ಬೆಂಗಳೂರು : ವಿಜಾನನದ ಬಗ್ಗೆ ಓದುಗರು ಹೆಚ್ಚಾಗಿದ್ದು ಅವರ ದಣಿವನ್ನು ಆರಿಸಲು ಯುವ ಬರಹಗಾರರು ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚು ಬರಬೇಕು ಎಂದು ಪರಿಸರವಾದಿ ಹಾಗೂ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಕರೆ ನೀಡಿದರು.ಆಕೃತಿ ಪುಸ್ತಕ ಹಾಗೂ ಪೆನ್ ಸರ್ಕಲ್ ನಗರದಲ್ಲಿ ಏರ್ಪಡಿಸಿದ್ದ ಕೊಳ್ಳೆಗಾಲ ಶರ್ಮ ಆವರ 'ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿಜ್ಞಾನವು ಕನ್ನಡದಲ್ಲಿ ಆಳವಾಗಿ ಬೇರೂರಿದ್ದು, ಇತರ ಭಾಷೆಗಳಿಗಿಂತ ಕನ್ನಡ ಭಾಷೆ ವಿಜ್ಞಾನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದು ಯುವ ಬರಹಗಾರರಿಗೆ ಮಾದರಿ ಎಂದರು.ಫೊÅà. ಅಡ್ಯನಡ್ಕ ಕೃಷ್ಣಭಟ್ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿ, ಇಂದು ಅಂತರ್ಜಾಲದಲ್ಲಿ ಪುಸ್ತಕದ ವಾಸನೆಯನ್ನು ಕಂಡುಕೊಳ್ಳುವ ಅವಶ್ಯಕತೆ ಇದೆ. ಪೆನ್ನು, ಕಾಗದ ಮರೆಯಾಗಿದೆ. ಆದರೂ ಬರೆಯುವ ಆಸಕ್ತಿ ಬೆಳೆಯಬೇಕು ಎಂದು ಹೇಳಿದರು.ಪತ್ರಕರ್ತ ಸುಧೀಂದ್ರ ಹಾಲೊªಡ್ಡೇರಿ ಕೃತಿ ಕುರಿತು ಮಾತನಾಡಿ, ಬಡ ದೇಶಗಳಲ್ಲಿ ಕೊಳಕು ಹೆಚ್ಚು ಎಂಬ ಭಾವನೆ ಇದೆ. ಆದರೆ, ಸಮೀಕ್ಷೆಯ ಪ್ರಕಾರ ಆ ದೇಶಗಳಲ್ಲಿ ಪರಿಸರ ಜಾಗೃತಿ ಹೆಚ್ಚಾಗಿದ್ದು ಪರಿಸರ ಮಾಲಿನ್ಯ ಕೊಡುಗೆ ಕಡಿಮೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜೆ.ಆರ್ ಲಕ್ಷ್ಮಣರಾವ್, ಆರ್.ಎಸ್ ರಾಜಾರಾಮ್ ಅವರನ್ನೂ ಪೆನ್ ಸರ್ಕಲ್ ವತಿಯಿಂದ ಸನ್ಮಾನಿಸಲಾಯಿತು. ಹಿರಿಯ ಬರಹಗಾರ ಟಿ.ಆರ್ ಆನಂತರಾಮು ಕೃತಿ ಬಿಡುಗಡೆ ಮಾಡಿದರು.