Monday, December 22, 2014
Last Updated: 10:19:27 AM IST
 • ನಾನೆಲ್ಲಿರುವೆ:
 • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಅರಾಟೆ ಹೆದ್ದಾರಿ ಸೇತುವೆ ಪ್ರಾಣಕ್ಕೆ ಸಂಚಕಾರ

   • ಜನಹಿತ ಚಿಂತಕ

    ಕುಂದಾಪುರ- ಬೈಂದೂರು- ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಪೇವರ್‌ ಫಿನಿಶಿಂಗ್‌ ಡಾಮರೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಇಲ್ಲಿನ ತಲ್ಲೂರು-ಹೆಮ್ಮಾಡಿ ಹೆದ್ದಾರಿ ದುರಸ್ತಿ ನಡೆದಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೆಮ್ಮಾಡಿ ಸಮೀಪ ಅರಾಟೆ ರಾಷ್ಟ್ರೀಯ ಹೆದ್ದಾರಿ ಸೇತುವೆಯ ದುರವಸ್ಥೆ ಕೊನೆಗಾಣದಾಗಿದೆ. ನಿತ್ಯಸಂಚರಿಸುವ ಪ್ರಯಾಣಿಕರ ಬವಣೆ ಮಿತಿಮೀರಿದ್ದು, ತೀವ್ರ ಅಸಮಾಧಾನ ಭುಗಿಲೆದ್ದಿದೆ.

    ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತಲ್ಲೂರು-ರಾಜಾಡಿ ಸೇತು ವೆಗೆ 8 ಲಕ್ಷ ರೂ. ವೆಚ್ಚದಲ್ಲಿ ಮಾಸ್ಟಿಕ್‌ ಲೇಪನ ಕಾಮಗಾರಿ ಇತ್ತೀಚೆಗೆ ನಡೆದಿರುವುದು ಹೊರತುಪಡಿಸಿದರೆ, ಇತರ ಸೇತುವೆಗಳ ಮೇಲಿನ ಮ್ಯಾಸ್ಟಿಕ್‌ ಲೇಪನ ಸಂಪೂರ್ಣವಾಗಿ ಕಿತ್ತೆದ್ದುಹೋಗಿದ್ದು, ಹೆದ್ದಾರಿ ಸೇತುವೆ ಸಂಚಾರ ಅತ್ಯಂತ ದುಸ್ತರವಾಗಿದೆ.

    ಅರಾಟೆ ಹೆದ್ದಾರಿ ಸೇತುವೆಯಲ್ಲಿನ ಮ್ಯಾಸ್ಟಿಕ್‌ ಲೇಪನ ಸಂಪೂರ್ಣವಾಗಿ ಕಿತ್ತುಹೋಗಿದ್ದು, ನೋಡಿದವರಿಗೆ ಇಲ್ಲಿನ ಹೆದ್ದಾರಿ  ಮಾಯವಾಗಿ ಕಂಬಳಗದ್ದೆಯೇನಾದರೂ ಸೃಷ್ಟಿಯಾದೆಯೇ ಎಂಬ ಅನುಮಾನವನ್ನು ಮೂಡಿಸುವಂತಿದೆ. ಸೇತುವೆ ಮೇಲಿನ ಸ್ಥಿತಿ-ಗತಿ ಎಷ್ಟರ ಮಟ್ಟಿಗೆ ಕರಾಬ್‌ ಆಗಿದೆ ಎಂದರೆ ದ್ವಿಚಕ್ರ, ತ್ರಿಚಕ್ರ ಸವಾರರು ಹಾಗೂ ಪ್ರಯಾಣಿಕರು ಇಲ್ಲಿನ ಸೇತುವೆ ಮೇಲೆ ಸಂಚರಿಸಲು ಭಯಪಡುವಂತಾಗಿದೆ.


    ತಾ| ಪ್ರಮುಖ ಸೇತುವೆಗಳ ದುಃಸ್ಥಿತಿಯನ್ನು ಸರಿ ಪಡಿಸಲು ಅಧಿಕಾರಿಗಳು ಮುಂದಾ ಗದಿರುವುದರಿಂದ ಈ ಭಾಗದ ಅಪಾರ ಸಂಖ್ಯೆಯ ವಾಹನ ಸವಾರರು ಹಾಗೂ ನಿತ್ಯಪ್ರಯಾಣಿಕರ ಗೋಳು ಹೆಚ್ಚಿದೆ. ವಾಹನದಟ್ಟಣೆ, ಅತಿವೃಷ್ಟಿ ಮೊದ ಲಾದ ಕಾರಣಗಳಿಂದಾಗಿ ಸಾಕಷ್ಟು ಹದಗೆಟ್ಟುಹೋಗಿದ್ದ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತೀರಾ ತಡವಾಗಿಯಾ ದರೂ ಡಾಮರೀಕರಣ ಕಾಮಗಾರಿ ನಡೆ ದುದರಿಂದ ನಿತ್ಯಸಂಚಾರಿಗಳು ಹಾಗೂ ವಾಹನಸವಾರರು ಕೊಂಚ ನೆಮ್ಮ ದಿಯ ನಿಟ್ಟುಸಿರು ಬಿಡುವಂತಾಗಿದ್ದರೆ ಹೆದ್ದಾರಿ ಸೇತುವೆಗಳ ದುಃಸ್ಥಿತಿಗೆ ಪರಿಹಾರ ಒದಗಿಸಲು ಇಲಾಖೆ ಮುಂದಾಗದಿರುವುದರಿಂದ ಸಂಚಾರಿಗಳ ಗೋಳು ಹೆಚ್ಚುತ್ತಲೇ ಇದೆ.

                 
    ಸಂಚಾರ ಭೀತಿದಾಯಕ

    ಕಳೆದ ಮಳೆಗಾಲದಲ್ಲಿ ತೀರಾ ಹದಗೆಟ್ಟಿದ್ದ ಅರಾಟೆ ಸೇತುವೆಗೆ ಈ ಹಿಂದೆ ಹಾಕಲಾಗಿದ್ದ ಮ್ಯಾಸ್ಟಿಕ್‌ ಲೇಪನವನ್ನು ಕಿತ್ತು ತೆಗೆಯುವ ಕಾಮಗಾರಿಯನ್ನು ಸಮರ್ಪಕವಾಗಿ ನಡೆಸದಿದ್ದುದರಿಂದ ಇಲ್ಲಿ ಅನುದಿನವೂ ಅಪಾಯದ ಭೀತಿ ಕಾಡುತ್ತಿದೆ. ಸೇತುವೆಯುದ್ದಕ್ಕೂ ಮಾರ್ಗವು ತೋಡಿನಂತಾಗಿದ್ದು, ವಾಹನಗಳು ಸಾಗುವಾಗ ಒತ್ತಡ ಹೆಚ್ಚುವುದರಿಂದ ಸೇತುವೆ ಎಂದಿಗಿಂತ ಹೆಚ್ಚು ಅಲುಗಾಡುತ್ತಲಿದೆ. ಸೇತುವೆ ಮೇಲೆ ಮ್ಯಾಸ್ಟಿಕ್‌ ಲೇಪನವನ್ನು ಕಿತ್ತು ತೆಗೆದಿರುವಲ್ಲಿ ವಾಹನಗಳ ಸಂಚಾರ ಭರಾಟೆಯಿಂದಾಗಿ ಸೇತುವೆಯ ಮೇಲಿನ ಕಾಂಕ್ರೀಟ್‌ ಕಿತ್ತುಹೋಗಿದೆೆ.

    ಅಲ್ಲಲ್ಲಿ ಘಾತಕ ಹೊಂಡಗಳು ಉಂಟಾಗಿದ್ದಲ್ಲದೇ ಈ ಕಾಂಕ್ರೀಟ್‌ ತುಂಡುಗಳು ಸೇತುವೆಯ ಎಲ್ಲೆಂದರಲ್ಲಿ ಹರಡಿದ್ದು ಪ್ರಯಾಣಿಕರಿಗೆ ಅನಾಹುತದ ಭೀತಿಯನ್ನುಂಟುಮಾಡಿವೆ. ಹಲವು ವಾಹನಗಳು ಒಟ್ಟಾಗಿ ಸೇತುವೆ ಮೇಲೆ ಸಾಗುವಾಗ ಅಲುಗಾಟ ಜಾಸ್ತಿಯಾಗಿದ್ದರಿಂದ ಸೇತುವೆಯ ಪುಟ್‌ಪಾತ್‌ನ ಅನೇಕ ಹಲಗೆಗಳು ಜಾರಿ ಹೊಳೆ ಪಾಲಾಗಿವೆ. ಹಲವು ವರ್ಷಗಳ ಹಿಂದೆ ಅರಾಟೆ ಸೇತುವೆಗೆ ಮ್ಯಾಸ್ಟಿಕ್‌ ಲೇಪನ ಹಾಗೂ ಇಗ್ಗುಸಂದು ಜೋಡಣೆ ಕಾಮಗಾರಿ ನಡೆದಿದ್ದು, ಇದೀಗ ದುರಸ್ತಿ ವಿಳಂಬ ಹಾಗೂ ದುಃಸ್ಥಿತಿಯಿಂದಾಗಿ ಸೇತುವೆ ಸಾಕಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ.

    ವರ್ಷವಾದರೂ ದುರಸ್ತಿಯಿಲ್ಲ !

    ಅರಾಟೆ ಸೇತುವೆಗೆ ಈ ಹಿಂದೆ ಹಾಕಲಾಗಿದ್ದ ಮ್ಯಾಸ್ಟಿಕ್‌ ಲೇಪನವನ್ನು ಸಂಪೂರ್ಣವಾಗಿ ಕಿತ್ತುತೆಗೆದಿದ್ದರೂ ಸಾಕಾಗಿತ್ತು ಎಂಬ ನಾಗರಿಕರ ಬೇಡಿಕೆಗೂ ಅಧಿಕಾರಿಗಳು ಸೊಪ್ಪು$ ಹಾಕದೆ ತಮಾಷೆ ನೋಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿದ್ದಂತಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. ಸಂಚಾರದ ದೃಷ್ಟಿಯಿಂದ ಹೆಚ್ಚು ಜರೂರತ್ತು ಇರುವ ಅರಾಟೆ ಹೆದ್ದಾರಿ ಸೇತುವೆ ದುರಸ್ತಿಯನ್ನು ನಿರಂತರವಾಗಿ ನಿರ್ಲಕ್ಷಿಸಿರುವ ಅಧಿಕಾರಿಗಳ ಉದ್ದೇಶವಾದರೂ ಏನು ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

    ಅರಾಟೆ ಸೇತುವೆ ದುರಸ್ತಿ ತುರ್ತಾಗಿ ನಡೆಯಲಿದೆ ಎಂದು ಒಂದು ವರ್ಷದಿಂದ ಲೋಕೋಪಯೋಗಿ ಅಧಿಕಾರಿಗಳು ಕೇವಲ ಭರವಸೆಯ ಮಾತುಗಳನ್ನಾಡುತ್ತಲೇ ಇದ್ದಾರೆ. ಆದರೆ ಈ ಸೇತುವೆಗೆ ಮ್ಯಾಸ್ಟಿಕ್‌ ಲೇಪನ ಕಾಮಗಾರಿಯನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ವರ್ಷದ ಹಿಂದೆ ನೀಡಿದ್ದ ಭರವಸೆ ಈಡೇರುವ ಲಕ್ಷಣಗಳೇ ಗೋಚರಿಸುತ್ತಿಲ್ಲ.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   picಎಳ್ಳಮವ್ಯಾಸೆ ಪ್ರಯುಕ್ತ ವಿಶೇಷವೆಂದು ಪರಿಗಣಿತವಾಗಿರುವ ಸಮುದ್ರ ಸ್ನಾನ ಆಚರಣೆಯು ಕರ್ನಾಟಕ ಕರಾವಳಿ ಪ್ರದೇಶದ ವಿವಿಧ ಭಾಗಗಳ ಸಮುದ್ರ ತೀರಗಳಲ್ಲಿ ಸೋಮವಾರದಂದ
   • Copyright @ 2009 Udayavani.All rights reserved.
   • Designed & Hosted By 4cplus