ಚಾಂದಿನಿ ಪ್ರಭು ವಿ.ಸಿ.ಪುತ್ತೂರು
ಶೇ. 40ರಷ್ಟು ಯುವ ಜನಾಂಗವಿರುವ ಭಾರತದಲ್ಲಿ ಯುವಕರು ಲಾಭದಾಯಕವಾಗಿರುವ ಭತ್ತದ ಕೃಷಿಯತ್ತ ಗಮನ ಹರಿಸಬೇಕಿದೆ.
ರೈತ ಭಾರತದ ಬೆನ್ನೆಲುಬು ಎಂಬ ಮಾತು ಇಂದು ತನ್ನ ಪ್ರಾಮು ಖ್ಯವನ್ನು ಕಳೆದುಕೊಳ್ಳುತ್ತಿದೆ. ಒಂದು ಕಡೆ ದೇಶದಲ್ಲಿ ರೈತ ಕಡೆಗಣಿಸಲ್ಪಟ್ಟರೆ, ಇನ್ನೊಂದೆಡೆ ಜನರಿಗೆ ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ವಿಜ್ಞಾನ ಮುಂದು ವರಿದಂತೆ ಯುವಜನಾಂಗ ಕೃಷಿಯನ್ನು ನಿರಾಕರಿಸಿ ಉದ್ಯೋಗವನ್ನರಸಿ, ಪಟ್ಟಣದತ್ತ ಹೆಜ್ಜೆ ಹಾಕುತ್ತಿದೆ.
ದೇಶದ ಕೃಷಿ ಭೂಮಿ ಇಂದು ಬಹು ರಾಷ್ಟ್ರೀಯ ಕಂಪೆನಿಗಳ ಆಗಮನದಿಂದಾಗಿ ನಾಶವಾಗುತ್ತಿದೆ. ನಗರೀಕರಣದ ಪ್ರಭಾವ ದಿಂದಾಗಿ ಬಯಲು ಪ್ರದೇಶಗಳು ಪಟ್ಟಣ ಗಳಾಗಿ ಮಾರ್ಪಡುತ್ತಿವೆ. ಇವುಗಳಿಂದ ಹೊರತಾದ ಭೂಮಿ ಉಳುವವರಿಲ್ಲದೆ ಬರಡು ಭೂಮಿಯಾಗಿ ಪರಿವರ್ತನೆಯಾ ಗುತ್ತದೆ. ಇದರಿಂದಾಗಿ ನಮ್ಮ ಕೃಷಿ ವ್ಯವಸ್ಥೆ ಇಂದು ಅವನತಿಯ ಹಾದಿ ಹಿಡಿದಿದೆ.
ಇಂದು ಕೃಷಿ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಿದ್ದು, ಬಡ ಜನರಿಗೆ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಕೃಷಿಕರು ಭತ್ತದ ಬೇಸಾಯದ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ವಹಿಸಬೇಕಾಗಿದೆ. ಇದರ ಕೃಷಿಗೆ ಅಧಿಕ ಶ್ರಮ, ನೀರಿನ ಅಭಾವ, ಕೂಲಿಯಾಳುಗಳ ಸಮಸ್ಯೆಯಿಂದ ಭತ್ತದ ಬೆಳೆಯನ್ನು ಜನ ನಿರಾಕರಿಸುತ್ತಾರೆ. ಕರಾ ವಳಿ ಪ್ರದೇಶದಲ್ಲಿ ಭತ್ತದ ಬೆಳೆಯ ಪ್ರಮಾಣ, ವಿಸೀ¤ರ್ಣ ಕುಂಠಿತವಾಗಿದ್ದು, ಬಯಲು ಸೀಮೆಯಿಂದ ಅಕ್ಕಿ ಇಲ್ಲಿಗೆ ಆಮದಾಗು ವುದರಿಂದ ಅದರ ಬೆಲೆ ದಿನೇ ದಿನೇ ಅಧಿಕ ವಾಗುತ್ತಿದೆ. ಹೀಗಾಗಿ ನಾವು ಭತ್ತದ ಬೆಳೆಯ ಲೇಬೇಕಾದ ಪರಿಸ್ಥಿತಿ ಎದುರಾಗಿದೆ.
ಹಿಂದೆ ಕರಾವಳಿಯ ಕೃಷಿಕರು ಭತ್ತ ಬೆಳೆಯುವುದಕ್ಕಿಂತ ಅಡಿಕೆಯಲ್ಲಿ ಹೆಚ್ಚು ಲಾಭವಿದೆ ಎಂಬ ನಿಟ್ಟಿನಲ್ಲಿ ಭತ್ತದ ಗದ್ದೆ ಗಳಲ್ಲಿ ಅಡಿಕೆ ಗಿಡ ನೆಟ್ಟರು. ಆದರೆ ಅದರಿಂದಾಗಿ ಇಂದು ಅದೇ ಕೃಷಿಕರು ದುಪ್ಪಟ್ಟು ಬೆಲೆ ಕೊಟ್ಟು ಮಾರುಕಟ್ಟೆಯಿಂದ ಅಕ್ಕಿ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ.
ಹಿಂದೆ ಇಲ್ಲಿನ ರೈತರು ಏಣಿಲು, ಸುಗ್ಗಿ, ಕೊಳಕೆ ಎಂದು ವರ್ಷದಲ್ಲಿ ಮೂರು ಬೆಳೆ ತೆಗೆಯುತ್ತಿದ್ದರು. ಮನೆಗೆ ಬೇಕಾದ ಅಕ್ಕಿಯನ್ನಿಟ್ಟು ಉಳಿದುದನ್ನು ಮಾರಾಟ ಮಾಡುತ್ತಿದ್ದರು. ಇಂದು ಮೂರು ಬೆಳೆಗಿಂತ ಒಂದು ಬೆಳೆಯನ್ನು ತೆಗೆಯುವುದೇ ನಮ್ಮ ಕೃಷಿಕರಿಗೆ ಕಷ್ಟವಾಗಿದೆ.
ಶೇ. 40ರಷ್ಟು ಯುವ ಜನಾಂಗವಿರುವ ಭಾರತದಲ್ಲಿ ಯುವಕರು ಕೃಷಿಯತ್ತ ಗಮನ ಹರಿಸಬೇಕಿದೆ. ದೇಶದ ವಿದ್ಯಾರ್ಥಿ ಸಮೂಹ ಕೃಷಿಯಲ್ಲಿ ಆಸಕ್ತಿ ವಹಿಸಿ, ದೇಶದ ಕೃಷಿಯನ್ನು ಉಳಿಸಿ ಬೆಳೆಸಬೇಕಿದೆ.