Saturday, December 20, 2014
Last Updated: 4:44:46 PM IST
 • ನಾನೆಲ್ಲಿರುವೆ:
 • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಸ್ವಾಮಿ ವಿವೇಕಾನಂದರ ನೆನೆಯೋಣ

   • ಬಿ.ವಿಠಲ ರಾವ್‌

    ದೇಶದ ಉಜ್ವಲ ಭವಿಷ್ಯವು ಅಡಗಿರುವುದು ದೇಶದ ಯುವಜನಾಂಗದ ಸರ್ವತೋಮುಖ ಅಭಿವೃದ್ಧಿ ಮತ್ತು ಏಳ್ಗೆಯಲ್ಲಿ ಮಾತ್ರ. ಕರ್ನಾಟಕ ರಾಜ್ಯದ ಯುವಜನರ ಸಂಖ್ಯೆ 2.21 ಕೋಟಿ. 2020ರವೇಳೆಗೆ ರಾಜ್ಯದ ಅಭಿವೃದ್ಧಿಯ ಎಲ್ಲಾ ಆಯಾಮಗಳೂ ಬಹುಪಾಲು ಇಂದಿನ ಯುವಜನತೆ ಮತ್ತು ಭವಿಷ್ಯದ ಯುವಜನರನ್ನೇ ಅವಲಂಬಿಸಿದೆ.

    ಈ ಯುವಶಕ್ತಿಯ ಮೂಲಕ ಸಾಮಾಜಿಕ ನ್ಯಾಯ,ಲಿಂಗ ಸಮಾನತೆ, ಅಭಿವೃದ್ಧಿ ಮತ್ತು ಉದೋÂಗ ಕ್ಷೇತ್ರದಲ್ಲಿ ಎಲ್ಲರಿಗೂ ಸಮನಾವಕಾಶದ ಸದೃಢ ಹೊಸ ಸಮಜದ ನಿರ್ಮಾಣದ ಕಾರಣಕ್ಕಾಗಿ ರಾಜ್ಯ ಯುವನೀತಿ ರಚನೆಯಾಗಿದೆ. ಈ ಯುವನೀತಿ ಯುವಜನತೆಯಿಂದ, ಯುವಜನತೆಗಾಗಿ, ಯುವಜನತೆಗೋಸ್ಕರ ರೂಪುಗೊಂಡಿದೆ.ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆಯಾದ 2012ರಲ್ಲಿ ರಾಜ್ಯ ಯುವನೀತಿ ರಚನೆಯಾಗಿ ಸರಕಾರದಿಂದ ಅನುಮೋದನೆಗೊಂಡು ಯುವಜನ ಕ್ಷೇತ್ರದಲ್ಲಿ ಹೊಸತನ ಮೂಡಿದೆ.
    ಸ್ವಾಮಿ ವಿವೇಕಾನಂದರ ಜನ್ಮ ದಿನ 1863ರ ಜನವರಿ 12. ಅವರು ಜನ್ಮ ತಾಳಿ ಇಂದಿಗೆ 150 ವರ್ಷ ಪೂರ್ತಿ ಆಗಿದೆ. ರಾಮಕೃಷ್ಣ ಆಶ್ರಮದವರು 2012ರಿಂದ 2013ರವರೆಗೆ ಅವರ 150ನೇ ಜನ್ಮವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಿದೆ. ರಾಜ್ಯ ಸರಕಾರವು 150 ವರ್ಷ ಪೂರ್ತಿ ಆದ ಮೇಲೆ ಈ ವರ್ಷ ಆಚರಿಸುತ್ತಿದೆ.ವಿವೇಕಾನಂದರ ಜನ್ಮ ದಿನದಂದೇ ದೇಶಾದ್ಯಂತ ಯುವದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.ರಾಷ್ಟ್ರೀಯ ಯುವಜನೋತ್ಸವ ನಡೆಯುವುದಲ್ಲದೆ ಯುವಜನ ಕ್ಷೇತ್ರದ ಸಾಧಕರಿಗೆ ರಾಜ್ಯ ಹಾಗೂ ರಾಷ್ಟ್ರೀಯ ಯುವಪ್ರಶಸ್ತಿ ನೀಡಿ ಗೌರವಿಸಲಾಗುವುದು.

    ರಾಷ್ಟ್ರೀಯ ಯುವದಿನಾಚರಣೆಯ ಈ ಶುಭವೇಳೆ ಸ್ವಾಮಿ ವಿವೇಕಾನಂದರ ನುಡಿಮುತ್ತಗಳ ಕುರಿತು ಯುವಜನತೆ ಚಿಂತಿಸಿ ಕಾರ್ಯೋನ್ಮುಖರಾಗುವ ದಿಸೆಯಲ್ಲಿ ಅವರ ಚಿಂತನೆಯತ್ತ ಗಮನ ಹರಿಸೋಣ.

    ಭಾರತ ದೇಶದ ವೀರ ಸನ್ಯಾಸಿ, ಅದಮ್ಯ ಚೇತನ, ಯುವಜನತೆಯ ಮಾರ್ಗದರ್ಶಕ, ಅಪ್ರತಿಮ ಭಾಷಣಗಾರ ಸ್ವಾಮಿ ವಿವೇಕಾನಂದರು ಬದುಕಿದಷ್ಟು ಕಾಲ ಜಗದ ಹಿತಕ್ಕಾಗಿ ಬಾಳಿದವರು. ತಮ್ಮ ಅದ್ಭುತ ನುಡಿಮುತ್ತುಗಳಿಂದ ಜಗದ ಕತ್ತಲೆ ನೀಗಿಸಿ ಜ್ಞಾನವೆಂಬ ಬೆಳಕ ನೀಡಿದ ಮಹಾನ್‌ಪುರುಷ.

    * ಏಳಿ ಎದ್ದೇಳಿ, ಯುವಕರೇ , ಗುರಿ ಮುಟ್ಟುವ ತನಕ ನಿಲ್ಲದಿರಿ -ಎಂತಹ ಮಾರ್ಮಿಕವಾದ ನುಡಿಮುತ್ತು. ನಮ್ಮೆಲ್ಲರ ಗುರಿ ಆದರ್ಶವಾಗಿದ್ದು, ಪರಿಪೂರ್ಣ ಬದುಕು, ಯಶಸ್ಸಿನತ್ತ ನಮ್ಮ ನಡೆ-ನುಡಿ ಇರಬೇಕು. ಗುರಿ ಆದರ್ಶವಾಗಿದ್ದರೆ ಮಾತ್ರ ಉಶಸ್ಸು -ಸಮೃದ್ಧಿ ಸಾಧ್ಯ. ಯುವಜನತೆಯನ್ನು ಹುರಿದುಂಬಿಸುವ ನುಡಿಮುತ್ತುಗಳಿಂದ ಯುವಕರು ಸದಾ ಜಾಗೃತರಾಗಲು ಸಾಧ್ಯ. ಇಂತಹ ಸಾಧನೆ ಕೇವಲ ಯುವಜನರಿಂದ ಮಾತ್ರ ಸಾಧ್ಯ ಅನ್ನುವುದು ವಿವೇಕಾನಂದರ ತತ್ವ.

    * ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ.

    ಮನಷ್ಯನ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣವೇ ಅಡಿಗಲ್ಲು. ದೇಶಸುತ್ತು-ಕೋಶ ಓದು ಎಂಬ ಮಾತಿನಂತೆ ಕೇವಲ ಪುಸ್ತಕ ಜ್ಞಾನ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗದು. ಪುಸ್ತಕ ಜ್ಞಾನದ ಜತೆಗೆ ಪ್ರಾಯೋಗಿಕವಾದ ಜೀವನಾನುಭಾವೂ ಅಗತ್ಯ. ನಮಗೆ ಇಂದು ಡಿಗ್ರ ಕಲಿತು, ಉದೋÂಗ ಪ್ರಾಪ್ತಿಯಾಗುವ ಶಿಕ್ಷಣ ಮುಖ್ಯವಲ್ಲ. ಮನುಕುಲವನ್ನು ಪ್ರೀತಿಸುವ, ಸರ್ವಧರ್ಮ ಸಮಭಾವ ದೋರಣೆಯಿಂದ ಮಾನವೀಯತೆ , ಪರೋಪಕಾರ, ಸಹಿಷ್ಣುತೆಗಳುಳ್ಳ ಮಾನವತಾವಾದಿಯಾಗಿರುವ ಬದುಕುವ ವಿದ್ಯೆಯೂ ಜೀವನಗತಿಗೆ ಅಗತ್ಯ.

    ವಿವೇಕವಾಣಿ ನುಡಿಯುತ್ತಿದೆ- ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ. ಪರಿಪೂರ್ಣ ಬದುಕು ನಮ್ಮದಾಗಬೇಕು. ನಾವೆಲ್ಲರೂ ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದು ಮುಖ್ಯವಲ್ಲ. ಬದುಕಿದಷ್ಟು ವರ್ಷ ಹೇಗೆ ಬದುಕಿ¨ದೇವೆ ಎಂಬುದು ಮುಖ್ಯ. ಮಹಾತ್ಮರು ಇಂದು ಸತ್ತು ಹುತಾತ್ಮರಾಗಿದ್ದರೂ ಅವರ ಸಾರ್ಥಕ ಬದುಕು, ಆದರ್ಶ,ಸಾಧನೆಗಳಿಂದ ಇಂದಿಗೂ ಜೀವಂತರಾಗಿದ್ದಾರೆ. ನಮ್ಮೆಲ್ಲರ ಬದುಕು ಜೀವಂತವಾಗಿದ್ದರೂ ಸತ್ತಂತೆ ಆಗಬಾರದಲ್ಲವೇ?

    *ದೋಷವನ್ನು ಹುಡುಕುವುದು ಸುಲಭ. ಆದರೆ ಅದನ್ನು ಸರಿಪಡಿಸುವುದು ಕಠಿನ.

    ಈ ನುಡಿಯೊಳಗೆ ಹೋದಾಗ ಪ್ರತಿಯೊಬ್ಬರೂ ಆತ್ಮವಲೋಕನ ಮಾಡಿ ಆತೋ¾ತ್ನತಿ ಮಾಡಿಕೊಳ್ಳಬೇಕು ಎಂದು ತಿಳಿಯುತ್ತದೆ. ಮತ್ತೂಬ್ಬರಲ್ಲಿ ದೋಷವನ್ನು ಹುಡುಕುವ ಮೊದಲು ನಮ್ಮಲ್ಲಿರುವ ದೋಷಗಳನ್ನು ಅರಿತು ತಿದ್ದಿಕೊಳ್ಳೋಣ. ಸಾರ್ಥಕ ಬದುಕು ಸಾಗಿಸೋಣ. ಕಲ್ಮಶರಹಿತ ಆತ್ಮವಿಶ್ವಾಸದ ಬದುಕು ಅಪ್ಪಟ ಚಿನ್ನದಂತೆ. ಮತ್ತೂಬ್ಬರನ್ನು ಸರಿ ಮಾಡುವ ಬದಲು, ಮೊತ್ತಬ್ಬರಿಗೆ ಉಫದೇಶ ಮಾಡುವ ಮೊದಲು ನಮ್ಮನ್ನು ನಾವು ಸರಿಮಾಡಿಕೊಳ್ಳೋಣ. ನಮಗೆ ನಾವೇ ಆತೊ¾àಪದೇಶ ನೀಡಿ ತಿದ್ದಿಕೊಳ್ಳುವಂತಾದಾಗ ಆದರ್ಶ ಪುರುಷರ ಹಾದಿಯಲ್ಲಿ ನಾವೂ ನಡೆಯಲು ಸಾಧ್ಯ.

    * ಎಲ್ಲರನ್ನೂ ಪ್ರೀತಿಸು. ಆಗ ಜಗತ್ತೇ ನಿನ್ನನ್ನು ಪ್ರೀತಿಸುತ್ತದೆ.

    ಈ ಜಗತ್ನಿಲ್ಲಿರುವ ಎಲ್ಲಾ ಜೀವಿಗಳೂ ಭೂಮಿ ತಾಯಿಯ ಮಕ್ಕಳು. ನಾನು-ನೀನು ಎಂಬ ಬೇಧಭಾವ ಸಲ್ಲದು. ಜಗತ್ತಿನಲ್ಲಿ ಹುಟ್ಟಿದ ಪ್ರಾಣಿ-ಮನುಷ್ಯರೆಲ್ಲರೂ ಒಂದೇ ತಾಯಿಯ ಮಕ್ಕಳು. ವಸುಧೈವ ಕುಟುಂಬಕಂ ಎಂಬಂತೆ ವಿಶ್ವ ಕಟುಂಬ ನಮ್ಮದು. ನಮ್ಮವರನ್ನು ಪ್ರೀತಿಸುವ ಹಾಗೆ ಎಲ್ಲರನ್ನೂ ಪ್ರೀತಿಸುವಬೇಕು. ಆ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲಬೇಕು.

    ಮೊದಲು ಮಾನವನಾಗು ಎಂಬ ಕವಿ ನುಡಿಯಂತೆ. ನಾವೆಲ್ಲರೂ ವಿಶ್ವಮಾನವರಾಗಬೇಕು. ಆಗ ಮಾತ್ರ ನಾವಿರುವ ಜಗತ್ತಿನಲ್ಲಿ ವಿಶ್ವಶಾಂತಿ, ವಿಶ್ವ ಸಮೃದ್ಧಿ ಸಾಧ್ಯ. ಸ್ವಾರ್ಥ ಶಾಂತಿ, ಸಮೃದ್ಧಿ ಎಂಬ ವಿಷದ ಕೋಟೆಯಿಂದ ಹೊರಬಂದು ಎಲ್ಲರಿಗೂ ಒಳಿತಾಗಲಿ , ಶುಭವಾಗಲಿ ಎಂಬ ಉದಾತ್ತಮನೋಭಾವ ಬೆಳೆಸಿ-ರೂಢಿಸಿಕೊಂಡಾಗ ಜಗತ್ತೇ ನಮ್ಮನ್ನು ಪ್ರೀತಿಸುತ್ತದೆ. ದ್ವೇಷವು ಸಂಬಂಧವನ್ನು ಕಡಿದರೆ, ಪ್ರೀತಿಯು ಸಂಬಂಧವನ್ನು ಬೆಸೆಯುತ್ತದೆ. ಆ ಪ್ರೀತಿ ಕಲ್ಮಶರಹಿತವಾಗಿದ್ದು, ಯಾವುದೇ ಪ್ರತಿಫಲವನ್ನು ನಿರೀಕ್ಷಿಸಬಾರದು.

    * ಏಳಿರಿ, ಕಾರ್ಯೋನ್ಮುಖರಾಗಿರಿ, ಈ ಬದುಕಾದರೂ ಎಷ್ಟು ದಿನ, ಮಾನವರಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಿ.

    ಯುವಜನತೆ ನಿಂತ ನೀರಾಗಬಾರದು. ಅದು ಹರಿಯುವ ನೀರಿನಂತೆ ನಿರಂತರ ಚಲನಶೀಲಬಾಗಿರಬೇಕು. ಹುಟ್ಟು-ಸಾವು ಎಂಬ ಪದಗಳ ನಡುವಿನ ಬದುಕು ವ್ಯರ್ಥವಾಗಬಾರದು.ಎಲ್ಲಾ ಜೀವಿಗಳಿಗೂ ಮಾನವ ಜನ್ಮ ಲಭ್ಯವಾಗುವುದಿಲ್ಲ. ಮಾನವನ ಬದುಕು ಇತರಿಗಾಗಿ ಪರೋಪಕಾರಕ್ಕಾಗಿ ಮೀಸಲಾಗಿರಲಿ. ನಿರ್ಧರಿತ ಯೋಜನೆಗಳ ಮೂಲಕ ಸಮಾಜ ವಿಕಾಸದತ್ತ ನಮ್ಮ ಗುರಿ ಇರಲಿ.

    ಮನದೊಳಗಿನ ಪುಸ್ತಕ ತೆರೆಯದ ಹೊರತು, ಎಷ್ಟು ಪುಸ್ತಕ ಓದಿದರೂ ವ್ಯರ್ಥವೇ.

    ಜ್ಞಾನದಾಹಿಯ ಅರಮನೆಯೇ ಪುಸ್ತಕ. ನೈತಿಕ ಮೌಲ್ಯ ಹೆಚ್ಚಿಸುವ ಪುಸ್ತಕಗಳನ್ನು ಓದಿ ಉತ್ತಮ ಅಂಶಗಳನ್ನು ನಮ್ಮ ಮಸ್ತಕದೊಳಗೆ ಸೇರಿಸಬೇಕು. ಕೇವಲ ಬಹಿರ್ಮುಖ ಓದು ಸಾಲದು. ಇದು ಅಂತರ್ಮುಖ ಆಗಿರಬೇಕು. ಆಗ ಮಾತ್ರ ಜ್ಞಾನ ವಿಕಾಸವಾಗುವುದು. ಮರ್ಕಟ ಮನಸ್ಸುಗಳಿಗೆ ಬ್ರೇಕ್‌ ಹಾಕಿ , ಸಇಥರವಾಗಿ ನಿಂತು, ಒಳಸೇರಿದ ಜ್ಞಾನಪ್ರವಾಹಗಳನ್ನೆಲ್ಲಾ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ಪುಸ್ತಕಗಳ ವಾಚನ, ಗ್ರಹಣ, ಮನನ ನಮ್ಮದಾಗಬೇಕು.

    ಮಹಾಕಾರ್ಯಗಳನ್ನು ಮಹಾತ್ಯಾಗದಿಂದ ಮಾತ್ರ ಸಾಧಿಸಲು ಸಾಧ್ಯ. ಅನ್ಯಾಯದ ಸ್ಥಾನವು ಅಭದ್ರವಾದುದು. ಅದರಿಂದ ಏಳಿಗೆ ಆಗದು.
    ಸಾಧನೆ, ಮಹತ್ಕಾರ್ಯಗಳ ಹಿಂದೆ ಮಹಾತ್ಯಾಗ ಅಡಗಿರುತ್ತದೆ. ಹಗಲನ್ನು ಕಾಣಲು ರಾತ್ರಿಯನ್ನು ತ್ಯಜಿಸಬೇಕು. ರಾತ್ರಿಯನ್ನು ಕಾಣಲು ಹಗಲನ್ನು ತ್ಯಜಿಸಬೇಕು. ಎರಡನ್ನು ಒಟ್ಟಿಗೆ ಕಾಣಲು ಅಸಾಧ್ಯ. ಇದು ಪ್ರಕೃತಿ ನಿಯಮ. ಇದನ್ನು ಮೀರಿ ನಮ್ಮ ಬದುಕು ಸಾಗಲಾರದು. ಅನ್ಯಾಯದ ಸ್ಥಾನವು ಅಭದ್ರ. ಅನ್ಯಾಯದ ಬದುಕು ಶಾ ಶ್ವತವಲ್ಲ. ಅದು ಕ್ಷಣಿಕ. ಅದರಿಂದ ಅಂತಿಮವಾಗಿ ನಾಶವೇ ಹೊರತು ಏಳಿಗೆಯಲ್ಲ.ಮಹಾನ್‌ಸಂತರ, ಮಹಾತ್ಮರ ಜೀವನದಲ್ಲಿ ಮಹತ್ಕಾರ್ಯ, ಸಾಧನೆಗಳ ಹಿಂದೆ ಅವರ ಮಹಾನ್‌ ತ್ಯಾಗ ಅಡಗಿದೆ.
    ವಿವೇಕಾನಂದರ ನುಡಿಮುತ್ತಗಳು ನಮ್ಮ ಬದುಕಿಗೆ ಸ್ಪೂರ್ತಿವಾಣಿಗಳಾಗಿವೆ. ವ್ಯಕ್ತಿತ್ವವನ್ನು ಪೂರ್ಣತೆಯತ್ತ ಕೊಂಡೊಯ್ಯುವ ಅದಮ್ಯ ಶಕ್ತಿ ಅದಕ್ಕಿವೆ. ಇದು ಅಮೃತದ ಮಡು;ಮಿಂದರೆ ಪುನೀತರಾಗುತ್ತೇವೆ. ಇದು ಜೋÂತಿಯ ಖನಿ; ಹೊಕ್ಕರೆ ಪ್ರಬುದ್ಧರಾಗುತ್ತೇವೆ.

    ರಾಜ್ಯ ಯುವನೀತಿಯಲ್ಲಿ ಅಡಕವಾಗಿರುವಂತೆ ಕೇವಲ 15 ವರ್ಷದಿಂದ 30 ವರ್ಷದೊಳಗಿನವರು ಮಾತ್ರ ಯುವಕರು. ಹಿರಿಯರು ಅವರಿಗೆ ಮಾರ್ಗದರ್ಶಕರಾಗಿ ತೆರೆಯಲ್ಲಿ, ನೇಪ¥Âದಲ್ಲಿ ನಿಲ್ಲಬೇಕು. ಯುವದಿನಾಚರಣೆಯ ನಿಮಿತ್ತ ನಡೆಸುವ ಕಾರ್ಯಕ್ರಮಗಳು ಯುವಕರಿಂದಲೇ ರೂಪಿತವಾದರೆ ಚೆ°ನ್ನ.

    ಯುವಜನತೆಯ ಪ್ರತಿಭಾ ನಿರ್ವಹಣೆ, ಕೌಶಲ್ಯ, ಆರೋಗ್ಯ, ಕಲೆ, ಸಂಸ್ಕೃತಿ, ರಚನಾತ್ಮಕತೆ, ಕ್ರೀಡೆ ಮತ್ತು ಸಾಹಸ ಕ್ರೀಡೆ, ಸಾಮಾಜಿಕ ಬದಲಾವಣೆ ಮತ್ತು ಸುಧಾರಣೆ, ಸ್ವಯಂಸೇವೆ, ಹಸಿವು ಮತ್ತು ಬಡತನ, ಬಾಲ ಅಪರಾಧ ತಡೆ, ಮಾದಕ ದ್ರವ್ಯ ಸೇವನೆ, ಅಂತರ ಪೀಳಿಗೆ ವಿಷಯ, ಬಾಲಕಿ ಮತ್ತು ಯುವತಿಯರ ಉತ್ಕರ್ಷ, ಜಾಗತೀಕರಣ, ವಿಜ್ಞಾನ-ತಂತ್ರಜ್ಞಾನ,ಉದೋÂಗಸಾಮರ್ಥ್ಯ,ಏಡ್ಸ್‌ ಮತ್ತು ನಿಯಂತ್ರಣ, ಸಾಮಾಜಿಕ ಒಳಗೊಳ್ಳವಿಕೆ, ಪರಿಸರ, ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆ ಮೊದಲಾದ ಪ್ರಧಾನ ಅಂಶಗಳು ಯುವನೀತಿಯಲ್ಲಿ ಅಡಕವಾಗಿವೆ.

    2013ರ ವರ್ಷವಿಡೀ ಆಚರಿಸುವ ಯುವವರ್ಷಾಚರಣೆ ರಚನಾತ್ಮಕವಾಗಿ ಸಾಗಿ ಯುವಜನತೆಯ ನೈಜ ಸಂಪತ್ತು ಬೆಳಕಿಗೆ ಬಾರದಿರಲಿ. ರಾಜಕೀಯದ ಸೋಂಕು ತಗಲದಿÃಲಿ.ಸ್ವಜನಪ#ಕ್ಷಪಾತ ತೊಲಗಲಿ. ನೈಜ ಪ್ರತಿಭೆಗಳಿಗೆ ಮಾತ್ರ ವೇದಿಕೆ ಒದಗುವಂತಾಗಲಿ ಎಂಬ ಆಶಯ ಯುವಜನತೆಯದ್ದು.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus