Sunday, May 19, 2013
Last Updated: 12:53:09 AM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹಿಂದುಸ್ಥಾನ್‌ ಜೀತೇಗಾ!

      • ಹರಿದಾಸ್‌ ಬೋಳಾರ್‌, ಕುಂಬಳೆ

        ನನ್ನದು ಯಾವುದೇ ರಾಜಕೀಯ ಪಾರ್ಟಿಯಲ್ಲ, ನನ್ನದು ಹೊಟ್ಟೆ ಹೊರೆ ಯುವ ಪಕ್ಷ. ದೇವರಲ್ಲಿ ನನ್ನ ದೈನಂದಿನ ಡಿಮಾಂಡ್‌ಗಳ‌ ಜೊತೆಗೆ ಒಂದು ಎಡಿಶನಲ್‌ ಪ್ರಾರ್ಥನೆ.

        ಅದೇನೆಂದರೆ ನನ್ನಂತಹ ಸಾಮಾನ್ಯ ಜನರು ಈಗಿನ ಖರ್ಚು ನಿಭಾಯಿಸುವುದಕ್ಕೆ ಸಾಧ್ಯ ವಾಗದೆ ನೆಗೆದು ಬೀಳುವುದಕ್ಕೆ ಮೊದಲು ಆದಷ್ಟು ಬೇಗ ಈ "ಮೌನಮೋಹನ ಸಿಂಗ'ರ ಸರಕಾರವನ್ನು ನೆಗೆದು ಬೀಳಿಸಪ್ಪ ಎಂದು.

        ಹಿಂದೆಲ್ಲ ಒಂದೆರಡು ವರ್ಷಗಳಿಗೊಮ್ಮೆ ಬರುತ್ತಿದ್ದ ಘೋರ ಶಾಕ್‌ ಟ್ರೀಟ್‌ಮೆಂಟ್‌ಗಳು ಈಗ ರಾತ್ರಿ ಬೆಳಗಾಗುವುದರೊಳಗೆ ಸಿಡಿಲಿನಂತೆ ಬಂದು ಅಪ್ಪಳಿಸುತ್ತವೆ. ಎಲ್ಲಕ್ಕಿಂತ ಹೈ ವೋಲ್ಟೆàಜ್‌ ಪೆಟ್ರೋಲಿಯಂ ಖಾತೆಯದ್ದು. ಈ ರೋಬೋಟ್‌ ಪ್ರಧಾನಮಂತ್ರಿಗಳ ಮೈನ್‌ ಪ್ಯಾನೆಲ್‌ನ ಫ್ಯೂಸ್‌ ವೈಯರ್‌ ಕೂಡ ಕರಗಿ ಹೋಗು ವುದಿಲ್ಲವಲ್ಲ ದೇವರೇ!

        ಮಾರುಕಟ್ಟೆಯಲ್ಲಿ ನಿನ್ನೆ ಇದ್ದ ದರವಲ್ಲ ಇಂದು, ಇಂದು ಇದ್ದ ದರವಲ್ಲ ನಾಳೆ. ಸಾಲದ್ದಕ್ಕೆ ಓರ್ವ "ಗಂಜಿ' ರಕ್ಷಣಾ ಮಂತ್ರಿ. ಮೊನ್ನೆ ಮೊನ್ನೆ ಕ್ರಿಕೆಟ್‌ನಲ್ಲಿ ನಮ್ಮನ್ನು ಸೋಲಿಸಿದ್ದೂ ಸಾಲದು ಎಂಬಂತೆ ಈಗ ಸೈನಿಕರ ಕತ್ತು ಕೊಯ್ದುಕೊಂಡು ಹೋಗಿದ್ದಾರೆ.

        ಇಂಥವರ ಮೇಲೆ ತತ್‌ಕ್ಷಣ ಮುಯ್ಯಿಗೆ ಮುಯ್ಯಿ ತೀರಿಸಲು ಸಾಧ್ಯವಾಗದ ಈ ದೇ(ಹ)ಶದಲ್ಲಿ ಎಷ್ಟು ಪವರ್‌ ಇದ್ದು ಏನು ಪ್ರಯೋಜನ? ಸ್ವಯಂ ರಕ್ಷಣೆಯ "ಗಟ್ಸ್‌' ಏನೆಂದು ಅರಿತುಕೊಳ್ಳಬೇಕಿದ್ದರೆ ಇವರನ್ನೆಲ್ಲ ಸ್ವಲ್ಪ ಸಮಯ ಇಸ್ರೇಲ್‌ಗೆ ಕಳುಹಿಸಬೇಕು ಟ್ರೈನಿಂಗ್‌ಗೆ.

        "ಮೌನಮೋಹನ ಸಿಂಗ'ರ ದರ್ಬಾರಿ ನಲ್ಲಿ ಎಲ್ಲ ದಿನನಿತ್ಯ ವಸ್ತುಗಳ ಬೆಲೆ ಲಂಗು ಲಗಾಮಿಲ್ಲದೆ ಏರುತ್ತಲೇ ಇದೆ. ಬೆಲೆ ಕಡಿಮೆ ಇರುವುದು ಕೇವಲ ರೂಪಾಯಿಗೆ ಮಾತ್ರ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus