ಹೆಣ್ಣಿನ ಮೇಲಿನ ದೌರ್ಜನ್ಯಗಳನ್ನು ತಪ್ಪಿಸುವುದೆಂತು?


Team Udayavani, Dec 18, 2019, 4:58 AM IST

ds-49

ಗಂಡನ್ನೂ ಹೆತ್ತ ತಾಯಿ ಹೆಣ್ಣಲ್ಲವೇ? ಅದೇ ತಾಯಿಯ ಲಾಲನೆ ಪಾಲನೆಯಿಂದಲ್ಲವೇ ಬೆಳೆದದ್ದು? ಹೆಣ್ಣುಗಳೇ ಆದ ಅಕ್ಕ ತಂಗಿಯರೊಟ್ಟಿಗೆ ನಲಿಯುತ್ತಾ ಬೆಳೆದದ್ದಲ್ಲವೇ? ಅಜ್ಜಿಯಿಂದ ತೊಡಗಿ ದೊಡ್ಡಮ್ಮ, ಚಿಕ್ಕಮ್ಮನ‌ಂತಹ ಸಂಬಂಧಗಳೆಲ್ಲವೂ ಹೆಣ್ಣುಗಳಲ್ಲವೆ? ಬೆಳೆದು ಪ್ರಾಯ ಪ್ರಬುದ್ಧರಾದಾಗ ಸಹಧರ್ಮಿಣಿಯಾಗಿ ಕೈಹಿಡಿದದ್ದು ಹೆಣ್ಣಲ್ಲವೇ? ಮಗಳು ಹುಟ್ಟಿದಾಗ ತಂದೆ ಸಂತೋಷಿಸುವುದಿಲ್ಲವೇ? ಹೆಣ್ಣಿಲ್ಲದೆ ಗಂಡು ಹೇಗೆ ಜೀವಿಸಬಲ್ಲ? ದೇವರು ಗಂಡು ಮತ್ತು ಹೆಣ್ಣನ್ನು ಒಬ್ಬರನ್ನೊಬ್ಬರಿಗೆ ಪೂರಕವಾಗಿ ಇರುವಂತೆ ರಚಿಸಿರುವುದರಿಂದಲೇ ಈ ಪ್ರಪಂಚದಲ್ಲಿ ಮನುಷ್ಯ ಜೀವನ ಚೆನ್ನಾಗಿ ನಡೆಯುವುದಲ್ಲವೇ? ಭಾರತದ ಸಂವಿಧಾನದಲ್ಲಿ ಗಂಡು – ಹೆಣ್ಣಿನ ನಡುವೆ ಭೇದ ಮಾಡಲಾಗಿದೆಯೇ? ಹೆಣ್ಣು ಮತ್ತು ಗಂಡು ಒಂದೇ ನಾಣ್ಯದ ಎರಡು ಮುಖಗಳಾಗಿ ಇರುವಾಗ ಹೆಣ್ಣು ಗಂಡಿನ ಭೋಗಕ್ಕಾಗಿ ಇರುವುದೆಂಬ ಭಾವನೆ ಗಂಡುಗಳಲ್ಲಿ ಬೆಳೆದಿರುವುದಾದರೂ ಹೇಗೆ? ಇಂತಹ ಕೆಲವೇ ಕೆಲವು ಗಂಡುಗಳಿಂದಾಗಿ ನಮ್ಮ ದೇಶದಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ, ಅನಾಚಾರಗಳು ದಿನಂಪ್ರತಿ ಎಂಬಂತೆ ನಡೆಯುತ್ತಾ ಇರುವುದು ನಾಚಿಕೆಗೇಡಿನ ಸಂಗತಿ.

2012ರ ಡಿ.16ರಂದು ರಾತ್ರಿ ಸುಮಾರು ಒಂಬತ್ತೂವರೆ ಗಂಟೆಗೆ ದಿಲ್ಲಿಯಲ್ಲಿ 23 ವರ್ಷದ ಯುವತಿ (ನಿರ್ಭಯಾ) ಗೆಳೆಯನೊಂದಿಗೆ ಚಲನಚಿತ್ರ ವೀಕ್ಷಿಸಿ ವಾಪಸ್‌ ತೆರಳಲು ಕಾದಿರುವಾಗ ಆರು ಜನರಿದ್ದ ಬಸ್ಸಿನಲ್ಲಿ ಅವರನ್ನು ಹತ್ತಿಸಿಕೊಳ್ಳಲಾಗುತ್ತದೆ. ಅವರಲ್ಲಿ ಹದಿ ಹರೆಯದವನೊಬ್ಬನೂ ಇದ್ದ. ಆ ಬಳಿಕ ಏನಾಯಿತೆಂದು ಭಾರತೀಯರಿಗೆ ಮಾತ್ರವಲ್ಲ ಜಗತ್ತಿಗೇ ತಿಳಿದಿದೆ. ಆ ಅತ್ಯಾಚಾರವನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳಾದವು. ಅವುಗಳ ಕಾರಣ ಆಗಿನ ಡಾ| ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರ ಸರಕಾರ ಎಚ್ಚೆತ್ತಿತು. ಪ್ರಕರಣದ ವಿಚಾರಣೆ ನಡೆದು ಹದಿಹರೆಯದವನಿಗೆ ಆ ಪ್ರಾಯದವರಿಗೆ ಕೊಡ ಬಹುದಾದ ಅತ್ಯಧಿಕ ಮೂರು ವರ್ಷಗಳ ಅವಧಿಯ ಪರಿವರ್ತನಾ ಕೇಂದ್ರದಲ್ಲಿ ಕಳೆಯುವ ಶಿಕ್ಷೆ ನೀಡಲಾಯಿತು. ವಿಚಾರಣೆ ಸಮಯವನ್ನೂ ಸೇರಿಸಿದ ಕಾರಣ ಆತ ಬಿಡುಗಡೆಗೊಂಡ. ಒಬ್ಟಾತ ವಿಚಾರಣೆ ಯಾಗುತ್ತಿದ್ದಂತೆ ಬಂಧನದಲ್ಲಿ ಆತ್ಮಹತ್ಯೆಗೈದ. ಉಳಿದ ನಾಲ್ಕು ಮಂದಿಗೆ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿತು. ಮೂವರು ಕುಣಿಕೆಯಿಂದ ತಪ್ಪಿಸಲು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡಿದರಾದರೂ ಸುಪ್ರೀಂ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಒಬ್ಟಾತ ಕ್ಷಮಾದಾನಕ್ಕಾಗಿ ನೀಡಿದ ಅರ್ಜಿ ಬಗ್ಗೆ ನ್ಯಾಯಾಲಯ ಸಾಕಷ್ಟು ಉದ್ದ ಎಳೆದು ಈಗಷ್ಟೆ ತಿರಸ್ಕರಿಸದೆ. ಮುಂದಕ್ಕೆ ರಾಷ್ಟ್ರಪತಿ ಅಂಗಳ ಇದ್ದೇ ಇದೆ. ನಮ್ಮ ಕಾನೂನು ವ್ಯವಸ್ಥೆಯ ಹಗ್ಗ ಬಹಳಷ್ಟು ಉದ್ದವಿರುವುದೇ ಮರಣ ದಂಡನೆಗೆ ಒಳಗಾದವರು ಇನ್ನೂ ಜೀವಿಸುತ್ತಿರಲು, ಬಹುಶಃ ದಂಡನೆಯನ್ನು ಅಣಕಿಸಲು ಕಾರಣ. ಜತೆಗೆ ಗಲ್ಲು ಶಿಕ್ಷೆ ವಿಧಿಸಲ್ಪಟ್ಟರೂ ನೇಣಿಗೇರಿಸುವ ಜನರ ಕೊರತೆಯಿಂದಾಗಿ ಗಲ್ಲು ಶಿಕ್ಷೆಗಳು ಅಪರೂಪಕ್ಕೆಂಬಂತೆ ಜಾರಿಯಾಗುತ್ತವೆ. ಅಂದರೆ ದೇಶದ ಜನ ಒಕ್ಕೊರಲಿನಿಂದ ಕಾನೂನು ಕ್ರಮ ಕೈಗೊಳ್ಳಿ ಎಂದು ಆಳುವವರನ್ನು ಆಗ್ರಹಿಸಿದರೂ ಏಳು ವರ್ಷಗಳಾದರೂ ನಿರ್ಭಯ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಇನ್ನೂ ಜಾರಿಯಾಗಿಲ್ಲ.

ನ.27ರಂದು ಹೈದರಾಬಾದ್‌ ಹೊರವಲಯದಲ್ಲಿ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ನಡೆದಿದೆ. ಈಗಲಾದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಚ್ಚೆತ್ತುಕೊಳ್ಳಬೇಕು. ದೇಶದ ಅಭಿವೃದ್ಧಿ ಅಂದರೆ ಕೇವಲ ಹಣಕಾಸಿನ ವ್ಯವಹಾರ‌ವಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು, ಕೈಗಾರೀಕರಣ ಮತ್ತಿತರ ಕಾರ್ಯಕ್ರಮಗಳು ಒಂದು ರೂಪದಲ್ಲಿ ಪ್ರಗತಿ ಹೌದಾದರೂ ಎಲ್ಲಾ ನಾಗರಿಕರ ಜೀವ ಮತ್ತು ಅವರ ಆಸ್ತಿಪಾಸ್ತಿಗಳ ರಕ್ಷಣೆಯನ್ನೂ ಅಭಿವೃದ್ಧಿ ಒಳಗೊಂಡಿರುತ್ತದೆ. ಅದರಲ್ಲಿಯೂ ಮಹಿಳೆಯರ ಸುರಕ್ಷತೆಯನ್ನು ಕಾಪಾಡಬೇಕಾದ, ಸರಿಸಮಾನವಾದ ಹಕ್ಕು ಮತ್ತು ಗೌರವಗಳು ದೊರೆಯುವಂತೆ ಕ್ರಮಕೈಗೊಳ್ಳಬೇಕಾದ ಜವಾಬ್ದಾರಿಯೂ ಸರಕಾರಗಳ ಮೇಲಿದೆ.

ಮುಂದುವರಿದ ದೇಶಗಳನ್ನು ಗಮನಿಸುವುದಾದರೆ ಅಲ್ಲಿ ಭೌತಿಕ ಪ್ರಗತಿಯೊಂದಿಗೆ ಸೂಕ್ತ ಮತ್ತು ತ್ವರಿತ ನ್ಯಾಯದಾನ ವ್ಯವಸ್ಥೆ ಇರುವುದನ್ನು ಕಾಣಬಹುದು. ಅಮೆರಿಕದಲ್ಲಿ ಅಥವಾ ಯುರೋಪಿನ ದೇಶಗಳಲ್ಲಿ ಅಪರಾಧಗಳು ನಡೆಯುವುದೇ ಇಲ್ಲ ಎಂದಲ್ಲ. ಆ ರಾಷ್ಟ್ರಗಳಲ್ಲಿ ಅಪರಾಧಗಳನ್ನು ಕ್ಷಿಪ್ರ ಬೇಧಿಸುವ ಪೋಲಿಸ್‌ ಇಲಾಖೆ, ಅದರಲ್ಲಿ ದಕ್ಷ ಸಿಬ್ಬಂದಿ, ಅಪರಾಧ ಮಟ್ಟ ಹಾಕಲು ಬೇಕಾಗಿರುವ ಅತ್ಯಾಧುನಿಕ ಉಪಕರಣಗಳು ಮತ್ತಿತರ ಎಲ್ಲಾ ಆವಶ್ಯಕತೆಗಳಿವೆ. ಆ ಕಾರಣದಿಂದ ಅಪರಾಧಗಳು ಘಟಿಸದಂತೆ ತಡೆಯಲು, ಘಟಿಸಿದರೂ ಅತ್ಯಂತ ತುರ್ತಾಗಿ ಅಪರಾಧಿಗಳನ್ನು ಪತ್ತೆಹತ್ತಿ ಕಾನೂನಿನ ಬಲೆಯೊಳಗೆ ತರಲು ಸಾಧ್ಯವಾಗುತ್ತದೆ. ನ್ಯಾಯ ತೀರ್ಮಾನ ಪದ್ಧತಿಯೂ ತ್ವರಿತವಾಗಿದ್ದು, ನಮ್ಮಂತೆ ನ್ಯಾಯದಾನ ನಿಧಾನಿಸಿ, ನಿಧಾನಿಸಿ ಕೊನೆಗೊಂದು ದಿನ ರಾಜಾರೋಷವಾಗಿ ಅಪರಾಧಗೈದವನೂ ಖುಲಾಸೆಗೊಳ್ಳುವ ಅವಕಾಶಗಳು ಕಡಿಮೆ. ತೊಂಬತ್ತೂಂಬತ್ತು ಅಪರಾಧಿಗಳು ತಪ್ಪಿ ಹೋದರೂ ಸರಿ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವ ನಮ್ಮ ನ್ಯಾಯದಾನದ ಧ್ಯೇಯವೇನೋ ಉದಾತ್ತವಾಗಿದೆ. ಆದರೆ ವರ್ಷಗಳೆದಂತೆ ಇದರ ದುರುಪಯೋಗವೂ ಹೆಚ್ಚುತ್ತಿದೆಯಲ್ಲವೇ?

ಇನ್ನೊಂದು ಉದಾಹರಣೆಯಾಗಿ ಗಲ್ಫ್ ರಾಷ್ಟ್ರಗಳನ್ನು ಗಮನಿಸೋಣ. ಅಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯಾಗಿರುವಂತೆಯೇ ನ್ಯಾಯಾಂಗ ವ್ಯವಸ್ಥೆಯೂ ಮುಂದುವರಿದಿದೆ. ಜತೆಗೆ ತ್ವರಿತವಾಗಿ ನ್ಯಾಯ ತೀರ್ಮಾನವಾಗುತ್ತಿದ್ದು ಕೆಲವೇ ತಿಂಗಳುಗಳೊಳಗೆ ಪ್ರಕರಣಗಳನ್ನು ಮುಗಿಸಲಾಗುತ್ತದೆ. ಶಿಕ್ಷೆಗಳು ಕೂಡ ಅತ್ಯಂತ ಕಠಿನವಾಗಿದ್ದು, ಕೆಲ ಸಂದರ್ಭಗಳಲ್ಲಿ ಶಿಕ್ಷೆಯ ಪರಿಣಾಮಗಳು ಎಲ್ಲರಿಗೂ ಕಾಣುವಂತಿರುತ್ತದೆ. ಆ ಕಾರಣ ಅವು ಇತರರಿಗೆ ಒಂದು ಪಾಠವಾಗಿರುತ್ತವೆ. ಭಾರತದಲ್ಲಿ ದೊಡ್ಡ ರೌಡಿ ಎನಿಸಿ, ಕೊಲೆ ನಡೆಸಿಯೂ ಇಲ್ಲಿಯ ಕಾನೂನಾತ್ಮಕ ಲೋಪಗಳಿಂದ ಎಲ್ಲ ಕಡೆ ಖುಲಾಸೆಗೊಂಡು ಕುವೈಟ್‌, ಖತಾರ್‌ ಅಥವಾ ಸೌದಿಯೇ ಏಕೆ ಲಿಬರಲ್‌ ಎನಿಸಿರುವ ದುಬಾಯ್‌ ಅಥವಾ ಬಾಹೆನ್‌ಗೆ ತೆರಳಿ ಅಲ್ಲಿಯ ನಾಗರಿಕರಿಗೆ ಬಿಡಿ, ಅಲ್ಲಿ ನೆಲಸಿರುವ ಭಾರತೀಯ ರೊಬ್ಬರಿಗೆ ಕೈ ಎತ್ತಲು ಸಾಧ್ಯವೇ? ಇಲ್ಲವೆಂದಾದರೆ ಅಪರಾಧವನ್ನು ತಡೆದದ್ದು ಅಲ್ಲಿಯ ಕಠಿನ ಕಾನೂನು – ಕಾಯ್ದೆಗಳು ಅಥವಾ ದೊರೆಯಬಹುದಾದ ಶಿಕ್ಷೆಗಳಲ್ಲವೇ ? ಆದರೆ ನಮ್ಮಲ್ಲಿ ಕೆಲವೊಂದನ್ನು ಹೊರತುಪಡಿಸಿ ಹೆಚ್ಚಿನವು ದುರ್ಬಲ ಕಾನೂನುಗಳು. ಅವುಗಳೂ ಬ್ರಿಟಿಷರ ಕಾಲದವುಗಳಾಗಿದ್ದು, ಅಲ್ಪಸ್ವಲ್ಪ ತಿದ್ದುಪಡಿಗಳೊಂದಿಗೆ ಇನ್ನೂ ಉಪಯೋಗದಲ್ಲಿರುವಂತವುಗಳು. ನಿರ್ಭಯ ಪ್ರಕರಣದ ಬಳಿಕ ಮಹಿಳೆಯರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ, ಮಹಿಳಾ ಸುರಕ್ಷತೆ, ಅತ್ಯಾಚಾರಗಳ ಬಗ್ಗೆ ಕಾನೂನು ಕ್ರಮಗಳಲ್ಲಿ ಹೆಚ್ಚಿನ ಆಸ್ಥೆ ಬಂದಿರು ವುದಾದರೂ ಅವುಗಳ ಕಡೆ ಗಮನವೇ ಇಲ್ಲದಂತೆ ಅಪರಾಧಗಳನ್ನು ನಡೆಸುತ್ತಿದ್ದಾರೆ ಎನ್ನುವುದಕ್ಕೆ ಪಶುವೈದ್ಯೆಯ ಮೇಲಿನ ಅಮಾನವೀಯ ಘಟನೆಯೇ ಸಾಕ್ಷಿ. ನಮ್ಮಲ್ಲಿ ಶಿಕ್ಷೆಗಳಿಂದ ಪಾರಾಗಲು ಹಲವು ದಾರಿಗಳಿವೆ. ಒಂದು ವೇಳೆ ಶಿಕ್ಷೆ ದೊರೆತರೂ ಅವು ಬಹಳಷ್ಟು ವರ್ಷಗಳ ಬಳಿಕ. ಆಗ ಜನಮಾನಸದಿಂದ ಆ ಘಟನೆ ಮರೆಯಾಗಿ ಹೋàಗಿರುತ್ತದೆ. ಶಿಕ್ಷೆಯೂ ಜೈಲೆಂಬ ಎತ್ತರ ಗೋಡೆಗಳ ಮರೆಯಲ್ಲಿ ಯಾರಿಗೂ ಗೋಚರವಾಗದ ರೀತಿಯಲ್ಲಿ ನಡೆಯುತ್ತದೆ. ಹಾಗಿರುವಾಗ ಅಪರಾಧ ನಡೆಸಲು ಮನಸ್ಸು ಮುನ್ನಡೆಯುವಾಗ, ಅದಕ್ಕೆ ಒಳಗಾಗದಿರಲು ಶಿಕ್ಷೆ ಎನ್ನುವುದು ಕಣ್ಣೆದುರಿಗೆ ಬರುವುದಾದರೂ ಹೇಗೆ?

ಭಾರತದಲ್ಲಿಯೂ ಗುರುತರ ಅಪರಾಧಗಳಿಗೆ ಅದರಲ್ಲಿಯೂ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಸುವ ಅತ್ಯಾಚಾರದಂತಹ ಅಪರಾಧಗಳ ವಿಚಾರಣೆ ಸಿಸಿಟಿವಿ ಮೊದಲಾದ ಉಪಕರಣಗಳ, ಜನರ ಮತ್ತಿತರ ಸಾಂದರ್ಭಿಕ , ಪೂರಕ ಸಾಕ್ಷ್ಯಗಳನ್ನು ಪರಿಗಣಿಸಿ, ತ್ವರಿತಗತಿಯಲ್ಲಿ ನಡೆಸಲು ಸಾಧ್ಯವಾಗಿ ಒಂದೆರಡು ತಿಂಗಳುಗಳೊಳಗೆ ತೀರ್ಪು ಬರುವಂತಿರಬೇಕು. ಮೇಲ್ಮನವಿ ಸಲ್ಲಿಸುವುದಿದ್ದರೆ ವಿಳಂಬವಿಲ್ಲದೆ ತುರ್ತಾಗಿ ಆ ಕಾರ್ಯವೂ ನಡೆಯಬೇಕು. ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅಭಿಪ್ರಾಯಪಟ್ಟಿರುವಂತೆ ರಾಷ್ಟ್ರಪತಿ ಕ್ಷಮಾದಾನಕ್ಕೆ ಅವಕಾಶವೇ ಇರಬಾರದು. ದೋಷಿಗಳೆಂದು ಸಾಬೀತಾದ 6 ತಿಂಗಳುಗಳೊಳಗೆ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರೆಗೆ ಪತ್ರ ಬರೆದಿರುವ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಅವರ ಅಭಿಪ್ರಾಯವೂ ಸಮಂಜಸವಾಗಿದೆ. ಹುಡುಗರು ಹತ್ತು – ಹನ್ನೆರಡು ವರ್ಷಗಳೊಳಗೆ ಅಥವಾ ಅದಕ್ಕಿಂತಲೂ ಮೊದಲೇ ಪ್ರಬುದ್ದತೆಗೆ ಬರುತ್ತಿರುವ ಈಗಿನ ಸನ್ನಿವೇಶದಲ್ಲಿ ಹದಿಹರೆಯದ ಅಥವಾ ಜುವೆನೈಲ್‌ ಎನ್ನುವ ಪದವನ್ನೇ ಶಿಕ್ಷೆ ನೀಡುವಿಕೆಯಲ್ಲಿ ಪರಿಗಣಿಸಬಾರದು. ಗಲ್ಲುಶಿಕ್ಷೆಯ (ಹಗ್ಗದ ಕುಣಿಕೆ) ಬದಲಾಗಿ ಮುಂದುವರಿದ ದೇಶಗಳಿರುವಂತೆ (ವಿದ್ಯುತ್‌ ಕುರ್ಚಿ ಇತ್ಯಾದಿ) ವಿಧಾನವನ್ನು ಅಳವಡಿಸುವಂತಾಗಬೇಕು. ಹಲವಾರು ಕಾರಣಗಳಿಂದಾಗಿ ನೇಣು ವಿಧಾನದಲ್ಲಿ ಶಿಕ್ಷೆ ಜಾರಿಯಾಗದೆ ಶಿಕ್ಷೆಗೊಳಗಾದವರು ಸ್ವಾಭಾವಿಕ ಮರಣ ಹೊಂದಲೂ ಸಾಧ್ಯವಿದೆ.

ಕುಟುಂಬಗಳಲ್ಲಿಯೂ ಗಂಡು – ಹೆಣ್ಣು ಎನ್ನುವ ಭೇದವಿಲ್ಲದೆ ಮಕ್ಕಳನ್ನು ಬೆಳೆಸಬೇಕು. ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಗಂಡು – ಹೆಣ್ಣು ಒಬ್ಬರಿಗೊಬ್ಬರು ಹೇಗೆ ಪೂರಕವಾಗಿದ್ದಾರೆ, ಹೆಣ್ಣನ್ನು ಗೌರವಿಸಬೇಕಾದ ಬಗ್ಗೆ ಬೆಳೆಯುತ್ತಿರುವ ಮಕ್ಕಳಿಗೆ ಅದರಲ್ಲಿಯೂ ಗಂಡು ಮಕ್ಕಳಿಗೆ ತಿಳಿಹೇಳುತ್ತಿರಬೇಕು. ಅತ್ಯಾಚಾರ, ದೌರ್ಜನ್ಯಗಳಂತಹ ಅಪರಾಧಗಳಿಗೆ ಇರುವಂತಹ ಶಿಕ್ಷೆಗಳು ಬೆಳೆಯುವ ಮಕ್ಕಳಿಗೂ ತಿಳಿಯುವಂತಿರಬೇಕು. ಸರಕಾರಗಳೂ ಇಂತಹ ಶಿಕ್ಷೆಗಳನ್ನು ಮುದ್ರಣ , ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಆಗಾಗ ಜಾಹೀರು ಮಾಡುತ್ತಿರಬೇಕು. ಈಗೀಗ ನಗರಗಳಲ್ಲಿರುವ ಪೋಲಿಸ್‌ ಇಲಾಖೆ ಮತ್ತಿತರರ ಎಲೆಕ್ಟ್ರಾನಿಕ್‌ ಡಿಸ್‌ಪ್ಲೇ ಫ‌ಲಕಗಳಲ್ಲಿಯೂ ಇದನ್ನು ಪ್ರಕಟಿಸುತ್ತಿರಬೇಕು. ನಿರ್ಭಯ, ಪಶುವೈದ್ಯೆ ಮತ್ತಿತರ ಹೆಚ್ಚಿನ ಅಪರಾಧಗಳಲ್ಲಿ ಒಳಗೊಂಡವರು ಒಂದು ರೀತಿಯ ಸಾರ್ವಜನಿಕ ಸಾರಿಗೆಗೆ ಸಂಬಂಧಿಸಿದ ಜನರು. ಇಂತಹವರಿಗೆ ಸಾರಿಗೆ ಇಲಾಖೆ ನಿಗದಿತ ಅವಧಿಗಳಲ್ಲಿ ದೃಢೀಕರಣ ಇತ್ಯಾದಿ ನೀಡುತ್ತಿರುತ್ತದೆ. ಅಂತಹ ವೇಳೆ ಅವರಿಗೆ ಮಹಿಳೆಯರನ್ನು ಗೌರವದಿಂದ ಕಾಣುವಂತೆ ಮತ್ತು ಅಪರಾಧಗಳಲ್ಲಿ ಭಾಗಿಯಾಗದಂತೆ ತಿಳಿಹೇಳಿ ಅಫಿದಾವಿತ್‌ ಇತ್ಯಾದಿ ಪಡೆದುಕೊಳ್ಳುವ ವ್ಯವಸ್ಥೆಯಿರಬೇಕು. ಎಲ್ಲಿಯೇ ಆಗಲಿ ಮಹಿಳೆಯರ ವಿರುದ್ಧ ಅಪರಾಧಗಳು ಘಟಿಸಿದಾಗ ಗಡಿ ಇತ್ಯಾದಿಗಳ ನೆಪವಿಲ್ಲದೆ ಪೋಲಿಸ್‌ ಠಾಣೆಗಳಲ್ಲಿ ಕೂಡಲೇ ದೂರು ಸ್ವೀಕರಿಸುವಂತಿರಬೇಕು. ಹೀಗಾದಾಗ ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯದ ಬಗ್ಗೆ ಹೇಳಿರುವ ಮಾತುಗಳು ನಿಜವಾಗಬಹುದು.

ಎಚ್‌. ಆರ್‌. ಆಳ್ವ

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.