Saturday, September 20, 2014
Last Updated: 9:04:41 PM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ವಿಡಿಯೋ ಗ್ಯಾಲರಿ
  • ಉದಯವಾಣಿ
  • ವೆ ಬ್
  • ಹುಡುಕಿ
    • ಚರಂಡಿ ಕುಸಿಯುತ್ತಿದೆ, ಎಚ್ಚರ !

      • ಜನಹಿತ ಚಿಂತಕ

        ಬೆಳ್ಳಾರೆ   ಬಸ್ಸು ನಿಲ್ದಾಣದ ಎದುರಿನ  ಸ್ಲಾಬ್‌ ಕುಸಿಯುತ್ತಿದೆ. ಇದರಿಂದ ಬಸ್ಸು ನಿಲ್ದಾಣದ ಒಳಗೆ ಪ್ರವೇಶ ಮಾಡುವಾಗ ಮತ್ತು ಬಸ್ಸು ನಿಲ್ದಾಣದಿಂದ ಹೊರಗೆ ಹೋಗುವಾಗ ಬಸ್ಸಿನ ಚಕ್ರ ಚರಂಡಿಯ ಒಳಗೆ ಹೂತು ಹೋಗಿ ಪ್ರಯಾಣಿಕರಿಗೆ ಅಪಾಯ ಸಂಭವಿಸಬಹುದು.

         ಬೆಳ್ಳಾರೆ ಪುತ್ತೂರು ಮತ್ತು ಸುಳ್ಯ ತಾಲೂಕಿನ ಸಂಪರ್ಕದ ಕೊಂಡಿಯಾಗಿದೆ. ಬೆಳ್ಳಾರೆ ಪೇಟೆಯಿಂದ  ನಾಲ್ಕು ಕಡೆ ಪುತ್ತೂರು ತಾಲೂಕನ್ನು ಸಂಪರ್ಕಿಸಬಹುದು. ಬೆಳ್ಳಾರೆ ವಾಣಿಜ್ಯ ಕೇಂದ್ರವಾಗಿ ಶೈಕ್ಷಣಿಕವಾಗಿ ಬೆಳೆಯುತ್ತಿದ್ದು ಬೆಳ್ಳಾರೆಗೆ ದಿನೆ ದಿನೇ ಭೇಟಿ ಕೊಡುವವರ   ಸಂಖ್ಯೆ ಜಾಸ್ತಿಯಾಗುತ್ತಿದೆ.

        ಪೆರುವಾಜೆಯಲ್ಲಿ ಸರಕಾರಿ ಪದವಿ ಕಾಲೇಜು,ಬೆಳ್ಳಾರೆಯಲ್ಲಿ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಸರಕಾರಿ ಪ್ರಾಥಮಿಕ ಶಾಲೆಗಳು ಇದಲ್ಲದೆ ಪರಿಸರದಲ್ಲಿ ಖಾಸಗಿ ವಿದ್ಯಾಸಂಸ್ಥೆಗಳಿವೆ. ಈ ಬಸ್ಸು ನಿಲ್ದಾಣ ಬೆಳ್ಳಾರೆ ಗ್ರಾಮ ಪಂಚಾಯತ್‌ಗೆ ಸೇರಿದ್ದಾಗಿದೆ.ಚರಂಡಿ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದೆ.

        ಇಲಾಖೆ ಈ ಚರಂಡಿಯನ್ನು ದುರಸ್ತಿಗೊಳಿಸದೆ ನಿರ್ಲಕ್ಷ್ಯ ದೋರಣೆ ತಾಳಿದೆ. ಜನಪ್ರತಿನಿಧಿಗಳು ಇಲಾಖೆಯ ಮೇಲೆ ಒತ್ತಡ ತಂದು ಚರಂಡಿ ದುರಸ್ತಿಗೊಳಿಸುವಂತೆ ಹೇಳುವ ಕೆಲಸವನ್ನು ಮಾಡುತ್ತಿಲ್ಲ.ಇದಕ್ಕೆಲ್ಲ ಜನರು ಮುಂದಿನ ಚುನಾವಣೆಯ ಸಮಯದಲ್ಲಿ  ಜನಪ್ರತಿನಿಧಿಗಳಿಗೆ ತಕ್ಕ ಪಾಠ  ಕಲಿಸಲು ಕಾಯುತ್ತಿದ್ದಾರೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
      • Copyright @ 2009 Udayavani.All rights reserved.
      • Designed & Hosted By 4cplus