Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಸದ್ಯದಲ್ಲಿಯೇ ಪರಿಷ್ಕೃತ ದರ ಮತ್ತಷ್ಟು ದುಬಾರಿ
  • ಖಾಸಗಿ ವೋಲ್ವೋ ಬಸ್‌ಗಳಿಂದ ಪ್ರಯಾಣಿಕರ ಸುಲಿಗೆ
  • ವಾರದಲ್ಲಿ 3 ದಿನ ದುಪ್ಪಟ್ಟು ವಸೂಲಿ!
    • ವಿಜಯಕುಮಾರ್‌ ಚಂದರಗಿ | Jun 29, 2011

      ಬೆಂಗಳೂರು: ತೈಲ ಬೆಲೆ ಏರಿಕೆ ಬೆನ್ನಲ್ಲೇ ಪ್ರಯಾಣ ದರ ಏರಿಕೆಯಿಂದ ತತ್ತರಿಸಿರುವ ಬಸ್‌ ಪ್ರಯಾಣಿಕರಿಂದ ಖಾಸಗಿ ಟ್ರಾವೆಲ್ಸ್‌ಗಳು ಮತ್ತೂಂದು ರೀತಿಯ ಸುಲಿಗೆಗೆ ನಿಂತಿವೆ. ಆದರೆ, ಈ ಸುಲಿಗೆ ಪ್ರಯಾಣಿಕರ ಅರಿವಿಗೆ ಬಾರದಂತೆ ನಿತ್ಯ ನಡೆಯುತ್ತಿದೆ.

      ವಿವಿಧ ಕೆಲಸಗಳ ನಿಮಿತ್ತ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನಿಂದ ದೂರದ ಊರುಗಳಿಗೆ ಸಂಚರಿಸುವ- ದೂರದ ಊರುಗಳಿಂದ ಬೆಂಗಳೂರಿಗೆ ಆಗಮಿಸುವ ಹಾಗೂ ವಾರದ ಅಂತ್ಯಕ್ಕೆ 'ಮೋಜು-ಮಸ್ತಿ' ಮಾಡಲು ತೆರಳುವ ಪ್ರಯಾಣಿಕರೇ ಟ್ರಾವೆಲ್ಸ್‌ಗಳ ಹರಕೆಯ ಕುರಿ!

      ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯ ಹೈಟೆಕ್‌ ಬಸ್‌ಗಳಾದ ವೋಲ್ವೊ ಮತ್ತು ರಾಜಹಂಸ ಪ್ರಯಾಣ ದರಕ್ಕೂ (ಪರಿಷ್ಕೃತ) ಹಾಗೂ ಖಾಸಗಿ ಟ್ರಾವೆಲ್ಸ್‌ಗಳು ವಸೂಲಿ ಮಾಡುತ್ತಿರುವ ವೋಲ್ವೊ ಬಸ್‌ಗಳ ಪ್ರಯಾಣ ದರ (ಇನ್ನೂ ಪರಿಷ್ಕೃತಗೊಂಡಿಲ್ಲ!)ಕ್ಕೂ ಹೋಲಿಸಿದಾಗ ಈ ಹಗಲು ದರೋಡೆ ಕಂಡುಬರುತ್ತದೆ.

      ಡೀಸೆಲ್‌ ಬೆಲೆ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಎಲ್ಲಾ ಪ್ರಕಾರದ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡಿ, ಆದೇಶ ಹೊರಡಿಸಿತು. ಆದರೆ, ಈ ಪರಿಷ್ಕೃತ ದರವನ್ನು ವಿವಿಧ ಖಾಸಗಿ ಟ್ರಾವೆಲ್ಸ್‌ಗಳು ನಿಗದಿಪಡಿಸಿರುವ ದರದಲ್ಲಿ ನೂರಾರು ರೂ. ವ್ಯತ್ಯಾಸ ಕಂಡುಬರುತ್ತದೆ. ಈ ಮಧ್ಯೆ ಖಾಸಗಿ ಟ್ರಾವೆಲ್ಸ್‌ಗಳ ಮಾಲಿಕರು ಡೀಸೆಲ್‌ ಬೆಲೆ ಏರಿಕೆ ನೆಪದಲ್ಲಿ ಇನ್ನಷ್ಟು ಪ್ರಯಾಣ ದರ ಹೆಚ್ಚಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈ ಎಲ್ಲ ಹೆಚ್ಚಳಕ್ಕೂ ಪ್ರಯಾಣಿಕರೇ ತಲೆ ಕೊಡಬೇಕಾಗಿದೆ.

      ಶುಕ್ರವಾರ, ಶನಿವಾರ, ಭಾನುವಾರ ದುಪ್ಪಟ್ಟು!

      ಎಸ್‌ಆರ್‌ಎಸ್‌, ಶರ್ಮಾ, ನ್ಯಾಷನಲ್‌ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಟ್ರಾವೆಲ್‌ ಏಜೆನ್ಸಿಗಳು ನಗರದ ಮೆಜೆಸ್ಟಿಕ್‌ ಮುಂಭಾಗದಲ್ಲಿ ಬೀಡುಬಿಟ್ಟಿವೆ. ಕೆಎಸ್‌ಆರ್‌ಟಿಸಿಯಂತೆ ಎಲ್ಲ ಟ್ರಾವೆಲ್ಸ್‌ಗಳ 'ಹೈಟೆಕ್‌' ಬಸ್‌ಗಳು ದೂರದ ಊರುಗಳಿಗೆ ಸಂಚಾರ ಮಾಡುತ್ತವೆ. ಆದರೆ, ಪ್ರಯಾಣ ದರ ಮಾತ್ರ ಭಿನ್ನವಾಗಿವೆ. ಅಷ್ಟಕ್ಕೂ ಟ್ರಾವೆಲ್ಸ್‌ಗಳ ಪ್ರಯಾಣ ದರ ನಿಗದಿತವಾಗಿರುವುದಿಲ್ಲ. ವಾರದಲ್ಲಿ ನಾಲ್ಕು ದಿನ ಮಾತ್ರ ನಿಗದಿತ ದರ. ಉಳಿದ ಮೂರು ದಿನ ದುಪ್ಪಟ್ಟು!

      ಇದನ್ನು ಸ್ವತಃ ಟ್ರಾವೆಲ್‌ ಏಜೆನ್ಸಿಗಳೇ ಒಪ್ಪಿಕೊಳ್ಳುತ್ತವೆ. 'ಕೆಎಸ್‌ಆರ್‌ಟಿಸಿ ವೋಲ್ವೊ ಬಸ್‌ಗಳಿಗೆ ಹೋಲಿಸಿದರೆ ನಮ್ಮ ದರ ಏನೂ ಅಲ್ಲ. ಸುರಕ್ಷಿತವಾಗಿ ಕೊಂಡೊಯ್ಯುತ್ತೇವೆ. ಬಸ್‌ನಲ್ಲಿ ಬ್ಲಾಂಕೆಟ್‌, ನೀರು, ಚಿಪ್ಸ್ ಸೇರಿದಂತೆ ಉತ್ತಮ ಸೌಕರ್ಯಗಳನ್ನೂ ಒದಗಿಸುತ್ತೇವೆ. ಹೀಗಿರುವಾಗ, ಬಸ್‌ ಪ್ರಯಾಣ ದರ ಅದಕ್ಕೆ ತಕ್ಕಂತೆ ನಿಗದಿಪಡಿಸಲಾಗಿದೆ' ಎಂಬುದು ಟ್ರಾವೆಲ್‌ ಏಜೆಂಟ್‌ ಶಂಕರಪ್ಪ ಅವರ ಸಮರ್ಥನೆ.

      'ನಗರದಲ್ಲಿ ಈಗ ಟ್ರಾವೆಲ್ಸ್‌ಗಳು ನಾಯಿಕೊಡೆಯಂತೆ ಬೆಳೆದುಬಿಟ್ಟಿವೆ. ಸಾಕಷ್ಟು ಸ್ಪರ್ಧೆ ಇರುತ್ತದೆ. ಚಾಲಕರಿಗೂ ಬೇಡಿಕೆ ಇರುತ್ತದೆ. ಈ ಮಧ್ಯೆ ಬಸ್‌ ಮಾಲಿಕರು ಒಬ್ಬರಿಗಿಂತ ಒಬ್ಬರು ವಿಭಿನ್ನ ಸೌಲಭ್ಯಗಳನ್ನು ನೀಡುತ್ತಾರೆ. ಇದರ ಖರ್ಚು-ವೆಚ್ಚವನ್ನು ತೆಗೆದು, ಲಾಭದಲ್ಲಿಯೂ ನಡೆಸಬೇಕಾದರೆ ಅದರ ಹೊರೆ ಪ್ರಯಾಣಿಕರ ಮೇಲೆ ಹಾಕುವುದು ಅನಿವಾರ್ಯ' ಎನ್ನುತ್ತಾರೆ ಮತ್ತೂಬ್ಬ ಟ್ರಾವೆಲ್‌ ಏಜೆಂಟ್‌ ಅಮರೇಶ್‌.

      ಪ್ರಯಾಣಿಕರ ಅಸಹಾಯಕತೆ

      'ಅದೇನೆ ಇರಲಿ, ಕೆಎಸ್‌ಆರ್‌ಟಿಸಿ-ಖಾಸಗಿ ಟ್ರಾವೆಲ್‌ಗ‌ಳ ನಡುವೆ ಬಡವಾಗಿದ್ದು ಮಾತ್ರ ಪ್ರಯಾಣಿಕರು. ಈಗ ಎಲ್ಲ ಬಸ್‌ಗಳಲ್ಲೂ ಸೌಕರ್ಯಗಳನ್ನು ಕೊಟ್ಟೇ ಕೊಡ್ತಾರೆ. ಆದರೆ, ಅದೇ ನೆಪದಲ್ಲಿ ಬೇಕಾಬಿಟ್ಟಿ ವಸೂಲಿ ಮಾಡುತ್ತಾರೆ. ಚೌಕಾಸಿ ಕೂಡ ಮಾಡುವಂತಿಲ್ಲ. ಇನ್ನು ಕೆಎಸ್‌ಆರ್‌ಟಿಸಿ ಕಡೆಗೆ ಹೋಗಲು ಸಹ ಏಜೆಂಟರು ಅವಕಾಶ ಮಾಡಿಕೊಡುವುದಿಲ್ಲ. ಆದ್ದರಿಂದ ಅದರ ಪ್ರಯಾಣ ದರ ನನಗೆ ಗೊತ್ತಿಲ್ಲ! ಇಂಟರ್‌ನೆಟ್‌ನಲ್ಲಿ ನೋಡುವ ಗೋಜಿಗಂತೂ ಹೋಗುವುದೇ ಇಲ್ಲ' ಎಂದು ಪ್ರಯಾಣಿಕ ಮಂಜುನಾಥ್‌ ಹೇಳುತ್ತಾರೆ.

      ಶೀಘ್ರದಲ್ಲೇ ದರ ಹೆಚ್ಚಳ ಬಿಸಿ

      ಈ ನಡುವೆ ನಾಲ್ಕಾರು ದಿನಗಳಲ್ಲಿಯೇ ಖಾಸಗಿ ಬಸ್‌ಗಳ ಪ್ರಯಾಣ ದರ ಹೆಚ್ಚಳಕ್ಕೆ ಸಿದ್ಧತೆಗಳು ನಡೆದಿವೆ. ಎಲ್ಲ ಟ್ರಾವೆಲ್ಸ್‌ಗಳ ಮಾಲಿಕರು ಈ ಬಗ್ಗೆ ಒಂದೆಡೆ ಸೇರಿ ತೀರ್ಮಾನ ಕೈಗೊಳ್ಳಲಿದ್ದಾರೆ. ಕೆಎಸ್‌ಆರ್‌ಟಿಸಿ ವೋಲ್ವೊಗೆ ಹೋಲಿಸಿದರೆ ಪರಿಷ್ಕೃತಗೊಳ್ಳದೆ ಖಾಸಗಿ ವೋಲ್ವೊಗಳ ಪ್ರಯಾಣ ದರ ಗಗನಕ್ಕೆ ಏರಿದೆ. ಇನ್ನು ಮತ್ತೆ ಪರಿಷ್ಕೃತಗೊಳಿಸಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎನ್ನುತ್ತಾರೆ ಎಚ್‌ಎಎಲ್‌ ನೌಕರ ಸುರೇಶ್‌.

      ಬೆಂಗಳೂರಿನಿಂದ ಕೆಲವು ಊರುಗಳಿಗೆ ಹೊರಡುವ ವಿವಿಧ ಪ್ರಕಾರದ ವೋಲ್ವೊ (ಹವಾನಿಯಂತ್ರಿತ) ಬಸ್‌ಗಳ ಪ್ರಯಾಣ ದರದ ಸಂಕ್ಷಿಪ್ತ ವಿವರ (ರೂ.ಗಳಲ್ಲಿ).

      ಕೆಎಸ್‌ಆರ್‌ಟಿಸಿ - ಎಸ್‌ಆರ್‌ಎಸ್‌ - ಶರ್ಮ ನ್ಯಾಷನಲ್‌ - ವಿಆರ್‌ಎಲ್‌ - ಜನರಲ್‌ ಟ್ರಾವೆಲ್ಸ್‌

      ಪುಣೆ 851 1050 950 - -

      ಹೈದ್ರಾಬಾದ್‌ 748 900 730 400 700

      ಮುಂಬೈ 951 1,300 1,000 800 1,050

      ಚೆನ್ನೈ 620 650 660 550 600

      ಗೋವಾ 784 - 850 - 900


    • POSTED COMMENTS
    • pic
    • ಖಾಸಗಿ ವೋಲ್ವೋ ಬಸ್ ದುಬಾರಿ ದರ
      Jun 30, 2011
      Author: shreesha_karanth@yahoo.com

      ಖಾಸಗಿ ಬಸ್ ದುಬಾರಿ ದರ ದುಬಾರಿ ಎಂದು ಪರಿಗಣಿಸುವುದಾದರೆ. ಕುಂದಾಪುರಕ್ಕೆ 2 + 2 ಏರ್ ಬಸ್ ದರ ರಾಜಹಂಸದಲ್ಲಿ 420 . ದುರ್ಗಾಂಬಾ ದಲ್ಲಿ 320 ಇಲ್ಲ 350 . ಆನ್ ಲೈನ್ ಬುಕಿಂಗ್ ಮಾಡಿದರೆ ಕೇವಲ 305 ರೂಪಾಯಿ . ಖಾಸಗಿಯವರಿಗೆ 305 ಕ್ಕೆ ಪೂರೈಸುವಾಗ ಸರಕಾರಿಯವರಿಗೆ ಏಕೆ ಸಾಧ್ಯವಿಲ್ಲ ? ಮತ್ತು ಖಾಸಗಿ ಬಸ್ಸುಗಳು ಬೆಂಗಳೂರಿನ ಹೆಚ್ಚಿನ ಎರಿಯಾಗಳಿಗೆ ಡ್ರಾಪ್ ಕೊಡುತ್ತವೆ. ಇಂದಿಗೂ ಸರಕಾರೀ ಬಸ್ಸುಗಳಲ್ಲಿ ಸ್ಲೀಪಿಂಗ್ ಕೋಚ್ ವ್ಯವಸ್ಥೆಯಿಲ್ಲ . ಖಾಸಗಿಯವರನ್ನು ದೂರುವುದನ್ನು ಬಿಟ್ಟು ಸರಕಾರೀ ಬಸ್ಸುಗಳು ಅವುಗಳಿಗೆ ಆರೋಗ್ಯಕರ ಸ್ಪರ್ಧೆ ನೀಡುವುದು ಉತ್ತಮ.

    •  
    • pic
    • Private vovlo bus fares......
      Jun 30, 2011
      Author: vinodbb_007@indiatimes.com

      Belgaum,hubli,dhrawad to other north karnataka places fares are looted by VRL at the max.They take almost double charges to even non-ac buses.So,the credit of bringing this trend in market is only VRL.So,blame VRL first.........

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009-2010 Udayavani.All rights reserved.
    • Designed & Hosted By 4cplus