ಕಾರ್ಯಪ್ಪ ಗೌಡ
ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಅಲ್ಪ ಸ್ವಲ್ಪ ವೆನಿಲ್ಲಾ ಕೃಷಿ ಈಗ ಉಳಿದುಕೊಂಡಿದ್ದರೂ ಅದಕ್ಕೆ ಈಗ ಮಾರುಕಟ್ಟೆ ಸಮಸ್ಯೆ ಎದುರಾಗಿದೆ.
ಸುಮಾರು ಏಳು ವರ್ಷದ ಹಿಂದೆ ವೆನಿಲ್ಲಾದ ಹಸಿ ಕೋಡ್‌ಗೆ ಕ್ವಿಂಟಾಲ್ ಒಂದಕ್ಕೆ ರೂಪಾಯಿ 3,000ದಿಂದ 4,000ದ ಗಡಿ ದಾಟಿತ್ತು. ಈ ಸಂದರ್ಭದಲ್ಲಿ ಹೆಚ್ಚಿನ ರೈತರು ತಮ್ಮ ತೋಟಗಳಲ್ಲಿರುವ ಅಡಿಕೆ ಮರ ಸೇರಿದಂತೆ ಇತರ ಮರಗಳಿಗೆ ವೆನಿಲ್ಲಾ ಬಳ್ಳಿಯನ್ನು ಹಬ್ಬಿಸಿ ಹಿಗ್ಗಾ ಮುಗ್ಗಾ ವೆನಿಲ್ಲಾ ಕೃಷಿ ಮಾಡಿದ್ದರು.
ವೆನಿಲ್ಲಾ ಬಳ್ಳಿಯನ್ನು ಮೀಟರ್ ಒಂದಕ್ಕೆ 100 ರೂಪಾಯಿಂದ 200 ರೂಪಾಯಿಗೆ ಖರೀದಿಸಿಕೊಂಡು ಹೋಗಿ ಕೃಷಿ ಮಾಡಿದ ಅನೇಕ ರೈತರು ನಮ್ಮ ಮುಂದೆ ಇ¨ªಾರೆ. ಈ ಬಳ್ಳಿ ಮಾರಾಟ ಮಾಡಲು, ವೆನಿಲ್ಲಾ ಖರೀದಿಸಲು ಅನೇಕ ದÇÉಾಳಿಗಳು ನಮ್ಮ ಹಳ್ಳಿಯ ಮೂಲೆ ಮೂಲೆಯಲ್ಲೂ ಕಾಣ ಸಿಗುತ್ತಿದ್ದರು. ಕೆಲವ ರಂತೂ ಈ ಸಮಯದಲ್ಲಿ ವೆನಿÇÉಾಕ್ಕೆ ಬಂದ ಬಂಗಾರದ ಬೆಲೆಯಿಂದ ಸಾಕಷ್ಟು ಆದಾಯ ಗಳಿಸಿದಿ¨ªಾರೆ.
6 ವರ್ಷಗಳ ಹಿಂದೆ ವೆನಿಲ್ಲಾದ ಬೆಲೆ ಹಠಾತ್ ಕೆಳಗಿಯಿತು. ವೆನಿಲ್ಲಾ ಬೀನ್ಸ್ ಕೆ.ಜಿ.ಯೊಂದರ ಬೆಲೆ ಕೇವಲ ರೂಪಾಯಿ 15ಕ್ಕೆ ಇಳಿಯಿತು. ಕೆಲವು ದಿನಗಳ ಅನಂತರ ವೆನಿಲ್ಲಾ ಖರೀದಿಸುವವರೇ ಇಲ್ಲವಾದರು. ಕ್ವಿಂಟಾಲ್, ಕ್ವಿಂಟಾಲ್ ವೆನಿಲ್ಲಾ ಕೋಡ್‌ಗಳು ಕೊಳೆತು ಹೋದವು.
ಕಷ್ಟ ಪಟ್ಟು ವೆನಿಲ್ಲಾ ಬೆಳೆಸಿದ ರೈತರಿಗೆ ಇದು ಸಾಕಷ್ಟು ನಷ್ಟ ಉಂಟು ಮಾಡಿತ್ತು. ಈ ಚಿಂತೆಯಿಂದ ರೈತರು ತಾವು ಕೃಷಿ ಮಾಡಿದ ವೆನಿಲ್ಲಾ ಗಿಡಗಳನ್ನು ಕಡಿದು ಅಡಿಕೆ ಮರದ ಬುಡಕ್ಕೆ ಹಾಕಿದ್ದರು. ಕೆಲವು ಸೀಮಿತ ರೈತರ ತೋಟಗಳಲ್ಲಿ ಮಾತ್ರ ಒಂದಷ್ಟು ವೆನಿಲ್ಲಾ ಬಳ್ಳಿಯನ್ನು ಈಗ ಕಾಣಾಬಹುದು. ಅವರು ಕೂಡಾ ವೆನಿಲ್ಲಾಕ್ಕೆ ಬೇಡಿಕೆಯಿಲ್ಲದ ಕಾರಣ ವೆನಿಲ್ಲಾ ಕೃಷಿಯನ್ನು ಆರೈಕೆ ಮಾಡುತ್ತಿಲ್ಲ.
ರೈತವರ್ಗದವರಲ್ಲಿ ವೆನಿಲ್ಲಾ ಬೆಳೆಯನ್ನು ಮತ್ತೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ವೆನಿಲ್ಲಾಕ್ಕೆ ಬೇಡಿಕೆ ಬರಹುದೇ? ಇಲ್ಲವೇ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವೆನಿಲ್ಲಾ ಕೋಡ್‌ಗಳು ಕೆಲವು ರೈತ ವರ್ಗದವರಲ್ಲಿ ಇದ್ದರೂ ಪೂರಕ ಮಾರುಕಟ್ಟೆಯ ಸಮಸ್ಯೆ ಎದುರಾಗಿವೆ.
ರೈತರಿಗೆ ಸರಿಯಾದ ಮಾಹಿತಿಯ ಕೊರತೆಯೂ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ವೆನಿಲ್ಲಾ ಮಾರುಕಟ್ಟೆ ಧಾರಣೆಯ ಸ್ಥಿರತೆಯ ಬಗ್ಗೆ ರೈತರಿಗೆ ಇನ್ನೂ ನಂಬಿಕೆ ಬಂದಿಲ್ಲ ಎಂದು ರೈತರು ಹೇಳುತ್ತಾರೆ.
ನಾನು ಏಳೆಂಟು ವರ್ಷದ ಹಿಂದೆ 15 ಎಕರೆ ಜಾಗದಲ್ಲಿ ವೆನಿಲ್ಲಾ ಕೃಷಿ ಮಾಡಿ¨ªೆ. ಈ ಸಂದರ್ಭದಲ್ಲಿ ನನ್ನ ಜತೆ ವೆನಿಲ್ಲಾದ ಹಸಿ ಕೋಡನ್ನು ಕೆ.ಜಿ.ಯೊಂದಕ್ಕೆ 3,800 ರೂ.ನಿಂದ 4,000 ತನಕ ಕೇಳಿದರೂ ನಾನು ಕೊಟ್ಟಿಲ್ಲ. ಈ ಸಂದರ್ಭದಲ್ಲಿ ಕೇವಲ ಬಳ್ಳಿಗೆ ಬಹಳ ಬೇಡಿಕೆ ಇತ್ತು ಕೇವಲ ಬಳ್ಳಿ ಮಾರಾಟ ಮಾಡಿದರೂ ಒಂದು ಕೋಟಿ ರೂ. ಲಾಭ ಬರುತ್ತಿತ್ತು.ಆದರೆ ನನಗೆ ತುಂಬಾ ಲಾಭ ನಷ್ಟವಾಗದಂತೆ ಸರಿದೂಗಿಸಿಕೊಂಡು ಹೋಗಿದ್ದೇನೆ.
ಈಗ ವೆನಿಲ್ಲಾ ಕ್ಕೆ ದ. ಕ. ಮಾರುಕಟ್ಟೆ ಇಲ್ಲ. ಇದರಿಂದ ನಾನು ವೆನಿಲ್ಲಾ ಬಳ್ಳಿಯನ್ನು ಸಂಪೂರ್ಣ ಕಡಿದು ತೆಗೆದಿದ್ದೇನೆ. ವೆನಿಲ್ಲಾ ಕೃಷಿ ಮಾಡುವುದು ಕಷ್ಟ. ಬೆಳಗ್ಗೆ 4 ಗಂಟೆಗೆ ಎದ್ದು ಪರಾಗ ಸ್ಪರ್ಶ ಕ್ರಿಯೆ ಮಾಡಬೇಕಾಗುತ್ತದೆ. ಕೃಷಿ ಕಾರ್ಮಿಕರ ಸಮಸ್ಯೆ ಇದೆ.
ಏನೆಕಲ್ಲಿನ ಪ್ರಗತಿಪರ ಕೃಷಿಕ ಹಾಗೂ
ದ.ಕ.ವೆನಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಕಾರ್ಯಪ್ಪ ಗೌಡ