Thursday, December 18, 2014
Last Updated: 8:14:16 PM IST
 • ನಾನೆಲ್ಲಿರುವೆ:
 • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಗಣರಾಜ್ಯೋತ್ಸವ ಸಂಭ್ರಮ

   • ಪ್ರಸನ್ನಾ ವಿ.ಚೆಕ್ಕೆಮನೆ, ಧರ್ಮತ್ತಡ್ಕ

    ವಿವಿಧತೆಯಲ್ಲಿ ಏಕತೆಯನ್ನು ಸಾರುವ ಹೆಮ್ಮೆಯ ರಾಷ್ಟ್ರ ನಮ್ಮದು. ಇಲ್ಲಿನ ಸಮೃದ್ಧ, ಶ್ರೀಮಂತ, ಶ್ರೇಷ್ಠ ಸಂಸ್ಕೃತಿಯು ಅತ್ಯಂತ ಪ್ರಾಚೀನವಾಗಿದ್ದರೂ ತನ್ನ ವಿಶಿಷ್ಠ ಮಹತ್ವದಿಂದ ಪ್ರಪಂಚಕ್ಕೇ ಮಾದರಿಯಾಗಿದೆ.

    1950 ಜನವರಿ 26ರಂದು ನಮ್ಮ ದೇಶವು ಸಂಪೂರ್ಣ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪುಗೊಂಡು, ನಮ್ಮದೇ ಆದ ಸಂವಿಧಾನವನ್ನು ಜಾರಿಗೆ ತಂದಿತು.

    1947 ರ ಆಗಸ್ಟ್‌ 15 ರಂದು ವಿದೇಶೀಯರ ದಾಸ್ಯದ ಸಂಕೋಲೆಯಿಂದ ಮುಕ್ತಗೊಂಡು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ ನಮ್ಮ ದೇಶಕ್ಕೆ ಸ್ವಾತಂತ್ರ ರಕ್ಷಣೆ, ಸಂವರ್ಧನೆ ಮತ್ತು ಸಶಕ್ತೀಕರಣಕ್ಕಾಗಿ ಸಂವಿಧಾನ ರಚನೆ ತೀರಾ ಅನಿವಾರ್ಯವಾಗಿತ್ತು. ಸ್ವಾತಂತ್ರÂದ ಅನುಭೂತಿಯುಂಟಾಗಲು ಸ್ವರಾಜ್ಯ ಬೇಕು, ಸ್ವಶಾಸನ ಬೇಕು ಎಂಬುದನ್ನು ಮನಗಂಡು ಭಾರತದ ಹಿರಿಯ ಮುಖಂಡರ ಆದೇಶದಂತೆ 1947 ಆಗಸ್ತ್ 29 ರಂದು ಡಾ|ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಲಾಯಿತು.

    1947 ನವೆಂಬರ್‌ 4 ರಂದು ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ಶಾಸನ ಸಭೆಯಲ್ಲಿ ಮಂಡಿಸಿತು. ಕೆಲವು ತಿದ್ದುಪಡಿಗಳ ನಂತರ 1950 ಜನವರಿ 26 ರಂದು ನಮ್ಮ ಸಂವಿಧಾನವು ಜಾರಿಗೆ ಬಂತು. ಅದುವರೆಗೂ ಗವರ್ನರ್‌ ಜನರಲ್‌ರ ಆಡಳಿತಾಧೀನದಲ್ಲಿದ್ದ ರಾಷ್ಟÅದಲ್ಲಿ ರಾಷ್ಟ್ರಪತಿಗಳ ಆಡಳಿತ ಆರಂಭಿಸಲಾಯಿತು. ಈ ಸುದಿನದ ನೆನಪಿನಲ್ಲಿ ಇಂದು(ಜನವರಿ 26) ರಾಷ್ಟಿÅàಯ ಹಬ್ಬವಾದ ಗಣರಾಜ್ಯೋತ್ಸವವನ್ನು ಸಂತಸ, ಸಡಗರಗಳಿಂದ ಆಚರಿಸಲಾಗುತ್ತಿದೆ.

    ಈ ದಿನ ನಮ್ಮ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಮ್ಮ ಸಶಸ್ತ್ರ ಪಡೆಗಳಿಂದ ಪ್ರಭಾತಭೇರಿ ನಡೆಯುತ್ತದೆ. ನಮ್ಮ ದೇಶದ ವಿವಿಧ ರಾಜ್ಯಗಳ ಸಾಂಸ್ಕೃತಿಕ ವೈಭವಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರತಿವರ್ಷವೂ ವಿದೇಶಿಗಳ ಗಣ್ಯ ವ್ಯಕ್ತಿಗಳೇ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿರುವುದು ವಿಶೇಷ.

    ರಾಜಕೀಯ ಪಾರತಂತ್ರÂದ ಬಲೆಯಲ್ಲಿ ಸಿಲುಕಿ ನರಳುತಿದ್ದ ಭಾರತ ಮಾತೆಯ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾದ ವೀರ ಯೋಧರ ಸ್ಮಾರಕವಾಗಿರುವ "ಅಮರ್‌ ಜವಾನ್‌ ಜ್ಯೋತಿ' ಗೆ ರಾಷ್ಟ್ರ ಪತಿಗಳು ಪುಷ್ಟಾರ್ಚನೆ ಮಾಡುತ್ತಾ ಅವರ ಮಹಾನ್‌ ತ್ಯಾಗ, ಬಲಿದಾನಗಳನ್ನು ಮತ್ತೂಮ್ಮೆ ಜನರಿಗೆ ನೆನಪಿಸುತ್ತಾರೆ. ಸಶಸ್ತ್ರ ಪಡೆಗಳಲ್ಲಿ ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ವೀರ ಯೋಧರಿಗೆ ನೀಡುವ ಪುರಸ್ಕಾರಗಳನ್ನೂ ಈ ದಿನವೇ ಪ್ರದಾನ ಮಾಡಲಾಗುತ್ತಿದೆ.

    ಇಷ್ಟು ಮಾತ್ರವಲ್ಲದೆ ಆತಂಕಮಯ ಸನ್ನಿವೇಶಗಳನ್ನು ದಿಟ್ಟವಾಗಿ ಎದುರಿಸಿ, ತಮ್ಮ ಧೈರ್ಯ ಪ್ರಕಟಿಸಿ, ಜನರ ಪ್ರಾಣ ಉಳಿಸಿ ದಂತಹ ಪುಟಾಣಿಗಳನ್ನು ಗುರುತಿಸಿ ಅವರಿಗೆ ರಾಷ್ಟ್ರೀಯ ಶೌರ್ಯ ಪುರಸ್ಕಾರಗಳನ್ನು ನೀಡಲಾಗುತ್ತಿದೆ.

    ಈ ಗಣರಾಜ್ಯೋತ್ಸವ ಸಂಭ್ರಮದಂದು ನಮ್ಮ ದೇಶಕ್ಕಾಗಿ ಪ್ರಾಣಗಳನ್ನರ್ಪಿಸಿದಂತಹ ವೀರ ಯೋಧರನ್ನು ಸ್ಮರಿಸುತ್ತಾ, ಮುಂದಿನ ಪೀಳಿಗೆಗೂ ಅವರ ಮಹಾನ್‌ ತ್ಯಾಗಗಳ ಮಹತ್ವವನ್ನು ತಿಳಿಸುತ್ತಾ, ಸುಭದ್ರ ದೇಶದ ನಿರ್ಮಾಣಕ್ಕೆ ಕೈ ಜೋಡಿಸೋಣ. ಅಶಿಸ್ತು, ಅನ್ಯಾಯ, ಅನಾಚಾರಗಳ ವಿರುದ್ಧ ದಿಟ್ಟವಾಗಿ ಕೈಯೆತ್ತಿದಾಗ ಮಾತ್ರ ಸ್ವಸ್ಥ ಸಮಾಜದ ಕಲ್ಪನೆ ನನಸಾಗಲು ಸಾಧ್ಯ.

    ನಮ್ಮ ದೇಶದ ಬಗ್ಗೆ, ಇಲ್ಲಿನ ಅನನ್ಯ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಎಳವೆಯಿಂದಲೇ ಗೌರವ ಮೂಡುವಂತೆ ಮಾಡೋಣ. ಎಲ್ಲರೂ ಭವ್ಯ ಭಾರತದ ಸತ್‌ಪ್ರಜೆಗಳಾಗಿ ರೂಪುಗೊಂಡಾಗ ಮಾತ್ರ ಗಾಂಧೀಜಿಯಂತಹ ಹಿರಿಯ ನೇತಾರರ ಕನಸುಗಳು ಸಾಕಾರಗೊಳ್ಳಲು ಸಾಧ್ಯ. ಇದಕ್ಕಾಗಿ ಎಲ್ಲರೂ ಒಮ್ಮನಸ್ಸಿನಿಂದ ಮುನ್ನುಗ್ಗುವ.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus