Friday, April 18, 2014
Last Updated: 2:36:22 AM IST
  • ನಾನೆಲ್ಲಿರುವೆ:
  • ಮುಖಪುಟ ಅಭಿಪ್ರಾಯ ನಾಗರಿಕ ಪತ್ರಿಕೊದ್ಯಮ
  • ಉದಯವಾಣಿ
  • ವೆ ಬ್
  • ಹುಡುಕಿ
    • ನೀರ್ಚಾಲು ಶಾಲೆಗೆ ಶತಮಾನ ಸಂಭ್ರಮ !

      • ಸರಸ್ವತೀಸುತ

        ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಈಗ ಶತಮಾನದ ಸಂಭ್ರಮದಲ್ಲಿದೆ.

        ಪೆರಡಾಲ ದೇಗುಲದಲ್ಲಿ ಪ್ರಾರಂಭಗೊಂಡು, 1913ರಲ್ಲಿ ಅಧಿಕೃತ ನೋಂದಾವಣೆ ಹೊಂದಿ ನೀರ್ಚಾಲಿನಲ್ಲಿ ಸಂಸ್ಕೃತ ಶಾಲೆಯಾಗಿ ಈ ಸಂಸ್ಥೆ ಹೊರಲೋಕಕ್ಕೆ ತೆರೆದುಕೊಂಡಿತು. ಆ ಮೂಲಕ ಕೇವಲ ಒಂದು ವಿದ್ಯಾಸಂಸ್ಥೆಯಾಗದೆ ಸುಸಂಸ್ಕೃತ ಪಂಡಿತ ಪರಂಪರೆಯನ್ನೇ ಸಮಾಜಕ್ಕೆ ಧಾರೆ ಎರೆಯಿತು. ಹೀಗೆ ಸತತ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಅದು ಕುಂಬಳೆ ಸೀಮೆಯ ಸಾಂಸ್ಕೃತಿಕ, ಸಾಮಾಜಿಕ ಇತಿಹಾಸದ ಭಾಗವಾಗಿ ಬೆಳೆದಿದೆ.

        ಪ್ರಸ್ತುತ ಶತಮಾನದ ಸಂಭ್ರಮದಲ್ಲಿ ನೀರ್ಚಾಲು ಶಾಲೆಯ ಪ್ರಾಚೀನ ನಾಲ್ಕಂಕಣದ ಕಟ್ಟಡವನ್ನು ಕೆಡವಿ, ಆಧುನಿಕ ಶೈಕ್ಷಣಿಕ ಪರಿಕಲ್ಪನೆಗೆ ಅನುಸಾರವಾದ ಸುಸಜ್ಜಿತ ಕಟ್ಟಡದ ಶೃಂಖಲೆಯನ್ನು ನಿರ್ಮಿಸಲಾಗಿದೆ. ಈ ಯೋಜನೆಯ ಮೊದಲ ಹಂತವಾಗಿ ಸಭಾಂಗಣವನ್ನು ಒಳಗೊಂಡ ಹತ್ತು ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.

        ಕಟ್ಟಡ ನಿರ್ಮಾಣ ಕಾಮಗಾರಿಯು ಭರದಿಂದ ಸಾಗುತ್ತಿದೆ. ಶತಮಾನೋತ್ಸವದ ಸ್ಮಾರಕವಾಗಿ ನಿರ್ಮಾಣವಾಗುವ ಈ ಕಟ್ಟಡಕ್ಕೆ 2 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

        ಡಿಸೆಂಬರ್‌ ತಿಂಗಳೊಳಗೆ ಈ ಕಾಮಗಾರಿಗಳನ್ನು ಪೂರ್ತಿಗೊಳಿಸುವ ನಿಟ್ಟಿಧಿನಲ್ಲಿ ದೇಶ ವಿದೇಶಗಳಲ್ಲಿ ನೆಲೆಸಿರುವ ಹಳೆ ವಿದ್ಯಾರ್ಥಿಗಳಿಂದ ಮತ್ತು ದಾನಿಧಿಗಳಿಂದ ಸರಸ್ವತೀಸುತ

        ದೇಣಿಗೆಯನ್ನು ಸ್ವೀಕರಿಸಲಾಗುತ್ತಿದೆ. ವಿವಿಧ ಹುದ್ದೆಗಳಲ್ಲಿರುವ ಇಲ್ಲಿನ ಹಳೆ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿದ ಶೈಕ್ಷಣಿಕ ಸಂಸ್ಥೆಗಾಗಿ, ವಿದ್ಯಾರ್ಥಿ ಜೀವನದ ಮಧುರ ಸ್ಮರಣೆಯೊಂದಿಗೆ ಆರ್ಥಿಕ ಸಹಾಯವನ್ನು ಒದಧಿಗಿಸಿ ಪ್ರೋತ್ಸಾಹಿಸಬೇಕೆಂದು ಶಾಲಾ ಆಡಳಿತ ಮಂಡಳಿ ವಿನಂತಿಸಿದೆ.

        ಶಾಲೆಯ ಶತಮಾನೋತ್ಸವದ ಸಂಬಂಧ ಹೆಚ್ಚಿನ ಮಾಹಿತಿಗಳಿಗಾಗಿ ಶಾಲಾ ಬ್ಲಾಗ್‌ http://mschsnirchal.blogspot.in/  ಮತ್ತು ವೆಬ್‌ಸೈಟ್‌ http: mahajanaschools.com/ ಗಳನ್ನು ಸಂದರ್ಶಿಸಬಹುದು.

        ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಹಾಯಧನ ನೀಡುವವರು ಕರ್ಣಾಟಕ ಬ್ಯಾಂಕಿನ ನೀರ್ಚಾಲು ಶಾಖೆಯ ಎಸ್‌ಬಿ ಖಾತೆ ಸಂಖ್ಯೆ 5322500100957501, ಐಎಫ್‌ಎಸ್‌ಸಿ: ಕೆಎಆರ್‌ಬಿ0000532 ಖಾತೆಗೆ ಜಮಾ ಮಾಡಬಹುದಾಗಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
      • Copyright @ 2009 Udayavani.All rights reserved.
      • Designed & Hosted By 4cplus