Thursday, July 24, 2014
Last Updated: 8:46:39 AM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ವಿಡಿಯೋ ಗ್ಯಾಲರಿ
  • ಉದಯವಾಣಿ
  • ವೆ ಬ್
  • ಹುಡುಕಿ
    • ಹಳ್ಳಿಗಳಿಗೂ ಅಗತ್ಯ 3ಜಿ ನೆಟ್‌ವರ್ಕ್‌ !

      • ಶಂಕರನಾರಾಯಣ,ಪೆರ್‌ನುಕು

        ಇದೀಗ ಕೆಲ ಸಮಯದಿಂದ 3ಜಿ ಮೊಬೈಲ್‌  ನೆಟ್‌ವರ್ಕ್‌ ತಾಲೂಕು ಕೇಂದ್ರಗಳಿಗೆ ಲಭ್ಯವಾಗಿದೆ. ಇದರಿಂದಾಗಿ ಜನರು ಮೊಬೈಲ್‌, ಟ್ಯಾಬ್ಲೆಟ್‌ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಕಂಪ್ಯೂಟರುಗಳಲ್ಲಿ ಹೈಸ್ಪೀಡ್‌ ವಯರ್ಲೆಸ್‌ ಬ್ರಾಡ್‌ಬ್ಯಾಂಡ್‌ ಸಂಪರ್ಕವನ್ನು ಹೊಂದಲು ಅನುಕೂಲವಾಗಿದೆ. 

        ಲ್ಯಾಂಡ್‌ಲೈನ್‌ ಫೋನ್‌ ಇಲ್ಲದೆಯೂ ಇದರಿಂದ ಕಂಪ್ಯೂಟರುಗಳಿಗೆ ಡಾಟಾಕಾರ್ಡ್‌ ಬಳಸಿ ವಯರ್‌ಲೆಸ್‌ ಬ್ರಾಡ್‌ಬ್ಯಾಂಡ್‌ ಸಂಪರ್ಕ ಲಭ್ಯವಾಗುವುದು ಇದರ ಹೆಚ್ಚುವರಿ ಅನುಕೂಲವಾಗಿದೆ. ಆದರೆ ಈ ಸೌಲಭ್ಯವನ್ನು ಗ್ರಾಮೀಣ ಪ್ರದೇಶಗಳಿಗೆ ಇನ್ನೂ ವಿಸ್ತರಿಸಿಲ್ಲ. ಇದನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಿದರೆ ಬಹಳ ಅನುಕೂಲ.


        ಏಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್‌ಗಳು ಬೇಜವಾಬ್ದಾರಿಯುತವಾಗಿ ರಸ್ತೆಗಳನ್ನು ಅಗೆದುಹಾಕಿ ಲ್ಯಾಂಡ್‌ಲೈನ್‌ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಸಂಪರ್ಕಗಳನ್ನು ಆಗಾಗ ಕಡಿದು ಹಾಕುತ್ತ ಜನರಿಗೆ ತೊಂದರೆ ಕೊಡುತ್ತಾ ಇವೆ. ಉದಾಹರಣೆಗೆ, ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಂಚಾಯತ್‌ ಒಂದು ತಿಂಗಳ ಹಿಂದೆ ಪಾಪೆಮಜಲು-ಕುರಿಂಜ ರಸ್ತೆಯಲ್ಲಿ ಬಡಗನ್ನೂರು ಟೆಲಿಫೋನ್‌ ವಿನಿಮಯ ಕೇಂದ್ರಕ್ಕೆ ಸೇರಿದ 300 ಮೀ. ದೂರ ನೆಲದಡಿಯ ಕೇಬಲ್ಲುಗಳನ್ನು ಸಂಪೂರ್ಣ ನಾಶಪಡಿಸಿತ್ತು. ನಾಶಪಡಿಸಿದ ಇದನ್ನು ಹೊಸದಾಗಿ ಹಾಕಲು ಗ್ರಾಮ ಪಂಚಾಯತ್‌ ಕೆಲಸ ಮುಗಿಯದೆ ಸಾಧ್ಯವಿಲ್ಲವೆಂದು ಬಿಎಸ್ಸೆನ್ನೆಲ್‌ ಅಧಿಕಾರಿಗಳು ಹೇಳುತ್ತಾ ಇ¨ªಾರೆ. 

        ಪಂಚಾಯತ್‌ನವರು ಒಂದು ತಿಂಗಳು ತೆಪ್ಪಗೆ ಇದ್ದು ಅನಂತರ ಪುನಃ ಇನ್ನಷ್ಟು ದೂರವಾಣಿ ಕೇಬಲ್ಲುಗಳನ್ನು

        ರಸ್ತೆ ಅಗೆದು ನಾಶ ಮಾಡಿರುತ್ತಾರೆ. ಒಂದೇ ಬಾರಿಗೆ ಕೆಲಸ ಮುಗಿಸದೆ ತಿಂಗಳಿಗೊಮ್ಮೆ ಅಲ್ಲಲ್ಲಿ ಅಗೆದುಹಾಕುತ್ತ ಜನರಿಗೆ ಹಾಗೂ ಬಿಎಸ್ಸೆನ್ನೆಲ್‌ ಕೇಬಲ್ಲುಗಳಿಗೆ ತೊಂದರೆ ಉಂಟುಮಾಡುತ್ತಿರುವ ಇವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲವೇ? ಈಗಲೂ ಕೆಲಸ

        ಮುಗಿಸದೆ ಮತ್ತೆ ಬೇರೆಲ್ಲಿಗೋ ಹೋಗಿರುವ ಇವರು ಮತ್ತೆ ಕೆಲದಿನಗಳ ಅನಂತರ ಬಂದು ರಸ್ತೆ ಅಗೆದು ಕೇಬಲ್ಲುಗಳನ್ನು ನಾಶ ಮಾಡಲಿ¨ªಾರೆಂದು ಹೇಳಲಾಗುತ್ತಿದೆ. ಹೀಗಾಗಿ ಮೊಬೈಲ್‌ 3ಜಿ ನೆಟ್‌ವರ್ಕ್‌ ಅನ್ನು ಶೀಘ್ರ ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಿದರೆ ಅನುಕೂಲವಾಗುತ್ತದೆ.  ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕಾಗಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
      • Copyright @ 2009 Udayavani.All rights reserved.
      • Designed & Hosted By 4cplus