ಅಂಬಾಸಿಡರ್ ಪ್ರಿಯ
ಭಾರತದಲ್ಲಿ ಗರಿಷ್ಠ ಬಳಕೆಯಾಗುತ್ತಿದ್ದ ಅಂಬಾಸಿಡರ್ ಕಾರುಗಳಿಗೆ ಬೇಡಿಕೆ ಕಮ್ಮಿಯಾಗಿದೆ; ಆದರೂ ಅವುಗಳ ಟೆಂಪೋ ರೂಪಾಂತರ ಜನಪ್ರಿಯವಾಗುತ್ತಿದೆ !
ಆಧುನಿಕ ತಂತ್ರಜ್ಞತೆಯ ಕಾರುಗಳು ರಸ್ತೆಗಿಳಿದ ಬಳಿಕ ಭಾರತದಲ್ಲಿ ಗರಿಷ್ಠ ಬಳಕೆಯಾಗುತ್ತಿದ್ದ ಅಂಬಾಸಿಡರ್ ಕಾರುಗಳಿಗೆ ಬೇಡಿಕೆ ಕಮ್ಮಿಯಾಗಿದೆ. ಉತ್ಪಾದನೆ ಕೂಡ ಸ್ಥಗಿತಗೊಂಡಿದೆ. ಬೇಡಿಕೆ ಇದ್ದರೆ ಮಾತ್ರ ಈಗ ಅಂಬಾಸಿಡರ್ ಕಾರು ಉತ್ಪಾದನೆಯಾಗುತ್ತದೆ. ಕೇರಳ, ಹೊಸದಿಲ್ಲಿಗಳಲ್ಲಿ ಈಗಲೂ ಅಂಬಾಸಿಡಾರ್ ಕಾರುಗಳೇ ಜನಪ್ರಿಯ ವಾಹನಗಳು.
ಎಲ್ಲೆಡೆ ಈಗ ಅಂಬಾಸಿಡಾರ್ ಕಾರುಗಳು ಮೂಲೆ ಗುಂಪಾಗುತ್ತಿವೆ. ಟೂರಿಸ್ಟ್ ಕಾರುಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಈ ಸಂದರ್ಭದಲ್ಲಿ ಅಂಬಾಸಿಡರ್ ಕಾರನ್ನು ಸರಕು ಸಾಗಾಟ ಟೆಂಪೋ ಆಗಿ ಪರಿವರ್ತಿಸಿರುವುದನ್ನು ಚಿತ್ರದಲ್ಲಿ ನೋಡಿ. 10 ಕ್ವಿಂಟಾಲ್ ತೂಕದ ತನಕ ಸುಲಭವಾಗಿ ಸಾಗಾಟ ಮಾಡುವ ಸಾಮರ್ಥ್ಯ ಅಂಬಾಸಿಡರ್ ಕಾರ್ ಎಂಜಿನ್‌ಗೆ ಇದೆ.
ಬೇಡಿಕೆ ಇಲ್ಲದ ಕಾರನ್ನು ಕಡಿಮೆ ಕ್ರಯಕ್ಕೆ ಮಾರಾಟ ಮಾಡುವ ಬದಲು ಅದನ್ನು ಸರಕು ಸಾಗಾಟ ವಾಹನವಾಗಿ ಪರಿವರ್ತಿಸುವ ಮೂಲಕ ಇನ್ನಷ್ಟು ವರ್ಷಗಳ ಕಾಲ ಬಳಕೆ ಮಾಡುವ ಒಳ್ಳೆಯ ಆಲೋಚನೆ ಇದು. ಕೃಷಿಕರೊಬ್ಬರು ಹಳೆ ಅಂಬಾಸಿಡರ್ ಕಾರನ್ನು ಈ ರೀತಿ ಪರಿವರ್ತನೆ ಮಾಡಿದ್ದಾರೆ.–
ಹಳೆಯ ಕಾರುಗಳನ್ನು ಮೂಲೆಗುಂಪು ಮಾಡುವ ಬದಲು ಅವುಗಳನ್ನು ಅಲ್ಪಸ್ವಲ್ಪ ರೂಪಾಂತರಿಸಿ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದರಲ್ಲಿ ಜಾಣ್ಮೆ ಇದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಅಲ್ಲವೇ ?