Udayavni Special

ಪ. ಬಂಗಾಲ: ಜಾತಿ-ಧರ್ಮದ ಲೆಕ್ಕಾಚಾರ


Team Udayavani, Mar 26, 2021, 6:51 AM IST

Untitled-1

ಸಾಂದರ್ಭಿಕ ಚಿತ್ರ

ಆಗಸ್ಟ್ 16, 1990. ಮಮತಾ ಬ್ಯಾನರ್ಜಿ ದಕ್ಷಿಣ ಕೋಲ್ಕತಾದ ಜನನಿಬಿಡ ಹಾಜ್ರಾ ಕ್ರಾಸಿಂಗ್‌ನಲ್ಲಿ ಪ್ರತಿಭಟನ ಯಾತ್ರೆಯ ನೇತೃತ್ವ ವಹಿಸಿದ್ದರು. ಅದಕ್ಕೂ ಒಂದು ವರ್ಷದ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಮಮತಾ ಸಿಪಿಐಎಂನ ಒಬ್ಬ ಸಾಮಾನ್ಯ ಅಭ್ಯರ್ಥಿಯೆದುರು ಹೀನಾಯ ಸೋಲನುಭವಿ ಸಿದ್ದರು. ಈ ಸೋಲಿನ ಆಘಾತದಿಂದ ಚೇತರಿಸಿಕೊಂಡು ತಮ್ಮ ವರ್ಚಸ್ಸನ್ನು ಸ್ಥಾಪಿಸಲು ಈ ಪ್ರತಿಭಟನೆ ಅವರಿಗೆ ಉತ್ತಮ ಅವಕಾಶವಾಗಿತ್ತು. ಆದರೆ ಆ ದಿನ ಸಿಪಿಐಎಂನ ಗೂಂಡಾ ಒಬ್ಬ ಮಮತಾರ ತಲೆಗೆ ಎರಡ ಬಾರಿ ಲಾಠಿಯಿಂದ ದಾಳಿ ಮಾಡಿಬಿಟ್ಟ. ಮೂರನೇ ಬಾರಿ ದಾಳಿಗೆ ಮುಂದಾದಾಗ ಬ್ಯಾನರ್ಜಿ ತಮ್ಮ ಕೈಗಳನ್ನು ಅಡ್ಡ ತಂದು ತಪ್ಪಿಸಿಕೊಂಡರು. ತೀವ್ರ ವಾಗಿ ಗಾಯಗೊಂಡ ಮಮತಾರಿಗೆ ಚಿಕಿತ್ಸೆ ನೀಡಿದ ವೈದ್ಯರು, ಮೂರನೇ ಪೆಟ್ಟೇನಾದರೂ ಮಮತಾ ತಲೆಗೆ ಬಿದ್ದಿತ್ತು ಎಂದರೆ ಚೇತರಿಸಿಕೊಳ್ಳಲು ಅಸಾಧ್ಯವಾಗಿತ್ತು ಎಂದಿದ್ದರು.

ಕೆಲವು ವಾರಗಳವರೆಗೆ ಮಮತಾ ಹಾಸಿಗೆಯಲ್ಲೇ ಇದ್ದರು. ತುಸು ಚೇತರಿಕೆ ಕಂಡ ಅನಂತರ ತಮ್ಮ ಕೈಗಳಿಗೆ ಹಾಗೂ ತಲೆಗೆ ಬ್ಯಾಂಡೇಜ್‌ ಹಾಕಿಕೊಂಡೇ ಸಾರ್ವಜನಿಕವಾಗಿ ಕಾಣಿಸಿ ಕೊಂಡರು. ಪಟ್ಟಿ ಧರಿಸಿಯೇ ಅವರು 1991ರ ಮಧ್ಯಾಂತರ ಚುನಾವಣೆಯಲ್ಲಿ ಪ್ರಚಾರಕ್ಕಿಳಿದರು. ಆ ಚುನಾ ವಣೆಯಲ್ಲಿ ಅವರು ಸಿಪಿಐಎಂನ ಹಿರಿಯ ನಾಯಕರೊಬ್ಬರ ವಿರುದ್ಧ 13 ಪ್ರತಿಶತ ಅಂತರದಿಂದ ಗೆದ್ದರು.

ಮೂವತ್ತು ವರ್ಷಗಳ ಅನಂತರ ಮಮತಾ ಮತ್ತೆ ಬ್ಯಾಂಡೇಜ್‌ಗಳಲ್ಲಿದ್ದಾರೆ. ಮಮತಾರ ವಿರೋಧಿಗಳು ಇದೆಲ್ಲ ಪಕ್ಕಾ ನಾಟಕ ಎನ್ನುತ್ತಾರೆ.  ಆದರೆ ಈ ಘಟನೆಯು ಬಿಜೆಪಿಗೆ ಮತ್ತು ಎಡ-ಕಾಂಗ್ರೆಸ್‌ ಮೈತ್ರಿಗೆ ತುಸು ಕಳವಳ ಮೂಡಿಸಿ ರಲಿಕ್ಕೂ ಸಾಕು. ಏಕೆಂದರೆ ಈ ವಿಚಾರವನ್ನು ಹಿಡಿದು ಕೊಂಡು ತೃಣಮೂಲ ಕಾಂಗ್ರೆಸ್‌- “”ಬಂಗಾಲದ ಶತ್ರುಗಳು ಬಂಗಾಲದ ಮಗಳನ್ನು ಮುಗಿಸಲು ಯತ್ನಿಸುತ್ತಿ ದ್ದಾರೆ” ಎಂದು ಮೇಲುಗೈ ಸಾಧಿಸಬಹುದು ಎನ್ನುವ ಆತಂಕ ಅವಕ್ಕಿದೆ.

ಆದರೂ ಕಳವಳಗೊಳ್ಳಲು ಮಮತಾ ಅವರ ಮುಂದೆಯೇ ಹೆಚ್ಚು ಕಾರಣಗಳಿವೆ! ಆದಾಗ್ಯೂ, ಚುನಾ ವಣ ಪೂರ್ವ ಸಮೀಕ್ಷೆಗಳು ಮಮತಾರಿಗೆ ಮುನ್ನಡೆಯಿದೆ ಎಂದು ಹೇಳುತ್ತಿವೆಯಾದರೂ, ಚುನಾ ವಣ  ಲೆಕ್ಕಾಚಾರಗಳು ಈ ಬಾರಿ ಪ್ರಬಲ ಪೈಪೋಟಿ ಇರಲಿದೆ ಎನ್ನುವುದನ್ನು ಸೂಚಿಸುತ್ತವೆ. ಮುಖ್ಯವಾಗಿ ಮುಸಲ್ಮಾನರ ಮತಗಳು ಮಮತಾರಿಗೆ ಪ್ರಮುಖವಾಗಿವೆ. 2019ರಲ್ಲಿ ಮುಸಲ್ಮಾನರೇ ನಾದರೂ ಮಮತಾರಿಗೆ ಬೆಂಬಲ ನೀಡದೇ ಇದ್ದಿದ್ದರೆ ಬಿಜೆಪಿಯೇ ಮೇಲುಗೈ ಸಾಧಿಸುತ್ತಿತ್ತು ಎನ್ನಲಾಗುತ್ತದೆ.

ಮುಸ್ಲಿಂ ಮತಗಳ ಲೆಕ್ಕಾಚಾರ :

ಪಶ್ಚಿಮ ಬಂಗಾಲದಲ್ಲಿ ಮುಸಲ್ಮಾನರ ಸಂಖ್ಯೆ 27 ಪ್ರತಿಶತವಿದ್ದು, 2009ರವರೆಗೂ ಈ ಮತವರ್ಗ ನಿರಂತರ ಎಡರಂಗ ವನ್ನು ಬೆಂಬಲಿಸುತ್ತಾ ಬಂದಿತ್ತು. ಸಿಎಸ್‌ಡಿಎಸ್‌-ಲೋಕ ನೀತಿ  ಸಮೀಕ್ಷೆಯನ್ನು ಆಧರಿಸಿ ಹೇಳುವುದಾದರೆ, 2014ರಲ್ಲೂ 10ರಲ್ಲಿ 3 ಮುಸಲ್ಮಾನ ಮತದಾರರು ಎಡಪಕ್ಷಗಳಿಗೆ ಮತ ಹಾಕಿದರೆ ನಾಲ್ಕು ಮಂದಿ ಮಮತಾರನ್ನು ಬೆಂಬಲಿಸಿದ್ದರು. ಕಾಂಗ್ರೆಸ್‌ಗೂ ಸಹ ಆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಮುಸ್ಲಿಂ ಮತಗಳು ದೊರೆತಿದ್ದವು. ಆದರೆ 2019ರಲ್ಲಿ, 70 ಪ್ರತಿಶತ ಮುಸಲ್ಮಾನರು ತೃಣಮೂಲವನ್ನು ಬೆಂಬಲಿಸಿದ್ದರು. ಇದರಿಂದಾಗಿ ಮಮತಾರಿಗೆ ಒಟ್ಟಾರೆ ಮತ ಪಾಲಿನಲ್ಲಿ 8 ಪ್ರತಿಶತ ಹೆಚ್ಚಳವಾಗಿತ್ತು.

ಇನ್ನೊಂದೆಡೆ ಹಿಂದೂ ಮತದಾರರು ಇತರ ದಿಕ್ಕಿಗೆ ತಿರುಗಿದರು. ಅರ್ಧಕ್ಕಿಂತ ಹೆಚ್ಚು ಜನರು ಬಿಜೆಪಿಗೆ ಮತ ನೀಡಿದರು. ಆದಾಗ್ಯೂ ಬಿಜೆಪಿಗೆ ಅಂದು ಬಂದ ಹೆಚ್ಚಿನ ಮತಗಳು ಎಡರಂಗ ಮತ್ತು ಕಾಂಗ್ರೆಸ್‌ನಿಂದ ಹರಿದು ಹಂಚಿಹೋದ ಮತದಾರರಿಂದಲೇ ಬಂದಿದ್ದವು. ಇನ್ನು ತೃಣಮೂಲ ಕಾಂಗ್ರೆಸ್‌ ಕೂಡ ಹೆಚ್ಚಿನ ಹಿಂದೂ ಮತಗಳನ್ನು ಕಳೆದುಕೊಂಡಿತು. ಬಿಜೆಪಿಯು ಗೆದ್ದಿದ್ದ ಪ್ರತೀ ನೂರು ಹೊಸ ಹಿಂದೂ ಮತದಾರರಲ್ಲಿ 22 ಮತಗಳು ತೃಣಮೂಲದಿಂದ ಬೇರ್ಪಟ್ಟು ಬಂದಿದ್ದವು. ಒಟ್ಟಾರೆ ಮತಪಾಲಿನಲ್ಲಿ ಮಮತಾ  5 ಪ್ರತಿಶತದಷ್ಟು ಇಳಿಕೆಯನ್ನು ಕಂಡಿದ್ದರು. ಆದರೂ ಹಿಂದೂ ಮತಗಳು ಕಡಿಮೆಯಾದರೂ ಅವರು ಬಿಜೆಪಿಯನ್ನು ಹಿಂದಿಕ್ಕಲು ಕಾರಣವೆಂದರೆ ಮುಸ್ಲಿಂ ಮತಗಳ ಸಂಖ್ಯೆಯಲ್ಲಿ ಹೆಚ್ಚಳವಾದದ್ದು.  ಗಮನಾರ್ಹ ಸಂಗತಿಯೆಂದರೆ ಮಮತಾ ಹೆಚ್ಚು ಮತ ಗಳನ್ನು ಕಳೆದುಕೊಂಡದ್ದು ಒಬಿಸಿ ಮತವರ್ಗದಲ್ಲಿ ಎನ್ನುವುದು. ಸಿಎಸ್‌ಡಿಎಸ್‌-ಲೋಕನೀತಿ ಸಮೀಕ್ಷೆಯ ಪ್ರಕಾರ ಬಿಜೆಪಿ ಗಳಿಸಿದ ಪ್ರತೀ 10 ಒಬಿಸಿ ಮತಗಳಲ್ಲಿ 4 ಮತಗಳು ತೃಣಮೂಲದಿಂದ ಬೇರ್ಪಟ್ಟು ಬಂದಿದ್ದರೆ, ಬಿಜೆಪಿಗೆ ಮತ ನೀಡಿದ 10ರಲ್ಲಿ 3 ದಲಿತ ಮತದಾರರು ಐದು ವರ್ಷಗಳ ಹಿಂದೆ ತೃಣಮೂಲಕ್ಕೆ ಮತ ನೀಡಿದ್ದರಂತೆ. ಇದ ರರ್ಥ, 2014ರಲ್ಲಿ ಮಮತಾ ಅವರನ್ನು ಬೆಂಬಲಿಸಿದ್ದ  ಹಿಂದುಳಿದ ವರ್ಗಗಳು ಮತ್ತು ದಲಿತ ಮತದಾರರಲ್ಲಿ ಹೆಚ್ಚಿನ ಪ್ರಮಾಣದ ಜನರು 2019ರಲ್ಲಿ ಅವರ ವಿರುದ್ಧ ಮತ ಹಾಕಿದ್ದರು. ಈ ಕಾರಣಕ್ಕಾಗಿಯೇ, ಈ ಬಾರಿ ಮಮತಾ ಬಿಜೆಪಿಗೆ ಹೋಗಬಹುದಾದ ಮತಗಳನ್ನು ಒಡೆಯು ವುದಕ್ಕಾಗಿ ಸಿಪಿಐಎಂ ಮತ್ತು ಕಾಂಗ್ರೆಸ್‌ಗೆ ಹೆಚ್ಚಿನ ಪ್ರಚಾರದ ಅವಕಾಶ ನೀಡುತ್ತಿದ್ದಾರೆ. ವರ್ಷಗಳವರೆಗೆ ಎದುರಾಳಿಗಳನ್ನು ರಾಜಕೀಯವಾಗಿ ಹತ್ತಿಕ್ಕುತ್ತಾ ಬಂದಿದ್ದ ಅವರ ಈಗಿನ ನಡೆ ಎರಡು ಅಲಗಿನ ಕತ್ತಿಯಂತಾಗಿದೆ. ಆದಾಗ್ಯೂ ಎಡರಂಗ ಮತ್ತು ಕಾಂಗ್ರೆಸ್‌, 2019ರಲ್ಲಿ ಬಿಜೆಪಿಯಿಂದಾಗಿ ಕಳೆದು ಕೊಂಡಿದ್ದ ಕೆಲವು ಮತಗಳನ್ನು ಮತ್ತೆ ಹಿಂಪಡೆಯ ಬಹುದಾದರೂ, ಇವೆರಡೂ ಪಕ್ಷಗಳೂ ಮಮತಾರ ಮತ ಗ ‌ಳನ್ನೂ ಕಬಳಿಸುವ ಸಾಧ್ಯತೆ ಇದೆ. ಖುದ್ದು ಮಮತಾ ಕೂಡ 2009ರಿಂದ ನಿರಂತರವಾಗಿ ಎಡರಂಗ-ಕಾಂಗ್ರೆಸ್‌ನ ಮತಗಳನ್ನು ತಮ್ಮತ್ತ ಸೆಳೆಯುತ್ತಾ ಬಂದಿದ್ದಾರಲ್ಲವೇ?

ಮುಸ್ಲಿಂ ಮತದಾರರ ವಿಷಯಕ್ಕೆ ಬಂದಾಗ ಈ ಬಾರಿ ಮಮತಾ ಪಾಲಿಗೆ ಸಮಸ್ಯೆಗಳು ಕಠಿನವಾಗುತ್ತಾ ಹೋಗುತ್ತಿವೆ. ಮತ್ತೆ ಗರಿಗೆದರುತ್ತಿರುವ ಸಿಪಿಐಎಂ ತನ್ನ ಸ್ವಂತ ಬಲದ ಮೇಲೆಯೇ ತೃಣಮೂಲ ಕಾಂಗ್ರೆಸ್‌ನ ಮುಸ್ಲಿಂ ಮತಗಳನ್ನು ಕಬಳಿಸಬಹುದು. ಇನ್ನು ಎಡ-ಕಾಂಗ್ರೆಸ್‌ ಮೈತ್ರಿಯು ಇಂಡಿಯನ್‌ ಸೆಕ್ಯೂಲರ್‌ ಫ್ರಂಟ್‌ನ ಅಬ್ಟಾಸ್‌ ಸಿದ್ದಿಕಿಯೊಂದಿಗೆ ಕೈಜೋಡಿಸಿರುವುದೂ ಕೂಡ ಮಮತಾ ಕಳವಳಕ್ಕೆ ಹೆಚ್ಚಿನ ಕಾರಣವಾಗಿದೆ. ಸಿದ್ದಿಕಿ ಬಂಗಾಲದ ದಕ್ಷಿಣ ಭಾಗದಲ್ಲಿ ಪ್ರಸಿದ್ಧರಾಗಿದ್ದಾರೆ. ಇದುವರೆಗೂ ಈ ಪ್ರದೇಶಗಳಲ್ಲೇ ಮಮತಾ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಮತಗಳನ್ನು ಸೆಳೆಯುತ್ತಾ ಬಂದಿದ್ದರು. ಆದರೆ ಈ ಬಾರಿ ಸಿದ್ದಿಕಿ ಮಮತಾರಿಗೆ ಅಡ್ಡಿಯಾಗುವ ಸಾಧ್ಯತೆಗಳು ಇಲ್ಲದಿಲ್ಲ.

ಇತರೆ ಮುಸ್ಲಿಂ ನಾಯಕರಿಗೆ ಹೋಲಿಸಿದಾಗ ಸಿದ್ದಿಕಿ ಹೇಗೆ ಭಿನ್ನವಾಗಿ ನಿಲ್ಲುತ್ತಾರೆ ಎಂದರೆ, ಅವರ ರಾಜಕೀಯ ಕೇವಲ ಮುಸಲ್ಮಾನರಿಗೆ ಮಾತ್ರ ಸೀಮಿತವಾಗಿಲ್ಲ. ಇಂಡಿಯನ್‌ ಸೆಕ್ಯೂಲರ್‌ ಫ್ರಂಟ್‌ ಬಂಗಾಲದ ದಕ್ಷಿಣ ಭಾಗದಲ್ಲಿ ದಲಿತರು ಮತ್ತು ಬುಡಕಟ್ಟು ಸಮುದಾಯಗಳ ಜತೆಗೂ ಬಾಂಧವ್ಯ ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಮಮತಾರಿಗೆ ದೊಡ್ಡ ಸಮಸ್ಯೆ ಯಾಗಬಲ್ಲದು. ಮುಸಲ್ಮಾನರೊಂದಿಗೆ ಸಾಮಾಜಿಕ ನಂಟು ಹೊಂದಿರುವ ದಲಿತರು ಮತ್ತು ಒಬಿಸಿಗಳು ಬಹುಶಃ ತೃಣಮೂಲ ಕಾಂಗ್ರೆಸ್‌ನಿಂದ ಎಡರಂಗದತ್ತ ವಾಲಿರಲೂ ಬಹುದು. ಆದರೆ 2019ರಲ್ಲಿ ಬಿಜೆಪಿಯತ್ತ ಧಾವಿಸಿದ ಗುಂಪಂತೂ ಇದಾಗಿರಲಿಕ್ಕಿಲ್ಲ. ಈ ವಲಯದಲ್ಲಿ ಸಿದ್ದಿಕಿ ಗಳಿಸುವ ಮೇಲುಗೈ ಬಿಜೆಪಿಗಿಂತಲೂ ಮಮತಾರಿಗೇ ಹೆಚ್ಚು ಹಾನಿ ಮಾಡಲಿದೆ.

ಒಬಿಸಿ, ದಲಿತ ಮತವರ್ಗ ಬಿಜೆಪಿಯತ್ತ ವಾಲಿದೆಯೇ? :

ಇದನ್ನು ಹೊರತುಪಡಿಸಿದರೆ ಒಬಿಸಿ, ದಲಿತ ಮತ್ತು ಆದಿವಾಸಿ ಮತವರ್ಗದಲ್ಲಿ ಬಿಜೆಪಿಯ ಬೆಳವಣಿಗೆಯು ಪ. ಬಂಗಾಲದ ಗ್ರಾಮೀಣ ಭಾಗಗಳಲ್ಲಿ ಎಡರಂಗದ ಸೃಷ್ಟಿಸಿದ್ದ ವಿಶಿಷ್ಟ ರಾಜಕೀಯ ವ್ಯವಸ್ಥೆಯ ಅವಸಾನದಿಂದ ಸೃಷ್ಟಿಯಾದದ್ದು. ಈ ವ್ಯವಸ್ಥೆಯಡಿಯಲ್ಲಿ ಎಡರಂಗವು ಗ್ರಾಮೀಣ ಭಾಗ ದಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ಜನಜೀವನದ ಪ್ರತಿಯೊಂದು ರಂಗದಲ್ಲೂ ಹಾಸುಹೊಕ್ಕಾಗಿತ್ತು. ಯಾವಾಗ ಎಡರಂಗ ಅಧಿಕಾರದಿಂದ ದೂರ ಸರಿಯಿತೋ, ಈ ವ್ಯವಸ್ಥೆಯಲ್ಲಿ ತನ್ನ ನೆಲೆ ಸ್ಥಾಪಿಸಿಕೊಳ್ಳಲು ತೃಣಮೂಲ ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಆದಾಗ್ಯೂ ತೃಣಮೂಲವು “ಮಾತುವಾ ಮಹಾಸಂಘ’ ಅಥವಾ “ಸಂತಾಲ್‌ ಶೋಲೋ ಆನಾ’ದಂಥ ವ್ಯವಸ್ಥೆಗಳ ಮೂಲಕ ಒಬಿಸಿ, ದಲಿತರನ್ನು ಸೆಳೆಯಲು ಪ್ರಯತ್ನಿಸಿತಾದರೂ ಈ ಸಂಘಟನೆಗಳ ಮೇಲಿನ ನಾಯಕತ್ವದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇಲ್ವರ್ಗದವರೇ ಇದ್ದಾರೆ. ಹೀಗಾಗಿ ಈ ಫಾರ್ಮುಲಾ ಕೆಲಸ ಮಾಡಲಿಲ್ಲ.

ಈ ವಿಷಯದಲ್ಲಿ ಸೃಷ್ಟಿಯಾಗಿದ್ದ ನಿರ್ವಾತವನ್ನು ತುಂಬಲು, ತನ್ಮೂಲಕ ತಾನು ಒಬಿಸಿ ಹಾಗೂ ದಲಿತರ ಪ್ರತಿನಿಧಿ ಎಂದು ಬಿಂಬಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಯಿತು. ಇನ್ನು ಹಿಂದೂ ಮತಗಳ ವಿಚಾರಕ್ಕೆ ಬಂದಾಗ, ಕಳೆದ ಬಾರಿ  ತೃಣಮೂಲ ಕಾಂಗ್ರೆಸ್‌ಗೆ ಮೇಲ್ಜಾತಿಯ ಮತ ವರ್ಗವೇ ಹೆಚ್ಚು ಬೆಂಬಲ ನೀಡಿದೆ. ಅತ್ತ ಬಿಜೆಪಿಯೂ ಮೇಲ್ಜಾತಿಯ ಮತವರ್ಗಗಳನ್ನು ಗೆದ್ದಿತ್ತಾದರೂ, ಅದಕ್ಕೆ ಒಬಿಸಿಗಳು ಮತ್ತು ದಲಿತ ವರ್ಗದ ಬೆಂಬಲವೂ ಅಧಿಕವಿತ್ತು.  ಆದರೆ ಈ ಬಾರಿ ಬಿಜೆಪಿ ಯಾವುದೇ ಕಾರಣಕ್ಕೂ ಮೇಲ್ವರ್ಗಗಳನ್ನು ಅವಗಣಿಸುವಂತಿಲ್ಲ. ಆದಾಗ್ಯೂ ಪ.ಬಂಗಾಲದ ಜನಸಂಖ್ಯೆಯಲ್ಲಿ ಈ ವರ್ಗದ ಪ್ರಮಾಣ ಕೇವಲ 12-13 ಪ್ರತಿಶತ ಇದೆಯಾದರೂ, ದಕ್ಷಿಣ ಬಂಗಾಲದ 70ಕ್ಕೂ ಅಧಿಕ ನಗರ ಪ್ರದೇಶಗಳಲ್ಲಿ(ಪ್ರಮುಖ ಕ್ಷೇತ್ರಗಳಲ್ಲಿ) ಇವರೇ ನಿರ್ಣಾಯಕರಾಗಲಿದ್ದಾರೆ.

 

– ಅವ್ನಿಂದ್ಯೋ ಚಕ್ರವರ್ತಿ

ಟಾಪ್ ನ್ಯೂಸ್

ಕರಡು ನಿರ್ಣಯದಲ್ಲಿ ಮಾನ್ಯತೆ ನೀಡದ ಹಿನ್ನೆಲೆ : ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಕರಡು ನಿರ್ಣಯದಲ್ಲಿ ಮಾನ್ಯತೆ ನೀಡದ ಹಿನ್ನೆಲೆ : ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಇದನ್ನೂ ಓದಿ  ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಇದನ್ನೂ ಓದಿ ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ನಿವೃತ್ತ IAS ಅಧಿಕಾರಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎರಡು ಕೈಗಳಲ್ಲಿ ಎರಡು ವೈಕುಂಠ ಪತ್ರ!

ಎರಡು ಕೈಗಳಲ್ಲಿ ಎರಡು ವೈಕುಂಠ ಪತ್ರ!

ಕೋವಿಡ್ ಸೋಂಕಿನಿಂದ ಬಳಲಿದವರಿಗೆ ಹೃದಯ ಮಿಡಿಯುತ್ತಿದೆ…

ಕೋವಿಡ್ ಸೋಂಕಿನಿಂದ ಬಳಲಿದವರಿಗೆ ಹೃದಯ ಮಿಡಿಯುತ್ತಿದೆ…

ಹೊರಳು ಹಾದಿಯಲ್ಲಿದೆ ದೇಶದ ಆರೋಗ್ಯ ವ್ಯವಸ್ಥೆ

ಹೊರಳು ಹಾದಿಯಲ್ಲಿದೆ ದೇಶದ ಆರೋಗ್ಯ ವ್ಯವಸ್ಥೆ

ನಮ್ಮ “ಕರ್ತವ್ಯ’ದ ಪರಿಧಿ ಹಿರಿದಾಗಿಸಿದ “ಸೇವೆ’

ನಮ್ಮ “ಕರ್ತವ್ಯ’ದ ಪರಿಧಿ ಹಿರಿದಾಗಿಸಿದ “ಸೇವೆ’

ಮಕ್ಕಳನ್ನು ಬೆಳೆಸುವಲ್ಲಿ ಹೆತ್ತವರು, ಶಿಕ್ಷಕರ ಪಾತ್ರ

ಮಕ್ಕಳನ್ನು ಬೆಳೆಸುವಲ್ಲಿ ಹೆತ್ತವರು, ಶಿಕ್ಷಕರ ಪಾತ್ರ

MUST WATCH

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

udayavani youtube

ಸಾಮಾಜಿಕ ಅಂತರವಿಲ್ಲದೆ ಶಿಕ್ಷಕರಿಗೆ ಲಸಿಕಾ ಅಭಿಯಾನ

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

ಹೊಸ ಸೇರ್ಪಡೆ

desiswara

ಸ್ನೇಹಿತನನ್ನು ರಕ್ಷಿಸಿದ  ಬುದ್ಧಿವಂತ ಮೊಲ

ಕರಡು ನಿರ್ಣಯದಲ್ಲಿ ಮಾನ್ಯತೆ ನೀಡದ ಹಿನ್ನೆಲೆ : ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಕರಡು ನಿರ್ಣಯದಲ್ಲಿ ಮಾನ್ಯತೆ ನೀಡದ ಹಿನ್ನೆಲೆ : ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

The floating library

ತೇಲುವ ಗ್ರಂಥಾಲಯದೊಳಗೆ  ವಿಶಾಲ ಜಗತ್ತಿನ ದರ್ಶನ

desiswara

ಒಂದು ಗುಂಗಿನ ಒಳಗೆ  ಒಂದಲ್ಲ; ನೂರಾರು ಸ್ವರಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.