Tuesday, December 23, 2014
Last Updated: 1:07:26 AM IST
 • ನಾನೆಲ್ಲಿರುವೆ:
 • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಈಗ ಕಾಣಿರಿ ಕೊಕ್ಕೋ ಮಂದಹಾಸ

   • ಕೊಕ್ಕೋಪ್ರಿಯ

    ಕೊಕ್ಕೋ ಬೀಜಕ್ಕೆ ದಿನದಿಂದ ದಿನಕ್ಕೆ ಮಾರುಕಟ್ಟೆ  ಧಾರಣೆ ಹೆಚ್ಚುತ್ತಿದ್ದು ಕೊಕ್ಕೋ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.

    ರೋಗ ಬಾಧೆ, ಕೃಷಿಸಾಲ, ಮಾರುಕಟ್ಟೆ ಧಾರಣೆ ಕುಸಿತದಿಂದ   ಅಡಿಕೆ ಬೆಳೆಗಾರರು ಎರಡು ವರ್ಷಗಳ ಹಿಂದೆ  ಕಂಗಾಲಾಗಿದ್ದರು. ಹೇಗಾದರೂ ಮಾಡಿ ಆರ್ಥಿಕ ಅಸಮತೋಲನವನ್ನು ಸರಿದೂಗಿಸಿಕೊಂಡು ಹೋಗಬೇಕೆಂದು ಕರಾವಳಿ ಜಿಲ್ಲೆಗಳಲ್ಲಿ ಬಡ ರೈತರು ಮಿಶ್ರ ಬೆಳೆಯತ್ತ  ಮುಖ ಮಾಡಿದ್ದರು. ಆಗ ಹಲವು ಕೃಷಿಕರು ಕೊಕ್ಕೋ ಬೆಳೆಗೆ ಹೆಚ್ಚು ಗಮನ ಕೊಟ್ಟರು.

    ಹಿಂದೆ ಅಡಿಕೆ ಬೆಳೆಗಾರರು ಧಾರಣೆ ಕುಸಿತ ಮತ್ತು ಅಡಿಕೆ ಗಿಡಗಳ ಮಧ್ಯೆ ಕೊಕ್ಕೊ ಇದ್ದರೆ ಅಡಿಕೆಗೆ ಧಕ್ಕೆ ಎಂಬ ಭಾವನೆಯಿಂದ ಕೊಕ್ಕೋ ಬೆಳೆಯಿಂದ ವಿಮುಖಧಿರಾಗಿದ್ದರು. ಅಂದು ಕೊಕ್ಕೋಗೆ ಧಾರಣೆಯೂ ಇರಲಿಲ್ಲ.

    ಕೊಕ್ಕೋ ಕೃಷಿಗೆ ಬೇಡಿಕೆ ಹೆಚ್ಚು ತ್ತಿರುಧಿವುಧಿದರಿಂದ  ಅಡಿಕೆ ಕೃಷಿಯೊಂದಿಗೆ  ಕೊಕ್ಕೋಧಿವನ್ನು ಮಿಶ್ರ ಬೆಳೆಯಾಗಿ ಬೆಳೆಯಲು ಕರಾವಳಿಯ ರೈತರು ಮುಂದೆ ಬರುತ್ತಿರು ವುದು ಕರಾವಳಿ ಜಿಲ್ಲೆಯ ಕೃಷಿ ಚಿತ್ರಣವನ್ನು ಬದಲಾಯಿಸುತ್ತಿದೆ. ಕೊಕ್ಕೋ  ಬೆಳೆಯತ್ತ  ಇಲ್ಲಿಯ ರೈತರು ಮುಖ ಮಾಡಲು  ಒಂದು ಮುಖ್ಯ ಕಾರಣವೇನೆಂದರೆ ಇದು ಬೇಗ ಫ‌ಲ ನೀಡಿ ರೈತರ ಅರ್ಥಿಕ ಸಮಸ್ಯೆಗೆ ಒಂದಷ್ಟು ಚೇತರಿಕೆ ನೀಡಬಹುದೆಂಬ ನಂಬಿಕೆ. ಅಲ್ಲದೆ ಜಾಗತಿಕವಾಗಿ ಕೊಕ್ಕೋ ಬೆಳೆಗಳಿಗೆ ಅಪಾರ ಬೇಡಿಕೆ ಬರಬಹುದೆಂದು ರೈತರ ಲೆಕ್ಕಾಚಾರ.

    ಒಂದು ಕೊಕ್ಕೋದಲ್ಲಿರುವ  ಬೀಜಗಳು ಕನಿಷ್ಠ 75 ಗ್ರಾಂನಿಂದ 250 ಗ್ರಾಂ ತನಕ ತೂಗಬಲ್ಲವು. ಕಳೆದ ಒಂದು ವರ್ಷದಿಂದ ಕೊಕ್ಕೋ ಬೀಜದ ಬೆಲೆ ನಿರಂತರವಾಗಿ ಏರುತ್ತ ಹೋಗುತ್ತಿದೆ. ಚಾಕಲೇಟ್‌ ಮತ್ತು ಇತರ ಉತ್ಪಾದನೆಯಲ್ಲಿ ಕೊಕ್ಕೋ ಉಪಯೋಗ ಅಧಿಕವಿರುವುದರಿಂದ ಇದರ ಬೆಲೆಗೆ ಧಕ್ಕೆ ಬಾರದೆಂದು ರೈತ ವರ್ಗದರಿಂದ ಅಭಿಪ್ರಾಯ ಕೇಳಿ ಬರುತ್ತಿದೆ. ಮುಂದೆ ಕೊಕ್ಕೋ ಬೀಜದ ಧಾರಣೆ ಹೇಗೆ ಮಾರುಕಟ್ಟೆಯಲ್ಲಿ ಉಳಿಧಿಯುತ್ತದೆಂಬುದನ್ನು ಕಾದುನೋಡಬೇಕಾಗಿದೆ.

    ಇತರ ಬೆಳೆಗಳಿಗೆ ಹೋಲಿಸಿದರೆ ಕೊಕ್ಕೋ  ಕೃಷಿ ಸುಲಭವಾಗಿ ಮಾಡಬಹುದು.ಅಡಿಕೆ ತೋಟದ ನಡುವೆ ಕೊಕ್ಕೋ ಗಿಡಗಳನ್ನು ನೆಡುವುದರಿಂದ ಹೆಚ್ಚಿನ ಆರೈಕೆಯ ಅಗತ್ಯವಿಲ್ಲ.ಅಡಿಕೆ ಮರಗಳಿಗೆ ಹಾಕುವ ನೀರು ಮತ್ತು ಗೊಬ್ಬರವೇ ಸಾಕಾಗುತ್ತದೆ.ಸಾವಯವ ಕೃಷಿ ಪದ್ಧತಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು.

    ಗಿಡನೆಟ್ಟು ಎರಡು ವರ್ಷಗಳಾಗುವಾಗ ಕೊಕ್ಕೋ ಕಾಯಿ ಬಿಡಲು ಪ್ರಾರಂಭವಾಗುತ್ತದೆ. ಕಸಿ ಮಾಡಿದ (ಹೈಬ್ರಿàಡ್‌) ತಳಿಗಳಾದರೆ ಮೊದಲೇ ಇಳುವರಿ ಪಡೆಯಬಹುದು.ಉತ್ತಮ ನೀರಿನ ವ್ಯವಸ್ಥೆ , ಫ‌ಲವತ್ತಾದ ಮಣ್ಣಿನಲ್ಲಿ ವರ್ಷಪೂರ್ತಿ ಕೊಕ್ಕೋ  ಫ‌ಸಲು ಪಡೆಯಬಹುದು.  ಈ ಬೆಳೆಗೆ ರೋಗ ಬಾಧೆ ಕಡಿಮೆ ಎನ್ನಬಹುದು. ಕೆಲವೊಮ್ಮೆ ಕಾಂಡ ಕೊರೆವ ಹುಳ, ಕೀಟ ಬಾಧೆಯೂ ಇಲ್ಲದಿಲ್ಲ. ಆರಂಭಿಕ ಹಂತದಲ್ಲಿ ಇದನ್ನು ಹತೋಟಿಗೆ ತಂದರೆ ಗಿಡ ಹುಲುಸಾಗಿ ಬೆಳೆದು ಅಧಿಕ ಇಳುವರಿ ಕೊಡುತ್ತದೆ.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus