Saturday, December 20, 2014
Last Updated: 10:20:50 AM IST
 • ನಾನೆಲ್ಲಿರುವೆ:
 • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ನಿಸರ್ಗದ ನೇಕಾರ - ಜೇಡ !

   • ಪ್ರಸಾದ್‌ ಮೈರ್ಕಳ

    ಮನೆಯಂಗಳದಲ್ಲಿ, ಮಾಡುಗಳಲ್ಲಿ, ಸಂದುಗೊಂದುಗಳಲ್ಲಿ, ಮೂಲೆಮೂಲೆಗಳಲ್ಲಿ ಜಾಡ ಕಟ್ಟಿಕೊಂಡಿರುವ ಜೇಡರ ಬಲೆಗಳನ್ನು ಕಾಣದವರಿಲ್ಲ. ಅತೀ ಸೂಕ್ಷ್ಮ ಪರದೆಯಾಗಿ ಅತೀ ಶಿಥಿಲವಾಗಿ ಕಾಣುವ ಈ ಜೇಡದ ಬಲೆಯ ನೂಲು ಜಗತ್ತಿನಲ್ಲೇ ಅತ ಗಟ್ಟಿಯಾದ ವಸ್ತುವೆಂದರೆ ಆಶ್ಚರ್ಯವಲ್ಲವೇ ?

    ಕೀಟಗಳ ಅತ್ಯಂತ ದುಷ್ಟಗಳೆಂದರೆ ನಮ್ಮ ಮನೆಯ ಈ ಜೇಡರ ಹುಳುಗಳೇ! ಭಾರತದಲ್ಲಿಯೇ ಇವುಗಳ ಸುಮಾರು 500 ಪ್ರಕಾರಗಳು ಕಂಡುಬರುತ್ತವೆ. ಇವುಗಳಲ್ಲಿ ಕೆಲವು ಅತ್ಯಂತ ಅಪಾಯಕಾರಿಗಳು ಉದಾಹರಣೆಗೆ black widow spider, brown recluse spider ಅತೀ ಅಪಾಯಕಾರಿಗಳಂತೆ.

    ಇವು ತಮ್ಮದೇ ಆದ ವಿಶಿಷ್ಠ ರೀತಿಯಲ್ಲಿ ಬೇಟೆಯಾಡುತ್ತವೆ. ಕೆಲವು ಸಲ ಜೊಲ್ಲು ಸುರಿಸುವ ಜೇಡ ಸೋಮಾರಿ ಯಾಗಿ, ಮುಂದಿರುವ ಬೇಟೆಯನ್ನು ಮುಟ್ಟದೇ ಹಾಗೆ ಬಿದ್ದುಕೊಳ್ಳುತ್ತವೆ. ಕೆಲವು ಸಲ ಅದು ತನ್ನ ದೇಹವನ್ನು ತೆವಳುತ್ತ ನೊಣದ ಹತ್ತಿರ ಬಂದು ಬಾಯಿಯಿಂದ ಜೊಲ್ಲು ಸುರಿಸುತ್ತದೆ. ಅಂಟಾಗಿರುವ ಅದರ ಉಗುಳಿಗೆ ತಗುಲಿ ನೊಣ ನಿಂತಲ್ಲೇ ನಿಲ್ಲುತ್ತದೆ. ಮೊದಲು ತನ್ನ ವಿಷಪೂರಿತ ಹಲ್ಲುಗಳಿಂದ ನೊಣವನ್ನು ಕಚ್ಚಿದಾಗ ಅದು ಅರೆ ಪ್ರಜ್ಞಾವಸ್ಥೆಗೆ ತಲುಪುತ್ತದೆ. ಅನಂತರ ಜೇಡ ಆರಾಮದಿಂದ ಬೇಟೆಯನ್ನು ಮೆಲ್ಲುತ್ತ ತೃಪ್ತಿಪಡುತ್ತದೆ.

    ಚೀನಾ ದೇಶದಲ್ಲಿ ಜೇಡಗಳನ್ನು ಹಿಂದಿನ ಕಾಲದಿಂದಲೂ ಉಪದ್ರವಕಾರಿ ಕೀಟಗಳಿಂದ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳವುದಕ್ಕೆ ಉಪಯೋಗಿಸುತ್ತಿದ್ದರು. ನಸುಗಂದು ನೇರಳೆ ಬಣ್ಣದ ಜೇಡ (banana spider) ಮನೆಯಲ್ಲಿರುವ ಜಿರಲೆಗಳನ್ನು ತಿಂದು, ಮನೆಯನ್ನು ಸ್ವತ್ಛವಾಗಿಡಲು ಸಹಕರಿಸುತ್ತದೆ. ಸಣ್ಣ ಪುಟ್ಟ ಹಲ್ಲಿಗಳನ್ನೂ ಕೂಡಾ ತಿನ್ನುತ್ತದೆಯೆಂದರೆ ವಿಚಿತ್ರ ಅಲ್ಲವೇ?

    ಕೆಲವು ಜೇಡಗಳು ಹೆಣೆಯುವ ರೇಶ್‌ಮೆ ಎಳೆಗಳು ಉಕ್ಕಿಗಿಂತಲೂ ಬಲಿಷ್ಠವಾಗಿರುತ್ತವೆಂಬುದು ಕೀಟ ವಿಜ್ಞಾನಿಗಳ ಅಭಿಪ್ರಾಯ. ಜೇಡದ ರೇಶ್‌ಮೆಯ ಶಕ್ತಿ, ದೃಢತೆ, ಸಿœತಿಸ್ಥಾಪನಾಶಕ್ತಿ ವಿಜ್ಞಾನಿಗಳನ್ನು ಅಚ್ಚರಿಗೊಳಿಸುತ್ತಲೇ ಬಂದಿದೆ. ಈ ನೈಸರ್ಗಿಕ ವಸ್ತುವಿಗೆ ಈ ಅಸಾಮಾನ್ಯ ಗುಣಗಳು ಹೇಗೆ ಪ್ರಾಪ್ತವಾಗಿವೆ ಎಂಬುದು ನಿಗೂಢ. ತನ್ನ ಉದ್ದದ 2 ರಿಂದ 4 ರ ವರೆಗೆ ವಿಸ್ತರಣೆಗೊಂಡಾಗ್ಯೂ ಕಡಿಯುವುದಿಲ್ಲ.

    ಅದರಿಂದ ಹೊಸೆದ ಬಟ್ಟೆಯೊಳಗೆ ನೀರು ಸೋರುವುದಿಲ್ಲ ಮತ್ತು 40 ಡಿಗ್ರಿ ಸೆಂಟಿಗ್ರೇಡ್‌ ಉಷ್ಣಾಂಶದಲ್ಲಿ ಶಿಥಿಲಗೊಳ್ಳುವುದಿಲ್ಲ. ಪ್ರಾಚೀನ ಗ್ರೀಕರು ರಕ್ತಸ್ರಾವವನ್ನು ನಿಲ್ಲಿಸಲು ಗಾಯಗಳಿಗೆ ಜೇಡನ ಜಾಡವನ್ನು ಬಳಸುತ್ತಿದ್ದರು. ಪ್ರಾನ್ಸಿನ ಒಬ್ಬ ನಿಸರ್ಗವಾದಿ ಹೆಂಗಸರ ಕಾಲು ಚೀಲ ಮತ್ತು ಕೈಚೀಲಗಳನ್ನು ಜೇಡರ ರೇಶ್‌ಮೆ ಯಿಂದ ತಯಾರು ಮಾಡುತ್ತಿದ್ದನಂತೆ.

    ಜೇಡ ತನ್ನ ರೇಶ್‌ಮೆಯನ್ನು ಹಲವು ಉಪಯೋಗಕ್ಕಾಗಿ ಉತ್ಪಾದಿಸುತ್ತದೆ. ಬಲೆಯನ್ನು ಹೆಣೆಯುವುದಕ್ಕೆ, ಮೊಟ್ಟೆಗಳನ್ನಿಡುವ ಚೀಲಗಳಿಗಾಗಿ, ಬಲೆಯಲ್ಲಿ ಸೆರೆ ಹಿಡಿದ ಕ್ರಿಮಿಕೀಟಗಳನ್ನು ಸುತ್ತಿ ಬಂಧಿಸಲು ಹಾಗೂ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಜಿಗಿಯಲು, ಅಪಾಯದಿಂದ ಸಂರಕ್ಷಿಸಿಕೊಳ್ಳಲು ನೆರವಾಗುತ್ತದೆ.

    ಈ ಜೇಡನ ರೇಶ್‌ಮೆ ಅದರ ಗ್ರಂಥಿಗಳಲ್ಲಿ ಸ್ರವಿಸುವ ಪ್ರೋಟೀನ್‌ ರಸದಿಂದ ಮಾಡಲ್ಪಟ್ಟಿದೆ. ಜೇಡ ತನ್ನ ಹೊರಮೈಯಲ್ಲಿರುವ ಚಲಿಸುವ ಬೆರಳುಗಳನ್ನು ಉಬ್ಬಿಸಿ ವಿವಿಧ ದಿಕ್ಕುಗಳಲ್ಲಿ ತಿರುಗಿಸುತ್ತಾ ಸ್ವಿನ್ನರೆಬ್‌ಎಂಬ ಕೊಳವೆಗಳ ಮೂಲಕ ಈ ಪ್ರೋಟೀನ್‌ ರಸವನ್ನು ಹೊರಸೂಸುತ್ತವೆ.

    ಜೇಡಗಳು ಸೂಕ್ಷ್ಮ ಕೀಟಗಳೆಂದು ಭಾವಿಸಿದರೂ ಮಾನವನಿಗೆ ಅದರಿಂದ ಉಪಕಾರವಿದೆಯೆಂಬುದು ಅಂತೂ ಸತ್ಯ. ಹೀಗೆ ನಿಸರ್ಗದಲ್ಲಿ ಹಲವಾರು ಜೀವಿಗಳಿರುತ್ತವೆ. ಎಲ್ಲದಕ್ಕೂ ಅದರದ್ದೇ ಆದ ವಿಶೇಷತೆಗಳಿವೆ.

    ಇಂತಹ ವಿಶೇಷತೆಗಳನ್ನು ವಿಚಿತ್ರಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು ಅಲ್ಲವೇ?


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus