Udayavani | Jul 02, 2011
ಸುಬ್ರಾಯ ನಾಯಕ್, ಎಕ್ಕಾರು
ಬಜಪೆ: ಕೃಷಿ ಎಂದರೆ ದೂರ ಸರಿಯುವವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಯುವತಿಯೋರ್ವಳು ಮಧ್ಯಾಹ್ನದವರೆಗೆ ಕೆಸರಿನ ಗದ್ದೆಯಲ್ಲಿ ಪುರುಷರಿಗೆ ಸಮನಾಗಿ ಕೆಲಸ ಮಾಡಿ ಮಧ್ಯಾಹ್ನ ಬಳಿಕ ಕಂಪ್ಯೂಟರ್ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಿ ನಡೆಯುತ್ತಿದ್ದಾಳೆ.

ಕಂಪ್ಯೂಟರ್ ಕ್ರಾಂತಿಯ ಬಳಿಕ ಹಳ್ಳಿ ಗದ್ದೆಗಳು ಖಾಲಿ ಬಿದ್ದಿವೆ. ಕೃಷಿ ಮಾಡಲು ಎಲ್ಲೆಲ್ಲೂ ಆಳುಗಳ ಸಮಸ್ಯೆ ಕಾಡಲಾರಂಭಿಸಿದೆ. ರೈತನ ಮಕ್ಕಳು ಕೆಸರಿನಿಂದ ದೂರ ಸರಿದು ನಗರ, ಪಟ್ಟಣ ಎಂದೆಲ್ಲ ಎಲ್ಲೆಲ್ಲೊ ಸರಿದು ಹೋಗಿದ್ದಾರೆ. ಊರಲ್ಲಿರುವ ರೈತರ ಮಕ್ಕಳೂ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಆದರೆ ಇನ್ನೂ ಕೆಲವೆಡೆ ಕೃಷಿ ಉಳಿದಿದೆ. ಉನ್ನತ ವಿದ್ಯಾಭ್ಯಾಸ ಪಡೆದವರೂ ಕೃಷಿ ಮುಂದುವರಿಸುತ್ತಿದ್ದಾರೆ.

ತಮ್ಮದೇ ಭೂಮಿಯಲ್ಲಿ ಬೆಳೆದ ಬೆಳೆ ಎಂದು ಪ್ರೀತಿಯಿಂದ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಅಂತಹವರಲ್ಲಿ ಬಜಪೆ ಸಮೀಪದ ಬಡಗ ಎಕ್ಕಾರು ಹೂಸಮನೆಯ ಪ್ರತಿಭಾ ಓರ್ವಳು.
ಶ್ಯಾಮ್ ಶೆಟ್ಟಿ ಹಾಗೂ ವಿಜಯಾ ಶೆಟ್ಟಿ ದಂಪತಿಯ ಮೂರು ಮಂದಿ ಮಕ್ಕಳಲ್ಲಿ ಎರಡನೇ ಪುತ್ರಿ ಪ್ರತಿಭಾ (17 ವ.)ಗೆ ಸಣ್ಣಂದಿನಿಂದಲೂ ಕೃಷಿ ಎಂದರೆ ಪಂಚಪ್ರಾಣ. ತಂದೆಯೊಟ್ಟಿಗೆ ಗದ್ದೆಗೆ ಹೋಗಿ ಎಲ್ಲ ಕೆಲಸ ಕಾರ್ಯಗಳಲ್ಲಿ ನೆರವಾಗುತ್ತಿದ್ದಳು. ಇದೀಗ ಟಿಲ್ಲರ್‌ನಲ್ಲಿ ಗದ್ದೆ ಉಳುಮೆ ಮಾಡುವುದರಲ್ಲಿಯೂ ನಿಸ್ಸೀಮಳು.
ಪ್ರತಿಭಾನ್ವಿತೆಯಾದ ಪ್ರತಿಭಾ ಪಿಯುಸಿ ವರೆಗೆ ಶಿಕ್ಷಣ ಪಡೆದು ಈಗ ಬಜಪೆಯಲ್ಲಿ ಕಂಪ್ಯೂಟರ್ ಡಿಪ್ಲೊಮಾ ಶಿಕ್ಷಣ ಪಡೆಯುತ್ತಿದ್ದಾಳೆ. ಕಟೀಲಿನಲ್ಲಿ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ್ತಿಯಾಗಿಯೂ ಗಮನ ಸೆಳೆದಿದ್ದಳು.
ಟಿಲ್ಲರ್ ಅಭ್ಯಾಸ
ಶ್ಯಾಮ್ ಶೆಟ್ಟಿ ಅವರಿಗೆ ಮೂವರು ಮಕ್ಕಳು. ಹಿರಿಯ ಪುತ್ರಿ ಶ್ವೇತಾ ಪದವಿ ಓದುತ್ತಿದ್ದಾಳೆ. ಪ್ರತಿಭಾಳ ತಮ್ಮ ಪ್ರೀತೇಶ್ ಈಗ ಪಿಯುಸಿ ಓದುತ್ತಿದ್ದಾನೆ.
ಶ್ಯಾಮ್ ಶೆಟ್ಟರಿಗೆ 5 ಎಕರೆ ಭತ್ತ ಬೇಸಾಯದ ಗದ್ದೆ ಇದೆ. ಹಿಂದೆ ಎರಡು ಜತೆ ಕೋಣಗಳಿಂದ ಉಳುಮೆ ಮಾಡುತ್ತಿದ್ದರು. ಕೆಲ ವರ್ಷದ ಹಿಂದೆ ಸಹಾಯಧನದಿಂದ ಟಿಲ್ಲರ್ ಖರೀದಿಸಿದ್ದರು. ತಮ್ಮ ಪ್ರೀತೇಶ್ ಟಿಲ್ಲರ್ ಓಡಿಸುವುದನ್ನು ನೋಡಿ ಪ್ರತಿಭಾ ಕೂಡ ಎರಡು ವರ್ಷಗಳ ಹಿಂದೆ ಟಿಲ್ಲರ್ ಹ್ಯಾಂಡಲ್ ಹಿಡಿದಿದ್ದಳು. ಈಗ ಸಂಪೂರ್ಣವಾಗಿ ನಿಯಂತ್ರಣ ಸಾಧಿಸಿದ್ದು, ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಿರಂತವಾಗಿ ಟಿಲ್ಲರ್ ಓಡಿಸುತ್ತಾಳೆ. ಮಧ್ಯಾಹ್ನ ಬಳಿಕ ಮತ್ತೆ ಕಂಪ್ಯೂಟರ್ ಶಿಕ್ಷಣ.

30 ಎಕರೆ ಉಳುಮೆ
ಶ್ಯಾಮ್ ಶೆಟ್ಟಿ ಅವರು ಪ್ರತಿ ವರ್ಷ ಪರಿಸರದ ಸುಮಾರು 30 ಎಕರೆ ಭೂಮಿ ಉಳುಮೆ ಮಾಡುತ್ತಾರೆ. ಹೆಚ್ಚಿನ ದಿನಗಳಲ್ಲಿ ಪ್ರತಿಭಾ ಕೂಡ ಕೈ ಜೋಡಿಸುತ್ತಾಳೆ. ಮನೆಯ ಉಳುಮೆಯಾದರೆ ಪೂರ್ತಿ ಅವಧಿ ಗದ್ದೆಯಲ್ಲಿರುವ ಪ್ರತಿಭಾ, ಹೊರಗಿನವರ ಗದ್ದೆಯಾದರೆ ತಂದೆಗೆ ಅವಶ್ಯವಿದ್ದಷ್ಟು ಸಮಯ ಟಿಲ್ಲರ್ ಓಡಿಸುತ್ತಾಳೆ.
ಕೃಷಿಯಿಂದಲೇ ಜೀವನ
ಶ್ಯಾಮ್ ಶೆಟ್ಟಿ ಅವರು ಎಸೆಸೆಲ್ಸಿ ತನಕ ಕಲಿತು ಅನಂತರ ಕೃಷಿ ಕಾರ್ಯ ನಡೆಸಲೆಂದೇ ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾಯಿತು. ಆದರೆ ತನ್ನ ಮಕ್ಕಳಿಗೆ ಹಾಗಾಗಬಾರದೆಂದು ಎಲ್ಲರಿಗೂ ಉತ್ತಮ ಶಿಕ್ಷಣ ಕೊಡಿಸುವ ಆಶಯ ಹೊಂದಿದ್ದಾರೆ. ಇಡೀ ಕುಟುಂಬ ಕೃಷಿಯಿಂದಲೇ ಬದುಕುತ್ತಿದೆ. ಮನೆಯ ಎಲ್ಲರೂ ಕೃಷಿ ಕಾರ್ಯಕ್ಕೆ ಧುಮುಕುತ್ತಾರೆ. ಎರಡು ಬೆಳೆ ಬೆಳೆಯುವ ಕುಟುಂಬ ತಕ್ಕ ಮಟ್ಟಿಗೆ ಸಂತೃಪ್ತವಾಗಿಯೇ ಇದೆ.
ಕೃಷಿಯಲ್ಲೂ ಪ್ರತಿಭಾನ್ವಿತೆ
ಪ್ರತಿಭಾ ಶಾಲೆಯಲ್ಲಿ ಮಾತ್ರ ಪ್ರತಿಭಾನ್ವಿತೆಯಲ್ಲ. ಕೃಷಿಯಲ್ಲೂ ಪ್ರತಿಭಾನ್ವಿತೆ. ತೆಂಗು, ಅಡಿಕೆ ಸುಲಿಯುವುದರಲ್ಲಿ ಹಾಗೂ ಭತ್ತಕ್ಕೆ ಸಂಬಂಧಿಸಿ ಎಲ್ಲ ಕೆಲಸ ಕಾರ್ಯಗಳಲ್ಲೂ ಪ್ರತಿಭಾನ್ವಿತೆ. ನೇಜಿ ನೆಡಲು, ಭತ್ತ ಕೊಯ್ಯಲು, ಹೊತ್ತು ತರಲು, ಪಡಿಮಂಚಕ್ಕೆ ಬಡಿಯಲು ... ಹೀಗೆ ಎಲ್ಲದಕ್ಕೂ ಸೈ.
ನಿತ್ಯ 8 ಕಿ.ಮೀ. ನಡಿಗೆ
ಶ್ಯಾಮ್ ಶೆಟ್ಟಿ ಅವರ ಮನೆಯವರು ಬಸ್ ಓಡಾಡುವ ರಸ್ತೆ ತಲುಪಬೇಕಾದರೆ ನಾಲ್ಕು ಕಿ.ಮೀ. ನಡೆಯಬೇಕು. ಶಾಲಾ-ಕಾಲೇಜಿಗೆ ಹೋಗಬೇಕಾದರೆ ಮಕ್ಕಳು ದಿನನಿತ್ಯ ಹೋಗಲು ಮತ್ತು ಬರಲು ಎಂಬಂತೆ 8 ಕಿ.ಮೀ. ನಡೆಯಲೇಬೇಕು. ಬೇರೆ ದಾರಿಯೇ ಇಲ್ಲ. ಪ್ರತಿಭಾ ಮಧ್ಯಾಹ್ನದವರೆಗೆ ಕೆಸರಿನ ಗದ್ದೆಯಲ್ಲಿ ಟಿಲ್ಲರ್‌ನೊಂದಿಗೆ ಓಡಾಡಿ ಅನಂತರ ಕಂಪ್ಯೂಟರ್ ಕಲಿಕೆಗೆ ತೆರಳಲು ಬಸ್ ಹಿಡಿಯಲು 4 ಕಿ.ಮೀ. ನಡೆಯಬೇಕು.
ಹೆಣ್ಣೂಂದು ಕಲಿತರೆ ಮನೆಯೊಂದು ಬೆಳಗಿದಂತೆ , ಹೆಣ್ಣೂಂದು ಉಳುಮೆಗೆ ಇಳಿದರೆ ಬೇಸಾಯ ಉಳಿದಂತೆ ಎಂಬ ಮಾತಿನಂತೆ ಈಗ ಎಲ್ಲಾದರಲ್ಲೂ ಮಹಿಳೆ,ಹುಡುಗಿಯರು ಮಿಂಚಿ ಸಾಧನೆಯ ಗರಿಯನ್ನು ಹೆಚ್ಚಿಸುತ್ತಾ ತಾವೆನೂ ಗಂಡಸರಿಕ್ಕಿಂತ ಕಡಿಮೆ ಇಲ್ಲವೆಂದು ತೋರಿಸುವ ಕಾಲ ಬಂದಿದೆ. ಕೃಷಿಯೆಂದರೆ ದೂರ ಸರಿಯುವ ಈ ಕಾಲದಲ್ಲಿ ಕಾರ್ಮಿಕ ಸಮಸ್ಯೆ ಎದುರಿಸುತಿದೆ.ಹಳ್ಳಿಯಿಂದ ಆದೆಷ್ಟು ಮಂದಿ ಕೃಷಿಭೂಮಿ ಮಾರಿ ಪೇಟೆ ಸೇರಿದರೆ,ಕೆಲವರು ಹಳ್ಳಿಯಿಂದ ಕೃಷಿ ಬಿಟ್ಟು ಪೇಟೆ,ನಗರಕ್ಕೆ ಉದೋÂಗಕ್ಕೆ ತೆರಳುತ್ತಿದ್ದಾರೆ.
ಬಾಹ್ಯಕಾಶ,ವಿಮಾನ ಪೈಲೆಟ್,ಬಸ್ಸು ಡ್ರೆçವರ್,ರಿಕ್ಷಾ ಚಾಲಕ ರಾಗಿ ಸುದ್ದಿ ಮಾಡುವ ಹುಡುಗಿಯರು ಈಗ ಭತ್ತ ಬೇಸಾಯದ ಟಿಲ್ಲರ್‌ನಲ್ಲಿ ಉಳುಮೆ ಮಾಡಿ ತಂದೆ ಹಾಗೂ ಊರಿನವರ ಬೇಸಾಯಗೆ ಸಹಾಯ ಮಾಡುವ ಯುವತಿಯ ಧೈರ್ಯ ಹಾಗೂ ಕಾರ್ಯ ಮೆಚ್ಚಲೇ ಬೇಕು.ಬಡಗ ಎಕ್ಕಾರು ಹೂಸಮನೆಯ ಶ್ಯಾಮ್ ಶೆಟ್ಟಿ ಹಾಗೂ ವಿಜಯ ಶೆಟ್ಟಿ ದಂಪತಿಯ ಮೂರು ಮಂದಿ ಮಕ್ಕಳಲ್ಲಿ ಎರಡನೇಯವಳು ಪ್ರತಿಭಾ (17. ವರ್ಷ) ಉಳುಮೆ ಮಾಡುವ ಸಾಹಸಕ್ಕಿಳಿದವಳು.ಮೊದಲ ಮಗಳು ಶ್ವೇತಾ ಪದವಿ ಓದುತ್ತಿದ್ದರೆ,ಮೂರನೇಯವ ಮಗ ಪ್ರಿತೇಶ್ (16 .ವರ್ಷ) ಮೊದಲ ವರ್ಷದ ಪಿಯುಸಿ ಓದುತ್ತಿದ್ದಾನೆ.
ಈಕೆ ಎರಡನೇ ಪಿಯುಸಿ ಮುಗಿಸಿ ಕಂಪ್ಯೂಟರ್ ಕಲಿಯುತ್ತಿದ್ದಾಳೆ.ಮೂವರು ಪ್ರತಿಭಾವಂತರು.ಶ್ವೇತಾ ಕ್ರೀಡಾಳಾಗಿ ರಾಜ್ಯವನ್ನು ಪ್ರತಿನಿದಿಸಿದ್ದರೆ,ಪ್ರತಿಭಾಳು ಕ್ರೀಡಾಳಾಗಿ ಹಲವು ಪ್ರಶಸ್ತಿ ಗಳಿಸಿದ್ದಾಳೆ.ಪ್ರಿತೇಶ್ ಯಕ್ಷಗಾನ ಕಲಾವಿದ.
ಶ್ಯಾಮ್ ಶೆಟ್ಟಿರಿಗೆ 5 ಎಕರೆ ಭತ್ತ ಬೇಸಾಯದ ಗದ್ದೆ ಇದೆ.ಹಿಂದೆ ಎರಡು ಜೊತೆ ಕೋಣಗಳಿಂದ ಈ ಉಳುಮೆ ಮಾಡುತ್ತಿದ್ದವರು.9ವರ್ಷದ ಹಿಂದೆ ಸಹಾಯ ಧನದಿಂದ ಟಿಲ್ಲರ್‌ನ್ನು ಖರೀದಿಸಿ ತನ್ನ ಬೇಸಾಯ ಜೊತೆಗೆ ಪರಿಸರದ ಇತರರ ಒಟ್ಟು 30 ಎಕರೆ ಗದ್ದೆ ಉಳುಮೆ ಮಾಡುತ್ತಿದ್ದಾರೆ.
ತಂದೆಯ ಬೇಸಾಯಕ್ಕೆ ಆಧಾರಿಸಿದ ಮಗಳು
ತಮ್ಮ ಪ್ರಿತೇಶ್‌ನಿಂದ ಟಿಲ್ಲರ್‌ನಲ್ಲಿ ಉಳುಮೆ ಮಾಡಲು ಕಲಿತ ಪ್ರತಿಭಾ. ಎರಡು ವರ್ಷದಿಂದ ಉಳುಮೆ ಮಾಡುತ್ತಿದ್ದಾಳೆ. ಶಾಲೆಗೆ ಹೋಗುವ ಮೊದಲು ಹಾಗೂ ಬಂದ ನಂತರ ,ರಜಾದಿನಗಳಲ್ಲಿ ಟಿಲ್ಲರ್‌ನಲ್ಲಿ ಉಳುಮೆ ಮಾಡುತ್ತಿದ್ದಳು. ಕೆಸರಿನಲ್ಲಿ ಸುಮಾರು ನಾಲ್ಕರಿಂದ ಆರು ಗಂಟೆ ಉಳುಮೆ ಮಾಡುತ್ತಾಳೆ.ಇದು ಆವಳ ತಾಕತ್ತು.ಕೃಷಿಯ ಎಲ್ಲಾ ಚಟುವಟಿಕೆಯಲ್ಲಿ ತಂದೆಗೆ ಹೆಗಲು ಕೊಡುವ ಪ್ರತಿಭಾ ತಂದೆಗೆ ಬಲು ಪ್ರೀತಿ.ಪೇಟೆಗೆ ಬರಲು ಆವರಿಗೆ ಸುಮಾರು 5ಕಿಮೀ ನಡೆದು ಕೊಂಡು ಬರಬೇಕು. ವಾಹನದಲ್ಲಿ ಹೋಗುವ ಈ ಕಾಲ ಕೆಸರಿನಲ್ಲಿ ನಡೆಯಲು ಚಡಪಡಿಸುವ ಈಗಿನ ಯುವಕರು ಈಕೆಯಿಂದ ಕಲಿಯಬೇಕು.
ಈಗಾಗಲೇ 16 ಎಕರೆ ಉಳುಮೆ ಈ ಪರಿಸರದಲ್ಲಿ ಯಾಗಿದೆ.ತಂದೆ ಶ್ಯಾಮ್ ಶೆಟ್ಟಿ ಈಕೆಯ ತಮ್ಮ ಹಾಗೂ ಈಕೆ ಒಟ್ಟು ಸೇರಿ ಉಳುಮೆ ಮಾಡಿದ್ದಾರೆ.ಇನ್ನೂ 14 ಎಕರೆ ಉಳುಮೆ ಬಾಕಿಯಿದೆ .
ಭತ್ತ ಬೇಸಾಯದಲ್ಲಿ ಕೇವಲ ನಾಟಿಗೆ ಸೀಮತವಾಗಿದ್ದ ಮಹಿಳೆಯರು ಈಗ ಉಳುಮೆಗೆ ಇಳಿದು ,ಕೃಷಿಯಲ್ಲಿ ತಾವೇನು ಹಿಂದೆ ಬಿದ್ದಿಲ್ಲ ವೆಂದು ತಿಳಿಸಿದ್ದಾರೆ.
ಹೆಣ್ಣು-ಗಂಡು ತಾರತಮ್ಯ ಬೇಡ .ಗಂಡು ಮಗು ಇಲ್ಲವೆಂದು ಬೇಸರ ಪಡಬೇಕಿಲ್ಲ. ತಂದೆ ತಾಯಿಯನ್ನು ಅಧಾರಿಸುವ ಮಗಳು ಮಗನಂತೆಯಾದರೆ ಮತ್ತೆನು ಬೇಕು ಈ ಜೀವನಕೆ.ಕೃಷಿಗೆ ಹೆಗಲು ಕೊಡಲು ಯುವತಿಯರು ಹೀಗೆ ಮುಂದಾದರೆ.ಕೃಷಿ ಉಳಿಕೆ ಖಂಡಿತ.ಯುವತಿಯರು ಸದ್ದಿಲ್ಲದೆ ಜಾವಾಬ್ದಾರಿ ವಹಿಸುವವರು.ಪ್ರಚಾರಕ್ಕೆ ನಾಚುವವರು.ಆವರಿಗೆ ಧೈರ್ಯ ಹಾಗೂ ಪೋÅತ್ಸಾಹದ ಆಗತ್ಯ ನೀಡಬೇಕಾದವರು ತಾವುಗಳೆಲ್ಲ.
ಕೊಡು ತಾಯಿ ವರವ ಇಂಥಾ ಹೆಣ್ಣು ಮಗಳ ಆನ್ನದಾತನ ರಕ್ಷಣೆ ಈ ಪ್ರಯತ್ನ ವ ಎಲ್ಲೆಡೆ ಮುಂದುವರಿಯಲಿ