ಜಗತ್ತು, ಅದು ಕೂಡಾ ಅಮೆರಿಕಾ ಸಹಿತವಾಗಿ ಆರ್ಥಿಕ ಹಿನ್ನಡೆಯಿಂದ ಪ್ರಗತಿಯ ಪಥದಲ್ಲಿ ಒಂದಿಷ್ಟು ಮುಗ್ಗರಿಸಿದೆ. ಆದರೆ, ಅರೆಬಿಯನ್ ಗಲ್ಫ್ನ ಪುಟ್ಟ ರಾಷ್ಟ್ರವೊಂದು ಎಲ್ಲರಿಗೂ ಮಾದರಿಯಾಗಿ, ಆಶಾಕಿರಣವಾಗಿ ಪ್ರಗತಿಯ ಅದ್ಭುತ ಅಧ್ಯಾಯವನ್ನು ಬರೆಯುತ್ತಿದೆ. ಆ ರಾಷ್ಟ್ರವೇ ಕತಾರ್. ಇದು ಪುಟ್ಟ ರಾಷ್ಟ್ರ. ಸಾಮಾನ್ಯವಾಗಿ ಇದರ ಹೆಸರನ್ನು ದೋಹಾ-ಕತಾರ್ ಎಂಬುದಾಗಿ ಉಲ್ಲೇಖೀಸಲಾಗುತ್ತದೆ. ಕತಾರ್ನ ರಾಜಧಾನಿ ದೋಹಾ. ವಿಶೇಷವೆಂದರೆ, ಕತಾರ್ನ ಒಟ್ಟು ಜನಸಂಖ್ಯೆಯಾದ ಸುಮಾರು 15 ಲಕ್ಷದ ಪೈಕಿ ಶೇ. 50 ರಷ್ಟು ಅಂದರೆ ಸುಮಾರು 7.5 ಲಕ್ಷ ಮಂದಿ ದೋಹಾದಲ್ಲಿಯೇ ವಾಸಿಸುತ್ತಿದ್ದಾರೆ!

ದೋಹಾ: ಅರೆಬಿಕ್ ಕಾಫಿ ಪಾಟ್ ಪ್ರತಿಕೃತಿ
ಅಂದಹಾಗೆ, ಭಾರತಕ್ಕೂ ಕತಾರ್ಗೂ ಅತ್ಯಂತ ನಿಕಟವಾದ ಬಾಂಧವ್ಯ ಕೂಡಾ. ಇದು ನಿಕಟ ಬಾಂಧವ್ಯ ಮಾತ್ರವಲ್ಲ; ಇದು ಆತ್ಮೀಯ ಬಾಂಧವ್ಯ ಕೂಡಾ. ಕತಾರ್ನ ಜನಸಂಖ್ಯೆಯಲ್ಲಿ ಭಾರತೀಯರ ಪಾಲು ಸುಮಾರು ಶೇ. 18 ರಿಂದ 20 ರಷ್ಟು. ಅದರಲ್ಲಿ ಕನ್ನಡಿಗರ ಸಂಖ್ಯೆ ಲಕ್ಷ ಮೀರುತ್ತದೆ. ಅವರಲ್ಲಿ ಶೇ. 50 ರಿಂದ 60 ರಷ್ಟು ಮಂದಿ ಕರಾವಳಿಯ ಜಿಲ್ಲೆಯವರು.
ಅರೆಬಿಯನ್ ಕೊಲ್ಲಿಯ ಪಶ್ಚಿಮ ಕರಾವಳಿಯಲ್ಲಿದೆ ಕತಾರ್. ಹಲೂಲ್, ಶೆರಾವ್, ಅಲ್ ಬೆಶಾçರಿಯಾ, ಅಲ್ ಸಫ್ಲಿಯಾ, ಅಲ್ ಆಲಿಯಾ ಮುಂತಾದ ದ್ವೀಪ ಸಮುದಾಯಗಳಿವೆ. ಬಹೆùನ್, ಅಬುಧಾಬಿ, ದುಬಾೖ, ಸೌದಿ ಅರೆಬಿಯಾ ಅಕ್ಕಪಕ್ಕದಲ್ಲಿದ್ದರೆ ಅನತಿ ದೂರದಲ್ಲಿ ಕುವೈತ್, ಇರಾನ್, ಒಮಾನ್.. ಮಂಗಳೂರಿನಿಂದ ದೋಹಾಕ್ಕೆ ಕೇವಲ ಮೂರುವರೆ ತಾಸುಗಳ ನೇರ ಪ್ರಯಾಣ.

ಕತಾರ್ ರಾಷ್ಟ್ರೀಯ ವಸ್ತು ಸಂಗ್ರಹಾಲಯ
ತೈಲ ಸಮೃದ್ಧ ದೇಶ
ಕತಾರ್ ಅನ್ನುವುದು ತೈಲ ಸಮೃದœವಾದ ದೇಶ. ಸಮೃದ್ಧ ಮಾತ್ರವಲ್ಲ, ಅತ್ಯಂತ ಸಮೃದ್ಧ. ಆದ್ದರಿಂದ, ಇದು ಸಂಪದ್ಭರಿತವಾದ ದೇಶ. ಅರಸು ಮನೆತನದವರು ಪ್ರಜಾತಾಂತ್ರಿಕ ಸ್ವರೂಪವನ್ನು ಅಂತರ್ಗತಗೊಳಿಸಿ ಆಡಳಿತ ನಡೆಸುತ್ತಿರುವುದು ಕತಾರ್ನ ವೈಶಿಷ್ಟ್ಯ.
ಹತ್ತು ಸಾವಿರ ವರ್ಷಗಳಿಗಿಂತಲೂ ಹಿಂದಿನ ಅಸ್ತಿತ್ವದ ವಾಸ್ತು ದಾಖಲೆ ಇತ್ಯಾದಿಗಳನ್ನು ಸಂಶೋ—ಸಲಾಗಿದೆ. ಪೋರ್ಚುಗೀಸರು ಬಳಿಕ ಬ್ರಿಟಿಷರು ಇಲ್ಲಿ ತಮ್ಮ ವಸಾಹತನ್ನು ನಿರ್ಮಿಸಿದ್ದರು. ಏಳನೆಯ ಶತಮಾನದಲ್ಲಿ ಅರಸು ಅಲ್ ಮುಂತಿರ್ ಬಿನ್ ಸಾವಿ ಅಲ್ ತ ಮೀಮಿ ಅವರ ಆಳ್ವಿಕೆಯ ಸಂದರ್ಭದಲ್ಲಿ ಕತಾರ್ ಇಸ್ಲಾಮನ್ನು ಸ್ವೀಕರಿಸಿತು. 3-10-1971 ರಂದು ಕತಾರ್ ಸ್ವತಂತ್ರ ದೇಶವಾಯಿತು.
ಸ್ವಾತಂತ್ರ್ಯ ಪಡೆದ ಎರಡು ದಶಕಗಳೊಳಗೆ ಕತಾರ್ ಸಂಪದ್ಭರಿತ ದೇಶವಾಗಿ ರೂಪುಗೊಂಡಿತು. ತೈಲ ನಿಕ್ಷೇಪದ ಪತ್ತೆಯೇ ಇದಕ್ಕೆ ಮೂಲ ಕಾರಣವಾಯಿತು. 1939 ರಲ್ಲಿ ಮೊದಲಾಗಿ ಇಲ್ಲಿ ತೈಲ ಪತ್ತೆಯಾದರೂ ಜಾಗತಿಕ ಸಮರದ ದೆಸೆಯಿಂದ ಹೆಚ್ಚಿನ ಪ್ರಗತಿಯಾಗಲಿಲ್ಲ. ಅದಕ್ಕೆ ಮೊದಲು ಮುತ್ತುರತ್ನಗಳ ವ್ಯಾಪಾರವೇ ಇಲ್ಲಿ ಪ್ರಮುಖವಾಗಿತ್ತು. 1949 ರಿಂದ ತೈಲ ಮಾರಾಟ ಮತ್ತು ರಫ್ತಿನ ಮೂಲಕ ದೊರೆಯಲಾರಂಭಿಸಿದ ಹಣವು ಕತಾರ್ನ ಚಿತ್ರಣವನ್ನೇ ಬದಲಿಸಿತು. ಈಗ ಜಗತ್ತಿನಲ್ಲಿ ತೈಲೋತ್ಪನ್ನಗಳ ನಿರ್ವಹಣೆಯ ಮುಂಚೂಣಿಯ ರಾಷ್ಟ್ರಗಳಲ್ಲೊಂದಾಗಿದೆ ಕತಾರ್. ಆದರೆ, ಆ ಆದಾಯವನ್ನು ಅಷ್ಟೇ ಯೋಜನಾಬದœವಾಗಿ ದೇಶವನ್ನು ಆಧುನೀಕರಣಗೊಳಿಸಲು ಇಲ್ಲಿ ಬಳಸಲಾಗುತ್ತಿದೆ. ಆದ್ದರಿಂದ, ಜಾಗತಿಕ ಆರ್ಥಿಕ ಹಿಂಜರಿತದ ಯಾವೊಂದು ದುಷ್ಪರಿಣಾಮಗಳು ಕೂಡಾ ಇಲ್ಲಿ ತಟ್ಟಿಲ್ಲ. ಇಲ್ಲಿ ನಡೆಯುತ್ತಿರುವ ನಿರ್ಮಾಣ ಮತ್ತಿತರ ಕಾರ್ಯಗಳ ವೈಖರಿಯನ್ನು ಈ ಲೇಖಕರ ಕತಾರ್ ಪ್ರವಾಸದ ಕಾಲದಲ್ಲಿ ನಿಕಟವಾಗಿ ಅಧ್ಯಯನ ನಡೆಸಿದ ಹಿನ್ನೆಲೆಯಲ್ಲಿ ಹೇಳುವುದಾದರೆ, ಆ ಪರಿಣಾಮ ಇಲ್ಲಿ ತಕ್ಷಣ ತಟ್ಟಲೂ ಸಾಧ್ಯವಿಲ್ಲ.
ಕತಾರ್ನ ನಾರ್ತ್ಫೀಲ್ಡ್ನಲ್ಲಿ 900 ಟ್ರಿಲಿಯನ್ ಸ್ಟ್ಯಾಂಡರ್ಡ್ ಕ್ಯುಬಿಕ್ ಫೀಟ್ಗಿಂತಲೂ ಅ—ಕ ಅನಿಲ ನಿಕ್ಷೇಪ (ಗ್ಯಾಸ್ ರಿಸರ್ವ್ಸ್) ಇದೆ. 15.2 ಬಿಲಿಯನ್ ಬ್ಯಾರೆಲ್ಗಳಷ್ಟು ತೈಲ ನಿಕ್ಷೇಪವಿದೆ. ಈ ಮೂಲಕ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ವರ್ಧಿಸುತ್ತಿರುವ ಆರ್ಥಿಕತೆಯನ್ನು ಮತ್ತು ಜಗತ್ತಿನ ಅತೀ ಹೆಚ್ಚು ಬಂಡವಾಳಾಧಾರಿತ ಆದಾಯವನ್ನು ಕತಾರ್ ಹೊಂದುವಂತಾಗಿದೆ.

ಕತಾರ್ನ ಐತಿಹಾಸಿಕ ಕೋಟೆ
ಬಹುರೂಪೀ ಸಂಸ್ಕೃತಿ
ಕತಾರ್ನ ಜನಸಂಖ್ಯೆಯ ಪೈಕಿ ಶೇ. 40 ರಷ್ಟು ಮಂದಿ ಅರಬ್ಬೀಯರಾಗಿದ್ದಾರೆ. ಸುಮಾರು ಶೇ. 18 ರಿಂದ 20 ರಷ್ಟು ಭಾರತೀಯರು, ಶೇ. 18 ರಷ್ಟು ಪಾಕಿಸ್ತಾನೀಯರು, ಶೇ. 10 ರಷ್ಟು ಇರಾನಿಯರು, ಇನ್ನುಳಿದಂತೆ ಜಗತ್ತಿನ ವಿವಿಧ ದೇಶದವರು. (ಬಾಂಗ್ಲಾ, ಶ್ರೀಲಂಕಾ, ಯುರೋಪ್-ಅಮೆರಿಕಾ, ಫಿಲಿಫೀನ್ಸ್ ಇತ್ಯಾದಿ). ಹೀಗಾಗಿ ಬಹುರೂಪೀ ಸಂಸ್ಕೃತಿಯನ್ನು ಇಲ್ಲಿ ಗಮನಿಸಬಹುದು.
ಒಂದೆಡೆ ಸಮುದ್ರ, ಉಳಿದೆಡೆ ಮರುಭೂಮಿ. ನಡುವೆ ಅರಳಿರುವ ಕತಾರ್. ಇಲ್ಲಿ ಕನ್ನಡ ಸಂಘ, ತುಳುಕೂಟ ಮುಂತಾದ ಭಾರತೀಯರ ಸಂಘಟನೆಗಳಿವೆ. ಈ ಲೇಖಕ ಮಂಗಳೂರಿನ ಎಂ. ಅಶೋಕ್ ಶೇಟ್, ತಾರಾನಾಥ ಶೆಟ್ಟಿ ಬೋಳಾರ ಅವರೊಂದಿಗೆ ಕತಾರ್ಗೆ ತೆರಳಿದಾಗ ಅಲ್ಲಿನ ಯಶಸ್ವೀ ಉದ್ಯಮಿ ಜೆಪ್ಪು ಚಿದಾನಂದ ನಾಯ್ಕR ಅವರು ಆತಿಥೇಯರಾಗಿದ್ದರು.
ಕತಾರ್ ರಾಜಪ್ರಭುತ್ವವು ಅತ್ಯುತ್ತಮ ಅವಕಾಶಗಳನ್ನು ಇಲ್ಲಿನ ಜನತೆಗೆ ಒದಗಿಸುತ್ತಿವೆ ಎಂಬುದು ಉಲ್ಲೇಖನೀಯ. ಅಂದಹಾಗೆ, ದೋಹಾದ ಹೊರವಲಯದಲ್ಲಿ ಬೃಹತ್ ಚರ್ಚ್ ನಿರ್ಮಾಣದ ಅಂತಿಮ ಹಂತದಲ್ಲಿದೆ.
ಪುನರ್ ನಿರ್ಮಾಣ
ತೈಲ-ಅನಿಲ ಮೂಲಗಳಿಗೆ ಸಂಬಂಧಿಸಿ ಮುಂಚೂಣಿಯ ಸಾಲಿನಲ್ಲಿದ್ದರೂ ಕತಾರ್ ಆಡಳಿತ ಕರಾರುವಾಕ್ಕಾಗಿ ಆರ್ಥಿಕ ವಲಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ದೋಹಾ ಮತ್ತು ಹೊರವಲಯಗಳಲ್ಲೀಗ ಸಂಪೂರ್ಣವಾಗಿ ಪುನರ್ನಿರ್ಮಾಣ ಕಾರ್ಯ ನಡೆಯುತ್ತಿದೆ. ಎರಡು-ಮೂರು ದಶಕಗಳಿಂದ ಇಲ್ಲಿ ವಾಸವಾಗಿರುವ ಅನೇಕ ಕನ್ನಡಿಗರ ಅಭಿಪ್ರಾಯ ಸಾರಾಂಶ: ""ನಾವು ಬರುವಾಗ ಇಲ್ಲಿ ವ್ಯವಸ್ಥಿತ ಸೌಲಭ್ಯಗಳಿರಲಿಲ್ಲ. ಆದರೆ, ನೋಡು ನೋಡುತ್ತಿದ್ದಂತೆಯೇ ಕತಾರ್ ಈಗ ಪ್ರಗತಿಯ ಉತ್ತುಂಗಕ್ಕೇರಿದೆ. ಕಣ್ಣು ಮುಚ್ಚಿ ತೆರೆಯುವುದರೊಳಗೆ ನಿರ್ಮಾಣವಾಯಿತೇನೋ ಎಂಬಂತೆ ಇಲ್ಲಿ ಗಗನ ಚುಂಬಿಗಳು ಗೋಚರಿಸುತ್ತಿವೆ. ಅಂತೆಯೇ, ನಾಗರಿಕರಿಗಾಗಿನ ಸರ್ವ ಸೌಲಭ್ಯಗಳು ಕೂಡಾ'.
ದೋಹಾದ ವಿಹಂಗಮ ಕಾರ್ನಿಶ್ ಪ್ರದೇಶ.
ಗಗನಚುಂಬಿ ಕಟ್ಟಡಗಳು ಮಾತ್ರವಲ್ಲದೇ ಅತ್ಯಾಧುನಿಕ ರೀತಿಯಲ್ಲಿ ರಸ್ತೆಗಳು ನಿರ್ಮಾಣಗೊಂಡಿವೆ. ಮನೆಗಳ ನಿರ್ಮಾಣದ ಕಾರ್ಯ ಆದ್ಯತೆಯಿಂದ ನಡೆಯುತ್ತಿದೆ. ಬಂಗಲೆಗಳು, ಮನೆಗಳು, ಜತೆಯಲ್ಲಿ ಕಡಿಮೆ ವೆಚ್ಚದ (ಲೋಕಾಸ್ಟ್) ಮನೆಗಳ ನಿರ್ಮಾಣ ನಡೆಯುತ್ತಿದೆ. ಸರಕಾರವೇ ಸಾಕಷ್ಟು ಸಬ್ಸಿಡಿ ನೀಡುವುದರಿಂದ ಮನೆಗಳನ್ನು ಹೊಂದುವುದು ಈಗ ಸುಲಭ ಸಾಧ್ಯವಾಗಿದೆ. ಮನೆಗಳ ಮಾಲಕತ್ವಕ್ಕೆ ಸಂಬಂ—ಸಿ ಸರಕಾರ ಕಾನೂನುಗಳನ್ನು ಬದಲಿಸುತ್ತಿದೆ. ಹಿಂದೆ, ಇಲ್ಲಿ ಸ್ಥಳೀಯರಲ್ಲದವರು ಸ್ವಂತ ನೆಲೆಯಲ್ಲಿ ಮನೆಗಳನ್ನು ಹೊಂದಲು ಸಾಧ್ಯವಿರಲಿಲ್ಲ. ಈಗ 99 ವರ್ಷಗಳ ಲೀಸ್ ನೆಲೆಯಲ್ಲಿ ಈ ಅವಕಾಶ ದೊರೆಯುತ್ತಿದೆ.
ಇಲ್ಲಿ ನೆಲೆಸಿರುವ ಭಾರತೀಯರು, ವಿಶೇಷವಾಗಿ ಕನ್ನಡಿಗರು ಈ ಅವಕಾಶಗಳನ್ನು ಸದುಪಯೋಗಿಸಿಕೊಳ್ಳುತ್ತಿದ್ದಾರೆ. ತುಳುವರ ಸಹಿತ ಕನ್ನಡಿಗರು ಇಲ್ಲಿ ವಿಶ್ವಾಸಾರ್ಹವಾದ ಪರಂಪರೆಯನ್ನು ಹೊಂದಿದ್ದಾರೆ. ಕಠಿನ ಪರಿಶ್ರಮಿಗಳು ಮತ್ತು ಅತ್ಯಂತ ಪ್ರಾಮಾಣಿಕರು ಎಂಬ ಅಭಿನಂದನೆಗೆ ಅವರು ಪಾತ್ರರಾಗಿದ್ದಾರೆ.

ದೋಹಾದ ಹಳೆಯ ಚಿತ್ರಣ. ಪುನರ್ನಿರ್ಮಾಣದಿಂದಾಗಿ ಈಗ ಈ ದೃಶ್ಯವಿಲ್ಲ.
ನಿರ್ಮಾಣ ಕ್ಷೇತ್ರದ ವಿವಿಧ ಅವಕಾಶಗಳು ಕನ್ನಡಿಗರಿಗೆ ದೊರೆಯುತ್ತಿವೆ. ಆಡಳಿತ ವಿಭಾಗದಲ್ಲಿ ಮತ್ತು ಶ್ರಮಿಕ ಕಾಯಕದಲ್ಲಿ ಅವರು ವಿಸ್ತೈತ ಅವಕಾಶ ಪಡೆದಿದ್ದಾರೆ. ಈ ಕ್ಷೇತ್ರಗಳಲ್ಲಿ ಮತ್ತು ಮಾರಾಟ ಪ್ರವರ್ಧನೆ ಕ್ಷೇತ್ರದಲ್ಲಿ ವ್ಯಾಪಕ ಉದ್ಯೋಗ ಅವಕಾಶಗಳು ಈ ಮೂಲಕ ಸೃಷ್ಠಿಯಾಗಿವೆ.
ಕತಾರ್ನಲ್ಲಿ ಪ್ರವಾಸೋದ್ಯಮಕ್ಕೆ ಸಂಬಂ—ಸಿ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದಕ್ಕಾಗಿ ಅವರು ಕ್ರೀಡಾರಂಗವನ್ನು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಕೇವಲ 11,437 ಚದರ ಕಿ.ಮೀ. ವಿಸ್ತೀರ್ಣದ ಕತಾರ್ ಯಶಸ್ವಿಯಾಗಿ ಏಶ್ಯನ್ ಗೇಮ್ಸ್ ನಿರ್ವಹಿಸಿದಾಗ ಕ್ರೀಡಾ ಜಗತ್ತು ಅಚ್ಚರಿಯಿಂದ ಮೂಗಿಗೆ ಬೆರಳು ಇರಿಸಿತು! ವ್ಯಾವಹಾರಿಕವಾಗಿ ದೇಶಕ್ಕೆ ಅದು ಪ್ರವಾಸೋದ್ಯಮದ ಅವಕಾಶಗಳ ಹೆಬ್ಟಾಗಿಲನ್ನು ತೆರೆಯಿತು. ಈಗ ಗಾಲ್ಫ್, ಟೆನಿಸ್ ಇತ್ಯಾದಿ ಅಂತಾರಾಷ್ಟ್ರೀಯ ಸ್ಪರ್ಧೆಗಳು ಇಲ್ಲಿ ನಡೆಯುತ್ತಿವೆ. ಒಲಿಂಪಿಕ್ ಕ್ರೀಡಾಕೂಟದ ಸಂಘಟನೆಗೂ ಕತಾರ್ ಒಲವನ್ನು ವ್ಯಕ್ತಪಡಿಸಿರುವುದು ಕ್ರೀಡಾರಂಗಕ್ಕೆ ಕತಾರ್ನ ಪ್ರಾಧಾನ್ಯದ ಬಗ್ಗೆ ಸಾಕ್ಷಿಯಾಗಿದೆ. ಸಧ್ಯ ವಿಶ್ವಕಪ್ ಫುಟ್ಬಾಲ್ ಸಂಘಟಿಸುವ ಮಹತ್ವದ ಅವಕಾಶ ಕತಾರ್ಗೆ ದೊರೆತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಅಂತಿಮ ಅಂತಿಮ ಹಂತದಲ್ಲಿದೆ.
ಬಹಳ ಎಂಬಂತಹ ಪ್ರವಾಸೀ ಕೇಂದ್ರಗಳು ಇಲ್ಲಿಲ್ಲ. ಆದರೆ, ಪುನರ್ ನಿರ್ಮಾಣದ ಮೂಲಕ ಕೆಲವು ಕೇಂದ್ರಗಳು ಈಗ ರೂಪುಗೊಳ್ಳುತ್ತಿವೆ. ಬಗೆಬಗೆಯ ವಾಸ್ತುವೈವಿಧ್ಯದ ಗಗನಚುಂಬಿಗಳು ನಿರ್ಮಾಣಗೊಳ್ಳುತ್ತಿರುವ ಕಾರ್ನಿಶ್ ರಸ್ತೆಯನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು. ಶಾಪಿಂಗ್ ಸೆಂಟರ್ಗಳು (ಸಿಟಿ ಶಾಪಿಂಗ್, ಲುಲು ಸೆಂಟರ್ ಇತ್ಯಾದಿ), ಒಂಟೆಗಳ ಓಟ, ಮ್ಯೂಸಿಯಂ, ಉದ್ಯಾನಗಳು, ಆರ್ಟ್ ಗ್ಯಾಲರಿ ಇತ್ಯಾದಿಗಳು ಪ್ರವಾಸಿಗರ ಆಕರ್ಷಣೆಗಳು.

ದೋಹಾ ಹೊರವಲಯದಲ್ಲಿ ಮರುಭೂಮಿಯ "ಹಡಗು'
ಇದೇ ರೀತಿಯಲ್ಲಿ ಯೋಜನಾಬದœವಾಗಿ ಮುಂದುವರಿದರೆ- ಜಗತ್ತಿನ "ಪುಟ್ಟ' ರಾಷ್ಟ್ರಗಳಲ್ಲೊಂದಾಗಿರುವ ಕತಾರ್- ಯಶಸ್ಸಿನ ನಿಟ್ಟಿನಲ್ಲಿ ಜಗತ್ತಿನ ಅತೀ "ದೊಡ್ಡ' ರಾಷ್ಟ್ರಗಳಲ್ಲೊಂದೆಂಬ ಸ್ಥಾನಕ್ಕೆ ಪಾತ್ರವಾಗುತ್ತದೆ.
ನೀರಿನ ಹುಡುಕಾಟ
ಮೊದಲ ಶತಮಾನದ ಮಧ್ಯಭಾಗದಲ್ಲಿ ಇಲ್ಲಿಗೆ ಬಂದವರು ಕತಾರ್ರಿà ಎಂಬ ಉಲ್ಲೇಖ ಮಾಡುತ್ತಿದ್ದರು. ಕತಾರ್ರಿà ಎಂಬುದು ಅವರು ನೀರಿಗಾಗಿ ಸತತ ಶೋಧವನ್ನು ಮಾಡುತ್ತಿದ್ದ ಉಚ್ಚಾರವಾಗಿತ್ತು. ಅದು ಮುಂದೆ ಕತಾರ್ ಎಂದಾಗಿರಬಹುದು.
ಇದು ನಮ್ಮ ಊರು!?
ಕತಾರ್ನಾದ್ಯಂತ ಪ್ರಯಾಣಿಸುತ್ತಿದ್ದರೆ ಅಲ್ಲೆಲ್ಲಾ ಕನ್ನಡದ ಕಂಪು, ತುಳುವಿನ ಇಂಪು, ಕೊಂಕಣಿಯ ಸೊಗಸು. ವಸ್ತುಶಃ ಅಲ್ಲಿನ ಎಲ್ಲಾ ಕಚೇರಿಗಳಲ್ಲೂ ಕನ್ನಡಿಗರಿದ್ದಾರೆ. ಕೆಲವು ಕುಟುಂಬಗಳಂತೂ ಮೂರು ದಶಕಗಳಿಂದ ಅಲ್ಲಿ ನೆಲೆಸಿದ್ದಾರೆ.

ಏಶ್ಯನ್ ಗೇಮ್ಸ್ ನಡೆದ ತಾಣ,
ಅತ್ತ47 ಇತ್ತ7
ಕತಾರ್ಗೆ ಈ ಲೇಖಕ ಪ್ರವಾಸ ಕೈಗೊಂಡ ಜೂನ್ ಕೊನೆಯ ವಾರದಲ್ಲಿ ಅಲ್ಲಿನ ಉಷ್ಣತೆ 42 ರಿಂದ 46 ಡಿಗ್ರಿ ಸೆಲ್ಸಿಯಸ್! ಜುಲೈನಲ್ಲಿದು ಹೆಚ್ಚು ಕಡಿಮೆ 50 ಡಿಗ್ರಿಯನ್ನು ತಲುಪಿದೆ. ಅಂದಹಾಗೆ ಚಳಿಗಾಲದಲ್ಲಿದು 7 ಡಿಗ್ರಿ ಸೆಲ್ಸಿಯಸ್ಗೆ ಇಳಿಯುತ್ತದೆ.