Friday, December 19, 2014
Last Updated: 8:53:48 PM IST
 • ನಾನೆಲ್ಲಿರುವೆ:
 • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
 • ಕರಾವಳಿ ಅಭಿವೃದ್ಧಿ ಚಿಂತನೆ ಅಗತ್ಯವಲ್ಲವೇ ?

  • ಡಿ. ಚಂದ್ರಶೇಖರ ಗೌಡ , ಧರ್ಮದಕಳ, ಶಿಶಿಲ

   ಈ ಜಗತ್ತಿನಲ್ಲಿ ಅನೇಕ ಆದರ್ಶ ವ್ಯಕ್ತಿಗಳು ಬಂದು ಹೋಗಿದ್ದಾರೆ. ಮಹಾನ್‌ ಧರ್ಮಗಳ,  ಪುರಾಣಗಳ, ಅನೇಕ ಗ್ರಂಥಗಳ ರಚನೆ ಮಾಡಿ ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ಕೊಟ್ಟು ಹೋಗಿರುತ್ತಾರೆ.

   ಅವರೆಲ್ಲರೂ ಯಾವುದೇ ಪೇಟೆ, ಪಟ್ಟಣಗಳಲ್ಲಿ ಹುಟ್ಟಿ ಬೆಳೆದವರಲ್ಲÉ ಅವರೆಲ್ಲರೂ ಕಾಡಂಚಿನ ಹಳ್ಳಿಗಳಲ್ಲಿ ಗೋಪಾಲಕರಾಗಿ ಕಾಡಿನೊಂದಿಗೆ ಅನ್ಯೋನ್ಯವಾಗಿ, ಅಲ್ಲಿನ ಮರ-ಗಿಡಗಳು, ಪ್ರಾಣಿ-ಪಕ್ಷಿಗಳು, ಜಲಚರಗಳೊಂದಿಗೆ ಜೀವಿಸುತ್ತಾ ಜೀವನ ಪಾಠ‌ವನ್ನು ಕಲಿತು, ಗುರುಕುಲಗಳನ್ನು ಸ್ಥಾಪಿಸಿ, ಮಹಾನ್‌ ಮೇಧಾವಿಗಳೂ, ಶೂರರೂ, ವೀರರೂ ಆದ ಶಿಷ್ಯರನ್ನು ಪಡೆದಿರುತ್ತಾರೆ.

   ಅವರಿಂದ ಲೋಕೋದ್ಧಾರದ ಕೆಲಸಗಳೂ ನಡೆದಿವೆ.  ಋಷಿ ಮುನಿಗಳು ಮಹಾನ್‌ ಸಾಧನೆಗೋಸ್ಕರ ಗಿರಿ, ಪರ್ವತ, ಕಾನನಗಳಲ್ಲಿ ವರ್ಷಾನುಗಟ್ಟಲೆ ತಪಸ್ಸು ಮಾಡಿ ಜ್ಞಾನವನ್ನು ಪಡೆದುಕೊಂಡಿರುವುದು ಆಧ್ಯಾತ್ಮ ವಿಚಾರಗಳಿಂದ ತಿಳಿಯುತ್ತದೆ.

   ಹಿಂದೂ  ಧರ್ಮದ ಆಧಾರ ಸ್ತಂಭದಂತಿರುವ ಜ್ಯೋತಿರ್‌ಶಾಸ್ತ್ರ ಇಂತಹ ಋಷಿ ಮುನಿಗಳ ಬಳುವಳಿ ಎಂಬುದನ್ನು ನಾವು ಮರೆಯುವಂತಿಲ್ಲ.  ಇತ್ತೀಚೆಗೆ ಈ ಪತ್ರಿಕೆಯಲ್ಲಿ ಪ್ರಸ್ತುತಪಡಿಸಿದಂತೆ ರೋಹಿಣಿ ನಕ್ಷತ್ರ ಸೂರ್ಯನಿಂದ 1,200 ಪಟ್ಟು ದೊಡ್ಡದು.

   ನಮಗೆ ಅತ್ಯಂತ ಹತ್ತಿರದ ನಕ್ಷತ್ರ ಸೂರ್ಯನನ್ನು ರೋಹಿಣಿ ನಕ್ಷತ್ರಕ್ಕೆ ಹೋಲಿಸಿದರೆ ಒಂದು ಬಿಂದುವಿಗೆ ಸಮಾನ.  ಇಂತಹ ನಕ್ಷತ್ರಗಳ ಅಧ್ಯಯನ, ಚಲನವಲನ ಗ್ರಹಣ, ನಮ್ಮ ಪುರಾಣಗಳಲ್ಲಿ  ವಿಮಾನ, ಬ್ರಹ್ಮಾಸ್ತ್ರ (ಅಣುಬಾಂಬ್‌) ಶಬ್ದವೇಧಿ(ಮಿಸಾಯಿಲ್‌)ಗಳಂತಹ ಅಸ್ತ್ರಗಳ ಪ್ರಸ್ತಾಪ. 

   ಹಾಗಾದರೆ ಯೋಚಿಸಿ ನಮ್ಮ ವಿಜ್ಞಾನ ಯುಗ ಯುಗಾಂತರಗಳ ಹಿಂದೆ ಎಷ್ಟು ಮುಂದುವರಿದಿತ್ತು? ಪ್ರಪಂಚದ ವಿವಿಧ ದೇಶಗಳ ವಶದಲ್ಲಿರುವ ಅತ್ಯಮೂಲ್ಯವಾದ ವಜ್ರ ವೈಢೂರ್ಯಗಳು ಭಾರತದಿಂದ ಕಬಳಿಸಿದಂತವುಗಳು. 

   ನಾವು ಚಿಕ್ಕಂದಿನಲ್ಲಿ ಕಥೆಗಳನ್ನು ಓದುತ್ತಿರುವಾಗ ಆ ಕಥೆಗಳಲ್ಲಿ ಉಲ್ಲೇಖೀಸಿರುವಂತಹ ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯಗಳು ಕೇವಲ ಕಾಲ್ಪನಿಕ ಎಂದು ಭಾವಿಸಿದ್ದೆವು. ಆದರೆ ಅದು ವಾಸ್ತವವೆಂದು ಕಂಡುಬಂದದ್ದು ಕೇರಳದ ಅನಂತ ಪದ್ಮನಾಭ ದೇವಸ್ಥಾನದ ನೆಲಮಾಳಿಗೆಯಲ್ಲಿ ನೋಡಿದಾಗ. ಅಂತಹ ಎಷ್ಟೋ ದೇವಸ್ಥಾನಗಳು ಈ ಭಾರತಾಂಬೆಯ ಗರ್ಭದಲ್ಲಿ ಹುದುಗಿಗೊಂಡಿದೆಯೋ ಅದು ಭವಿಷ್ಯವೇ ನಿರ್ಣಯಿಸಬೇಕಾಗಿದೆ.

   ಔರಂಗಜೇಬನ ಕಾಲದಲ್ಲಿ ಭಾರತವು ಜಗತ್ತಿನಲ್ಲೆ ನಂ. 2 ಎಕಾನೋಮಿಯಲ್ಲಿತ್ತು. ಹಾಗಾದರೆ ಅದಕ್ಕಿಂತ ಮೊದಲು ಹೇಗಿದ್ದಿರಬಹುದು?

   ಈ ಭರತಖಂಡ ಇಷ್ಟೊಂದು ಸಂಪದ್ಬರಿತವಾದದ್ದು  ಅನಾದಿಕಾಲದಿಂದಲೂ ತಂತ್ರಜ್ಞಾನ, ವಿಜ್ಞಾನದಲ್ಲಿ ಮುಂದುವರಿದಿದ್ದು  ಯಾವುದೇ ಅಂತಾರಾಷ್ಟ್ರೀಯ ಕಂಪೆನಿಯಿಂದಲ್ಲ ಅಥವಾ ಯುನೆಸ್ಕೋದ ಮಾನ್ಯತೆಯಿಂದಲ್ಲ. ವಿದೇಶೀಯರು ಯಾವುದೇ ವ್ಯವಹಾರಕ್ಕೆ ಭಾರತದ ಕಡೆ ದೃಷ್ಟಿ ಹಾಯಿಸುತ್ತಾರೆ. 

   ಅಂದರೆ ಅದು ಕೇವಲ ವ್ಯಾಪಾರ ಮನೋಭಾವನೆಯಿಂದ ಮಾತ್ರ. ಅದು ಈ ದೇಶದ ಇತಿಹಾಸದ ಪುಟಗಳನ್ನು ತೆರೆದಾಗ ಅರಿವಾಗುತ್ತದೆ. ನಮ್ಮ ದೇಶಕ್ಕೆ ಯಾರದೇ ಸರ್ಟಿಫಿಕೆಟ್‌ನ ಅವಶ್ಯಕತೆ ಬೇಕಿಲ್ಲ.  ಭಾರತ ಇಡೀ ವಿಶ್ವಕ್ಕೆ ಮಾದರಿ ಭಾರತವನ್ನು ನೋಡಿ ಇತರ ದೇಶಗಳು ಕಲಿಯಬೇಕಾದದ್ದು ಎಷ್ಟೋ ಇದೆ. ಇಲ್ಲಿನ ಅನಾಧಿಧಿ ಕಾಲದ ಕುಟುಂಬ ಪದ್ಧತಿಗಳು ವಿದೇಶದಲ್ಲಿ  ಕನಸಿನಲ್ಲೂ ಎಣಿಸಿಕೊಳ್ಳಲೂ ಸಾಧ್ಯವಿಲ್ಲ.  ಹೆತ್ತ ತಾಯಿಯನ್ನು ವೃದ್ಧಾಶ್ರಮದಲ್ಲಿ ಹಾಕಿ ಐಶಾರಾಮ ಜೀವನವನ್ನು ಬಯಸುವ ವಿದೇಶೀಯರ ಸರ್ಟಿಫಿಕೆಟ್‌ಗಳು ನಮ್ಮ ಪಶ್ಚಿಮಘಟ್ಟಕ್ಕೆ ಅವಶ್ಯಕಥೆಯಿಲ್ಲ .  ಜನನಿ ಜನ್ಮ ಭೂಮ್ಯಸ್ಯ ಸರ್ಗಾದಪಿ ನಗರೀಯಸಿ  ಎಂದು ನಂಬಿದ ದೇಶ ಈ ಭರತಖಂಡ.

   ಊರಿಗೊಂದು ದೇವಾಲಯ,  ಮನೆಗೊಂದು ನಾಗಬನ ಎಂದು ಪ್ರಾಣಿ ಪಕ್ಷಿಗಳನ್ನು  ಪೂಜಿಸಿ ಅವುಗಳಲ್ಲಿಯೂ ದೇವಸತ್ವವನ್ನು ಕಂಡವರಿದ್ದಾರೆ. ಅದು ಭಾರತಿಯರು ಮಾತ್ರ!  ಈ ರೀತಿಯಲ್ಲಿ ನಾನಾ ವಿಧದಿಂದ  ಪುರಾತನ ಕಾಲದಿಂದ ಕಾಡನ್ನು ರಕ್ಷಿಸಿಕೊಂಡು ಬಂದವರು ನಮ್ಮ  ಪೂರ್ವಜರು, ಅರಣ್ಯಗಳು ಸರ್ಕಾರಿಯಾದ ಅನಂತರವೇ ಅತೀ ಹೆಚ್ಚು ನಾಶವಾದದ್ದು, ಬಹುಶಃ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ಅಂದರೆ ತಪ್ಪಾಗಲಾರದು, ಅನೇಕ ಮರದ ಉದ್ಯಮದ ಕಂಪನಿಗಳಿಗೆ ಹ‌ರಾಜು ಹಾಕಿದ ನಂತರವೇ.

   ಯುನೇಸ್ಕೊ ಮಾನ್ಯತೆ ಪಡೆದು ತಾಜ್‌ಮಹಲ್‌ ಏನನ್ನು ಸಾಧಿಸಲಿಲ್ಲ ಅದು ಸ್ಥಾಪಿಸಿದ್ದು ಅಂದರೆ ಅದರ ಸುತ್ತಮುತ್ತ ಕೇವಲ ವಿದೇಶಿ ಸಂಸ್ಕೃತಿ ಮಾತ್ರ ವಾಯು ಮಾಲಿನ್ಯದಿಂದ ಅದರ ಸೌಂದರ್ಯಕ್ಕೆ ಧಕ್ಕೇಯಾಗುತ್ತಿದೆ ಅಂದರೆ ಯಾರು ಅದನ್ನು ಕೇಳುವವರಿಲ್ಲ. ಇಂದಿಗೂ ಆಗ್ರಾದ ಪ್ರಧಾನ ಬೀದಿಗಳಲ್ಲಿ ಅಂಗಡಿ, ಕಛೇರಿಗಳು ವಿದ್ಯುತ್‌ ಅಭಾವದಿಂದ ಕೊರಗುತ್ತಿವೆ. ಜವಾಬ್ದಾರಿಯುತ ಕೇಂದ್ರ, ರಾಜ್ಯ ಸರ್ಕಾರಗಳು ಹಳ್ಳಿಗಾಡಿನ ಜನರನ್ನು ತಮ್ಮ ನೈಜ ಜೀವನ ಶೆ„ಲಿಯಲ್ಲಿ ಬದುಕಲು ಅವಕಾಶ ಕಲ್ಪಿಸುವ ಅವಶ್ಯಕತೆಯಿದೆ.

   ಅಲ್ಲಿನ ಜನರನ್ನು ಕ್ಷೊàಬೆಗೊಳಪಡಿಸಿದಲ್ಲಿ ನಮ್ಮ ಗ್ರಾಮೀಣ ಜನಾಂಗದ ಜೀವನ ಸಮತೋಲನವನ್ನು ಕಳಕೊಂಡಾಂತಾಗುವುದು ನಮ್ಮ ಪಶ್ಚಿಮಘಟ್ಟಕ್ಕೆ ಯುನೇಸ್ಕೋ ಮಾನ್ಯತೆ, ಪುಷ್ಪಗಿರಿ ವನ್ಯಧಾಮ, ಆನೆಕಾರಿಡಾರ್‌, ಗ್ರೇಡರ್‌ ತಲಕಾವೇರಿ, ಹುಲಿ ಸಂರಕ್ಷಣೆಯಂತಹ ಯೋಜನೆಗಳನ್ನು ಪ್ರಧಾನ ವಿಷಯವಾಗಿರಿಸುವ ಬದಲು ನಮ್ಮ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವಲ್ಲಿ ಬುದ್ಧಿ ಜೀವಿಗಳು ಕೈ ಜೋಡಿಸುವ ಅವಶ್ಯಕತೆಯಿದೆ.

   ಮಂಗಳೂರು-ಬೆಂಗಳೂರು(ರಾಜ್ಯ ರಾಜಧಾನಿ) ದ್ವಿಪಥದ ರೈಲ್ವೆ ಯೋಜನೆ, ಅವರಲ್ಲಿ ಶತಾಬ್ದಿ, ರಾಜಧಾನಿ, ಬುಲೆಟ್‌ ಟ್ರೆŒ„ನ್‌ ಓಡಿಸುವ ಬಗ್ಗೆ ಮಂಗಳೂರು-ಬೆಂಗಳೂರು 365ಕಿ.ಮೀ, ಕೇವಲ 2 ರಿಂದ 3 ಗಂಟೆಗಳಲ್ಲಿ ತಲುಪಿ ಜೀವನದ ಅತ್ಯಮೂಲ್ಯವಾದ, ಸಮಯದ ಉಳಿತಾಯ, ಹಾಗೆ ದಿನನಿತ್ಯದ ಬಳಕೆಯ ಸಾಮಾಗ್ರಿಗಳು ರೋಡ್‌ವೇಯ ಬದಲು ರೈಲ್ವೆ ಮುಖಾಂತರ ಸರಬರಾಜು.

   ಆದರೆ, ಪ್ರತಿ ಕೆ.ಜಿ.ಗೆ 5 ರೂಪಾ„ ಉಳಿತಾಯ ಮಾಡುವ ಬಗ್ಗೆ ದಿನದಿಂದ ದಿನಕ್ಕೆ ಬರೆದಾಗುವ ಡೀಸೇಲ್‌ನ ಬದಲು, ಕರಂಟ್‌ನ ಮುಖಾಂತರ ರೈಲುಗಳನ್ನು ಓಡಿಸುವ ಬಗ್ಗೆ, ಬುದ್ಧಿ ಜೀವಿಗಳು ಸಲಹೆ ಸೂಚನೆಗಳನ್ನು ಕೊಟ್ಟು ನಮ್ಮ ಸಮಗ್ರ ಕರಾವಳಿ, ಈ ಪವಿತ್ರ ಭೂಮಿ ತುಳುನಾಡಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕಾಗಿದೆ.


  Share your views-post your Comment below
  blog comments powered by Disqus
  ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
  • Copyright @ 2009 Udayavani.All rights reserved.
  • Designed & Hosted By 4cplus