Tuesday, July 29, 2014
Last Updated: 11:55:47 AM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ವಿಡಿಯೋ ಗ್ಯಾಲರಿ
  • ಉದಯವಾಣಿ
  • ವೆ ಬ್
  • ಹುಡುಕಿ
    • ಕೃಷಿಕ ಮಹಿಳೆಯ ಸಾಧನೆ

      • ಕೃಷಿಪ್ರಿಯ

        ಬೈಲಹೊಂಗಲ ತಾಲೂಕು ಉಡಕೇರಿಯ ಕೃಷಿಕ ಮಹಿಳೆ ಲಕ್ಷ್ಮೀ ಲೋಕೂರ ಸಾವಯವ ಕೃಷಿ ಪದ್ಧತಿಯಿಂದ ಸಾಧನೆ ಮಾಡಿದ್ದಾರೆ.

        ಲಕ್ಷ್ಮೀ ಲೋಕೂರ ಅಭಿವೃದ್ಧಿಪಡಿಸಿರುವ ಸಾವಯವ ಕೃಷಿ ಕೇಂದ್ರವನ್ನು ಸಂಶೋಧನಾತ್ಮಕ ಸಮೀಕ್ಷೆ ಮಾಡಲು ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದ ಭೂಗೋಳಶಾಸ್ತ್ರದ ಸುಮಾರು 60 ವಿದ್ಯಾರ್ಥಿಗಳು ಪೊÅ| ಎಸ್‌.ಎನ್‌. ಮೂಲಿಮನಿ ಹಾಗೂ ಪೊÅ| ಜಿ.ಎಸ್‌. ಶೀಲಿ ಅವರ ನೇತೃತ್ವದಲ್ಲಿ ತೆರಳಿದರು.

        ಲೋಕೂರ ಅವರು ಸಾವಯವ ಗೊಬ್ಬರ ತಯಾರಿಸುವ ಕ್ರಮ, ವ್ಯವಸಾಯದ ಬಗ್ಗೆ ವಿವರ ಮಾಹಿತಿ ನೀಡಿದರು. ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ ಪಡೆದಿರುವ ಲಕ್ಷ್ಮೀಯವರು ಕೃಷಿಯಲ್ಲಿ ಮಾಡಿರುವ ಸಾಧನೆ ಉಲ್ಲೇಖನೀಯ.

        2002ರಲ್ಲಿ ಕೇವಲ 7ಎಕರೆ 22 ಗುಂಟೆ ಹೊಲದಲ್ಲಿ ಸಾವಯವ ಕೃಷಿ ಆರಂಭಿಸಿ ಇಂದು 22 ಎಕರೆ ಪ್ರದೇಶದ‌ವರೆಗೆ ವಿಸ್ತ¤ರಿಸಿದ್ದಾರೆ. ಸಾವಯವ ಗೊಬ್ಬರವನ್ನು, ಎರೆಹುಳುವಿನ ಗೊಬ್ಬರವನ್ನು ತಮ್ಮ ಹೊಲದಲ್ಲಿ ತಯಾರಿಸಿ ಭೂಮಿಗೆ ಹಾಕುತ್ತಾರೆ. ಒಳ್ಳೆಯ ಗುಣಮಟ್ಟ, ಆರೋಗ್ಯಕರವಾದ ರಸಾಯನಿಕರಹಿತ ಎಲ್ಲ ರೀತಿಯ ತರಕಾರಿ, ಹಣ್ಣುಗಳು, ಕಾಯಿಪಲ್ಲೆಗಳು, ಎಣ್ಣೆಯ ಬೆಳೆಗಳನ್ನು ಬೆಳೆದು ಕೃಷಿಯಲ್ಲಿ ಮಾದರಿಯಾಗುವ ಸಾಧನೆ ಮೆರೆದಿದ್ದಾರೆ.

        22 ಎಕರೆ ಪ್ರದೇಶದಲ್ಲಿ ಅಂತರಜಲ ವೃದ್ಧಿಸಿ, ಬದುಗಳನ್ನು ನಿರ್ಮಿಸಿ, ಇಂಗುಗುಂಡಿಗಳನ್ನು ನಿರ್ಮಿಸಿ, ಮಣ್ಣು ಸವಕಳಿ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದ ಬಗೆಯನ್ನು ವಿದ್ಯಾರ್ಥಿಗಳಿಗೆ ತೋರಿಸಿದರು.

        ಹನಿ, ತುಂತುರು ನೀರಾವರಿ, ತೇವಾಂಶ ಉಳಿಯುವ ವ್ಯವಸ್ಥೆ ಮಾಡಿ ಮಾದರಿ ಕೃಷಿ ಪದ್ಧತಿಗೆ ಬುನಾದಿ ಹಾಕಿದ್ದಾರೆ. ಹೊಲದ ಸುತ್ತಲು ಹತ್ತು ಹಲವು ಜಾತಿಯ ನೆರಳು ನೀಡುವ ಗಿಡಗಳನ್ನು ಬೆಳೆಸಿದ್ದು, ಪರಿಸರ ಸಂರಕ್ಷಣೆಯ ಸಂಕೇತವಾಗಿದೆ. ದೇಶಿಯ ತಳಿಗಳನ್ನು ಉಳಿಸಿ ಬೆಳೆಸಿರುವುದು ಇತರ ಕೃಷಿಕರನ್ನು ತಮ್ಮತ್ತ ಗಮನಿಸುವಂತೆ ಮಾಡಿದ್ದಾರೆ.

        ಪ್ರಾಣಿ ಪ್ರಿಯರಾದ ಲಕ್ಷ್ಮೀಯವರು ದೇಶಿಯ ತಳಿಯ ಆಕಳುಗಳು, ಎತ್ತುಗಳು, ಕೋಳಿಗಳನ್ನು ಸಾಕಿದ್ದಾರೆ. ಯುವಕರು ಕೇವಲ ನೌಕರಿ ಅವಲಂಭಿಸದೆ ಕೃಷಿ ಕಾಯಕಕ್ಕೆ ಅನುಕೂಲವಿದ್ದ ಸಾವಯವ ಕೃಷಿ ವ್ಯವಸಾಯವನ್ನು ಮಾಡಲು ಮುಂದಾಗಬೇಕು.

        ಸ್ವದೇಶಿ ತಳಿ ಹಾಗೂ ರಾಷ್ಟ್ರೀಯ ತಳಿಗಳನ್ನು ಸಂರಕ್ಷಿಸುವುದರ ಜೊತೆಗೆ ಶ್ರದ್ಧೆ, ನಿಷ್ಠೆ ಹಾಗೂ ಸತತ ಪರಿಶ್ರಮದಿಂದ ಕೃಷಿ ವೃತ್ತಿ ಮಾಡಿದರೆ ಇದರಷ್ಟು ಲಾಭ ಬೇರಾವ ಉದ್ಯೋಗದಲ್ಲಿ ಸಿಗಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಸಾವಯವ ಕೃಷಿ, ಶೂನ್ಯ ಬಂಡವಾಳದ ಕೃಷಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.

        ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ. ತೊಟ್ಟಿಲು ತೂಗುವ ಕೈ ಜಗತ್ತನ್ನೆ ತೂಗುಬಲ್ಲದು ಎಂಬ ಮಾತಿನಂತೆ ಮಹಿಳೆಯರು ಅಬಲೆಯರಲ್ಲ, ಪುರುಷರಂತೆ ಸಮಾಜದಲ್ಲಿ ತಾವೂ ಸಬಲೆಯರಾಗಿ ಬಾಳಬಹುದು, ಸ್ವಾವಲಂಬಿ ಜೀವನ ಸಾಗಿಸಬಹುದು ಎಂಬುದನ್ನು ಇವರು ಸಾಧಿಸಿ ತೋರಿಸಿದ್ದಾರೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
      • Copyright @ 2009 Udayavani.All rights reserved.
      • Designed & Hosted By 4cplus