ತನ್ನ ಜೋಳಿಗೆಯಲ್ಲಿ ತುಂಬಿಸಿದ್ದ  ಚಾಕಲೇಟ್‌ ಹಾಗೂ ಮಕ್ಕಳ ಆಟಿಕೆಗಳನ್ನು ಸಾಂತಾಕ್ಲೊಸ್‌ ಮಕ್ಕಳಿಗೆ ಎಸೆಯುತ್ತಾರೆ. 

        ಚರಿತ್ರೆಯಲ್ಲಿ ಉಲ್ಲೇಖೀಸಿದಂತೆ ಸಾಂತಾಕ್ಲೊಸ್‌ ಒಬ್ಬ ಕ್ಯಾಥೊಲಿಕ್‌ ಧರ್ಮಾದ್ಯಕ್ಷ.  ಅವರಿಗೆ ಬಡಬಗ್ಗರು, ಮಕ್ಕಳೆಂದರೇ ಎಲ್ಲಿಲ್ಲದ ಪ್ರೀತಿ, ಮಮತೆ.  ನಾವಿಕರ, ಮದುವೆಗೆ ಸಿದ್ಧತೆ ನಡೆಸುವ ಯುವತಿಯರ, ಗರ್ಭಿಣಿಯರ ಪಾಲಕನೆಂದು ಸಾಂತಾಕ್ಲೊಸರನ್ನು ಗೌರವಿಸುತ್ತಾರೆ.  ದುಷ್ಟ ಚಟಗಳಿಂದ, ಪರಿವರ್ತನೆ ಹೊಂದಿ, ನವ ಜೀವನವನ್ನು  ಆರಂಭಿಸಲು ನಿರ್ಧಾರ ಮಾಡುವವರ ಪಾಲಕರಾಗಿದ್ದಾರೆ ಸಂತಾ ನಿಕೊಲಸ್‌ ಅಥವಾ ಸಾಂತಾಕ್ಲೊಸ್‌.

        ಶಾಂತಿ ಪ್ರೀತಿಯಿಂದ ನವಸಮಾಜ ನಿರ್ಮಿಸೋಣ:

        ಧರ್ಮಗಳ ಮಧ್ಯೆ ಶಾಂತಿ ಸಾಮರಸ್ಯವನ್ನು ಕಾಪಾಡಿ ಸಹಬಾಳ್ವೆನಡೆಸುವುದು ಪ್ರತಿಯೊಂದು ಧರ್ಮದ ಸಾರ.  ಇದು ಭಾರತೀಯರ ಉದಾತ್ತ ಸಂಸðತಿಯ ಸಂಕೇತ.  ಯೇಸುಕ್ರಿಸ್ತರ ಜನನದ ಶುಭವಾರ್ತೆ ಈ ಭುಲೋಕದ ಸುಮನಸ್ಕರಿಗೆ ಶಾಂತಿ ಪ್ರೀತಿಯ ಸಂದೇಶವನ್ನು ಸಾರುತ್ತದೆ.  ಪಾಪದಿಂದ ಮಾನವ ಕುಲವನ್ನು  ವಿಮೋಚನೆಗೊಳಿಸಲು ಯೇಸುಕ್ರಿಸ್ತರು ಈ ಧರೆಗಿಳಿದರು ಹಾಗೂ ಶಿಲುಬೆಯ ಮರಣವನ್ನು ಹೊಂದಿದರು ಎನ್ನುವುದು ಕ್ರೈಸ್ತರ ನಂಬಿಕೆ.

        ಪರರೊಡನೆ ಪ್ರೀತಿ ಶಾಂತಿುಂದ ಸಹಬಾಳ್ವೆನಡೆಸ ಬೇಕು ಎನ್ನುವುದು ಪ್ರತಿಯೊಂದು ಧರ್ಮದ ಸಾರ, ಭಾರತೀಯ ಸಂಸðತಿಯ ಉದಾತ್ತ ಪ್ರತೀಕವೂ  ಇದàಎ ಆಗಿದೆ. ಕ್ರಿಸ್ತ ಜನನದ ಶುಭವಾರ್ತೆ ಕುರುಬರಿಗೆ ಶುಭಸಂದೇಶವನ್ನು ನೀಡಿತು.  ಪಾಪದಿಂದ ಮಾನವಕುಲವನ್ನು ವಿಮೋಚನೆಗೊಳಿಸಲು ಯೇಸುಕ್ರಿಸ್ತರು ಶಿಲುಬೆಯ ಮರಣವನ್ನು ಹೊಂದಿ ಪುನರುತ್ಥಾನ ಹೊಂದಿದರು ಎನ್ನುವುದು ಕ್ರೆŒ„ಸ್ತರ ವಿಶ್ವಾಸ. 

        ತನ್ನನ್ನು ಅನ್ಯಾಯದಿಂದ ಶಿಲುಬೆಗೇರಿಸಿದ ದ್ರುಷ್ಕರ್ಮಿಗಳನ್ನು ಉದ್ದೇಶಿಸಿ  ಯೇಸು ಹೀಗೆಂದು ಉದ್ಗರಿಸಿದ್ದರು. 'ಪಿತನೇ ಇವರನ್ನು ಕ್ಷಮಿಸು. ತಾವೇನು  ಮಾಡುತ್ತಿರುವರೆಂದು ಇವರು ಅರಿಯರು' (ಲೂಕ:23/24)ಯೇಸು ತನ್ನ ಪ್ರಾಣ ತ್ಯಾಗಮಾಡುವ ಕ್ಷಣದಲ್ಲಿ ಕ್ಷಮೆ, ಶಾಂತಿ ಪ್ರೀತಿಯ ಸಂದೇಶವನ್ನು ಶಿಲುಬೆಯಿಂದ ಸಾರಿದರು.

        ಇಂದಿನ ಕಂಪ್ಯೂಟರ್‌, ವೈಜಾ°ನಿಕ ಯುಗದಲ್ಲಿ ಮಾನವನಿಗೆ  ತಾನು ಎಲ್ಲವನ್ನು ಜಯಸಿದ್ದೇನೆ ಎಂಬ ಮನೋಭಾವವಿದೆ.  ತನ್ನ ಸ್ವಾರ್ಥ, ಕೋಪ, ಮದ, ಮತ್ಸರದಂತಹ ಅನಿಷ್ಠಗಳಿಂದ ಹೊರಬರಲು ಮನುಷ್ಯ ಒದ್ದಾಡುತ್ತಿರುವ ಆತಂಕದ ಪರಿಸಿuತಿ ಇದೆ. ಧರ್ಮದ ತಳಹದಿಯ ಮೇಲೆ ಸರ್ವೇಶ್ವರನಲ್ಲಿ  ವಿಶ್ವಾಸ ಭಕ್ತಿ ಇರಿಸಿ  ನಡೆದಾಗ ಅವನಿಗೆ ತನ್ನ ಅಸಹಾಯಕ ಪರಿಸಿuತಿಯ ಅರಿವಾಗುತ್ತದೆ.

        ಇಂದು  ಸಮಾಜದಲ್ಲಿ, ಹಾಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಮೌಲ್ಯಗಳ ಅಧಪತನವನ್ನು ಕಾಣುತ್ತೇವೆ.  ನಮ್ಮ ಪೂರ್ವಜರು ಧರ್ಮ, ಧರ್ಮಗಳ ಮಧ್ಯೆ ಬೆಸೆದ ಬೆಸುಗೆ ಇಂದು ಸೀಳಿ ಹೋಗಿದೆ. ಭ್ರಷ್ಟಾಚಾರ ಸಮಾಜದಲ್ಲಿ ತಾಂಡವಾಡುತ್ತಿದೆ.  ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರದ ಪ್ರಕರಣಗಳು ಇಂದಿನ ದಿನನಿತ್ಯದ ಸುದ್ದಿಗಳಾಗಿವೆ.

        ಧಾರ್ಮಿಕ ತಳಹದಿಯ ಮೇಲೆ ಸಮಾಜ ಟೊಂಕ ಕಟ್ಟಿ ನಿಂತಾಗ ಮಾತ್ರ ಮಾನವನು ಈ ಅನಿಷ್ಠಗಳಿಂದ ಮುಕ್ತಿ ಹೊಂದಿ, ಧರ್ಮನಿಷ್ಠೆ, ಸಹಬಾಳ್ವೆಯ ಪ್ರತೀಕವಾಗಿ ಮೆರೆಯಲು ಸಾಧ್ಯ.  ನವನಿರ್ಮಾಣದ ಸಮಾಜದತ್ತ ನಾವೆಲ್ಲರೂ ಸಾಗಬೇಕಾದರೆ ನಾವು ಸುಮನಸ್ಕರಾಗಬೇಕು.  ಪರಸ್ಪರನ್ನು ಗೌರವ ಅಭಿಮಾನದಿಂದ ಕಾಣಬೇಕು.  ಶಾಂತಿಯ ಹರಿಕಾರರಾಗ ಬೇಕು.  ಯೇಸುಕ್ರಿಸ್ತರ ಜನನದ ಸಮಯದಲ್ಲಿ ದೇವದೂತರು ಹಾಡಿದ ಶಾಂತಿಯ ಗೀತೆಯ ಸಾಲುಗಳು ನಮ್ಮೆಲ್ಲರಿಗೆ  ಸ್ಪೂರ್ತಿ ನೀಡಲಿ. (ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ (ಲೂಕ 2: 14).


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
      • Copyright @ 2009 Udayavani.All rights reserved.
      • Designed & Hosted By 4cplus