Thursday, July 31, 2014
Last Updated: 4:53:02 PM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ವಿಡಿಯೋ ಗ್ಯಾಲರಿ
  • ಉದಯವಾಣಿ
  • ವೆ ಬ್
  • ಹುಡುಕಿ
    • ಬಾಲಕಿಯ ನಿತ್ಯ ಕಸರತ್ತು

      • ಹೃದಯವಂತ

        ಪೆನ್ನು ಪುಸ್ತಕ ಹಿಡಿಯಬೇಕಾದ ಬಾಲಕಿ ಹೊಟ್ಟೆ ಹೊರೆಯಲು ಹಗ್ಗದ ಮೇಲೆ ನಡೆಯುತ್ತ, ದಿನಕ್ಕೊಂದು ಊರು ಸುತ್ತುವುದನ್ನು ಕಂಡಾಗ ಕಲ್ಲು ಹೃದಯವೂ ಕರಗುತ್ತದೆ !

        ಪೆನ್ನು ಪುಸ್ತಕ ಹಿಡಿಯಬೇಕಾದ ಬಾಲಕಿಯಿಂದ ನಿತ್ಯ ಕಸರತ್ತು. ಹೊಟ್ಟೆ ಹೊರೆಯಲು ಹಗ್ಗದ ಮೇಲೆ ನಡೆಯುತ್ತ, ದಿನಕ್ಕೊಂದು ಊರು ಸುತ್ತುತ್ತಾಳೆ. ಇದು ಕಥೆಯಲ್ಲ.  ಪ್ರತಿನಿತ್ಯದ ಹೋರಾಟ. ಆಲಮಟ್ಟಿಯಲ್ಲಿ ಕಂಡು ಬಂದ ಕರುಣಾಜನಕ ದೃಶ್ಯವಿದು.

        ಸಮವಸ್ತ್ರ  ಧರಿಸಿ ಓರಗೆಯವರೊಂದಿಗೆ ತಾನೂ ಶಾಲೆಗೆ ಹೋಗಬೇಕು, ಅವರ ಜೊತೆ ಆಟ- ಪಾಠದಲ್ಲಿ ಭಾಗವಹಿಸಬೇಕೆಂಬ ಮಹದಾಸೆ ಇದ್ದರೂ, 8 ವರ್ಷ ವಯಸ್ಸಿನ ಈ ಬಾಲೆ ಕುಟುಂಬ ನಿರ್ವಹಣೆಗಾಗಿ ಪಾಲಕರ ಜೊತೆಗೂಡಿ ದೊಂಬರಾಟದ ವಿವಿಧ ಕಸರತ್ತು ಸಾರ್ವಜನಿಕರೆದುರು ಪ್ರದರ್ಶಿಸುತ್ತಾಲೆ. ಅವರು ನೀಡುವ ಬಿಡಿಗಾಸಿನಿಂದ ಸಾಗಬೇಕು ಇವರ ಕುಟುಂಬ ನಿರ್ವಹಣೆ.

        ಮಧ್ಯಪ್ರದೇಶ ರಾಜ್ಯದ ರಾಯಪುರ ಜಿಲ್ಲೆಯ ಸೈಸಲಾ ಗ್ರಾಮದ ಅರುಣಕುಮಾರ ಎಂಬವರ ಮಗಳಾದ ರೋಷಿನಿಯ ನಿತ್ಯದ ಬದುಕು ಇದು. ದೊಂಬರಾಟಕ್ಕೆ ತಂದೆ ತಾಯಿಗೆ ನೆರವಾಗುತ್ತಾಳೆ. ಆಟದ ಪ್ರಮುಖ ಪಾತ್ರಧಾರಳೂ ಇವಳೇ. ರಾಡುಗಳಿಂದ ತಯಾರಿಸಿದ ವಿವಿಧ ಅಳತೆಯ ಚಿಕ್ಕ ಚಿಕ್ಕ ವೃತ್ತಾಕಾರದ ಸರಳಿನಲ್ಲಿ ಸಾಹಸ ಪ್ರದರ್ಶನ ಮಾಡುವುದನ್ನು ವೀಕ್ಷಿಸಿದಾಗ ಎಂಥ ಕಲ್ಲು ಹೃದಯವೂ ಕರಗದೇ ಇರದು.

        ಸಮತಟ್ಟಾದ ರಸ್ತೆಯಲ್ಲಿ ಸರಿಯಾಗಿ ನಡೆಯಲೂ ಬಾರದ ಜನರಿರುವ ಈ ದಿನಗಳಲ್ಲಿ ನಾಲ್ಕು ಕೋಲುಗಳ ಮಧ್ಯೆ ಸಿಕ್ಕಿಸಿದ 15 ಅಡಿ ಉದ್ದದ ಹಗ್ಗದ ಮೇಲೆ ಯಾರ ಸಹಾಯವೂ ಇಲ್ಲದೇ ತಲೆಯ ಮೇಲೆ ಐದು ಚಿಕ್ಕ ಲೋಟಗಳನ್ನು ಇರಿಸಿ ಅವುಗಳಲ್ಲಿ ನೀರು ತುಂಬಿ ನೀರು ಚೆಲ್ಲದಂತೆ ಹಗ್ಗದ ಮೇಲೆಯೇ ನಡೆದಾಗ ಅಲ್ಲಿ ಸೇರಿದ್ದ ಜನತೆ ಹುರಿದುಂಬಿಸುತ್ತಾರೆ. ಭಯವಿಲ್ಲದೇ ಅದೇ ಭಂಗಿಯಲ್ಲಿ ಹಗ್ಗದ ಮೇಲೆಯೇ ಸಣ್ಣ ಸೈಕಲ್‌ನ ರಿಮ್‌ನ ಮಧ್ಯಭಾಗದಲ್ಲಿ ತನ್ನ ಎರಡೂ ಕಾಲುಗಳನ್ನು ಇರಿಸಿ ಅದರ ಮೂಲಕವೇ ಸಂಚರಿಸಿದಾಗ ಸೇರಿದ್ದ ಜನತೆ ತಾವು ನೋಡುತ್ತಿರುವುದು ಕನಸೋ ನನಸೋ ಎನ್ನುವಂತೆ ತಮ್ಮ ಕಣ್ಣಾಲಿಗಳನ್ನು ಪರೀಕ್ಷಿಸುವಂತಾಗುತ್ತದೆ.

        ದೊಂಬರಾಟದಲ್ಲಿ ತೊಡಗುವ ಇಂಥ ಕಡುಬಡತನದ ಕಲಾವಿದರನ್ನು ಗುರ್ತಿಸಿ ಅವರಿಗೆ ವಾಸಿಸಲು ಮನೆ ಹಾಗೂ ಅವರ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತಾದಾಗ ಮಾತ್ರ ಸುಂದರ ಭಾರತ ನಿರ್ಮಿಸಲು ಸಾಧ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸುವರೇ ಕಾದು ನೋಡಬೇಕು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
      • Copyright @ 2009 Udayavani.All rights reserved.
      • Designed & Hosted By 4cplus